For Quick Alerts
ALLOW NOTIFICATIONS  
For Daily Alerts

ಮಕ್ಕಳಲ್ಲಿ ಕ್ಯಾಲ್ಸಿಯಂ ಕೊರತೆ ನೀಗಿಸುವುದು ಹೇಗೆ?

|
Calcium rich food
ನಿಮ್ಮ ಮಗುವಿನ ಉಗುರಿನಲ್ಲಿ ಬಿಳಿ ಚುಕ್ಕೆ ಕಾಣಿಸುತ್ತಿದೆಯಾ? ಹಾಗಾದರೆ ನಿಮ್ಮ ಮಗು ಕ್ಯಾಲ್ಸಿಯಂ ಕೊರತೆಯನ್ನು ಎದುರಿಸುತ್ತಿದೆ ಎಂದರ್ಥ. ಕೂದಲು ತೆಳುಗೊಳ್ಳುವುದು, ಭುಜ ಮತ್ತು ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು ಇವೆಲ್ಲ ಕ್ಯಾಲ್ಸಿಯಂ ಅಭಾವವಿರುವ ಲಕ್ಷಣಗಳು. ಇದನ್ನು ಕಡೆಗಣಿಸಿದರೆ ಅತಿಯಾದ ಒತ್ತಡ ಮತ್ತು ಮೂಳೆ ಸವೆತದಂತಹ ಗಂಭೀರ ಸಮಸ್ಯೆ ಕಾಣಿಸಿಕೊಳ್ಳುವುದು ಗ್ಯಾರಂಟಿ.

ಆದರೆ ಈ ಕುರಿತು ಚಿಂತಿಸುವ ಅಗತ್ಯವಿಲ್ಲ. ಹಾಲನ್ನು ಕುಡಿಯುವುದರಿಂದ ಕ್ಯಾಲ್ಸಿಯಂ ಪೂರೈಸುವುದು ಸಾಧ್ಯವಿದೆ. ಇದರೊಂದಿಗೆ ಕ್ಯಾಲ್ಸಿಯಂ ಅಭಾವವನ್ನು ನೀಗಿಸುವ ಇನ್ನಿತರ ಸಲಹೆಗಳನ್ನು ಪಾಲಿಸಿದರೆ ಖಂಡಿತ ಸಮಸ್ಯೆಯನ್ನು ಹೋಗಲಾಡಿಸಬಹುದು.

ಕ್ಯಾಲ್ಸಿಯಂ ಕೊರತೆ ನೀಗಿಸುವ ಸುಲಭ ಮಾರ್ಗ:

1. ಕ್ಯಾಲ್ಸಿಯಂ ಹೆಚ್ಚಾದ ಪ್ರಮಾಣದಲ್ಲಿರುವ ಹಾಲು ಉತ್ಪನ್ನಗಳು, ಹಸಿರು ತರಕಾರಿ, ಹಣ್ಣು, ಡ್ರೈಫ್ರೂಟ್ ಗಳನ್ನು ಸೇವನೆಯಿರಲಿ.

2. ಕ್ಯಾಲ್ಸಿಯಂ ಕೊರತೆ ಕಂಡ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಕ್ಯಾಲ್ಸಿಯಂ ಪೂರೈಸುವ ಮಾತ್ರೆ ನುಂಗಬಹುದು.

3. ಸೂರ್ಯನ ಕಿರಣಗಳಿಗೆ ಮೈಯ್ಯೊಡ್ಡುವುದರಿಂದಲೂ ಕ್ಯಾಲ್ಸಿಯಂ ಪಡೆಯಬಹುದು. ವಯಸ್ಸು ಹೆಚ್ಚುತ್ತಿದ್ದಂತೆ ದೇಹದಲ್ಲಿನ ಖನಿಜಾಂಶಗಳು ಕ್ಷೀಣಿಸುತ್ತಾ ಹೋಗುವುದರಿಂದ ದೇಹಕ್ಕೆ ಕ್ಯಾಲ್ಸಿಯಂ ತುಂಬಾ ಅಗತ್ಯವಿರುತ್ತದೆ.

4. ಕಿತ್ತಳೆ ಹಣ್ಣಿನ ಜ್ಯೂಸ್, ಬ್ರೆಡ್, ಧಾನ್ಯಗಳು ಮತ್ತು ಬಿಸ್ಕೆಟ್ ಗಳು ಕ್ಯಾಲ್ಸಿಯಂ ಕೊರತೆ ನೀಗಿಸುವಲ್ಲಿ ಉಪಯುಕ್ತ.

5. ರುಚಿಯಾದ ಐಸ್ ಕ್ರೀಂಗಳು ಕೂಡ ಕ್ಯಾಲ್ಸಿಯಂ ಪ್ರಮಾಣವನ್ನು ಹೆಚ್ಚಿಸುತ್ತದೆ.

6. ಮಾಂಸಾಹಾರಿಯಾದವರು ಮೊಟ್ಟೆ-ಮಾಂಸವನ್ನು, ಅದರಲ್ಲೂ ಮೀನನ್ನು ಸೇವಿಸಿದರೆ ಕ್ಯಾಲ್ಸಿಯಂ ಅಂಶವನ್ನು ಬೇಗನೆ ಹಿಂಪಡೆಯಬಹುದು.

ಮಕ್ಕಳು ತುಂಬಾ ಸೂಕ್ಷ್ಮ. ಆದ್ದರಿಂದ ಕ್ಯಾಲ್ಸಿಯಂ ಕೊರತೆ ಕಂಡು ಬಂದ ತಕ್ಷಣವೇ ಅದರೆಡೆಗೆ ಗಮನ ನೀಡಿ ಅದನ್ನು ನಿವಾರಿಸುವತ್ತ ಚಿಂತಿಸಬೇಕು. ದಿನನಿತ್ಯದ ಆಹಾರದಲ್ಲಿ ಪೌಷ್ಟಿಕಾಂಶ ಹೆಚ್ಚಿರುವಂತೆ ಕಾಳಜಿ ವಹಿಸಬೇಕು.

English summary

How to treat Calcium Deficiency in kids | Calcium Deficiency Treatment | ಮಕ್ಕಳಲ್ಲಿ ಕ್ಯಾಲ್ಸಿಯಂ ಕೊರತೆ ನೀಗಿಸುವುದು ಹೇಗೆ? | ಕ್ಯಾಲ್ಸಿಯಂ ಕೊರತೆ ನೀಗಿಸುವ ಮಾರ್ಗ

Have you observed the white stain on your child's nails, it is said that it is due to calcium deficiency. If the reduction of calcium content in the body is still unchecked then it may lead to serious risks like hypertension, osteoporosis in children. Take a look to know the various treatments of calcium deficiency.
Story first published: Saturday, August 20, 2011, 16:34 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X