For Quick Alerts
ALLOW NOTIFICATIONS  
For Daily Alerts

ಸಿಪ್ಪೆ ಎಸೆಯುವ ಮುನ್ನ ಒಮ್ಮೆ ಯೋಚಿಸಿ

|
Potato peel
ತರಕಾರಿ ಕತ್ತರಿಸಿದ ನಂತರ ನೇರವಾಗಿ ಅದರ ಸಿಪ್ಪೆಗಳು ಕಸದ ಬುಟ್ಟಿ ಸೇರಿರುತ್ತೆ. ಆಲೂಗಡ್ಡೆ, ನಿಂಬೆಹಣ್ಣು ಮತ್ತು ಇನ್ನಿತರ ತರಕಾರಿಯ ಬಹು ಉಪಯೋಗಕ್ಕೆ ಬರುವ ಸಿಪ್ಪೆಗಳು ನಮ್ಮ ಅಜ್ಞಾನದಿಂದ ಸುಮ್ಮನೆ ವ್ಯರ್ಥವಾಗಿಹೋಗುತ್ತೆ. ಆದರೆ ಅದರಲ್ಲಿರುವ ಅಂಶಗಳ ಬಗ್ಗೆ ತಿಳಿದುಕೊಂಡರೆ ಅವುಗಳ ಉಪಯೋಗವನ್ನು ಸಂಪೂರ್ಣವಾಗಿ ಪಡೆಯಬಹುದು.
;

ತರಕಾರಿ ಸಿಪ್ಪೆಯಲ್ಲಿ ಕೊಳೆ ಧೂಳು ಹೆಚ್ಚಿರುತ್ತದೆ, ಆದ್ದರಿಂದ ಸಿಪ್ಪೆ ಸೇವಿಸುವುದು ಎಷ್ಟು ಸರಿ ಎನ್ನುವವರು ತರಕಾರಿಯನ್ನು ಚೆನ್ನಾಗಿ ತೊಳೆದು ಅಡುಗೆಗೆ ಉಪಯೋಗಿಸಿದರೆ ನಿಮ್ಮ ಆಹಾರದಿಂದ ನೀವು ನೀವು ನಿರೀಕ್ಷಿಸುವ ಪೋಷಕಾಂಶ ದ್ವಿಗುಣಗೊಳ್ಳುತ್ತದೆ.

;

ಕೆಲವು ತರಕಾರಿ ಸಿಪ್ಪೆಗಳಲ್ಲಿರುವ ಉಪಯೋಗಗಳನ್ನು ತಿಳಿದುಕೊಳ್ಳೋಣ

;

* ಆಲೂಗಡ್ಡೆ ಸಿಪ್ಪೆಯಲ್ಲಿ ಅತಿ ಹೆಚ್ಚು ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ಇರುವ ಕಾರಣ ದೇಹದ ನಿರಂತರ ಮತ್ತು ಸುಲಭ ಚಟುವಟಿಕೆಗೆ ಸಹಾಯ ಮಾಡುತ್ತದೆ. ಇದರಲ್ಲಿ ಪೊಟಾಶಿಯಂ, ಮ್ಯಾಂಗನೀಸ್, ತಾಮ್ರಾಂಶಗಳೂ ಹೆಚ್ಚಿರುತ್ತದೆ. ಆಲೂಗಡ್ಡೆ ಸಿಪ್ಪೆಯಲ್ಲಿನ ನಾರಿನಂಶ ಜೀರ್ಣಕ್ರಿಯೆ ಸುಲಭವಾಗಿ ಜರುಗುವಂತೆ ಮಾಡುತ್ತದೆ. ಅದರಲ್ಲೂ ಯಾವಾಗಲೂ ಆಲೂಗಡ್ಡೆ ಸಿಪ್ಪೆಯನ್ನು ತೆಗೆದು ಅಡುಗೆ ಮಾಡುವ ಅವಶ್ಯಕತೆಯಿಲ್ಲ. ಅದನ್ನು ಸ್ವಚ್ಚವಾಗಿ ತೊಳೆದು ಅಡುಗೆಗೆ ಬಳಸಿದರೆ ಉತ್ತಮ ಪೋಷಕಾಂಶ ನಿಮಗೆ ದೊರಕುತ್ತದೆ.

;

* ನಿಂಬೆಹಣ್ಣು, ಕಿತ್ತಳೆಯ ಸಿಪ್ಪೆಗಳಲ್ಲಿ ಅತ್ಯಧಿಕ ವಿಟಮಿನ್ ಸಿ ಇರುವುದರಿಂದ ಅವುಗಳಿಂದ ಅನೇಕ ಉಪಯೋಗ ಪಡೆಯಬಹುದು. ಇವನ್ನು ಒಣಗಿಸಿ ಉಪ್ಪಿನಕಾಯಿಯನ್ನು ತಯಾರಿಸಬಹುದು. ಇದರಿಂದ ದೇಹಕ್ಕೆ ಚೈತನ್ಯವೂ ದೊರಕುತ್ತದೆ.

;

* ಇನ್ನಿತರ ತರಕಾರಿಗಳಾದ ಹೀರೇಕಾಯಿ, ಹಾಗಲಕಾಯಿ, ಸೋರೇ ಕಾಯಿ ಮತ್ತು ಶುಂಠಿ, ಇವುಗಳೂ ಕೂಡ ತಮ್ಮ ಸಿಪ್ಪೆಯಲ್ಲಿ ಬಹು ಉಪಯುಕ್ತ ಅಂಶವನ್ನು ಹೊಂದಿದೆ. ಇದನ್ನು ಬಿಸಾಡದೆ ಉಪಯೋಗಿಸಿದರೆ ತರಕಾರಿಯನ್ನು ತಿಂದಷ್ಟೇ ಹೆಚ್ಚಿನ ಪೌಷ್ಟಿಕಾಂಶವನ್ನು ಹೊಂದಬಹುದು.

;

ಸುಮ್ಮನೆ ಕಸಕ್ಕೆ ಬಿಸಾಡಿ ವ್ಯರ್ಥ ಮಾಡದೆ ಸಿಪ್ಪೆಗಳನ್ನೂ ಸಮರ್ಥವಾಗಿ ಬಳಕೆ ಮಾಡಿಕೊಂಡರೆ ಉತ್ತಮ ಆರೋಗ್ಯವನ್ನು ಹೊಂದಬಹುದು.

English summary

Vegetable peels | Potato and lemon peels good to eat | ತರಕಾರಿ ಸಿಪ್ಪೆಗಳು | ಆಲೂಗಡ್ಡೆ ಮತ್ತು ನಿಂಬೆಹಣ್ಣಿನ ಸಿಪ್ಪೆ ಆರೋಗ್ಯಕರ

Vegetable peels in our kitchen go straight to the waste basket. Potato, citrus and several other peels that are potentially good organic food are ruthlessly discarded due to the lack of our knowledge. If only it was possible to establish beyond any scope for double that vegetable peels are very much edible then this terrible wastage of resources would stop. That exactly what we are going to do in this article.
Story first published: Friday, August 5, 2011, 12:33 [IST]
X
Desktop Bottom Promotion