For Quick Alerts
ALLOW NOTIFICATIONS  
For Daily Alerts

ಹೈಪೋಥೈರಾಯ್ಡ್‌ಗೆ ಚಿಕಿತ್ಸೆ ಪಡೆಯದಿದ್ದರೆ ಏನಾಗುತ್ತೆ ಗೊತ್ತಾ?

|

ಯಾವಾಗ ನಮ್ಮ ಥೈರಾಯ್ಡ್‌ ಗ್ರಂಥ ತುಂಬಾ ಥೈರಾಕ್ಸಿನ್‌ ಹಾರ್ಮೋನ್‌ಗಳನ್ನು ಉತ್ಪತ್ತಿ ಮಾಡುತ್ತೋ ಆಗ ಹೈಪರ್‌ಥೈರಾಯ್ಡ್ ಹಾರ್ಮೋನ್ ಉತ್ಪತ್ತಿಯಾಗುತ್ತೆ. ಇದು ದೇಹದ ಚಯಪಚಯ ಕ್ರಿಯೆ ಮೇಲೆ ಪರಿಣಾಮ ಬೀರಿ ತೂಕ ಇಳಿಕೆಗೆ ಕಾರಣವಾಗುತ್ತೆ ಜೊತೆಗೆ ಹೃದಯದ ಬಡಿತವೂ ಹೆಚ್ಚಾಗುವುದು. ಅದೇ ಹೈಪೋಥೈರಾಯ್ಡ್ ಸಮಸ್ಯೆ ಇರುವವರಿಗೆ ಮೈ ತೂಕ ತುಂಬಾನೇ ಹೆಚ್ಚಾಗುವುದು.

ಹೈಪರ್‌ಥೈರಾಯ್ಡ್‌ ಹಾಗೂ ಹೈಪೋಥೈರಾಯ್ಡ್‌ಗೆ ಹಲವಾರು ಬಗೆಯ ಚಿಕಿತ್ಸೆಗಳಿವೆ. ಮಾತ್ರೆ ನೀಡಲಾಗುವುದು ಅಥವಾ ಲೇಸರ್ ಟ್ರೀಟ್ಮೆಂಟ್‌ ಅಥವಾ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ಈ ಲೇಖನದಲ್ಲಿ ಹೈಪೋಥೈರಾಯ್ಡ್ ಲಕ್ಷಣಗಳೇನು, ಅದಕ್ಕೆ ಚಿಕಿತ್ಸೆ ಪಡೆಯದಿದ್ದರೆ ಏನಾಗುತ್ತೆ ಎಂಬುವುದನ್ನು ಹೇಳಿದ್ದೇವೆ ನೋಡಿ:

ಹೈಪೋಥೈರಾಯ್ಡ್‌. ಲಕ್ಷಣಗಳು

ಹೈಪೋಥೈರಾಯ್ಡ್‌. ಲಕ್ಷಣಗಳು

* ಮೈ ತೂಕ ಹೆಚ್ಚಾಗುವುದು

* ಎದೆ ಬಡಿತ ಜೋರಾಗುವುದು

* ಭಯ, ಮಾನಸಿಕ ಒತ್ತಡ ಹೆಚ್ಚುವುದು ಒಂಥರಾ ಕಿರಿಕಿರಿ ಅನಿಸುವುದು

* ಕೈ ಬೆರಳುಗಳು ಝುಂಗಟ್ಟಿದಂತೆ ಅನಿಸುವುದು

* ಮೈ ಬೆವರುವುದು

* ಮುಟ್ಟಿನಲ್ಲಿ ವ್ಯತ್ಯಾಸ ಉಂಟಾಗುವುದು

* ಸೆಕೆ ಸಹಿಸಲು ಸಾಧ್ಯವಾಗುವುದಿಲ್ಲ

* ಮಲಬದ್ಧತೆ ಕಂಡು ಬರುವುದು

* ಥೈರಾಯ್ಡ್‌ ಗ್ರಂಥಿಯಲ್ಲಿ ಊತ ಕಂಡು ಬರುವುದು

* ತಲೆಸುತ್ತು, ಮೈಕೈ ನೋವು ಉಂಟಾಗುವುದು

* ನಿದ್ದೆ ಮಾಡಲು ಕಷ್ಟವಾಗುವುದು

* ತ್ವಚೆ ತೆಳುವಾಗುವುದು

* ಕೂದಲು ಉದುರಿ ತೆಳುವಾಗುವುದು

ಗ್ರೇವ್ಸ್ ಸಮಸ್ಯೆ

ಗ್ರೇವ್ಸ್ ಸಮಸ್ಯೆ

ಇನ್ನು ಕೆಲವರಲ್ಲಿ ಥೈರಾಯ್ಡ್ ಹೆಚ್ಚಾದಾಗ ಗ್ರೇವ್ಸ್ ಸಮಸ್ಯೆ ಉಂಟಾಗುವುದು. ಇದು ಮತ್ತಷ್ಟು ಅಪಾಯಕಾರಿಯಾದ ಹಂತವಾಗಿದೆ, ಇದರಿಂದ ಕಣ್ಣಿಗೆ ಹಾನಿಯಾಗುವುದು.

ಗ್ರೇವ್‌ ಸ್ಟೇಜ್‌ನಲ್ಲಿ ಕಂಡು ಬರುವ ಲಕ್ಷಣಗಳು

* ಕಣ್ಣು ಡ್ರೈಯಾಗುವುದು

* ಕಣ್ಣಿನಲ್ಲಿ ಸುಮ್ಮನೆ ನೀರು ಬರುವುದು

* ಲೈಟ್‌ ನೊಡೋಕೆ ಸಾಧ್ಯವಾಗದಿರುವುದು

ಹೈಪೋಥೈರಾಯ್ಡ್ ಉಂಟಾದಾಗ ಚಿಕಿತ್ಸೆ ಪಡೆಯಲೇಬೇಕು, ಇಲ್ಲದಿದ್ದರೆ ಈ ಸಮಸ್ಯೆ ಉಂಟಾಗುವುದು

ಹೈಪೋಥೈರಾಯ್ಡ್ ಉಂಟಾದಾಗ ಚಿಕಿತ್ಸೆ ಪಡೆಯಲೇಬೇಕು, ಇಲ್ಲದಿದ್ದರೆ ಈ ಸಮಸ್ಯೆ ಉಂಟಾಗುವುದು

1. ಗಳಗಂಡ ರೋಗ

ಥೈರಾಯ್ಡ್‌ ಗ್ರಂಥ ಹಾರ್ಮೋನ್‌ ಉತ್ಪತ್ತಿಗೆ ಅಧಿಕ ಶ್ರಮ ಪಟ್ಟಾಗ ಈ ರೀತಿ ಉಂಟಾಗುವುದು. ಇದರಿಂದ ಆಹಾರವನ್ನು ನುಂಗಲು ಕಷ್ಟವಾಗುವುದು, ಉಸಿರಾಟದಲ್ಲಿ ತೊಂದರೆ ಉಂಟಾಗುವುದು, ಜೊತೆಗೆ ಗಂಟಲು ಉಬ್ಬುವುದರಿಂದ ನಮ್ಮ ದೈಹಿಕ ಆಕಾರ ನೋಡಿ ಹಿಂಜರಿಕೆ ಉಂಟಾಗುವುದು.

2. ಹೃದಯ ಕಾಯಿಲೆ

ಹೈಪೋಥೈರಾಯ್ಡ್ ಸಮಸ್ಯೆ ಇದ್ದರೆ ಹೃದಯ ಸಮಸ್ಯೆ ಕಂಡು ಬರುವುದು. ದೇಹದಲ್ಲಿ ನೀರಿನಂಶ ಹೆಚ್ಚುವುದು, ಬೊಜ್ಜಿನಿಂದಾಗಿ ಮಣಿಗಂಟು ಹಾಗೂ ಕಾಲುಗಳಲ್ಲಿ ಊತ ಉಂಟಾಗುವುದು, ಅದರ ಜೊತೆಗೆ ಹೃದಯ ಸಮಸ್ಯೆ ಹೆಚ್ಚಾಗುವುದು, ಅವರಲ್ಲಿ ಲಿಪಿಡ್ ಹಾಗೂ ಕೊಲೆಸ್ಟ್ರಾಲ್‌ ಹೆಚ್ಚಾಗುವುದರಿಂದ ಹೃದಯಕ್ಕೆ ತೊಂದರೆಯಾಗುವುದು. ಥೈರಾಯ್ಡ್‌ಗೆ ಚಿಕಿತ್ಸೆ ಪಡೆದರೆ ಎಲ್ಲವೂ ಸರಿಹೋಗುವುದು.

3. ಕಿಡ್ನಿಗೆ ಹಾನಿಯಾಗುವುದು

3. ಕಿಡ್ನಿಗೆ ಹಾನಿಯಾಗುವುದು

TSHನಲ್ಲಿ ವ್ಯತ್ಯಾಸವಾಗಿ T3, T4 ಸಮಸ್ಯೆ ಇದ್ದರೆ ಅವರಿಗೆ ಕಿಡ್ನಿ ಸಮಸ್ಯೆ 2 ಪಟ್ಟು ಅಧಿಕ. ಅದೇ T3, T4 ವ್ಯತ್ಯಾಸವಾಗಿರುವವರಲ್ಲಿ ಥೈರಾಯ್ಡ್ ಸಮಸ್ಯೆ 7.61 ಪ್ಟು ಅಧಿಕ ಎಂದು ಅಧ್ಯಯನ ವರದಿ ಹೆಳಿದೆ.

4. ನರದ ಸಮಸ್ಯೆ

4. ನರದ ಸಮಸ್ಯೆ

ಹೈಫೋಥೈರಾಯ್ಡ್ ಸಮಸ್ಯೆಯಿದ್ದರೆ ಅವರಿಗೆ ಮೈ, ಕೈ ನೋವು ಸ್ನಾಯುಗಳು ದುರ್ಬಲವಾಗುವುದು, ದೇಹದಲ್ಲಿ ನಿಶ್ಯಕ್ತಿ ಮುಂತಾದ ಸಮಸ್ಯೆ ಕಂಡು ಬರುವುದು.

5. ಖಿನ್ನತೆ ಕಾಡುವುದು

ಹೈಪೋಥೈರಾಯ್ಡ್ ಸಮಸ್ಯೆ ಇರುವವರಿಗೆ ಖಿನ್ನತೆ ಉಂಟಾಗುವುದು, ಥೈರಾಯ್ಡ್ ಹಾರ್ಮೋನ್‌ಗೆ ಚಿಕಿತ್ಸೆ ತೆಗೆದುಕೊಂಡರೆ ಖಿನ್ನತೆ ಕಡಿಮೆಯಾಗುವುದು.

6. ಬಂಜೆತನ ಸಮಸ್ಯೆ ಕಾಣುತ್ತೆ

6. ಬಂಜೆತನ ಸಮಸ್ಯೆ ಕಾಣುತ್ತೆ

ಹೈಪೋಥೈರಾಯ್ಡ್‌ ಸಮಸ್ಯೆ ಇರುವವರಿಗೆ ಬಂಜೆತನದ ಸಮಸ್ಯೆ ಕಾಣುತ್ತೆ, ಒಂದು ವೇಳೆ ಮಗುವಾದರೂ ಆ ಮಗುವಿನಲ್ಲಿ ದೈಹಿಕ ಹಾಗೂ ಮಾನಸಿಕ ನ್ಯೂನ್ಯತೆ ಕಂಡು ಬರುವ ಸಾಧ್ಯತೆ ಇದೆ. ಇನ್ನು ಕೆಲವರಿಗೆ ಗರ್ಭಪಾತವಾಗುವುದು.

7. ಕೋಮಾಕ್ಕೆ ಜಾರುವುದು (Myxedema)

ಇದು ಬಲು ಅಪರೂಪವಾಗಿದೆ, ಈ ಸಮಸ್ಯೆ ಮಾನಸಿಕ ಒತ್ತಡ ಹೆಚ್ಚಾದಾಗ ಅಥವಾ ಖಿನ್ನತೆಗೆ ಮಾತ್ರೆ ತೆಗೆದುಕೊಂಡಾಗ, ಏನಾದರೂ ಸೋಂಕು ತಗುಲಿದಾಗ ಉಂಟಾಗುವುದು.

English summary

What Happens If You Don't Treat Hypothyroidism in Kannada

What Happens If You Don't Treat Hypothyroidism in Kannada, read on...
X
Desktop Bottom Promotion