For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಪತ್ತೆಯಾದ ಕಪ್ಪಾ ವೈರಸ್‌: ಇದರ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳಿವು

|

ಉತ್ತರ ಪ್ರದೇಶದಲ್ಲಿ 2 ಕಪ್ಪಾ ವೈರಸ್‌ ಪ್ರಕರಣಗಳು ಪತ್ತೆಯಾಗಿವೆ. ಕಿಂಗ್‌ ಜಾರ್ಜ್‌ ಮೆಡಿಕಲ್‌ ಕಾಲೇಜ್‌ನಲ್ಲಿ 109 ಜನರ ಸ್ಯಾಂಪಲ್ ತೆಗೆಯಲಾಗಿತ್ತು, ಅದರಲ್ಲಿ 107 ಜನರಲ್ಲಿ ಡೆಲ್ಟಾ ಪ್ಲಸ್‌ ರೂಪಾಂತರ ಕಂಡು ಬಂದಿದೆ, ಎರಡು ಕಪ್ಪಾ ರೂಪಾಂತರ ವೈರಸ್‌ ಕೇಸ್‌ ಕೂಡ ಪತ್ತೆಯಾಗಿದೆ. ಅದರಲ್ಲಿ 66 ವರ್ಷದ ಸಂತ ಕಬೀರ್ ನಗರದ ವ್ಯಕ್ತಿ ಈ ವೈರಸ್‌ನಿಂದಾಗಿ ಸಾವನ್ನಪ್ಪಿದ್ದಾರೆ.

Kappa Covid Variant

ಕೇಂದ್ರ ಆರೋಗ್ಯ ಇಲಾಖೆಯ ಜೂನ್‌ ಡೇಟಾ ಪ್ರಕಾರ 3,969 ಆಲ್ಫಾ, 149 ಬೇಟಾ, 1 ಗಾಮಾ, 16, 238 ಡೆಲ್ಟಾ ಮತ್ತು ಕಪ್ಪಾ ರೂಪಾಂತರ ವೈರಸ್‌ ಕಂಡು ಬಂದಿದೆ. B.1.617 ತಳಿ ಮೊದಲಿಗೆ ಮಹಾರಾಷ್ಟ್ರದಲ್ಲಿ ಕಂಡು ಬಂತು. ಆದರೆ ಅದು ಕಪ್ಪಾ ಅಥವಾ ಡೆಲ್ಟಾ ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ.

ಕಪ್ಪಾ ರೂಪಾಂತರ ಎಂದರೇನು? ಇದು ಹೊಸ ವೈರಸ್ ?

ಕಪ್ಪಾ ರೂಪಾಂತರ ಎಂದರೇನು? ಇದು ಹೊಸ ವೈರಸ್ ?

ಇದು ಹೊಸ ರೂಪಾಂತರ ತಳಿಯಲ್ಲ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ SARS-Cov-2 ಕಪ್ಪಾ ರೂಪಾಂತರ ಭಾರತದಲ್ಲಿ 2020 ಅಕ್ಟೋಬರ್‌ನಲ್ಲಿ ಪತ್ತೆಯಾಯಿತು, ಇದನ್ನು B.1.617.1 ಎಂದು ಗುರುತಿಸಲಾಯಿತು, ಡೆಲ್ಟಾವನ್ನು B.1.617.2 ಎಂದು ಗುರುತಿಸಲಾಗಿದೆ

ಕಪ್ಪಾ ವೈರಸ್‌ ಅಪಾಯಕಾರಿಯೇ?

ಕಪ್ಪಾ ವೈರಸ್‌ ಅಪಾಯಕಾರಿಯೇ?

ಈ ಕಪ್ಪಾ ವೈರಸ್‌ ಅಷ್ಟೇನು ಅಪಾಯಕಾರಿಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ, ಲಂಬ್ಡಾ ವೈರಸ್‌ನಂತೆಯೇ ಕಪ್ಪಾ ಕೂಡ, ಲಂಬ್ಡಾ ಈಗಾಗಲೇ 30 ರಾಷ್ಟ್ರಗಳಿಗೆ ಹರಡಿದೆ.

 ಕಪ್ಪಾ ಡಬಲ್‌ ಮ್ಯೂಟೆಂಟ್ ವೈರಸ್‌ ಆಗಿದೆಯೇ?

ಕಪ್ಪಾ ಡಬಲ್‌ ಮ್ಯೂಟೆಂಟ್ ವೈರಸ್‌ ಆಗಿದೆಯೇ?

ಡೆಲ್ಟಾ ರೀತಿಯಲ್ಲಿ ಕಪ್ಪಾ ಡಬಲ್‌ ಮ್ಯೂಟೆಂಟ್‌ ವೈರಸ್‌ ಆಗಿದ್ದು EE484Q ಮತ್ತು L452R ನಿಂದ ಉಂಟಾಗಿದೆ

 ಕಪ್ಪಾ ಮತ್ತು ಡೆಲ್ಟಾ ನಡುವಿನ ವ್ಯತ್ಯಾಸವೇನು?

ಕಪ್ಪಾ ಮತ್ತು ಡೆಲ್ಟಾ ನಡುವಿನ ವ್ಯತ್ಯಾಸವೇನು?

ಎರಡೂ ರೂಪಾಂತರ ಭಾರತದಲ್ಲಿ 2020 ಅಕ್ಟೋಬರ್‌ನಲ್ಲಿ ಕಂಡು ಬಂದ B.1.617 ತಳಿಯಾಗಿದೆ. ಡೆಲ್ಟಾ ರೂಪಾಂತರ 2021 ಏಪ್ರಿಲ್‌ನಲ್ಲಿ ಪತ್ತೆಯಾಗಿದೆ, ಇದರಿಂದಾಗಿ ಮೇ ತಿಂಗಳಿನಲ್ಲಿ ಆತಂಕ ಹೆಚ್ಚಿಸಿದೆ. ಭಾರತದಲ್ಲಿ 2ನೇ ಅಲೆಗೆ ಡೆಲ್ಟಾ ವೈರಸ್ ಕಾರಣವಾಗಿತ್ತು, ಇದೀಗ ಡೆಲ್ಟಾ ಪ್ಲಸ್‌ ವೈರಸ್‌ 3ನೇ ಅಲೆಗೆ ಕಾರಣವಾಗುವುದೇ ಎಂಬ ಆತಂಕ ಕಾಡುತ್ತಿದೆ.

English summary

What is Kappa Covid Variant and its symptoms; All you need know about new covid variant in kannada

What is Kappa Covid Variant and its symptoms; All you need know about new covid variant in kannada,
X
Desktop Bottom Promotion