For Quick Alerts
ALLOW NOTIFICATIONS  
For Daily Alerts

R.1 ಕೋವಿಡ್‌ ರೂಪಾಂತರ: ಇದು ಅಪಾಯಕಾರಿಯೇ? ಇದರಿಂದ ರಕ್ಷಣೆಗೆ ಏನು ಮಾಡಬೇಕು?

|

ಕೊರೊನಾ ಬಂದಾಗಿನಿಂದ ಹಲವಾರು ಬಗೆಯ ರೂಪಾಂತರಗಳು ಹುಟ್ಟಿಕೊಂಡಿವೆ. ಕೊರೊನಾ ರೂಪಾಂತರಗಳಲ್ಲಿ ಕೆಲವು ರೂಪಾಂತರ ಅಷ್ಟೊಂದು ಅಪಾಯಕಾರಯಾಗಿಲ್ಲ, ಇನ್ನು ಕೆಲವು ಮಾರಾಣಾಂತಿಕವಾಗಿದ್ದು ಲಕ್ಷಗಟ್ಟಲೆ ಜನರ ಜೀವ ಬಲಿ ಪಡೆದಿದೆ. ಭಾರತದಲ್ಲಿ ಕೊರೊನಾ 2ನೇ ಅಲೆ ಭೀಕರವಾಗಿ ಕಾಡಲು ಡೆಲ್ಟಾ ರೂಪಾಂತರ ಕಾರಣವಾಗಿತ್ತು. ಡೆಲ್ಟಾ ಪ್ಲಸ್ ಹೀಗೆ ಅನೇಕ ಅಪಾಯಕಾರಿ ರೂಪಾಂತರಗಳು ಹುಟ್ಟಿಕೊಂಡಿವೆ.

R.1 COVID-19

ಇದೀಗ ತಜ್ಞರು R.1 ರೂಪಾಂತರ ವೈರಸ್‌ ಬಗ್ಗೆ ತಿಳಿಸಿದ್ದು ಅಮರಿಕದಲ್ಲಿ ಚಿಕ್ಕ ಪ್ರಮಾಣದಲ್ಲಿ ಕೊರೊನಾವೈರಸ್ ಹೆಚ್ಚಲು ಹಾಗೂ ವಿಶ್ವದ ಇತರ ಕಡೆ ಕೊರೊನಾ ಕೇಸ್‌ ಹೆಚ್ಆಗಲು ಈ ವೈರಸ್‌ ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.

R.1 ರೂಪಾಂತರ ಹೊಸ ತಳಿಯೇ?
ಕೊರೊನಾವೈರಸ್‌ನ ರೂಪಾಂತರ R.1 ಪತ್ತೆಯಾಗಿರುವುದು ಇದೇ ಮೊದಲಲ್ಲ. ಈ ರೂಪಾಂತರ ಕಳೆದ ವರ್ಷ ಜಪಾನ್‌ನಲ್ಲಿ ಪತ್ತೆಯಾಗಿತ್ತು. ಯುಎಸ್‌ನಲ್ಲೂ ಪತ್ತೆಯಾಗಿತ್ತು. ಈ ವರ್ಷ ಏಪ್ರಿಲ್‌ನಲ್ಲಿ ಅಮೆರಿಕದಲ್ಲಿ ಕೊರೊನಾ ಅಲೆಗೆ ಈ ರೂಪಾಂತರ ಕಾರಣವಾಗಿತ್ತು ಎಂದು ತಜ್ಞರು ಹೇಳುತ್ತಿದ್ದಾರೆ. ನ್ಯೂಸ್‌ವೀಕ್‌ ವರದಿಯ ಪ್ರಕಾರ ಅಮೆರಿಕದ 47 ಕಡೆಗಳಲ್ಲಿ ಈ ವೈರಸ್‌ ಪತ್ತೆಯಾಗಿದ್ದು ಇದುವರೆಗೆ 2,259 ಪ್ರಕರಣಗಳು ದಾಖಲಾಗಿವೆ.

ಈ R.1 ರೂಪಾಂತರ ವೈರಸ್‌ ಎಂದರೇನು, ಇದರಿಂದ ನಮ್ಮನ್ನು ರಕ್ಷಿಸಲು ಏನು ಮಾಡಬೇಕು ಎಂಬುವುದನ್ನು ತಜ್ಞರು ( disease experts) ಹೇಳಿದ್ದಾರೆ ನೋಡಿ.

R.1 ರೂಪಾಂತರ ಎಂದರೇನು? ಇದು ಅಪಾಯಕಾರಿಯೇ?

R.1 ರೂಪಾಂತರ ಎಂದರೇನು? ಇದು ಅಪಾಯಕಾರಿಯೇ?

R.1 ರೂಪಾಂತರ ಎಂಬುವುದು ಕೊರೊನಾವೈರಸ್‌ನ ಒಂದು ರೂಪಾಂತರವಾಗಿದೆ. ಈ ಹೊಸ ತಳಿ ಈ ಹಿಂದೆ ಕಂಡು ಬಂದ ಕೊರೊನಾವೈರಸ್‌ಗಿಂತ ವಿಭಿನ್ನವಾಗಿ ಜಗತ್ತನ್ನು ಕಾಡಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಈ ವೈರಸ್‌ ಕುರಿತು ತುಂಬಾ ಆತಂಕ ಪಡುವ ಅಗ್ಯತವಿಲ್ಲ, ಆದರೆ ಮುನ್ನೆಚ್ಚರಿಕೆವಹಿಸಬೇಕು. ಏಕೆಂದರೆ ಇದು ಡೆಲ್ಟಾ ರೂಪಾಂತರಕ್ಕಿಂತ ಅಪಾಯಕಾರಿಯಾಗಿ ಪರಿಣಾಮ ಬೀರಬಹುದು. ಇನ್ನೂ ಡೆಲ್ಟಾ ರೂಪಾಂತರ ಇರುವ ಕಡೆಗಳಲ್ಲಿ ಈ ವೈರಸ್‌ ಕಂಡು ಬರುವ ಸಾಧ್ಯತೆ ಕಡಿಮೆ ಎಂದು ತಜ್ಞರು ತಿಳಿಸಿದ್ದಾರೆ.

 R.1 ರೂಪಾಂತರ ಲಕ್ಷಣಗಳು ಭಿನ್ನವಾಗಿದೆಯೇ?

R.1 ರೂಪಾಂತರ ಲಕ್ಷಣಗಳು ಭಿನ್ನವಾಗಿದೆಯೇ?

R.1 ರೂಪಾಂತರ ವೈರಸ್‌ ಸೋಂಕಿದಾಗ ಕಂಡು ಬರುವ ರೋಗ ಲಕ್ಷಣಗಳಿಗೂ ಈ ಹಿಂದೆ ಕಂಡು ಬಂದ ಕೊರೊನಾವೈರಸ್‌ ಸಾಂಕ್ರಾಮಿಕ ರೋಗದ ಲಕ್ಷಣಗಳಿಗೆ ತುಂಬಾ ವ್ಯತ್ಯಾಸವೇನು ಇಲ್ಲ. ಈ ರೂಪಾಂತರ ಸೋಂಕಿನ ಪ್ರಮಾಣ ಹೆಚ್ಚು. ಅಮೆರಿಕದಲ್ಲಿ ಈ ರೂಪಾಂತರ ಪ್ರಮಾಣ ಶೇ.5ರಷ್ಟು ಇದೆ, ವಿಶ್ವದಲ್ಲಿ ಶೇ.1ರಷ್ಟಿದೆ.

ಲಸಿಕೆ ಪಡೆದವರು ಸುರಕ್ಷಿತವೇ?

ಲಸಿಕೆ ಪಡೆದವರು ಸುರಕ್ಷಿತವೇ?

ಇಲ್ಲ, ಈ ರೂಪಾಂತರ ಲಸಿಕೆ ಪಡೆದವರಲ್ಲಿಯೂ ಕಂಡು ಬಂದಿದೆ. ಅಲ್ಲದೆ ಈ ವೈರಸ್‌ ತಗುಲಿದರೆ ಲಸಿಕೆ ಪಡೆದವರಲ್ಲೂ ರೋಗ ಲಕ್ಷಣಗಳು ಕಂಡು ಬಂದಿವೆ. ಆದರೆ ಈ ಹೊಸ ವೈರಸ್‌ ಲಸಿಕೆ ಪಡೆದವರಲ್ಲಿ, ಪಡೆಯದೇ ಇರವವರಲ್ಲಿಯೂ ಕಂಡು ಬಂದಿದೆ.

R.1 ರೂಪಾಂತರ ತಡೆಗಟ್ಟುವುದು ಹೇಗೆ?

R.1 ರೂಪಾಂತರ ತಡೆಗಟ್ಟುವುದು ಹೇಗೆ?

* ಜನರು ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು

* ಮಾಸ್ಕ್ ಧರಿಸಿ

* ಕೈಗಳಿಗೆ ಸ್ಯಾನಿಟೈಸರ್‌ ಬಳಸಿ

* ಎರಡು ಡೋಸ್‌ ಲಸಿಕೆ ಪಡೆದುಕೊಳ್ಳಿ

* ವೈರಸ್‌ ಜನರಿಂದ ಜನರಿಗೆ ಹರಡಿದಾಗ ಅದು ರೂಪಾಂತರವಾಗುವುದು. ಮೊದಲಿಗೆ ಆ ರೀತಿ ಹರಡುವುದನ್ನು ತಡೆಗಟ್ಟಬೇಕು, ಅದಕ್ಕೆ ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ.

English summary

What Is the R.1 COVID-19 Variant? Symptoms and All you need to know about new variant Kannada

What Is the R.1 COVID-19 Variant? Here's what you need to know about the R.1 COVID-19 variant and how to protect yourself from it. Read on.
X
Desktop Bottom Promotion