Just In
Don't Miss
- Sports
ಬೇಡವಾಗಿದ್ದರೆ ತಂಡಕ್ಕೆ ಯಾಕೆ ಸೇರಿಸಿಕೊಳ್ತೀರಿ: ಕಿಡಿಕಾರಿದ ಆಕಾಶ್ ಚೋಪ್ರ
- Movies
ಮದುವೆಗೂ ಮುನ್ನ ಗರ್ಭ ಧರಿಸಿದ ತಾರೆಯರಿವರು!
- News
ಕುಮಾರಸ್ವಾಮಿಗೆ ಹತಾಶರಾಗಿ ಆರ್ಎಸ್ಎಸ್ ಬಗ್ಗೆ ಟೀಕೆ ಮಾಡುತ್ತಿದ್ದಾರೆ: ಎಸ್. ಟಿ.ಸೋಮಶೇಖರ್
- Automobiles
2026ರ ವೇಳಗೆ ಭಾರತದಲ್ಲಿ ಓಡಲಿದೆ ಮೊದಲ ಬುಲೆಟ್ ರೈಲು
- Technology
ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದೀರಾ? ಎಷ್ಟು ದಂಡ ಬಾಕಿ ಇದೆ?..ಹೀಗೆ ತಿಳಿಯಿರಿ!
- Finance
ಜಿಎಸ್ಟಿ ಕೌನ್ಸಿಲ್ ಸಭೆ ಆರಂಭ: ಈ ಮಾಹಿತಿ ತಿಳಿದಿರಿ
- Education
Cochin Shipyard Limited Recruitment 2022 : 106 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಬನ್ನೇರುಘಟ್ಟ - ಹೈಟೆಕ್ ನಗರ ಬೆಂಗಳೂರಿನಲ್ಲಿರುವ ಒಂದು ನೈಸರ್ಗಿಕ ತಾಣ
ನಿಮಗೆ ತಲೆ ತಿರುಗುವಿಕೆ ಉಂಟಾದಾಗ ಏನು ಮಾಡಬೇಕು?
ಕೆಲವೊಮ್ಮೆ ಇದ್ದಕ್ಕಿದ್ದಂತೆ ತಲೆ ತಿರುಗಿದಂತೆ ಅನಿಸುವುದು, ನಮ್ಮ ಸುತ್ತಲಿನ ವಸ್ತುಗಳು, ನಾವು ನಿಂತ ಭೂಮಿ ಎಲ್ಲವೂ ತಿರುವುದಾಗಿ ಭಾಸವಾಗಲಾರಂಭಿಸುತ್ತದೆ. ಈ ರೀತಿ ತಲೆ ತಿರುಗುವ ಸಮಸ್ಯೆಯನ್ನು ವರ್ಟಿಗೋ ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯುತ್ತಾರೆ.
ಕಿವಿಯೊಳಗೆ ಏನಾದರೂ ಸಮಸ್ಯೆಯಿದ್ದವರಲ್ಲಿ, ಕುತ್ತಿಗೆ ಅಥವಾ ತಲೆಗೆ ಪೆಟ್ಟಾಗಿದ್ದರೆ, ಮೆದುಳಿನಲ್ಲಿ ಸಮಸ್ಯೆಯಿದ್ದರೆ, ಕೆಲವೊಂದು ಔಷಧಿಗಳು, ಮೈಗ್ರೇನ್, ಅತಿಯಾದ ಮಾನಸಿಕ ಒತ್ತಡ ಇವೆಲ್ಲಾ ಕಾರಣಗಳಿಂದ ವರ್ಟಿಗೋ ಸಮಸ್ಯೆ ಬರಬಹುದು.
ಏಕೆ ಈ ಸಮಸ್ಯೆ ಬರುತ್ತದೆ? ಬಂದಾಗ ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ:

ತಲೆ ತಿರುಗುವಿಕೆ ಉಂಟಾದಾಗ ಕಂಡು ಬರುವ ಲಕ್ಷಣಗಳು
* ಸುತ್ತಲಿನ ವಸ್ತುಗಳು ಸುತ್ತುತ್ತಿರುವಂತೆ ಅನಿಸಲಾರಂಭಿಸುವುದು
* ದೇಹದ ಸಮತೋಲನ ತಪ್ಪುವುದು
* ಒಂದು ದಿಕ್ಕಿಗೆ ಎಳೆದಂತೆ ಆಗುವುದು
ಇತರ ಲಕ್ಷಣಗಳು
* ವಾಂತಿ ಬಂದಂತೆ ಅನಿಸುವುದು
* ಕಣ್ಣುಗಳ ಚಲನೆಯಲ್ಲಿ ವ್ಯತ್ಯಾಸ
* ತಲೆನೋವು
* ಬೆವರುವುದು
* ಕಿವಿಯಲ್ಲಿ ಗಂಟೆ ಹೊಡೆದಂತೆ ಅನಿಸುವುದು ಅಥವಾ ಏನು ಕೇಳಿಸದೇ ಇರುವುದು
ಈ ಲಕ್ಷಣಗಳು ಸ್ವಲ್ಪ ಹೊತ್ತು ಇದ್ದು ನಂತರ ಸರಿ ಹೋಗುವುದು.

ಈ ಸಮಸ್ಯೆ ಸಾಮಾನ್ಯವಾದದ್ದೇ?
ವರ್ಟಿಗೂ ಅಥವಾ ತಲೆಸುತ್ತು ಬಂದಾಗ ತುಂಬಾನೇ ಭಯವಾಗುವುದು. ಇದ್ದಕ್ಕಿದ್ದಂತೆ ದೇಹದ ಸಮತೋಲನ ತಪ್ಪುವುದು, ಎಲ್ಲಾ ವಸ್ತುಗಳು ತಿರುಗುತ್ತಿದೆ ಎಂದು ಅನಿಸಲಾರಂಭಿಸುವುದು. ಕಾಯಿಲೆ ಇರುವವರಲ್ಲಿ ಈ ರೀತಿಯ ಸಮಸ್ಯೆ ಕಂಡು ಬರುವುದು. ರಕ್ತದೊತ್ತಡದಲ್ಲಿ ವ್ಯತ್ಯಾಸ ಆಗುತ್ತಿದ್ದರೆ, ರಕ್ತ ಹೀನತೆ, ನಿಯಂತ್ರಣಕ್ಕೆ ಬಾರದ ಮಧುಮೇಹ, ಪಾರ್ಶ್ವವಾಯು, ಮೈಗ್ರೇನ್ ಇಂಥವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುವುದು.

ತಲೆತಿರುಗಿದಾಗ ಭಯ ಪಡಬೇಡಿ, ಬದಲಿಗೆ ಹೀಗೆ ಮಾಡಿ:
1. ತಲೆ ತಿರುಗುವ ಅನುಭವ ಉಂಟಾದಾಗ ಮೊದಲಿಗೆ ಕೂತು ಬಿಡಿ, ಸಾಧ್ಯವಾದರೆ ಮಲಗಿ ಬಿಡಿ, ಇದರಿಂದ ಬೀಳುವುದನ್ನು ತಪ್ಪಿಸಬಹುದು ( ಇದರಿಂದ ಬಿದ್ದು ದೇಹಕ್ಕೆ ಪೆಟ್ಟಾಗುವುದನ್ನು ತಪ್ಪಿಸಬಹುದು
2. ತಲೆ ತಿರುಗುವಿಕೆ ಉಂಟಾದಾಗ ತುಂಬಾ ತಲೆನೋವು, ಕಣ್ಣುಗಳು ಮಂಜಾಗುವುದು, ಮಾತನಾಡುವಾಗ ತೊದಲುವುದು, ಸುಸ್ತು ಈ ರೀತಿ ಉಂಟಾದರೆ ವೈದ್ಯರಿಗೆ ತಿಳಿಸಿ.

ಚಿಕಿತ್ಸೆ:
ಔಷಧಿ: ವೈದ್ಯರು ವರ್ಟಿಗೋ ಸಮಸ್ಯೆಗೆ ಔಷಧಿಯನ್ನು ಸೂಚಿಸುತ್ತಾರೆ.
ವ್ಯಾಯಾಮ: ಯೋಗ, ಮಾನಸಿಕ ಒತ್ತಡ ನಿಯಂತ್ರಿಸಲು ಧ್ಯಾನ, ಕೆಲವಯ ವ್ಯಾಯಾಮಗಳು ವರ್ಟಿಗೋ ತಡೆಗಟ್ಟಲು ಸಹಕಾರಿ.
ಸುವಾಸನೆಯ ಎಣ್ಣೆಗಳು
ಪುದೀನಾ ಎಣ್ಣೆ, ಲೆಮನ್ ಬಾಮ್ ಎಣ್ಣೆ ಇದನ್ನು ಕಾಟನ್ಗೆ ಸ್ವಲ್ಪ ಹಾಕಿ ಮೂಸಿದರೆ ವರ್ಟಿಗೋ ಕಡಿಮೆಯಾಗುವುದು. ಲೆಮನ್ ಬಾಮ್ ಅನ್ನು ಅನ್ನು 300ರಿಂದ 600ಮಿಗ್ರಾಂವರೆಗೆ ದಿನದಲ್ಲಿ ಮೂರು ಬಾರಿ ಕುಡಿಯಲಾಗುವುದು.
ಕೊನೆಯದಾಗಿ: ವರ್ಟಿಗೋ ಸಮಸ್ಯೆ ತಲೆಸುತ್ತು ಸಮಸ್ಯೆಗಿಂತ ಭಿನ್ನವಾಗಿದೆ. ವರ್ಟಿಗೋ ಅಥವಾ ತಲೆ ತಿರುಗುವಿಕೆಯಲ್ಲಿ ನಿಮಗೆ ನೀವು ಅಥವಾ ಸುತ್ತಲಿನ ವಸ್ತುಗಳು ತಿರುಗುತ್ತಿರುವ ಅನುಭವ ಉಂಟಾಗುವುದು. ಈ ರೀತಿಯ ಸಮಸ್ಯೆ ಆಗಾಗ ಕಾಡಿದರೆ ಸೂಕ್ತ ವೈದ್ಯರಿಂದ ಚಿಕಿತ್ಸೆ ಪಡೆಯಿರಿ.