For Quick Alerts
ALLOW NOTIFICATIONS  
For Daily Alerts

ಓವರ್‌ಆ್ಯಕ್ಟಿವ್‌ ಬ್ಲಾಡರ್‌ ಸಮಸ್ಯೆಗೆ ಯಾವ ಆಹಾರ ಹಾಗೂ ಪಾನೀಯ ಒಳ್ಳೆಯದು?

|

ನಮ್ಮ ದೇಹದಲ್ಲಿ ಪ್ರತಿಯೊಂದು ಅಂಗವೂ ಒಂದಕ್ಕೊಂದು ಸಂಬಂಧ ಹೊಂದಿರುತ್ತದೆ. ದೇಹದಲ್ಲಿರುವ ಮೂತ್ರವನ್ನು ಸಂಗ್ರಹಿಸಿ ಹೊರ ಹಾಕಿ ಲಿವರ್‌ ಆರೋಗ್ಯ ಕಾಪಾಡುವಲ್ಲಿ ಬ್ಲಾಡರ್‌ ತುಂಬಾನೇ ಮುಖ್ಯ.

ಓವರ್‌ಆ್ಯಕ್ಟಿವ್‌ ಬ್ಲಾಡರ್ ಎಂದರೆ ಬ್ಲಾಡರ್‌ನಲ್ಲಿ ಏನೋ ಸಮಸ್ಯೆಯಿದೆ, ಮೂತ್ರವು ಸಹಜವಾಗಿ ಸಂಗ್ರಹವಾಗುತ್ತಿಲ್ಲ ಹಾಗೂ ಮೂತ್ರ ತಡೆಹಿಡಿಯಲು ಕಷ್ಟವಾಗುವುದು. ಓವರ್‌ಆ್ಯಕ್ಟಿವ್‌ ಬ್ಲಾಡರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳೇನು? ಈ ಸಮಸ್ಯೆ ಇರುವವರ ಆಹಾರಕ್ರಮ ಹೇಗಿರಬೇಕು ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ:

ಓವರ್‌ಆ್ಯಕ್ಟಿವ್‌ ಬ್ಲಾಡರ್‌ ಸಮಸ್ಯೆಯಿದ್ದರೆ ಕಂಡು ಬರುವ ಲಕ್ಷಣಗಳು

ಓವರ್‌ಆ್ಯಕ್ಟಿವ್‌ ಬ್ಲಾಡರ್‌ ಸಮಸ್ಯೆಯಿದ್ದರೆ ಕಂಡು ಬರುವ ಲಕ್ಷಣಗಳು

* ಆಗಾಗ ಮೂತ್ರ ವಿಸರ್ಜನೆಗೆ ಹೋಗುವುದು

* ಮೂತ್ರವನ್ನು ತಡೆಹಿಡಿಯಲು ಕಷ್ಟವಾಗುವುದು

* ಮೂತ್ರ ವಿಸರ್ಜನೆಗೆ ಬಂದಾಗ ನಿಯಂತ್ರಿಸಲು ಸಾಧ್ಯವಾಗದೆ ಸ್ವಲ್ಪ ಹೋಗಿ ಬಿಡುವುದು

* ರಾತ್ರಿ ತುಂಬಾ ಸಲ ಮೂತ್ರ ವಿಸರ್ಜನೆಗೆ ಹೋಗುವುದು

ಇದಕ್ಕೆ ಚಿಕಿತ್ಸೆ ಮಾಡದಿದ್ದರೆ ದಿನನಿತ್ಯದ ಬದುಕಿನ ಮೇಲೆ ತುಂಬಾ ಪರಿಣಾಮ ಬೀರಬಹುದು. ಯಾವುದೇ ಟ್ರಿಪ್‌ ಹೋಗಲು ಸಾಧ್ಯವಾಗುವುದಿಲ್ಲ, ಕೆಲಸದ ಸ್ಥಳದಲ್ಲಿ ತೊಂದರೆಯಾಗುವುದು, ನಿದ್ದೆಗೂ ಕೂಡ ಭಂಗ ಉಂಟಾಗುತ್ತದೆ.

ಓವರ್‌ಆ್ಯಕ್ಟಿವ್‌ ಬ್ಲಾಡರ್‌ ಸಮಸ್ಯೆ ಅನೇಕ ಕಾರಣಗಳಿಂದ ಬರಬಹುದು. ಕೆಲವರಿಗೆ ವಯಸ್ಸಾದಾಗ ಕಂಡು ಬರುವುದು, ಇನ್ನು ಪಾರ್ಕಿನ್‌ಸನ್ಸ್‌, ಪೆಲ್ವಿಕ್‌ ಮಸಲ್‌ ದುರ್ಬಲವಾಗಿದ್ದರೆ, ಬ್ಲಾಡರ್‌ನಲ್ಲಿ ಏನಾದರೂ ಅಡೆತಡೆಗಳಿದ್ದರೆ ಕಂಡು ಬರಬಹುದು. ಇನ್ನು ಕೆಲವರಲ್ಲಿ ಓವರ್‌ ಆ್ಯಕ್ಟಿವ್‌ ಬ್ಲಾಡರ್‌ ಸಮಸ್ಯೆಗೆ ಇಂಥದ್ದೇ ಕಾರಣ ಎಂಬುವುದು ಇರಲ್ಲ, ಅವರಲ್ಲಿಯೂ ಕಂಡು ಬರುತ್ತದೆ.

ಓವರ್‌ಆ್ಯಕ್ಟಿವ್‌ ಬ್ಲಾಡರ್‌ ಸಮಸ್ಯೆ ಗುಣಪಡಿಸಬಹುದೇ?

ಇದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಗುಣಪಡಿಸಬಹುದು. ವ್ಯಾಯಾಮ, ಹರ್ಬ್ಸ್‌, ಬಿಹೇವಿಯರಲ್‌ ಥೆರಪಿ (behavioral therapies) ಇವೆಲ್ಲಾ ಬ್ಲಾಡರ್‌ ಸಮಸ್ಯೆ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.

ಓವರ್‌ಆ್ಯಕ್ಟಿವ್‌ ಬ್ಲಾಡರ್‌ ಸಮಸ್ಯೆ ಇರುವವರಿಗೆ ಯಾವ ಆಹಾರ ಒಳ್ಳೆಯದು?

ಓವರ್‌ಆ್ಯಕ್ಟಿವ್‌ ಬ್ಲಾಡರ್‌ ಸಮಸ್ಯೆ ಇರುವವರಿಗೆ ಯಾವ ಆಹಾರ ಒಳ್ಳೆಯದು?

ಸಿಹಿಕುಂಬಳಕಾಯಿ ಬೀಜ

ಸಿಹಿಕುಂಬಳಕಾಯಿ ಬೀಜದಲ್ಲಿ ಒಮೆಗಾ 3 ಕಬ್ಬಿನಂಶವಿದ್ದು ಬ್ಲಾಡರ್‌ ಆರೋಗ್ಯಕ್ಕೆ ತುಂಬಾನೇ ಸಹಕಾರಿ. ಈ ರೀತಿಯ ಸಮಸ್ಯೆ ಇರುವವರಿಗೆ ಸೋಯಾಬೀನ್‌ ಬೀಜ ಕೂಡ ಒಳ್ಳೆಯದು.

ಜಪಾನ್‌ನಲ್ಲಿ ಈ ಕುರಿತು ನಡೆಸಿದ ಅಧ್ಯಯನದಲ್ಲಿ ಭಾಗಿಯಾದ ರೋಗಿಗಳಿಗೆ ಪ್ರಾರಂಭದಲ್ಲಿ 5 ಮಾತ್ರೆ ಹಾಗೂ ಎರಡು ಹೊತ್ತು ಕುಂಬಳಕಾಯಿ ಬೀಜ ಮತ್ತು ಸೋಯಾ ಬೀಜವನ್ನು ಆಹಾರಕ್ರಮದಲ್ಲಿ ಸೇರಿಸಿ ಎರಡು ವಾರಗಳ ಕಾಲ ನೀಡಲಾಯಿತು, ನಂತರ 5 ಮಾತ್ರೆ ಬದಲಿಗೆ 3 ಮಾತ್ರೆ ನೀಡುವಷ್ಟು ರೋಗಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು.

ಬ್ಲಾಡರ್‌ಗೆ ಯಾವ ಪಾನೀಯಗಳು ಒಳ್ಳೆಯದು?

ಬ್ಲಾಡರ್‌ಗೆ ಯಾವ ಪಾನೀಯಗಳು ಒಳ್ಳೆಯದು?

ಕೊಹ್ಕಿ ಟೀ (Kohki tea) ಇದು ಚೀನಾದ ಟೀಯಾಗಿದ್ದು ಜಪಾನ್ ಇತರ ರಾಷ್ಟ್ರಗಳಲ್ಲಿ ಸಿಗುತ್ತದೆ. ಭಾರತದಲ್ಲಿ ಸ್ಟೋರ್‌ಗಳಲ್ಲಿ ಲಭ್ಯವಿರುವ ಸಾಧ್ಯತೆ ಕಡಿಮೆ. ನಿಮ್ಮ ಫ್ಯಾಮಿಲಿ ಅಥವಾ ಫ್ರೆಂಡ್ಸ್‌ ಹೊರ ದೇಶದಲ್ಲಿದ್ದು ಸಾಧ್ಯವಾದರೆ ತರಿಸಿಕೊಂಡು ಕುಡಿಯಿರಿ.

ಈ ಪಾನೀಯಗಳನ್ನು ಸೇವಿಸಿ

* ನೀರು

* ಸೋಯಾ ಹಾಲು

* ಸೇಬು ಅಥವಾ ಪಿಯರ್‌ ಜ್ಯೂಸ್‌ (ಅಸಿಡಿಕ್‌ ಕಡಿಮೆ ಇರುತ್ತದೆ)

* ಬಾರ್ಲಿ ನೀರು

* ಕೆಫೇನ್ ಫ್ರೀ ಟೀ

ಮಲಬದ್ಧತೆ ಕಡಿಮೆ ಮಾಡುವ ಆಹಾರ ಸೇವಿಸಿ

ಮಲಬದ್ಧತೆ ಕಡಿಮೆ ಮಾಡುವ ಆಹಾರ ಸೇವಿಸಿ

ಮಲಬದ್ಧತೆ ಸಮಸ್ಯೆ ಉಂಟಾದರೆ ಅದರಿಂದ ಬ್ಲಾಡರ್‌ ಮೇಲೆ ಅಧಿಕ ಒತ್ತಡ ಬೀಳುತ್ತದೆ, ಇದರಿಂದ ಮೂತ್ರ ತಡೆ ಹಿಡಿಯುವುದು ಮತ್ತಷ್ಟು ಕಷ್ಟವಾಗಬಹುದು. ಅಧಿಕ ನಾರಿನಂಶವಿರುವ ಆಹಾರ ಸೇವಿಸಿ. ನಿಮ್ಮ ಆಹಾರಕ್ರಮದಲ್ಲಿ ಹಣ್ಣುಗಳು ಹಾಗೂ ತರಕಾರಿಗಳು ಅಧಿಕವಾಗಿರಲಿ.

ಯಾವ ಆಹಾರಗಳನ್ನು ದೂರವಿಡಬೇಕು?

ಯಾವ ಆಹಾರಗಳನ್ನು ದೂರವಿಡಬೇಕು?

ಮದ್ಯ

ಕೃತಕ ಸಿಹಿಯ ಆಹಾರಗಳು (ಸ್ವೀಟ್ಸ್)

ಚಾಕೋಲೆಟ್

ಸಿಟ್ರಸ್ ಆಹಾರಗಳು

* ಕಾಫಿ

* ಸೋಡಾ

* ಮಸಾಲೆ ಅಧಿಕವಿರುವ ಆಹಾರಗಳು

* ಟೀ

* ಟೊಮೆಟೊ ಹಾಕಿರುವ ಸೂಪ್

ರಾತ್ರಿಯಲ್ಲಿ ನಿದ್ದೆಗೆ ಭಂಗ ಉಂಟಾಗದಿರಲು ಹೀಗೆ ಮಾಡಿ

ರಾತ್ರಿಯಲ್ಲಿ ನಿದ್ದೆಗೆ ಭಂಗ ಉಂಟಾಗದಿರಲು ಹೀಗೆ ಮಾಡಿ

ಮಲಗುವ 3 ಗಂಟೆ ಮುನ್ನ ಏನೂ ಸೇವಿಸಬೇಡಿ, ನೀರು ಕುಡಿಯಬೇಡಿ....ಇದರಿಂದ ಆಗಾಗ ಮೂತ್ರ ವಿಸರ್ಜನೆ ಹೋಗುವುದು ಕಡಿಮೆಯಾಗುವುದು. ನೀವು 10 ಗಂಟೆ ಮಲಗುವುದಾದರೆ 7 ಗಂಟೆಗೆ ನಿಮ್ಮ ಡಿನ್ನರ್ ಮುಗಿಸಿ.

ಮೈ ತೂಕ ಕಡಿಮೆ ಮಾಡಿ

ಮೈ ತೂಕ ಕಡಿಮೆ ಮಾಡಿ

ನೀವು ಅಧಿಕ ಮೈ ತೂಕ ಹೊಂದಿದ್ದರೆ ಮೈ ತೂಕ ಕಡಿಮೆ ಮಾಡುವತ್ತ ಗಮನ ನೀಡಿ. ಅದಕ್ಕಾಗಿ ಆಹಾರಕ್ರಮ ಹಾಗೂ ವ್ಯಾಯಾಮದ ಕಡೆ ಗಮನ ನೀಡಿ.

ಬ್ಲಾಡರ್‌ ಸಮಸ್ಯೆ ಇರುವವರಿಗೆ ಕೆಗಲ್‌ ವ್ಯಾಯಾಮ ಒಳ್ಳೆಯದು

ನಿಯಮಿತ ವ್ಯಾಯಾಮದಲ್ಲಿ ಕೆಗಲ್‌ ವ್ಯಾಯಾಮ ಕೂಡ ಸೇರಿಸಿ. ಜೊತೆಗೆ ಪಿಲ್ವಿಕ್ ಭಾಗ ಬಲ ಪಡಿಸುವ ವ್ಯಾಯಾಮಗಳನ್ನು ಮಾಡಿ.

ಚಿಕಿತ್ಸೆ ಪಡೆಯಿರಿ

ಚಿಕಿತ್ಸೆ ಪಡೆಯಿರಿ

ನೀವು ಓವರ್‌ಆ್ಯಕ್ಟಿವ್‌ ಬ್ಲಾಡರ್‌ ಸಮಸ್ಯೆಗೆ ಈ ಮೇಲೆ ತಿಳಿಸಿರುವ ಆಹಾರಶೈಲಿ ಕಡೆ ಗಮನ ನೀಡುವುದರ ಜೊತೆಗೆ ತಜ್ಞರನ್ನು ಕಂಡು ಚಿಕಿತ್ಸೆ ಪಡೆಯಿರಿ. ಯಾವುದೇ ಮನೆಮದ್ದು ವೈದ್ಯರ ಸಲಹೆ ಪಡೆಯದೆ ಮಾಡಬೇಡಿ.

English summary

What Is Best Food And Drink For Overactive Bladder?

Do you have overactive bladder these food and drinks helps to manage the problem....
Story first published: Tuesday, May 24, 2022, 9:21 [IST]
X
Desktop Bottom Promotion