For Quick Alerts
ALLOW NOTIFICATIONS  
For Daily Alerts

ಶ್ವಾಸಕೋಶದ ಕ್ಯಾನ್ಸರ್ ಎಲ್ಲಾ ಧೂಮಪಾನಿಗಳಿಗೆ ಬರಲ್ಲ, ಕೆಲವರಿಗಷ್ಟೇ ಬರುತ್ತೆ ಏಕೆ?

|

ಧೂಮಪಾನ ಆರೋಗ್ಯಕ್ಕೆ ಹಾನಿಕಾರ ಎಂಬುವುದು ಪ್ರತಿಯೊಬ್ಬರಿಗೂ ಗೊತ್ತಿರುವ ಅಂಶ. ಧೂಮಪಾನಿಗಳಿಗೆ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತ ಹೆಚ್ಚು. ಶ್ವಾಸಕೋಶದ ಕ್ಯಾನ್ಸರ್ ಹೊಂದಿರುವ ಶೇ. 80 ರೋಗಿಗಳಿಗೆ ಧೂಮಪಾನದಿಂದಾಗಿ ಈ ಮಾರಾಣಾಂತಿಕ ಕಾಯಿಲೆ ಬಂದಿರುತ್ತದೆ.

ಆದರೆ ಧೂಮಪಾನಿಗಳ ಸಂಖ್ಯೆಗೆ ಹೋಲಿಸಿದರೆ ಕೆಲವರಿಗಷ್ಟೇ ಶ್ವಾಸಕೋಶದ ಕ್ಯಾನ್ಸರ್ ಉಂಟಾಗಿರುತ್ತದೆ. ಕೆಲವರು ತುಂಬಾ ಧೂಮಪಾನ ಮಾಡುತ್ತಾರೆ, ಆದರೆ ಕೊನೆಯವರೆಗೂ ಅವರು ಆರಾಮವಾಗಿಯೇ ಇರುತ್ತಾರೆ. ಕೆಲವರಿಗಷ್ಟೇ ಕ್ಯಾನ್ಸರ್‌ನಂಥ ಸಮಸ್ಯೆ ಉಂಟಾಗಿರುತ್ತದೆ. ಆದ್ದರಿಂದ ಧೂಮಪಾನಿಗಳು ಸಿಗರೇಟ್‌ ಎಳೆದರೆ ಕ್ಯಾನ್ಸರ್ ಬರುತ್ತೆ ಎಂದು ಹೇಳುವುದೆಲ್ಲಾ ಸುಳ್ಳು.. ನಾನು ಎಷ್ಟೋ ವರ್ಷಗಳಿಂದ ದಿನಕ್ಕೆ 3-4 ಪ್ಯಾಕ್‌ ಖಾಲಿ ಮಾಡುತ್ತೇನೆ, ನನಗೇನಾಗಿದೆ ಎಂದು ಹೇಳುವವರೂ ಇದ್ದಾರೆ. ಆಗ ಹೌದಲ್ಲಾ ಏಕೆ ಧೂಮಪಾನಿಗಳಲ್ಲಿ ಕೆಲವರಿಗಷ್ಟೇ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತೆ, ಇದಕ್ಕೆ ಕಾರಣವೇನಿರಬಹುದು? ಎಂಬ ಪ್ರಶ್ನೆ ಮೂಡುವುದು.

ಆಲ್ಬರ್ಟ್ ಐನ್‌ಸ್ಟೈನ್ ಕಾಲೇಜ್‌ ಆಫ್‌ ಮೆಡಿಸನ್‌ನ ವಿಜ್ಞಾನಿಗಳು ಈ ಕುರಿತು ಅಧ್ಯಯನ ನಡೆಸಿ ಧೂಮಪಾನಿಗಳಲ್ಲಿ ಕೆಲವರಿಗೆ ಶ್ವಾಸಕೋಶದ ಕ್ಯಾನ್ಸರ್ ಉಂಟಾಗುತ್ತೆ, ಇನ್ನು ಕೆಲವರಿಗೆ ಬರುವುದಿಲ್ಲ ಏಕೆ ಎಂಬುವುದನ್ನು ವಿವರಿಸಿದ್ದಾರೆ ನೋಡಿ:

ಧೂಮಪಾನ ಮತ್ತು ಶ್ವಾಸಕೋಶದ ಕ್ಯಾನ್ಸರ್‌:

ಧೂಮಪಾನ ಮತ್ತು ಶ್ವಾಸಕೋಶದ ಕ್ಯಾನ್ಸರ್‌:

ವೈದ್ಯರು ಹೇಳುವ ಪ್ರಕಾರ ಧೂಮಪಾನಿಗಳು ಒಂದರ ನಂತರ ಮತ್ತೊಂದು ಎಂದು ಬೀಡಿ/ ಸಿಗರೇಟ್‌ನ ಹೊಗೆ ಎಳೆದು ಬಿಡುವುದರಿಂದ ಶ್ವಾಸಕೋಶಕ್ಕೆ ಹಾನಿಯುಂಟಾಗುವುದು. ವರ್ಷಗಳು ಕಳೆಯುತ್ತಿದ್ದಂತೆ ಶ್ವಾಸಕೋಶ ಕ್ಯಾನ್ಸರ್‌ ಉಂಟಾಗುವುದು.

ಧೂಮಪಾನಿಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವೇನು?

ಧೂಮಪಾನಿಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವೇನು?

ಈ ಅಧ್ಯಯನಲ್ಲಿ ಧೂಮಪಾನಿಗಳು ಹಾಗೂ ಧೂಮಪಾನ ಮಾಡದೇ ಇರುವವರನ್ನು ಒಳಪಡಿಸಿತ್ತು. ಅದರಲ್ಲಿ ತಿಳಿದು ಬಂದ ಅಂಶವೆಂದರೆ ಶ್ವಾಸಕೋಶದ ಕಣದಲ್ಲಿ DNA ರೂಪಾಂತರವಾಗುತ್ತಿರುತ್ತದೆ, ಇದರಿಂದಾಗಿ ಕೆಲವು ವರ್ಷಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಉಂಟಾಗುವುದು.

ಆದರೆ ಎಷ್ಟು ಪ್ರಮಾಣದಲ್ಲಿ ರೂಪಾಂತರವಾದರೆ ಕ್ಯಾನ್ಸರ್‌ಗೆ ಕಾರಣವಾಗುತ್ತೆ ಎಂಬುವುದನ್ನು ನಿಖರವಾಗಿ ಹೇಳಲು ಸಾಧ್ಯವಾಗಿಲ್ಲ. ಈ ಅಧ್ಯಯನದಲ್ಲಿ ಅವರು SCMDA single-cell multiple displacement amplification ಟೆಕ್ನಿಕ್‌ ಬಳಸಿದ್ದರು.

ಧೂಮಪಾನ ಮಾಡದವರಿಗೂ ಶ್ವಾಸಕೋಶದ ಕ್ಯಾನ್ಸರ್ ಬರಲು ಕಾರಣವೇನು?

ಧೂಮಪಾನ ಮಾಡದವರಿಗೂ ಶ್ವಾಸಕೋಶದ ಕ್ಯಾನ್ಸರ್ ಬರಲು ಕಾರಣವೇನು?

ಅತ್ಯಧಿಕ ವಾಯು ಮಾಲಿನ್ಯ ಅಥವಾ ಕಾರ್ಖಾನೆಗಳಲ್ಲಿ ಕೆಲಸ, ವಯಸ್ಸಾಗುತ್ತಿದ್ದಂತೆ DNA ರೂಪಾಂತರವಾದರೆ ಶ್ವಾಸಕೋಶದ ಕ್ಯಾನ್ಸರ್ ಉಂಟಾಗುವುದು. ಆದರೆ ಧೂಮಪಾನಿಗಳಿಗೆ ಹೋಲಿಸಿದರೆ ಧೂಮಪಾನ ಮಾಡದವರಿಗೆ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ತುಂಬಾನೇ ಕಡಿಮೆ.

ಅದರಲ್ಲೂ ಮಾಡುವವರಲ್ಲಿ ಎಲ್ಲರಿಗೆ ಶ್ವಾಸಕೋಶದ ಕ್ಯಾನ್ಸರ್ ಬರಲ್ಲ, ಏಕೆ?

ಅದರಲ್ಲೂ ಮಾಡುವವರಲ್ಲಿ ಎಲ್ಲರಿಗೆ ಶ್ವಾಸಕೋಶದ ಕ್ಯಾನ್ಸರ್ ಬರಲ್ಲ, ಏಕೆ?

ತುಂಬಾ ಸಿಗರೇಟ್‌ ಅಥವಾ ಬೀಡಿ ಸೇದುವವರಲ್ಲಿ ಶೇ. 10-20ರಷ್ಟು ಧೂಮಪಾನಿಗಳಲ್ಲಿ ಮಾತ್ರ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ.

ಕೆಲ ಧೂಮಪಾನಿಗಳ ಶ್ವಾಸಕೋಶದಲ್ಲಿ DNA ಹಾಳಾಗದಂತೆ ರಿಪೇರಿ ಆಗುತ್ತಿರುತ್ತದೆ ಅಥವಾ ಶ್ವಾಸಕೋಶ ಡಿಟಾಕ್ಸ್ ಆಗುತ್ತಿರುತ್ತದೆ. ಇದಕ್ಕೆ ಅವರ ಆಹಾರಶೈಲಿ, ಇತರ ಜೀವನಶೈಲಿ ಕಾಣವಾಗಬಹುದು.

ಯಾರಲ್ಲಿ ಶ್ವಾಸಕೋಶದಲ್ಲಿ DNA ಹಾನಿಗೊಳಗಾಗಿ ತುಂಬಾ ರೂಪಾಂತರವಾಗುತ್ತಿರುತ್ತದೋ ಅಂಥವರಿಗೆ ಕ್ಯಾನ್ಸರ್ ಬರುತ್ತೆ. ಆದ್ದರಿಂದಲೇ ಎಲ್ಲಾ ಧೂಮಪಾನಿಗಳಿಗೆ ಕ್ಯಾನ್ಸರ್ ಬರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಯಾರಲ್ಲಿ DNA ಹಾನಿಗೊಳಗಾಗುತ್ತದೋ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಉಂಟಾಗುವುದು, ಆದ್ದರಿಂದ ಧೂಮಪಾನಕ್ಕೆ ಗುಡ್‌ಬೈ ಹೇಳಿ, ಆರೋಗ್ಯ ಹೆಚ್ಚಿಸಿಕೊಳ್ಳಿ.

English summary

Why Some Smokers Get Lung Cancer, And Others Don't; explained in kannada

Why Some Smokers Get Lung Cancer, And Others Don't; explained in kannada, read on...
X
Desktop Bottom Promotion