For Quick Alerts
ALLOW NOTIFICATIONS  
For Daily Alerts

ನಿಮ್ಮ ಮಕ್ಕಳ ಖಿನ್ನತೆಗೆ ನೀವೇ ಕಾರಣರಾಗಬಹುದು

|
Child depression
ನೀವು ಮಕ್ಕಳನ್ನು ತುಂಬಾ ಬೈಯ್ಯುವುದು, ಹೊಡೆಯುವುದು ಮಾಡುತ್ತೀರಾ? ಅಥವಾ ಅವರನ್ನು ನಿರ್ಲಕ್ಷಿಸುತ್ತೀರಾ? ಹಾಗಾದರೆ ನಿಮ್ಮ ಮಕ್ಕಳಿಗೆ ಮುಂದೆ ಖಿನ್ನತೆಯ ರೋಗ ಕಾಣಿಸಿಕೊಂಡರೆ ಅದಕ್ಕೇ ನೀವೇ ಕಾರಣ. ಹೌದು. ಎಳೆಯ ಮಕ್ಕಳನ್ನು ನಿರ್ಲಕ್ಷಿಸಿದರೆ ಅಥವಾ ನಿಂದಿಸಿದರೆ ಅವರಿಗೆ ಮುಂದೆ ಖಿನ್ನತೆ ಬರುವ ಸಾಧ್ಯತೆ ಹೆಚ್ಚು ಎಂದು ಇತ್ತೀಚಿನ ಸಂಶೋಧನೆಯೊಂದು ವರದಿ ಮಾಡಿದೆ.

ಲಂಡನ್ನಿನ ಕಿಂಗ್ಸ್ ಕಾಲೇಜು ಮನೋಶಾಸ್ತ್ರ ವಿಭಾಗದ ಸಂಶೋಧನಾಕಾರರು ಈ ರೀತಿಯ ಖಿನ್ನತೆ ಕುರಿತು ಸಂಶೋಧನೆ ನಡೆಸಿದ್ದಾರೆ. ಎಳೆ ವಯಸ್ಸಿನಲ್ಲಿ ತಾಯಿಯಿಂದ ದೂರಾದ ಮಕ್ಕಳು, ದೈಹಿಕವಾಗಿ ಶಿಕ್ಷೆಗೆ ಒಳಗಾದವರು ಮತ್ತು ಲೈಂಗಿಕವಾಗಿ ದೌರ್ಜನ್ಯಕ್ಕೆ ಒಳಗಾದ ಮಕ್ಕಳು ವಯಸ್ಕರಾದ ನಂತರ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚು.

ಜೀವನದಲ್ಲಿ ಖಿನ್ನತೆ ಸಹಜ. ಆದರೆ ಇನ್ನೂ ಬೆಳವಣಿಗೆ ಹೊಂದಬೇಕಾದ ವಯಸ್ಸಿನಲ್ಲಿಯೇ ಈ ರೀತಿ ಹಿಂಸೆ ಕಾಣಿಸಿಕೊಂಡರೆ ಅದು ದೀರ್ಘಕಾಲಿಕ ಖಿನ್ನತೆ ಸಮಸ್ಯೆ ತಂದೊಡ್ಡುತ್ತದೆ ಎಂದು ಮನೋಶಾಸ್ತ್ರಜ್ಞ ಮಾರ್ಜೋರಿ ವ್ಯಾಲೇಸ್ ತಿಳಿಸಿದ್ದಾರೆ. ಎಳೆ ವಯಸ್ಸಿನಲ್ಲಿ ಕೆಟ್ಟ ಅನುಭವವಾದರೆ ಅಂತಹವರು ಚಿಕಿತ್ಸೆಗೂ ಹೆಚ್ಚು ಸ್ಪಂದಿಸುವುದಿಲ್ಲ ಎಂದೂ ತಿಳಿಸಿದ್ದಾರೆ.

ಸುಮಾರು 16 ಅಧ್ಯಯನಗಳನ್ನು ಪರಿಶೀಲಿಸಿದಾಗ ಮತ್ತು 23,000 ಮನೋರೋಗಿಗಳನ್ನು ಸಂಶೋಧನೆಗೆ ಒಳಪಡಿಸಿದಾಗ ಈ ಅಂಶ ತಿಳಿದುಬಂದಿದೆ.
ಹಿಂಸೆಗೆ, ಮಕ್ಕಳು ಮತ್ತು ಖಿನ್ನತೆ ಇವುಗಳ ನಡುವಿನ ಸಂಬಂಧ ತುಂಬಾ ಸೂಕ್ಷ್ಮವಾಗಿದೆ. ಚಿಕ್ಕವರಿದ್ದಾಗ ಅವರನ್ನು ಚೆನ್ನಾಗಿ ನಡೆಸಿಕೊಳ್ಳದೆ ಇದ್ದ ಪಕ್ಷದಲ್ಲಿ ಮೆದುಳಿನಲ್ಲಿ ಋಣಾತ್ಮಕ ಬದಲಾವಣೆ, ರೋಗನಿರೋಧಕ ಶಕ್ತಿ ಕುಂದುವಿಕೆ ಮತ್ತು ಹಾರ್ಮೋನುಗಳಲ್ಲಿ ಬದಲಾವಣೆ ಹಾಗೆಯೇ ಉಳಿದು ದೊಡ್ಡವರಾದರೂ ಅದು ಮನಸ್ಸಿನ ಆಳದಲ್ಲಿ ಗೊತ್ತೇ ಆಗದಂತೆ ಉಳಿದು ಖಿನ್ನತೆ ಕಾಡಬಹುದು.

ಆದ್ದರಿಂದ ಮಕ್ಕಳ ಮೃದು ಮನಸ್ಸನ್ನು ನೋಯಿಸದೆ ಅವರನ್ನು ಮಕ್ಕಳಂತೆ ಬೆಳೆಯಲು ಬಿಡಬೇಕು ಆಗ ಖಿನ್ನತೆ ಬಳಿ ಸುಳಿಯುವುದಿಲ್ಲ. ಆದರೆ ಮನಸ್ಸಿನ ಆಳದಲ್ಲಿ ಸೇರಿ ಕಾಡುವ ಸಂಗತಿಯನ್ನು ಸರಿಪಡಿಸಬಲ್ಲ ಒಂದೇ ಅಂಶವೆಂದರೆ ಬದಲಾವಣೆಯ ವಾತಾವರಣ. ಖಿನ್ನತೆ ಕಾಡುತ್ತಿರುವವರಿಗೆ ಒಳ್ಳೆಯ ವಾತಾವರಣವನ್ನು ಸೃಷ್ಟಿಸಿ ಅವರನ್ನು ಬದಲಾವಣೆಯತ್ತ ಕೊಂಡೊಯ್ಯಲು ಯತ್ನಿಸಬೇಕು.

English summary

Childhood and Depression | Childhood abuse leads to depression | ಮಕ್ಕಳು ಮತ್ತು ಖನ್ನತೆ | ಮಕ್ಕಳ ದೌರ್ಜನ್ಯದಿಂದ ಕಾಡುವ ಖಿನ್ನತೆ

Childhood abuse doubles the risk of multiple and long-lasting depression say scientists. Rejection by mother, physical treatment or sexual abuse can double the risk of depression and it also suggests early preventive and therapeutic intervention may be more effective for this.
Story first published: Monday, August 15, 2011, 17:18 [IST]
X
Desktop Bottom Promotion