For Quick Alerts
ALLOW NOTIFICATIONS  
For Daily Alerts

ತುಂಬಾ ಹೊತ್ತು ಮಾಸ್ಕ್‌ ಧರಿಸಿದರೆ ಬಾಯಿ ದುರ್ವಾಸನೆ ಬೀರುವುದು, ತಡೆಗಟ್ಟುವುದು ಹೇಗೆ?

|

ಕೊರೊನಾ ಸಾಂಕ್ರಾಮಿಕ ರೋಗ ಬಂದಾಗಿನಿಂದ ಮಾಸ್ಕ್‌ ಎಂಬುವುದು ಅತೀ ಅವಶ್ಯಕ ವಸ್ತುಗಳಲ್ಲಿ ಒಂದಾಗಿದೆ. ಮನೆಯಿಂದ ಹೊರಗಡೆ ಕಾಲಿಡಬೇಕೆಂದರೆ ಮುಖದಲ್ಲಿ ಮಾಸ್ಕ್ ಇರಲೇಬೇಕು. ಕೊರೊನಾ ಸೋಂಕಿ ಹರಡುವುದನ್ನು ತಪ್ಪಿಸು ಪ್ರತಿಯೊಬ್ಬರು ಮಾಸ್ಕ್‌ ಧರಿಸಬೇಕು, ಆದರೆ ಶುಚಿತ್ವ ಕಾಪಾಡದಿದ್ದರೆ ಮಾಸ್ಕ್‌ನಿಂದಲೇ ಇನ್ನಿತರ ಕಾಯಿಲೆ ಬರಬಹುದು ಹುಷಾರ್!

ಯಾರು ತುಂಬಾ ಸಮಯ ಮಾಸ್ಕ್‌ ಧರಿಸುತ್ತಾರೋ ಅವರು ಮಾಸ್ಕ್‌ ಶುಚಿತ್ವ ಕಡೆ ತುಂಬಾನೇ ಗಮನ ನೀಡಬೇಕು. ಇಲ್ಲದಿದ್ದರೆ ಬಾಯಿಯ ಆರೋಗ್ಯ ಹಾಳಾಗುವುದು ಡಯಾಬಿಟಿಸ್ ಆಸ್ಪತ್ರೆಯ ಡಾ. ವಿನಿತಾ ರಾಮಚಂದ್ರನ್‌ ದಿ ಹಿಂದೂ ಪತ್ರಿಕೆಗೆ ತಿಳಿಸಿದ್ದಾರೆ.

ತುಂಬಾ ಸಮಯ ಮಾಸ್ಕ್‌ ಧರಿಸುವುದರಿಂದ ಏನಾಗುತ್ತದೆ?

ತುಂಬಾ ಸಮಯ ಮಾಸ್ಕ್‌ ಧರಿಸುವುದರಿಂದ ಏನಾಗುತ್ತದೆ?

ಆಸ್ಪತ್ರೆಯಲ್ಲಿ ಕೆಲಸ ಮಾಡುವವರು ಹೆಚ್ಚಾಗಿ ತುಂಬಾ ಹೊತ್ತು ಮಾಸ್ಕ್‌ ಬಳಸುತ್ತಾರೆ. ಅಲ್ಲದೆ ಡಬಲ್‌ ಮಾಸ್ಕ್‌ ಸಿಂಗಲ್‌ ಮಾಸ್ಕ್‌ಗಿಂತ ಹೆಚ್ಚು ಸುರಕ್ಷಿತವಾಗಿರುವುದರಿಂದ ಆಸ್ಪತ್ರೆಯಲ್ಲಿ ಕೆಲಸ ಮಾಡುವವರು, ತುಂಬಾ ಹೊತ್ತು ಹೊರಗಡೆ ಕೆಲಸ ಮಾಡುವವರು ಮಾಸ್ಕ್‌ ಧರಿಸಿಕೊಂಡೇ ಇರುತ್ತಾರೆ.

ಮಾಸ್ಕ್ ಧರಿಸಿದಾಗ ಜನರು ಬಾಯಲ್ಲಿ ಉಸಿರಾಡಲು ಪ್ರಾರಂಭಿಸುತ್ತಾರೆ. ಇದರಿಂದಾಗಿ ಬಾಯಿ ಬೇಗನೆ ಒಣಗುವುದು, ಅಲ್ಲದೆ ಮಾಸ್ಕ್‌ ಧರಿಸಿರುವ ಕಾರಣ ಜನರು ನೀರು ಕುಡಿಯುವುದನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಬಾಯಿ ದುರ್ವಾಸನೆ ಬೀರುವುದು.

ಮಾಸ್ಕ್‌ ಧರಿಸುವುದರಿಂದ ಹೆಚ್ಚುವ ಬಾಯಿ ದುರ್ಗಂಧದ ಸಮಸ್ಯೆ

ಮಾಸ್ಕ್‌ ಧರಿಸುವುದರಿಂದ ಹೆಚ್ಚುವ ಬಾಯಿ ದುರ್ಗಂಧದ ಸಮಸ್ಯೆ

ತುಂಬಾ ಹೊತ್ತು ಬಾಯಿ ಮುಚ್ಚಿಕೊಂಡೇ ಇದ್ದರೆ, ಕೆಲವರು ತಮ್ಮ ಎಂಜಲು ಕೂಡ ನುಂಗಲು ಮರೆತು ಹೋದಾಗ ಬಾಯಿ ಒಣಗಿ ಬಾಯಿಯಿಂದ ದುರ್ವಾಸನೆ ಬೀರುವುದು. ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಕೆಲಸ ಮಾಡುವ ಆರೋಗ್ಯ ಕಾರ್ಯಕರ್ತರಲ್ಲಿ ಈ ಸಮಸ್ಯೆ ಹೆಚ್ಚಾಗಿದೆ.

ಮಾಸ್ಕ್‌ನಿಂದಾಗಿ ಹಲ್ಲಿನ ಶುಚಿತ್ವ ಕಡೆ ಗಮನ ಕಡಿಮೆಯಾಗುವುದು

ಮಾಸ್ಕ್‌ನಿಂದಾಗಿ ಹಲ್ಲಿನ ಶುಚಿತ್ವ ಕಡೆ ಗಮನ ಕಡಿಮೆಯಾಗುವುದು

ಹೊರಗಡೆ ಹೋಗುವಾಗ ಮಾಸ್ಕ್‌ ಧರಿಸಿಯೇ ಇರುವುದರಿಂದ ನಾವು ನಕ್ಕಾಗ ನಮ್ಮ ಹಲ್ಲುಗಳು ಯಾರಿಗೂ ಕಾಣುವುದಿಲ್ಲ, ಇದರಿಂದಾಗಿ ಹಲ್ಲುಗಳು ಹಳದಿಯಾದರೂ ಕೆಲವರು ಹಲ್ಲುಗಳ ಶುಚಿತ್ವ ಕಡೆ ಗಮನ ನೀಡುವುದಿಲ್ಲ. ಇದರಿಂದಾಗಿ ವಸಡು ಹಾಗೂ ಹಲ್ಲಿನ ಸಮಸ್ಯೆ ಕಂಡು ಬರುವುದು ಎಂದು Community and Preventive Dentistryನಲ್ಲಿ ಪ್ರಕಟವಾದ ಅಧ್ಯಯನ ವರದಿ ಹೇಳಿದೆ.

ಹಲ್ಲುಗಳ ಶುಚಿತ್ವ ಕಡೆ ಗಮನ ನೀಡಿ

ಹಲ್ಲುಗಳ ಶುಚಿತ್ವ ಕಡೆ ಗಮನ ನೀಡಿ

* ಮಾಸ್ಕ್ ಶುಚಿತ್ವ ಕಡೆ ಗಮನ ನೀಡಿ

* ಹಲ್ಲುಗಳನ್ನು ಬೆಳಗ್ಗೆ ಮತ್ತು ರಾತ್ರಿ ಹೊತ್ತು ಬ್ರೆಷ್‌ನಿಂದ ತಿಕ್ಕಿ.

* ಇನ್ನು ಮಾಸ್ಕ್‌ ಹಾಕಿದಾಗ ಬಾಯಲ್ಲಿ ಉಸಿರಾಡುವ ಅಭ್ಯಾಸ ಬೆಳೆಸಬೇಡಿ, ಮೂಗಿನ ಮೂಲಕವೇ ಉಸಿರಾಡಿ.

* ಆಗಾಗ ನೀರು ಕುಡಿಯಿರಿ.

* ಮಾಸ್ಕ್ ಧರಿಸದಿದ್ದರು ಸುರಕ್ಷಿತ ಎನ್ನುವ ಕಡೆ, ಅಂದ್ರೆ ಜನರ ಗುಂಪು ಇಲ್ಲದ ಕಡೆ ಸ್ವಲ್ಪ ಹೊತ್ತು ಮಾಸ್ಕ್‌ ತೆಗೆದು ನಿಲ್ಲಿ, ಇದರಿಂದ ಮಾಸ್ಕ್‌ನಿಂದ ಸ್ವಲ್ಪ ಹೊತ್ತು ಫ್ರೀ ಆಗುವಿರಿ.

* ಮೊಡವೆ ಮತ್ತಿತರ ಸಮಸ್ಯೆ ತಡೆಗಟ್ಟಲು ಬಟ್ಟೆಯ ಮಾಸ್ಕ್ ಅನ್ನು ಪ್ರತಿ ನಿತ್ಯ ತೊಳೆಯಿರಿ ಹಾಗೂ ಸರಿಯಾಗಿ ಒಣಗಿದ ಶುಚಿಯಾದ ಮಾಸ್ಕ್ ಧರಿಸಿ.

English summary

Wearing Mask Long Time Could Affect Oral Hygiene says Dentists

Wearing Mask Long Time Could Affect Oral Hygiene says Dentists, read on...
Story first published: Friday, July 2, 2021, 15:04 [IST]
X
Desktop Bottom Promotion