For Quick Alerts
ALLOW NOTIFICATIONS  
For Daily Alerts

ಶ್ವೇತ ಮುಸ್ಲಿ: ಹೃದಯದ ಆರೋಗ್ಯ, ಮಧುಮೇಹ ನಿಯಂತ್ರಣ, ಲೈಂಗಿಕ ಆರೋಗ್ಯ ವೃದ್ಧಿ ಹೀಗೆ ಹತ್ತು ಹಲವು ಪ್ರಯೋಜಗಗಳಿವೆ ಈ ಹರ್ಬ್ಸ್‌ನಲ್ಲಿ

|

ಮುಸ್ಲಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆಯುರ್ವೇದದಲ್ಲಿ ಇದನ್ನು ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ. ಇದು ದೇಹಕ್ಕೆ ತುಂಬಾನೇ ಒಳ್ಳೆಯದು, ಇದರ ಸೇವನೆಯಿಂದ ದೈಹಿಕ ಆರೋಗ್ಯ, ಲೈಂಗಿಕ ಆರೋಗ್ಯ, ಶಕ್ತಿ ದೊರೆಯುವುದು.

White Musli

ಇನ್ನು ಯಾರಿಗೆ ಮಧುಮೇಹ, ಸುಸ್ತು, ದುರ್ಬಲ ಸ್ನಾಯುಗಳ ಸಮಸ್ಯೆ ಹೊಂದಿರುತ್ತಾರೋ ಅವರು ಇದನ್ನು ಸೇವಿಸಿದರೆ ತುಂಬಾನೇ ಪ್ರಯೋಜನ ಪಡೆಯಬಹುದು. ಬಿಳಿ ಮುಸ್ಲಿಯನ್ನು ಸಫೇದ್ ಮುಸ್ಲಿ, ಶ್ವೇತ ಮುಸ್ಲಿ, ಧೋಲಿ ಮುಸ್ಲಿ ಹೀಗೆ ಹಲವು ಹೆಸರುಗಳಿಂದ ಕರೆಯಲಾಗುವುದು.

ಶ್ವೇತ ಮುಸ್ಲಿಯನ್ನು ಹೇಗೆ ಬಳಸಬೇಕು?

ಶ್ವೇತ ಮುಸ್ಲಿಯನ್ನು ಹೇಗೆ ಬಳಸಬೇಕು?

ಇದು ಮಾರುಕಟ್ಟೆಯಲ್ಲಿ ಲೇಹ್ಯ, ಪೌಡರ್‌ ಹಾಗೂ ಮಾತ್ರೆಯ ರೂಪದಲ್ಲಿ ದೊರೆಯುತ್ತದೆ. ದಿನದಲ್ಲಿ 20ಗ್ರಾಂನಷ್ಟು ಮುಸ್ಲಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು.

ಇದನ್ನು ನೀವು ಜೇನುತುಪ್ಪ, ಹಾಲೂ ಅಥವಾ ಹಸುವಿನ ತುಪ್ಪದ ಜೊತೆ ಸೇವಿಸಬಹುದು.

ಮುಸ್ಲಿ ಸೇವನೆಯಿಂದ ಮಧುಮೇಹ ನಿಯಂತ್ರಣ, ಸರಿಯಾದ ಮೈ ತೂಕ ಪಡೆಯುವುದು ಹೀಗೆ ಹಲವು ಪ್ರಯೋಜನಗಳನ್ನು ಪಡೆಯಬಹುದು.

ಮುಸ್ಲಿಯ ಪ್ರಯೋಜನಗಳು

ಮುಸ್ಲಿಯ ಪ್ರಯೋಜನಗಳು

ಮಧುಮೇಹ ನಿಯಂತ್ರಿಸುತ್ತದೆ

ಇತ್ತೀಚಿನ ದಿನಗಳಲ್ಲಿ ಮಧುಮೇಹ ಬಹುತೇಕರನ್ನು ಕಾಡುವ ಸಮಸ್ಯೆಯಾಗಿದೆ. ಈ ಮುಸ್ಲಿ ಸೇವನೆ ದೇಹದಲ್ಲಿ ಇನ್ಸುಲಿನ್‌ ಉತ್ಪತ್ತಿಗೆ ಸಹಾಯ ಮಾಡುತ್ತದೆ ಹಾಗ ದೇಹದ ರಕ್ತದಲ್ಲಿ ಗ್ಲುಕೋಸ್‌ ಪ್ರಮಾಣ ಕಡಿಮೆ ಮಾಡುತ್ತೆ.

 ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು

ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು

ಇದು ಹೃದಯದ ನರಗಳನ್ನು ಬಲಪಡಿಸುತ್ತೆ ಹಾಗೂ ನರಗಳಲ್ಲಿ ರಕ್ತ ಬ್ಲಾಕ್‌ ಅಗುವುದನ್ನು ತಡೆಗಟ್ಟುತ್ತೆ,ಇದರಿಂದ ಹಾರ್ಟ್‌ ಬ್ಲಾಕ್‌, ಬ್ಲಡ್‌ ಕ್ಲಾಟ್‌ ಮುಂತಾದ ಸಮಸ್ಯೆ ಉಂಟಾಗುವುದಿಲ್ಲ, ಅಲ್ಲದೆ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವಲ್ಲಿಯೂ ಇದು ಪರಣಾಮಕಾರಿ

 ರೋಗ ನಿರೋಧಕ ಶಕ್ತಿ ವೃದ್ಧಿಸುತ್ತೆ

ರೋಗ ನಿರೋಧಕ ಶಕ್ತಿ ವೃದ್ಧಿಸುತ್ತೆ

ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು, ತಲೆಸುತ್ತು, ಸುಸ್ತು ಇವೆಲ್ಲಾ ಇದ್ದರೆ ಕಡಿಮೆಯಾಗುವುದು, ಮಾನಸಿಕ ಒತ್ತಡ ಕಡಿಮೆ ಮಾಡುತ್ತೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು.

 ಜೀರ್ಣಕ್ರಿಯೆ ಚೆನ್ನಾಗಿ ಆಗುವುದು

ಜೀರ್ಣಕ್ರಿಯೆ ಚೆನ್ನಾಗಿ ಆಗುವುದು

ಕೆಲವರಿಗೆ ಜೀರ್ಣಕ್ರಿಯೆ ಸಮಸ್ಯೆಯಿಂದಾಗಿ ಅಜೀರ್ಣ, ಮಲಬದ್ಧತೆ ಸಮಸ್ಯೆ ಕಾಡುವುದು, ಶ್ವೇತ ಮುಸ್ಲಿ ಸೇವನೆಯಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ, ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳುವುದು. ಅಲ್ಸರ್, ಗ್ಯಾಸ್ಟ್ರಿಕ್‌, ಅಜೀರ್ಣ ಈ ಬಗೆಯ ಸಮಸ್ಯೆ ಕಡಿಮೆಯಾಗುವುದು.

ಸಂಧಿವಾತಕ್ಕೆ ಒಳ್ಳೆಯದು

ಸಂಧಿವಾತಕ್ಕೆ ಒಳ್ಳೆಯದು

ಕಾಲಿನಲ್ಲಿ ಉರಿಯೂತ, ಸಂಧಿವಾತದ ಸಮಸ್ಯೆಯಿದ್ದರೆ ಮಮುಸ್ಲಿ ಸೇವನೆಯಿಂದ ನೋವು ಉರಿಯೂತ ಕಡಿಮೆಯಾಗುವುದು.

ಎದೆ ಹಾಲಿನ ಉತ್ಪತ್ತಿ ಹೆಚ್ಚಿಸುತ್ತೆ

ಎದೆ ಹಾಲಿನ ಉತ್ಪತ್ತಿ ಹೆಚ್ಚಿಸುತ್ತೆ

ಬಾಣಂತಿಯರಿಗೆ ಇದನ್ನು ಹಾಲಿನಲ್ಲಿ ಹಾಕಿ, ಅದಕ್ಕೆ ಸ್ವಲ್ಪ ಜೀರಿಗೆ ಪುಡಿ ಸೇರಿಸಿ ಕೊಟ್ಟರೆ ಎದೆ ಹಾಲಿನ ಉತ್ಪತ್ತಿ ಹೆಚ್ಚುವುದು.

 ಆಗಾಗ ಮಲವಿಸರ್ಜನೆ ಮಾಡುವುದು ಕಡಿಮೆಯಾಗುವುದು

ಆಗಾಗ ಮಲವಿಸರ್ಜನೆ ಮಾಡುವುದು ಕಡಿಮೆಯಾಗುವುದು

ಕೆಲವರು ಆಗಾಗ ಮಲವಿಸರ್ಜನೆ ಮಾಡಲು ಹೋಗುತ್ತಾರೆ. ಅಂಥವರು ಮುಸ್ಲಿ ಸೇವಿಸಿದರೆ ಕರುಳಿನಲ್ಲಿರುವ ಬ್ಯಾಕ್ಟಿರಿಯಾ ನಾಶ ಮಾಡಿ, ದೇಹದಲ್ಲಿರುವ ಕಶ್ಮಲಗಳನ್ನು ಹೊರ ಹಾಕಿ, ಆಗಾಗ ಮಲವಿಸರ್ಜನೆಗೆ ಹೋಗುವುದನ್ನು ತಪ್ಪಿಸುತ್ತೆ.

ಮೂತ್ರ ಸೋಂಕು

ಮೂತ್ರ ಸೋಂಕು

ಮೂತ್ರ ಮಾಡುವಾಗ ನೋವು, ಉರಿ ಈ ರೀತಿಯ ಸಮಸ್ಯೆ ಇದ್ದರೆ ಹಸುವಿನ ಹಾಲಿನ ಜೊತೆ ಮುಸ್ಲಿ ಸೇರಿಸಿ ಕುಡಿದರೆ ಆ ಸಮಸ್ಯೆಗಳು ಕಡಿಮೆಯಾಗುವುದು.

 ಸೌಂದರ್ಯ ವೃದ್ಧಿಸುತ್ತೆ

ಸೌಂದರ್ಯ ವೃದ್ಧಿಸುತ್ತೆ

ಇನ್ನು ಮುಸ್ಲಿ ಸೌಂದರ್ಯವರ್ಧನೆಗೂ ಸಹಕಾರಿ, ಇದು ಮುಖದಲ್ಲಿ ಮೊಡವೆ ಇದ್ದರೆ ಕಡಿಮೆ ಮಾಡುವುದು, ಕಣ್ಣಿನ ಸುತ್ತ ಇರುವ ಡಾರ್ಕ್‌ ಸರ್ಕಲ್‌ ಹೋಗಲಾಡಿಸುತ್ತೆ, ಅಕಾಲಿಕ ನೆರಿಗೆ ತಡೆಗಟ್ಟುತ್ತೆ, ತ್ವಚೆ ಅಲರ್ಜಿ ಹೋಗಲಾಡಿಸಿ, ತ್ವಚೆಯ ಹೊಳಪು ಹೆಚ್ಚಿಸುತ್ತೆ.

 ಶ್ವೇತ ಮುಸ್ಲಿಯ ಅಡ್ಡಪರಿಣಾಮಗಳು

ಶ್ವೇತ ಮುಸ್ಲಿಯ ಅಡ್ಡಪರಿಣಾಮಗಳು

* ಇದರಿಂದ ಮೈ ತೂಕ ಹೆಚ್ಚಾಗುವುದು

* ಕೆಲವರಿಗೆ ಅಜೀರ್ಣ ಉಂಟಾಗುವುದು

* ಹಸಿವು ಕಡಿಮೆಯಾಗುವುದು

* ಗರ್ಭಿಣಿಯರಿಗೆ ಸುರಕ್ಷಿತವಲ್ಲ

ಸೂಚನೆ: ಈ ಶ್ವೇತ ಮುಸ್ಲಿ ತೆಗೆದುಕೊಳ್ಳುವ ಮುನ್ನ ಆಯುರ್ವೇದ ವೈದ್ಯರ ಸಲಹೆ ಪಡೆಯಿರಿ.

English summary

White Musli Health Benefits, Uses, Side Effects Of Safed Musli in kannada

White Musli: What are the benefits from this yrvedic herbs, it's usage and know thes side affects..
X
Desktop Bottom Promotion