For Quick Alerts
ALLOW NOTIFICATIONS  
For Daily Alerts

ಕೆಂಪು ವೈನ್ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದಂತೆ!

By Mahesh
|
ವೈನ್ ಎಂದರೆ ಮೂಗು ಮುರಿಯುತ್ತಿದ್ದವರೂ ಕೂಡಾ ವೈನ್ ನಿಂದ ಸಿಗುವ ಆರೋಗ್ಯ ಲಾಭಗಳ ಪಟ್ಟಿ ನೋಡಿ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ನಾವು ಯಾಕೆ ದಿನಕ್ಕೊಂದು ಪೆಗ್ ಆದರೂ ವೈನ್ ಕುಡಿದು ನೋಡಬಾರದು ಎನ್ನುವ ಮಟ್ಟಕ್ಕೆ ಸಾರ್ವಜನಿಕರ ಅಭಿಪ್ರಾಯಗಳು ಬದಲಾಗತೊಡಗಿದೆ. ಆದರೆ, ಎಲ್ಲಕ್ಕೂ ಮಿತಿಯಿದೆ. ಕೆಂಪು ವೈನ್ ಆಲ್ಕೋಹಾಲ್ ರಹಿತವಾಗಿ ಹೀರಿದರೆ ದ್ರಾಕ್ಷಾರಸ ಸೇವಿಸಿದಷ್ಟೇ ಅನುಭವ ಹಾಗೂ ಉಲ್ಲಾಸ ಸಿಗುತ್ತದೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರ ಕೂಡಾ ದ್ರಾಕ್ಷಿ ಬೆಳೆಗಾರರ ಅನುಕೂಲಕ್ಕಾಗಿ ವೈನ್ ಉತ್ಪಾದನೆ, ಮಾರಾಟಕ್ಕೆ ಹೆಚ್ಚಾಗಿ ಮುತುವರ್ಜಿ ವಹಿಸಿಕೊಂಡಿದೆ.

ವೈನ್ ಕುಡಿಯುವುದರಿಂದ ಆಗುವ ಅನುಕೂಲಗಳನ್ನು ಹೀಗೆ ಉದಾಹರಿಸಬಹುದು:
* ಕೊಲೆಸ್ಟ್ರಾಲ್ ನಿಯಂತ್ರಣ ಶಕ್ತಿ.
* ಹೃದಯ ಹಾಗೂ ಹಲ್ಲಿನ ಆರೋಗ್ಯ ಅನುಕೂಲ[ಇದು ಹೊಸ ಮದ್ಯಪಾನಿಗಳಿಗೆ ಅನ್ವಯವಾಗುವುದಿಲ್ಲ].
* ತ್ವಚೆ ಸಂರಕ್ಷಿಸಿ, ನಿಜ ವಯಸ್ಸನ್ನು ಮರೆ ಮಾಚುವಂತೆ ಮಾಡಬಹುದು.
* ಅಲ್ ಜೈಮೆರ್ ಕಾಯಿಲೆ ತೊಂದರೆ ಕಮ್ಮಿ ಮಾಡಬಹುದು.
* ಡಿಎನ್ಎ ತೊಂದರೆ ನಿಯಂತ್ರಣಕ್ಕೆ ಉಪಯೋಗ.

ಆದರೆ, ಹೆಚ್ಚಿನ ವೈನ್ ಸೇವನೆಯಿಂದ ಅಧಿಕ ರಕ್ತದೊತ್ತಡ, ಕರಳು ಬೇನೆ, ಕಿಡ್ನಿ ವೈಫಲ್ಯ, ನರ ದೌರ್ಬಲ್ಯ, ಕಾನ್ಸರ್ , ಹೃದಯಾಘಾತಕ್ಕೂ ಕಾರಣವಾಗುವುದುಂಟು.

ಟೈಪ್ 2 ಡಯಾಬಿಟಿಸ್ ರೋಗಿಗಳು ವೈನ್ ಸೇವಿಸುವುದು ಒಳ್ಳೆಯದು ಎಂದು ಇತ್ತೀಚೆಗೆ ತಜ್ಞ ವೈದ್ಯರು ಕಂಡುಕೊಂಡ ಸತ್ಯ. ವೈನ್ ಸೇವನೆ ಕೊಲೆಸ್ಟ್ರಾಲ್ ಪ್ರಮಾಣ ತಗ್ಗಿಸುತ್ತದೆ. ದೇಹಕ್ಕೆ ಅಗತ್ಯವಾದ ಗ್ಲುಕೋಸ್ ಒದಗಿಸಿ, ಇನ್ಸುಲಿನ್ ಚುಚ್ಚುಮದ್ದು ಮಾಡುವ ಕೆಲಸವನ್ನು ವೈನ್ ಮಾಡಿಬಿಡುತ್ತದೆ. ಆದರೆ, ಔಷಧಿ ರೂಪದಲ್ಲಿ ಸೇವಿಸಿದರೆ ಮಾತ್ರ ವೈನ್ ದೇಹಕ್ಕೂ ಮನಸಿಗೂ ಹಿತ ಎಂಬ ಎಚ್ಚರಿಕೆಯನ್ನು ವಿಜ್ಞಾನಿಗಳು ನೀಡುತ್ತಾರೆ.

ಹೆಚ್ಚು ವಯಸ್ಸಾದ ನಂತರದಲ್ಲಿ ಆಲ್ಕೊಹಾಲ್‌ ಸೇವನೆಯಿಂದ ದೀರ್ಘಾಯುಷ್ಯದ ಪ್ರಮಾಣ ಹೆಚ್ಚಾಗುತ್ತದೆ, 55 ಅಥವಾ ಅದಕ್ಕಿಂತ ಹೆಚ್ಚಿಗೆ ವಯಸ್ಸಾದ ಜನರು ಪ್ರತಿನಿತ್ಯ ಕಡಿಮೆ ಪ್ರಮಾಣದಲ್ಲಿ ಹದವಾಗಿ ಆಲ್ಕೊಹಾಲ್ ತೆಗೆದುಕೊಂಡರೆ (ಒಂದು ಅಥವಾ ಮೂರು ಗ್ಲಾಸ್) 42%ರಷ್ಟು ಬುದ್ಧಿಮಾಂದ್ಯತೆ ಬೆಳೆಯುವುದು ಕಡಿಮೆಯಾಗುತ್ತದಂತೆ.

ವೈನ್‌ನ್ನು ದ್ರಾಕ್ಷಿಗಳಿಂದ ತಯಾರಿಸುತ್ತಾರೆ, ಮತ್ತು ಹಣ್ಣಿನ ವೈನ್‌ನ್ನು ಪ್ಲಮ್, ಚೆರ್ರಿ, ಮಾವು ಮತ್ತು ಸೇಬು ಹಣ್ಣುಗಳಿಂದ ತಯಾರಿಸುತ್ತಾರೆ. ವೈನ್‌ ಸುದೀರ್ಘವಾದ(ಪೂರ್ಣ) ಹುಳಿಯುವಿಕೆಯ ವಿಧಾನ ಮತ್ತು ಸುದೀರ್ಘ ಕೊಳೆಯುವಿಕೆಯನ್ನೊಳಗೊಳ್ಳುತ್ತದೆ. ತಿಂಗಳು ಅಥವಾ ವರ್ಷಗಳಾನುಗಟ್ಟಲೆ ವೈನ್ ಕೊಳೆಯಲು ಬಿಡಲಾಗುತ್ತದೆ, ಇದರಿಂದಾಗಿ ಅಲ್ಪ ಪ್ರಮಾಣದಲ್ಲಿ ಆಲ್ಕೊಹಾಲ್‌ ಅನ್ನು ವೈನ್ ಹೊಂದುತ್ತದೆ.

ಕೊನೆಯದಾಗಿ, ಹೆಂಗಳೆಯರು ದಿನಕ್ಕೊಂದು ಗ್ಲಾಸ್, ಪುರುಷರು 2 ಗ್ಲಾಸ್ ಕೆಂಪು ವೈನ್ ಸೇವಿಸಿದರೆ ಯಾವ ವೈದ್ಯರೂ ಬೇಡ ಎನ್ನುವುದಿಲ್ಲ. ಇಂದಿಗೂ ವೈನ್ ಸಂಸ್ಕೃತಿ ಉಳಿಸಿಕೊಂಡು ಬಂದಿರುವ ಕೊಡವರ ಆಣೆಯಾಗಿಯೂ ಇದು ಸತ್ಯ.

English summary

Red Wine for Health | Moderate Drinking | Wine Diabetes | ಆರೋಗ್ಯಕ್ಕೆ ಕೆಂಪು ವೈನ್| ಡಯಾಬಿಟಿಸ್ ವೈನ್| ಕೆಂಪು ವೈನ್ ಉಪಯೋಗಗಳು|

Drinking Red wine everyday is good for health. Red wine may help to reduce alzheimer"s disease, anti cholesterol qualities can help treat diabetes. But, doctors advise says "moderate drinking : one glass of red wine for women; two for men is more than enough.
X
Desktop Bottom Promotion