For Quick Alerts
ALLOW NOTIFICATIONS  
For Daily Alerts

ನಿಮ್ಮ ಅಡುಗೆ ಮನೆಯ ದಾದಿ ಲವಂಗ

By Rajendra
|
Uses of Clove
ಮಸಾಲೆ ಪದಾರ್ಥಗಳಲ್ಲಿ ಒಂಚೂರು ಘಾಟಾದ ಲವಂಗ....ಸಹಜ ಸಿದ್ಧವಾದ ಆರೋಗ್ಯ ಪ್ರದಾಯಿನಿ. ಇದರಲ್ಲಿ ಶರೀರಕ್ಕೆ ಒಳಿತು ಮಾಡುವ ಆಂಟಿಆಕ್ಸಿಡೆಂಟ್‍ಗಳು ಸಮೃದ್ಧಿಯಾಗಿವೆ. ಲವಂಗದಲ್ಲಿನ ಫೆನೋಲ್ ಸಂಯೋಜನೆಗಳು ಶರೀರದಲ್ಲಿನ ನಂಜು ಪದಾರ್ಥಗಳ ಶಕ್ತಿಗುಂದಿಸುತ್ತದೆ. ರಕ್ತಕಣಗಳ ಕ್ಷೀಣತೆಯನ್ನು, ರಕ್ತಕಣಗಳ ನಷ್ಟವನ್ನು ತಡೆಗಟ್ಟುತ್ತದೆ. ಆದ ಕಾರಣ ಲವಂಗವನ್ನು ಆಗಾಗ, ಅಲ್ಲಲ್ಲಿ, ಹಿತಮಿತವಾಗಿ ಬಳಸುವುದು ಒಳಿತು.

ಲವಂಗದ ಗಿಡ ಚಿಕ್ಕದಾಗಿದ್ದು ಸದಾಹಸಿರಾಗಿರುತ್ತದೆ. ಕೊಂಬೆಗಳ ತುದಿಯಲ್ಲಿ ಗೊಂಚಲು ಗೊಂಚಲಾಗಿ ಹೂವಿನ ಮೊಗ್ಗು ಬಿಡುತ್ತದೆ. ಒಣ ಮೊಗ್ಗನ್ನೇ ಲವಂಗ ಎನ್ನುವುದು. ಲವಂಗದ ಪುಡಿ ಮತ್ತು ತೈಲ ಶೀತಬಾಧೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.

ತಲೆಯ ಸಮಸ್ಯೆಗಳು, ವಾಕರಿಕೆ, ದಂತನೋವು, ರಕ್ತದೊತ್ತಡ, ಸುಟ್ಟ ಗಾಯಗಳಿಗೆ ನೋವು ನಿವಾರಕವಾಗಿ, ಉಸಿರಾಟದ ತೊಂದರೆಗಳನ್ನು ಬಗೆಹರಿಸುವಲ್ಲಿ ಸಹಕಾರಿ. ತೀವ್ರ ಒಸಡು ನೋವಿಗೆ, ಎದೆನೋವು, ಕೆಮ್ಮು, ಅಜೀರ್ಣ ಸಮಸ್ಯೆಗಳು, ಅತಿಸಾರ, ಕಾಲರಾ, ಸಂಧಿವಾತ ಹಾಗೂ ಬೆನ್ನುನೋವು ಸಮಸ್ಯೆಗಳಿಗೆ ಲವಂಗ ತೈಲ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಇನ್ನು ಅಡುಗೆಯಲ್ಲಿ ಲವಂಗದ ಪಾತ್ರವೂ ಹಿರಿದು. ಸಾಂಬಾರು ಪುಡಿ, ಪಲಾವ್ , ಲಾಡು ಮುಂತಾದ ನಾವು ಸೇವಿಸುವ ದೈನಂದಿನ ಆಹಾರದಲ್ಲಿ ಲವಂಗ
ಇಣಕುತ್ತದೆ. ಊಟದ ನಂತರ ಮೆಲ್ಲುವ ಎಲೆ ಅಡಿಕೆಯ ತಟ್ಟೆಯಲ್ಲಿ ಲವಂಗ ಇಲ್ಲದಿದ್ದರೆ ಹೇಗೆ! ಹಾಗಾಗಿ ಲವಂಗವನ್ನು ಕರಿಬೇವಿನಂತೆ ಪಕ್ಕಕ್ಕಿಡದೆ ಸೇವಿಸುವುದನ್ನು ರೂಢಿಸಿಕೊಳ್ಳಿ.

English summary

Uses of Clove | Medicinal Uses of Clove | Home Remedies |ಲವಂಗ ಉಪಯೋಗಗಳು | ಔಷಧೀಯ ಗುಣಗಳ ಲವಂಗ

Clove is wonderful spice as well as house hold drug. Clove powder and oil are very effective in treating fever, problems related to the head, nausea, hypertension etc., The dried flower buds of the tree, which are pungent and aromatic are used in cooking and for therapeutic purposes.
Story first published: Saturday, December 18, 2010, 15:53 [IST]
X
Desktop Bottom Promotion