For Quick Alerts
ALLOW NOTIFICATIONS  
For Daily Alerts

ಕೋವಿಡ್ 19 ಸೋಂಕಿತರನ್ನು ಸೈಲೆಂಟ್ ಆಗಿ ಕೊಲ್ಲುತ್ತಿರುವ ಹ್ಯಾಪಿ ಹೈಪೋಕ್ಸಿಯಾ, ಏನಿದರ ಲಕ್ಷಣಗಳು?

|

ಕೊರೊನಾ 2ನೇ ಅಲೆ ಒಂದರ ಹಿಂದೆ ಒಂದು ಎಂಬಂತೆ ಹಲವಾರು ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಬ್ಲ್ಯಾಕ್‌ ಫಂಗಸ್ ಸಮಸ್ಯೆ ಕಂಡು ಬರುತ್ತಿದೆ, ಅದರ ಜೊತೆಗೆ ಹ್ಯಾಪಿ ಹೈಪೋಕ್ಸಿಯಾ ಎಂಬ ಸಮಸ್ಯೆಯೂ ಕಂಡು ಬರುತ್ತಿದೆ.

happyhypoxia

ನಿಯಂತ್ರಣಕ್ಕೆ ಬಾರದ ಮಧುಮೇಹ ಹಾಗೂ ರೋಗ ನಿರೋಧಕ ಶಕ್ತಿ ತುಂಬಾ ಕಡಿಮೆ ಇರುವವರಿಗೆ ಬ್ಲ್ಯಾಕ್‌ ಫಂಗಸ್ ಸಮಸ್ಯೆ ಕಂಡು ಬಂದಿತ್ತು. ಬ್ಲ್ಯಾಕ್ ಫಂಗಸ್ ಸಮಸ್ಯೆಯೆಂದರೆ ಗಾಳಿಯಲ್ಲಿರುವ ರೋಗಾಣುಗಳನ್ನು ತಡೆಯುವ ಸಾಮರ್ಥ್ಯ ಇಲ್ಲವಾಗುವುದು ಆಗ ಸೋಂಕಾಣುಗಳು ಮೂಗಿನ ಮೂಲಕ ಶ್ವಾಸಕೋಶಕ್ಕೆ ಬಂದು ಶ್ವಾಸಕೋಶವನ್ನು ಸಂಪೂರ್ಣ ಹಾಳು ಮಾಡುವುದು.

ಇದೀಗ ಕೋವಿಡ್‌ 19 ರೋಗಿಗಳಲ್ಲಿ ಹ್ಯಾಪಿ ಹೈಪೋಕ್ಸಿಯಾ ಎಂಬ ಸಮಸ್ಯೆ ಕಂಡು ಬರುತ್ತಿದೆ. ಇದು ಕೂಡ ತುಂಬಾ ಭಯಂಕರವಾಗಿದೆ.

ಯಾವುದೇ ಲಕ್ಷಣಗಳನ್ನು ಹೊರ ಸೂಚಿಸದೆ ಸೈಲೆಂಟ್ ಆಗಿ ಕೊಲ್ಲುವ ರೋಗ ಇದಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ:

ಮೊದಲಿಗೆ ತಿಳಿದು ಬಂದಿದ್ದು

ಮೊದಲಿಗೆ ತಿಳಿದು ಬಂದಿದ್ದು

2020 ಮಾರ್ಚ್‌ನಲ್ಲಿ ಕೆಮ್ಮು, ಜ್ವರವೆಂದು ಇಂಡೋನೇಷ್ಯಾದ ಆಸ್ಪತ್ರೆಗೆ ಬಂದ ಕೋವಿಡ್‌ 19 ಸೋಂಕಿತ ವೈದ್ಯಕೀಯ ತಪಾಸಣೆಯಲ್ಲಿ ಸರಿಯಾಗಿಯೇ ಇದ್ದ. ಅವನಿಗೆ ನಡೆದಾಡಲು ಸಾಧ್ಯವಾಗುತ್ತಿತ್ತು, ಮಾತನಾಡಲು ಏನೂ ತೊಂದರೆ ಇರಲಿಲ್ಲ, ಮೊಬೈಲ್ ಸ್ಕ್ರೀನ್ ನೋಡುತ್ತಿದ್ದ, ನೋಡಲು ತುಂಬಾ ಕಂಫರ್ಟ್ ಆಗಿ ಕಾಣುತ್ತಿದ್ದ. ಆದರೆ ಆತನ ದೇಹದಲ್ಲಿ ಆಮ್ಲಜನಕದ ಕೊರತೆ ಉಂಟಾಗಿದೆ ಎಂದು ತಿಳಿದು ಬಂದಿರಲೇ ಇಲ್ಲ. ಪರೀಕ್ಷಿಸಿದಾಗ ಆಕ್ಸಿಜನ್ ಸ್ಯಾಚುರೇಷನ್ ಪ್ರಮಾಣ ಶೇ.77ರಷ್ಟಿತ್ತು. ಕೋವಿಡ್ 19 ಸೋಂಕಿತರಲ್ಲಿ ಆಮ್ಲಜನಕದ ಪ್ರಮಾಣ ಕುಸಿಯುತ್ತಿದ್ದರೂ ಯಾವುದೇ ಲಕ್ಷಣಗಳು ಕಂಡು ಬಾರದಿರುವ ಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ ಹ್ಯಾಪಿ ಹೈಪೋಕ್ಸಿಯಾ ಎಂದು ಕರೆಯಲಾಗುವುದು.

ಭಾರತದಲ್ಲಿ ಈ ರೀತಿಯ ಕೇಸ್ ಹೆಚ್ಚಾಗುತ್ತಿದೆ

ಭಾರತದಲ್ಲಿ ಈ ರೀತಿಯ ಕೇಸ್ ಹೆಚ್ಚಾಗುತ್ತಿದೆ

ಕಳೆದ ವರ್ಷ ಭಾರತದಲ್ಲಿಯೂ ಈ ರೀತಿಯ ಕೇಸ್ ಕಂಡು ಬಂದಿತ್ತು, ಆದರೆ ಅಂಥ ದೊಡ್ಡ ಸಂಖ್ಯೆಯಲ್ಲಿ ಇಲ್ಲದ ಕಾರಣ ಆತಂಕವಿರಲಿಲ್ಲ. ಆದರೆ ಕೊರೊನಾ ಎರಡನೇ ಅಲೆಯಲ್ಲಿ ಈ ರೀತಿಯ ಕೇಸ್‌ಗಳು ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಆತಂಕ ಹೆಚ್ಚಾಗುತ್ತಿದೆ.

ಹ್ಯಾಪಿ ಹೈಪೋಕ್ಸಿಯಾ ಉಂಟಾದರೆ ಏನಾಗುತ್ತದೆ

ಹ್ಯಾಪಿ ಹೈಪೋಕ್ಸಿಯಾ ಉಂಟಾದರೆ ಏನಾಗುತ್ತದೆ

ಮನುಷ್ಯನಲ್ಲಿ ಆಕ್ಸಿಜನ್ ಸ್ಯಾಚುರೇಷನ್ ಲೆವಲ್ ಶೇ. 95ಕ್ಕಿಂತ ಅಧಿಕ ಇರಬೇಕು. ಅದಕ್ಕಿಂತ ಕಡಿಮೆ ಇದ್ದರೆ ವೈದ್ಯರಿಗೆ ಕರೆ ಮಾಡಿ ಸಲಹೆ ಪಡೆಯಬೇಕು, ಅಗ್ಯತಬಿದ್ದರೆ ಆಸ್ಪತ್ರೆಗೆ ದಾಖಲಾಗಬೇಕು. ಸಾಮಾನ್ಯವಾಗಿ ಆಕ್ಸಿಜನ್ ಸ್ಯಾಚುರೇಷನ್ ಕಡಿಮೆಯಾದರೆ ಸುಸ್ತು, ಉಸಿರಾಟದಲ್ಲಿ ತೊಂದರೆ ಎಲ್ಲಾ ಕಾಣಿಸಿಕೊಳ್ಳುವುದು. ಆದರೆ ಹ್ಯಾಪಿ ಹೈಪೋಕ್ಸಿಯಾದಲ್ಲಿ ಸೋಂಕಿತನಲ್ಲಿ ಯಾವುದೇ ಸುಸ್ತು ಏನೂ ಕಾಣಿಸುವುದಿಲ್ಲ. ಆರಾಮವಾಗಿ ಇರುತ್ತಾರೆ, ಆದರೆ ಆಕ್ಸಿಜನ್ ಕಡಿಮೆಯಾಗುತ್ತಾ ಹೋಗುತ್ತಾ ಇರುತ್ತದೆ.

ಇದರಿಂದ ಹೃದಯ, ಶ್ವಾಸಕೋಶ, ಮೆದುಳು, ಕಿಡ್ನಿಗೆ ಹಾನಿಯುಂಟಾಗುವುದು. ದೇಹದ ರಕ್ತನಾಳಗಳಲ್ಲಿ ರಕ್ತ ಸಂಚಲ ಸರಿಯಾಗಿ ಆಗದೆ ರಕ್ತ ಕೂಡ ಹೆಪ್ಪುಗಟ್ಟುವುದು.

ವೈದ್ಯರು ಏನು ಹೇಳುತ್ತಾರೆ?

ವೈದ್ಯರು ಏನು ಹೇಳುತ್ತಾರೆ?

ಹೈಪೋಕ್ಸಿಯಾ ಉಂಟಾದಾಗ ತುಂಬಾ ತಲೆನೋವು, ಉಸಿರಾಡಲು ಕಷ್ಟವಾಗುವುದು ಈ ರೀತಿಯ ಸಮಸ್ಯೆಗಳು ಕಂಡು ಬರುವುದು. ಅದೇ ಹ್ಯಾಪಿ ಹೈಪೋಕ್ಸಿಯಾದಲ್ಲಿ ಅಂಥ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ. ಕೊನೆಯ ಹಂತದವರೆಗೆ ವ್ಯಕ್ತಿ ಆರಾಮವಾಗಿರುತ್ತಾನೆ, ನಂತರ ಇದ್ದಕ್ಕಿದ್ದ ಹಾಗೆ ಸಾವನ್ನಪ್ಪುತ್ತಾನೆ.

 ಹ್ಯಾಪಿ ಹೈಪೋಕ್ಸಿಯಾದಿಂದ ಉಂಟಾಗುವ ಅಪಾಯ ತಪ್ಪಿಸಲು ಏನು ಮಾಡಬೇಕು?

ಹ್ಯಾಪಿ ಹೈಪೋಕ್ಸಿಯಾದಿಂದ ಉಂಟಾಗುವ ಅಪಾಯ ತಪ್ಪಿಸಲು ಏನು ಮಾಡಬೇಕು?

ಕೋವಿಡ್ 19 ಸೋಂಕು ತಗುಲಿದವರು ಆಗಾಗ ಆಕ್ಸಿಜನ್ ಸ್ಯಾಚುರೇಷನ್ ಪರೀಕ್ಷೆ ಮಾಡುತ್ತಾ ಇರಬೇಕು. ಆಕ್ಸಿಜನ್ ಸ್ಯಾಚುರೇಷನ್ ಶೇ. 90ಕ್ಕಿಂತ ಕಡಿಮೆಯಾದರೆ ಅಪಾಯ, ಕೂಡಲೇ ವೈದ್ಯಕೀಯ ಚಿಕಿತ್ಸೆ ದೊರೆಯದಿದ್ದರೆ ಅಪಾಯ. ಆದ್ದರಿಂದ ಆಕ್ಸಿಜನ್ ಸ್ಯಾಚುರೇಷನ್ ಕಡಿಮೆಯಾಗುತ್ತಿದ್ದು ಆರಾಮವಾಗಿದ್ದೇನೆ ಎಂದು ಸುಮ್ಮನಾದರೆ ಅಪಾಯ ತಪ್ಪಿದ್ದಲ್ಲ.

ಸಲಹೆ: ಕೋವಿಡ್ 19 ಸೋಂಕಿತರ ತಮ್ಮ ಆಕ್ಸಿಜನ್ ಸ್ಯಾಚುರೇಷನ್ ಪರೀಕ್ಷೆ ಮಾಡುತ್ತಾ ಇರಿ, ಕಡಿಮೆಯಾದರೆ ಕೂಡಲೇ ಉತ್ತಮ ವೈದ್ಯಕೀಯ ಸೌಲಭ್ಯವಿರುವ ಆಸ್ಪತ್ರೆಗೆ ದಾಖಲಾಗಿ.

English summary

What Is Happy Hypoxia? All You Need To Know About This In Kannada

What is Happy Hypoxia? All you need to know about this in Kannada, read on
Story first published: Friday, May 14, 2021, 20:14 [IST]
X
Desktop Bottom Promotion