For Quick Alerts
ALLOW NOTIFICATIONS  
For Daily Alerts

ಉತ್ತಮ ನಿದ್ದೆಗೆ 10-3-2-1-0 ಈ ಸೂತ್ರ ಕೂಡಲೇ ಪಾಲಿಸಿ: ಏನಿದು ನಿದ್ದೆಗೆ ಸೂತ್ರ?

|

ನಿದ್ದೆ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..? ಕೆಲವರು ದಿನಪೂರ್ತಿ ನಿದ್ದೆ ಮಾಡಲು ಇಷ್ಟಪಡುತ್ತಾರೆ. ನಾವು ಅನೇಕರನ್ನು ಗಮನಿಸಿರಬಹುದು. ಕೆಲವರು ಮಲಗಿದ ನಿಮಿಷದಲ್ಲಿ ನಿದ್ದೆಗೆ ಜಾರಿರುತ್ತಾರೆ. ಇನ್ನು ಕೆಲವರು, ಬೆಡ್ ಮೇಲೆ ಎಷ್ಟು ಹೊತ್ತು ಮಲಗಿದ್ರು ನಿದ್ದೆ ಬಂದಿರುವುದಿಲ್ಲ.ಹೀಗಾಗಿ ಇಂದಿನ ಜೀವನ ಪದ್ದತಿಯಿಂದ ನಿದ್ರೆಯ ಕೊರತೆಯು ಅನೇಕ ಜನರ ಸಾಮಾನ್ಯ ಸಮಸ್ಯೆಯಾಗಿದೆ. ನಿದ್ರೆಯ ಕೊರತೆಯು ಮೆದುಳಿನ ಕಾರ್ಯ ಹಾಗೂ ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ದಿನಕ್ಕೆ ಏಳರಿಂದ ಎಂಟು ಗಂಟೆ ನಿದ್ರೆ ಮಾಡಿದರೆ ಆತನ ಆರೋಗ್ಯವು ಉತ್ತಮ ಆಗಿರುತ್ತದೆ. ಯಾವಗಾಲೂ ಆತ ಕ್ರಿಯಶೀಲನಾಗಿರುತ್ತಾನೆ.

ನಿದ್ದೆ ಯಾಕೆ ಮುಖ್ಯ?

ನಿದ್ದೆ ಯಾಕೆ ಮುಖ್ಯ?

ನಮ್ಮ ಜೈವಿಕ ಗಡಿಯಾರವು ನಿದ್ರೆ-ಎಚ್ಚರ ಚಕ್ರವನ್ನು ನಿಯಂತ್ರಿಸುತ್ತದೆ. ಆದರೆ ನಮ್ಮ ಕೆಟ್ಟ ಜೀವನಶೈಲಿಯ ಆಯ್ಕೆಗಳಿಂದಾಗಿ ಕಳಪೆ ಗುಣಮಟ್ಟದ ನಿದ್ರೆಗೆ ಇದು ಕಾರಣವಾಗುತ್ತದೆ. ಹೀಗಾಗಿ ಕಳಪೆ ಗುಣಮಟ್ಟದ ನಿದ್ರೆ ಮನುಷ್ಯನ ದೇಹಕ್ಕೆ ಅನೇಕ ಸಮಸ್ಯೆಗಳನ್ನು ತಂದಿಡಬಹುದು. ಯಾಕೆಂದರೆ ನಿದ್ರೆಯು ನಮ್ಮ ದೇಹದಲ್ಲಿನ ಎಲ್ಲಾ ನರ, ಚಯಾಪಚಯ ಮತ್ತು ಜೈವಿಕ ಕ್ರಿಯೆಗಳಿಗೆ ಅಗತ್ಯವಾದ ಪುನಶ್ಚೈತನ್ಯಕಾರಿ ಸ್ಥಿತಿಯಾಗಿದೆ, ಇದರ ಕೊರತೆಯು ಹೃದಯರಕ್ತನಾಳದ ಕಾಯಿಲೆಗಳು, ನರಮಂಡಲದ ಕಾಯಿಲೆಗಳು, ಸ್ವಯಂ ನಿರೋಧಕ ಪರಿಸ್ಥಿತಿಗಳು, ಮಾನಸಿಕ ಅಸ್ವಸ್ಥತೆಗಳು ಮತ್ತು ಮುಂತಾದ ಹಲವಾರು ಜೀವನಶೈಲಿ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. ಹೀಗಾಗಿ ನಿದ್ದೆ ಅತೀ ಮುಖ್ಯವಾಗಿದೆ. ಸರಿಯಾದ ಸಮಯಕ್ಕೆ ಸರಿಯಾದ ನಿದ್ದೆ ಮಾಡುವ ಮೂಲಕ ಉತ್ತಮ ಆರೋಗ್ಯ ವೃದ್ದಿಸಿಕೊಳ್ಳಬೇಕಿದೆ.

ಮನುಷ್ಯನ 7 ರಿಂದ 8 ಗಂಟೆ ಉತ್ತಮ ನಿದ್ದೆಯ ಅಗತ್ಯತೆ ಇದೆ. ಆದರೆ ಇಂದಿನ ದಿನಗಳಲ್ಲಿ ಮನುಷ್ಯನ ಹೊಸ ಹೊಸ ಜೀವನ ಶೈಲಿಯಿಂದ ಇದು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಅನೇಕರು ರಾತ್ರಿಯ ನಿದ್ದೆಯನ್ನು ಕಳೆದುಕೊಳ್ಳುತ್ತಿದ್ದಾರೆ. ರಾತ್ರಿಯ ಉತ್ತಮ ನಿದ್ದೆ ಮನುಷ್ಯನನ್ನು ಉತ್ತಮ ಆರೋಗ್ಯದಲ್ಲಿ ಇಡುತ್ತದೆ. ಹಾಗಾದರೆ ಉತ್ತಮ ನಿದ್ದೆಗಿರುವ ಸೂತ್ರಗಳು ಏನು ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಏನಿದು 10-3-2-1-0 ನಿದ್ದೆಯ ಸೂತ್ರ!

ಏನಿದು 10-3-2-1-0 ನಿದ್ದೆಯ ಸೂತ್ರ!

ಉತ್ತಮ ರಾತ್ರಿಯ ನಿದ್ದೆಗಾಗಿ ಅನೇಕ ವೈದ್ಯರು 10-3-2-1-0 ಈ ಸೂತ್ರವನ್ನು ಪಾಲಿಸಲು ಸೂಚಿಸುತ್ತಾರೆ. 10-3-2-1-0 ನಿದ್ರೆಯ ನಿಯಮವು ಕೆಲವು ಆರೋಗ್ಯಕರ ಪೂರ್ವ-ನಿದ್ರಾ ಅಭ್ಯಾಸಗಳನ್ನು ನೆನಪಿಟ್ಟುಕೊಳ್ಳುವ ಸರಳ ವಿಧಾನವಾಗಿದೆ. ಈ ತಂತ್ರವು ನಿಮಗೆ ಸಮಯಕ್ಕೆ ಸರಿಯಾಗಿ ಮಲಗಲು, ಚೆನ್ನಾಗಿ ನಿದ್ದೆ ಮಾಡಲು ಮತ್ತು ಚೆನ್ನಾಗಿ ವಿಶ್ರಾಂತಿ ಪಡೆಯಲು ಮತ್ತು ಮರುದಿನ ಬೆಳಿಗ್ಗೆ ಎದ್ದು ಕೆಲಸಕ್ಕೆ ಅಣಿಯಾಗಲು ನಿಮಗೆ ಸಹಾಯ ಮಾಡುತ್ತದೆ

ಮಲಗುವ 10 ಗಂಟೆಗಳ ಮೊದಲು: ಕೆಫೀನ್ ಅನ್ನು ಮಿತಿಗೊಳಿಸಿ

ಮಲಗುವ 10 ಗಂಟೆಗಳ ಮೊದಲು: ಕೆಫೀನ್ ಅನ್ನು ಮಿತಿಗೊಳಿಸಿ

10-3-2-1-0 ಮೊದಲನೆಯದು 10 ಎಂಬುವುದು 10 ಗಂಟೆಯಾಗಿದೆ. ಅಂದರೆ ಮಲಗುವ 10 ಗಂಟೆ ಮೊದಲು ಕೆಫೀನ್ ಯುಕ್ತ ಆಹಾರಗಳನ್ನು ಅಥವಾ ಪಾನೀಯಗಳನ್ನು ಮಿತಿಗೊಳಿಸುವುದರಿಂದ ನಿಮಗೆ ಉತ್ತಮ ನಿದ್ದೆಗೆ ಸಹಾಯ ಮಾಡುತ್ತದೆ. ಅಂದರೆ ಈ ಕೆಫೀನ್ ಯುಕ್ತ ಆಹಾರಗಳು ನಿಮ್ಮ ರಕ್ತದಲ್ಲಿ ಸೇರಿಕೊಂಡು ನಿದ್ದೆಗೆ ಸಮಸ್ಯೆ ಉಂಟು ಮಾಡುತ್ತದೆ. ಕೆಫೀನ್ ಯುಕ್ತ ಚಹಾ, ಕಾಫಿ, ಚಾಕಲೇಟ್ ತಿಂದರೇ ಕೂಡಲೇ ನಿದ್ದೆ ಬರುವುದಿಲ್ಲ ಇಂತಹ ಸಮಸ್ಯೆಗಳು ಇರುತ್ತದೆ. ಹೀಗಾಗಿ ಮಲಗುವ ಮಲಗುವ 10 ಗಂಟೆಗಳ ಮೊದಲು ಕೆಫೀನ್ ಅನ್ನು ಮಿತಿಗೊಳಿಸಿದರೆ ಉತ್ತಮ.

ಮಲಗುವ 3 ಗಂಟೆಗಳ ಮೊದಲು: ಹೊಟ್ಟೆಗೆ ಸಮಸ್ಯೆ ಉಂಟುಮಾಡುವ ಆಹಾರ ಮಿತಿಗೊಳಿಸಿ

ಮಲಗುವ 3 ಗಂಟೆಗಳ ಮೊದಲು: ಹೊಟ್ಟೆಗೆ ಸಮಸ್ಯೆ ಉಂಟುಮಾಡುವ ಆಹಾರ ಮಿತಿಗೊಳಿಸಿ

ಇನ್ನು ನೀವೆ ಗಮನಿಸಿರಬಹುದು ಮಲಗಿದ ಮೂರು ಗಂಟೆ ಮುನ್ನ ಭಾರೀ ಆಹಾರ ಅಥವಾ ಮದ್ಯಪಾನ ಮಾಡಿದರೆ ನಿಮಗೆ ಆಗಾಗೇ ಎಚ್ಚರಿಕೆ ಆಗುತ್ತಲೇ ಇರುತ್ತದೆ. ಹೀಗಾಗಿ ಮಲಗುವ ಮೂರು ಗಂಟೆ ಮೊದಲು ಹೊಟ್ಟೆ ಬಿರಿಯುವಂತೆ ತಿನ್ನಲು ಹೋಗಬೇಡಿ. ಮಲಗಿದಾಗ ದೇಹದ ಭಾಗಗಳು ರೆಸ್ಟ್ ಬಯಸುತ್ತದೆ. ನೀವು ಹೊಟ್ಟೆ ಬಿರಿಯುವಂತೆ ತಿಂದರೆ ದೇಹದ ಭಾಗಗಳಿಗೆ ರೆಸ್ಟ್ ಇಲ್ಲದಂತೆ ಆಗುತ್ತದೆ. ಮನುಷ್ಯ ಎಚ್ಚರವಾಗಿದ್ದಗಲೂ ಅಂಗಾಂಗಗಳಿಗೆ ಕೆಲಸ, ಮಲಗಿದಾಗಲೂ ಕೆಲಸವಾದರೆ ದೇಹದ ಅಂಗಾಂಗಗಳು ದಣಿಯುತ್ತದೆ. ಹೀಗಾಗಿ ಮಲಗುವ ಮೂರು ಗಂಟೆ ಮುನ್ನ ಆಹಾರ ಸೇವಿಸಬೇಡಿ. ಮದ್ಯಪಾನ ಸೇವಿಸಬೇಡಿ.

ಮಲಗುವ 2 ಗಂಟೆಗಳ ಮೊದಲು: ಮನೆಕೆಲಸವನ್ನು ಮಿತಿಗೊಳಿಸಿ

ಮಲಗುವ 2 ಗಂಟೆಗಳ ಮೊದಲು: ಮನೆಕೆಲಸವನ್ನು ಮಿತಿಗೊಳಿಸಿ

ಮಲಗುವ ಎರಡು ಗಂಟೆ ಮೊದಲು ಮನೆಕೆಲಸವನ್ನು ಮಿತಿಗೊಳಿಸಬೇಕು. ಹೌದು, ಮಲಗುವ ಎರಡು ಗಂಟೆ ಮೊದಲು ಯಾವುದೇ ಮನೆ ಕೆಲಸ ಅಥವಾ ಕಚೇರಿ ಕೆಲಸ ಮಾಡಬೇಡಿ. ಯಾಕೆಂದರೆ ಮಲಗುವ ಮೊದಲು ಮನಸ್ಸು ಪ್ರಶಾಂತವಾಗಿರಬೇಕು. ಹೀಗಾಗಿ ಯಾವುದೇ ಕೆಲಸವನ್ನು ಮಾಡಲು ಹೋಗಬೇಡಿ. ದೀರ್ಘ ಕೆಲಸ ಆತಂಕ ಮತ್ತು ಆಲೋಚನೆಗಳಿಗೆ ಕಾರಣವಾಗಬಹುದು, ಅದು ರಾತ್ರಿಯಲ್ಲಿ ನಮ್ಮನ್ನು ಎಚ್ಚರವಾಗಿರಿಸುತ್ತದೆ. ಆದ್ದರಿಂದ, ಮಲಗುವ ಮೊದಲು ಕನಿಷ್ಠ ಎರಡು ಗಂಟೆಗಳ ಕೆಲಸವನ್ನು ನಿಲ್ಲಿಸುವುದರಿಂದ ನಾವು ಹೆಚ್ಚು ವಿಶ್ರಾಂತಿ ಪಡೆಯಲು ಮತ್ತು ಸರಿಯಾದ ವಿಶ್ರಾಂತಿ ಪಡೆಯಲು ಅನುವು ಮಾಡಿಕೊಡುತ್ತದೆ, ಇದರಿಂದಾಗಿ ನಾವು ಮರುದಿನ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು.

ಮಲಗುವ 1 ಗಂಟೆ ಮೊದಲು: ಮೊಬೈಲ್ ಬಳಕೆ ಮಿತಿಗೊಳಿಸಿ

ಮಲಗುವ 1 ಗಂಟೆ ಮೊದಲು: ಮೊಬೈಲ್ ಬಳಕೆ ಮಿತಿಗೊಳಿಸಿ

ಇದು ಅತ್ಯಂತ ಮುಖ್ಯ ವಿಚಾರ ನೀವು ಗಮನಿಸಿರಬಹುದು ರಾತ್ರಿ ಹೊತ್ತು ಹೆಚ್ಚು ಮೊಬೈಲ್ ಬಳಕೆ ಮಾಡಿದರೆ ನಮಗೆ ಸರಿಯಾದ ನಿದ್ದೆ ಬರುವುದಿಲ್ಲ. ಹೌದು, ಇದು ಸಂಶೋದನೆ ಮೂಲಕ ತಿಳಿದುಬಂದ ವಿಚಾರ. ಮೊಬೈಲ್ ಆಗಿರಬಹುದು, ಟಿವಿ ಆಗಿರಬಹುದು, ಲ್ಯಾಪ್ ಟಾಪ್ ಆಗಿರಬಹುದು ಯಾವುದೇ ಡಿಜಿಟಲ್ ಪರದೆಯನ್ನು ನೋಡುವುದು ಕಡಿಮೆ ಮಾಡಿ ಅಥವಾ ಮಿತಿಯಲ್ಲಿ ಇಡಿ. ಯಾಕೆಂದರೆ ಅದು ನಿಮ್ಮ ನಿದ್ದೆಗೆ ಸಮಸ್ಯೆ ಉಂಟು ಮಾಡುತ್ತದೆ.

ಝಿರೋ ಸಮಯ: ಇವುಗಳನ್ನು ಪಾಲನೆ ಮಾಡಿ

ಝಿರೋ ಸಮಯ: ಇವುಗಳನ್ನು ಪಾಲನೆ ಮಾಡಿ

ಇನ್ನು ಇವುಗಳನ್ನು ಸರಿಯಾಗಿ ಪಾಲನೆ ಮಾಡಿದರೆ ಅಥವಾ ಝಿರೋ ರೀತಿಯಲ್ಲಿ ಈ ಮೇಲಿನವುಗಳಿಗೆ ಬ್ರೇಕ್ ಹಾಕದಿದ್ದರೆ ನಿಮ್ಮ ದೇಹವು ಉತ್ತಮವಾಗಿ ರೆಸ್ಟ್ ಪಡೆಯುವುದಲ್ಲದೇ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಸಂಭವಿಸುವುದಿಲ್ಲ. ಆರೋಗ್ಯವಾಗಿರುತ್ತೀರಿ.

ನಿದ್ದೆ ಎಂಬುವುದು ಪ್ರತಿಯೊಬ್ಬ ಮನುಷ್ಯನಿಗೂ ಮುಖ್ಯ. ಒಂದು ಬಾರಿ ನಿದ್ದೆಗೆಟ್ಟರೆ ನಿಮ್ಮ ದಿನವೆಲ್ಲ ಹಾಳಾಗುವುದು, ಆರೋಗ್ಯದಲ್ಲಿ ಏರುಪೇರಾಗುವುದನ್ನು ನೀವು ಗಮನಿಸಿರುತ್ತೀರಿ. ಹೀಗಾಗಿ ನಿಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕಾದರೆ ಉತ್ತಮ ನಿದ್ದೆ ಹೊಂದುವುದು ಮುಖ್ಯ.

English summary

What is the 10-3-2-1-0 rule of sleep?: Follow these rule to have a good sleep like baby in kannada

Here we are discussing about Know more about sleeping rule of 10-3-2-1-0 in kannada .known as the ‘rule of 10-3-2-1-0’. But, before moving ahead with that, let us first understand the importance of sound sleep. Read more.
X
Desktop Bottom Promotion