For Quick Alerts
ALLOW NOTIFICATIONS  
For Daily Alerts

ಸೀಗಡಿಯಲ್ಲಿದೆ ಉತ್ತಮ ಆರೋಗ್ಯದ ಸೀಕ್ರೆಟ್

|
Prawn
ಮಾಂಸಾಹಾರಿಗಳಿಗೆ ಇಲ್ಲಿದೆ ಒಳ್ಳೆಯ ಸುದ್ದಿ. ಈಗ ನಿಮ್ಮ ಇನ್ನಿತರ ಮಾಂಸಾಹಾರದೊಂದಿಗೆ ಸೀಗಡಿಯನ್ನೂ ಸೇರಿಸಿಕೊಂಡರೆ ನೀವು ಇನ್ನಷ್ಟು ಆರೋಗ್ಯವಂತರಾಗಬಹುದು. ಸೀಗಡಿಯಲ್ಲಿರುವ ಅತ್ಯಧಿಕ ಪ್ರೊಟೀನ್ ಮತ್ತು ಕಡಿಮೆ ಕ್ಯಾಲೊರಿ ಹಾಗೂ ಕೊಲೆಸ್ಟ್ರಾಲ್ ನಿಮ್ಮ ಆರೋಗ್ಯವನ್ನು ವೃದ್ದಿಸುತ್ತದೆ.

ಸೀಗಡಿ ಸೇವನೆಯಿಂದ ಆರೋಗ್ಯಕ್ಕೆ ಆಗುವ ಉಪಯೋಗಗಳನ್ನು ತಿಳಿದುಕೊಳ್ಳೋಣ:

;

1. ಸೀಗಡಿಯಲ್ಲಿ ಕೊಬ್ಬಿನಂಶ 1.75 ಗ್ರಾಂ ಇದೆ. ಸೀಗಡಿಯಲ್ಲಿ ದೇಹಕ್ಕೆ ಸೇರುವ ಕೆಟ್ಟ ಕೊಲೆಸ್ಟ್ರಾಲ್ ಅಂಶ ತುಂಬಾ ಕಡಿಮೆ ಇರುವುದರಿಂದ ಚಿಂತೆ ಇಲ್ಲದೆ ಇದರ ಸೇವನೆ ಮಾಡಬಹುದು. ಹಾಗೆಯೇ ಇದರಲ್ಲಿರುವ 20-24 ಗ್ರಾಂ ಪ್ರೊಟೀನ್ ಮತ್ತು 100 ಗ್ರಾಂ ಮಿನರಲ್ ದೇಹಕ್ಕೆ ಇನ್ನಷ್ಟು ಪೌಷ್ಟಿಕಾಂಶವನ್ನು ತುಂಬುತ್ತದೆ.

;

2. ಸೀಗಡಿಯಲ್ಲಿರುವ ಒಮೆಗಾ 3 ಫ್ಯಾಟಿ ಆಸಿಡ್ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ರೋಗಗಳಿಂದ ಹೃದಯವನ್ನು ದೂರವಿಟ್ಟು ರಕ್ತ ಸಂಚಲನ ಸಮತೋಲನವಾಗಿರುವಂತೆ ಮಾಡುತ್ತದೆ.

;

3. ಇದರಲ್ಲಿರುವ ಅಧಿಕವಾದ ಸೆಲೆನಿಯಂ ಅಂಶ ಕ್ಯಾನ್ಸರ್ ತರುವ ಜೀವಕಣಗಳನ್ನು ತಡೆದು ದೇಹವನ್ನು ಕ್ಯಾನ್ಸರ್ ನಿಂದ ದೂರವಿರಿಸುತ್ತದೆ.

;

4. ಸೀಗಡಿಯಲ್ಲಿ ಫ್ಯಾಟಿ ಆಸಿಡ್ ಬುದ್ಧಿ ಮಾಂದ್ಯತೆ ಮತ್ತು ಮೆದುಳು ಸಂಬಂಧಿ ರೋಗಗಳು ಬರುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

;

5. ಅಧಿಕವಿರುವ ವಿಟಮಿನ್ ಬಿ 12 ಮತ್ತು ಕಡಿಮೆ ಕೊಬ್ಬಿನ ಅಂಶ ದೇಹಕ್ಕೆ ಉತ್ತಮ ಆರೋಗ್ಯ ನೀಡುವುದರಲ್ಲಿ ಸಹಾಯ ಮಾಡುತ್ತದೆ.

;

6. ಸೀಗಡಿಯಲ್ಲಿನ ಕ್ಯಾಲ್ಸಿಯಂ, ವಿಟಮಿನ್ ಇ ಆರೋಗ್ಯಕರ ಚರ್ಮ, ಗಟ್ಟಿಮುಟ್ಟಾದ ಹಲ್ಲು ಮತ್ತು ಬಲವಾದ ಮೂಳೆಗಳನ್ನು ಹೊಂದಲು ಸಹಕಾರಿಯಾಗಿದೆ.

;

7. ಸೀಗಡಿಯಲ್ಲಿನ ಅಧಿಕವಾದ ಪ್ರೊಟೀನ್ ದೇಹದ ಬೆಳವಣಿಗೆ ಮತ್ತು ಅಭಿವೃದ್ದಿಗೆ ಸಹಕಾರ ಮಾಡುತ್ತದೆ.

ಇನ್ನಿತರ ಮಾಂಸಾಹಾರಗಳಿಗೆ ಹೋಲಿಸಿದರೆ ಇದರಲ್ಲಿ ಕಡಿಮೆ ಕ್ಯಾಲೊರಿ ಮತ್ತು ಕಡಿಮೆ ಕೊಬ್ಬಿನಂಶವಿದೆ. ಸೀಗಡಿ ಆಹಾರದ ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಹೆಚ್ಚು ಅವಶ್ಯಕ. ಇನ್ನು ಸೀಗಡಿ ತಿನ್ನಲು ಹಿಂದೆ ಮುಂದೆ ನೋಡಬೇಕಾದ ಅವಶ್ಯಕತೆಯೇ ಇಲ್ಲ.

;
English summary

Sea food | Prawn good for health | Health benefits of prawn | ಸೀಗಡಿಯಿಂದ ಉತ್ತಮ ಆರೋಗ್ಯ | ಸೀಗಡಿ ಸೇವನೆ ಉಪಯೋಗ

Prawns are great supplier of proteins and low in fat and calories which make them a healthy food. With nutritional benefits, prawns also have health benefits which make it a must have food item. So lets take a look at the health benefits of prawns.
Story first published: Monday, August 8, 2011, 17:55 [IST]
X
Desktop Bottom Promotion