For Quick Alerts
ALLOW NOTIFICATIONS  
For Daily Alerts

ಹಲ್ಲುಗಳ ಬಗ್ಗೆ ನೀವು ತಿಳಿಯಲೇಬೇಕಾದ ಕುತೂಹಲಕಾರಿ ವಿಷಯಗಳು

|

ನಾವು ತಿನ್ನುವಂತಹ ಆಹಾರವು ಜೀರ್ಣಕ್ರಿಯೆಗೆ ಹೋಗುವ ಮೊದಲು ಆರಂಭದಲ್ಲಿ ಅದನ್ನು ಜಗಿದು ತುಂಬಾ ಸಣ್ಣ ತುಂಡುಗಳನ್ನಾಗಿ ಮಾಡುವಂತಹ ಕಾರ್ಯ ಮಾಡುವುದೇ ಹಲ್ಲುಗಳು. ಹಲ್ಲುಗಳು ಇಲ್ಲದೆ ಇದ್ದರೆ ಅದು ನೇರವಾಗಿ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದು. ಈ ಹಲ್ಲುಗಳು ಕೇವಲ ಜಗಿಯಲು ಮಾತ್ರವಲ್ಲದೆ, ಮುಖದ ಸೌಂದರ್ಯವನ್ನು ಕಾಪಾಡುವುದು.

ಮನುಷ್ಯನ ಬಾಯಿಯಲ್ಲಿರುವಂತಹ ಹಲ್ಲುಗಳು ಜೋಡಿಸಿದ ಮುತ್ತಿನ ಹಾರದಂತಿದ್ದರೆ ಅದು ತುಂಬಾ ಸುಂದರವಾಗಿ ಕಾಣುವುದು. ಹಲ್ಲುಗಳು ಓರೆಕೋರೆ ಹಾಗೂ ಮುಂದಕ್ಕೆ ಬಂದಿದ್ದರೆ ಆಗ ಮುಖದ ಸೌಂದರ್ಯವು ಕೆಡುವುದು.

Types Of Teeths

ಬಾಯಿಯಲ್ಲಿ ಇರುವ ಹಲ್ಲುಗಳ ಬಗ್ಗೆ ನಾವು ಪ್ರತಿನಿತ್ಯವೂ ಎದ್ದ ಬಳಿಕ ಹಲ್ಲುಜ್ಜಿ ಕಾಳಜಿ ವಹಿಸುತ್ತೇವೆ. ಆದರೆ ಇಷ್ಟು ಮಾತ್ರ ಸಾಕೇ ಎನ್ನುವ ಪ್ರಶ್ನೆಯು ಮೂಡುವುದು. ಕೆಲವರಲ್ಲಿ ಹಲ್ಲುಗಳು ಬೇಗನೆ ಕೆಡುವುದು ಮತ್ತು ದಂತಕುಳಿ ಕಾಣಿಸಿಕೊಳ್ಳುವುದು. ಇದಕ್ಕೆ ಸ್ವಚ್ಛತೆ ಇಲ್ಲದೆ ಇರುವುದು ಹಾಗೂ ಇತರ ಕೆಲವು ಕಾರಣಗಳು ಇರಬಹುದು.

ಹಲ್ಲುಗಳೂ ಬಿಳಿಯಾಗಿ ಮುತ್ತಿನಂತೆ ಹೊಳೆಯುತ್ತಲಿದ್ದರೆ ಆಗ ನಿಮ್ಮ ಸೌಂದರ್ಯಕ್ಕೂ ಮೆರಗು ಬರುವುದು. ಹಲ್ಲುಗಳೂ ಹೇಗೆ ನಿರ್ಮಾಣವಾಗುವುದು ಮತ್ತು ಅದನ್ನು ಹೇಗೆ ನಿರ್ವಹಿಸಬೇಕು ಎಂದು ತಿಳಿಯಬೇಕು. ಆಗ ಮಾತ್ರ ನಿಮಗೆ ಹಲ್ಲುಗಳ ಬಗ್ಗೆ ಕಾಳಜಿ ವಹಿಸಲು, ಅದರ ಆರೈಕೆ ಮಾಡಲು ಸುಲಭವಾಗುವುದು.

ಮುಖ್ಯವೆಂದರೆ ಹಲ್ಲುಗಳು ಕ್ಯಾಲ್ಸಿಯಂ ಮತ್ತು ಪೋಸ್ಪರಸ್ ಖನಿಜಾಂಶಗಳ ಸಂಯೋಜನೆಯಾಗಿದೆ. ಹಲ್ಲುಗಳ ಪ್ರಮುಖ ಅಂಗಾಂಶವೆಂದರೆ ಅದು ಡೆಂಟಿನ್ ಎನ್ನುವುದು. ಡೆಂಟಿನ್ ನ್ನು ತುಂಬಾ ದೃಢ ಹಾಗೂ ಕಾಂತಿಯುತ ಪದರವು ರಕ್ಷಿಸುವುದು. ಇದನ್ನು ದಂತಕವಚ ಎಂದು ಕರೆಯಲಾಗುತ್ತದೆ. ಇದು ದಂತದ ಹೊರಗಿನ ಭಾಗವನ್ನು ರಚಿಸುವುದು ಮತ್ತು ನಮಗೆಲ್ಲರಿಗೂ ಇದು ಕಾಣಿಸುವುದು.

ಆಹಾರ ಜಗಿಯಲು ಮತ್ತು ಸರಿಯಾಗಿ ಮಾತನಾಡಲು ಹಲ್ಲುಗಳು ನೆರವಾಗುವುದು. ಬಾಯಿಯಲ್ಲಿ ಇರುವಂತಹ ಹಲ್ಲುಗಳ ಸಂಖ್ಯೆಯು ವಯಸ್ಸಾಗುತ್ತಿರುವಂತೆ ಹೆಚ್ಚುವುದು. ಹಲ್ಲುಗಳು ಮೂಡುವ ಪ್ರಕ್ರಿಯೆಯು ತುಂಬಾ ನಿಖರ ಹಾಗೂ ಸಂಕೀರ್ಣವಾಗಿರುತ್ತದೆ.

ನವಜಾತ ಶಿಶುವಿನ ಬಾಯಿಯಲ್ಲಿ ಒಂದು ಹಲ್ಲು ಕೂಡ ಇರುವುದಿಲ್ಲ. ಆದರೆ ಮಗು ಬೆಳೆದಂತೆ ಒಂದೊಂದೇ ಹಲ್ಲುಗಳು ಮೂಡಲು ಆರಂಭಿಸುತ್ತದೆ. 3 ವರ್ಷದವರೆಗೆ ಎಲ್ಲಾ 20 ಪ್ರಾಥಮಿಕ ಹಲ್ಲುಗಳು ಮೂಡಿರುವುದು. ಇದನ್ನು ಹಾಲು ಹಲ್ಲು ಎಂದು ಕರೆಯಲಾಗುತ್ತದೆ.

ಮಕ್ಕಳಿಗೆ 6ರಿಂದ 12 ವರ್ಷ ವಯಸ್ಸಾಗುತ್ತಿರುವಂತಹ ಈ ಹಾಲು ಹಲ್ಲುಗಳು ಉದುರಲು ಆರಂಭವಾಗುವುದು ಮತ್ತು ಶಾಶ್ವತ ಹಲ್ಲುಗಳು ಬರುವುದು. 21ರ ಹರೆಯದ ವೇಳೆ ಎಲ್ಲಾ ಹಲ್ಲುಗಳು ಬಾಯಿಯಲ್ಲಿ ಮೂಡಿರುವುದು.

ಹಲ್ಲುಗಳ ವಿಧಗಳು ಹೀಗಿವೆ

ಹಲ್ಲುಗಳ ವಿಧಗಳು ಹೀಗಿವೆ

ಸಣ್ಣ ಮಕ್ಕಳಲ್ಲಿ ಈ ರೀತಿಯ ಹಾಲು ಹಲ್ಲುಗಳು ಇರುವುದು

4 ಬಾಚಿ ಹಲ್ಲುಗಳು

2 ಕೋರೆ ಹಲ್ಲುಗಳು

4 ದವಡೆ ಹಲ್ಲುಗಳು

ಒಸಡಿನಿಂದ ಮೊದಲಿಗೆ ಬರುವಂತಹ ಹಲ್ಲುಗಳೆಂದರೆ ಅದು ಬಾಚಿ ಹಲ್ಲುಗಳು.

ವಯಸ್ಕರಲ್ಲಿ 32 ಶಾಶ್ವತ ಹಲ್ಲುಗಳು ಇರುವುದು.

ವಯಸ್ಕರಲ್ಲಿ 32 ಶಾಶ್ವತ ಹಲ್ಲುಗಳು ಇರುವುದು.

8 ಬಾಚಿ ಹಲ್ಲುಗಳು

4 ಕೋರೆ ಹಲ್ಲುಗಳು

8 ದವಡೆ ಮುಂಚಿನ ಹಲ್ಲುಗಳು

8 ದವಡೆ ಹಲ್ಲುಗಳು

4 ಸ್ವತಂತ್ರ ಹಲ್ಲುಗಳು

ಪ್ರತಿಯೊಂದು ಹಲ್ಲಿನ ಬಗ್ಗೆ ವಿವರ ತಿಳಿದುಕೊಳ್ಳುವ…

ಪ್ರತಿಯೊಂದು ಹಲ್ಲಿನ ಬಗ್ಗೆ ವಿವರ ತಿಳಿದುಕೊಳ್ಳುವ…

ಬಾಚಿ ಹಲ್ಲುಗಳು ಎಂದರೇನು?

ದವಡೆಯ ಮುಂದಿನ ಭಾಗದಲ್ಲಿ ಇರುವ ಹಲ್ಲುಗಳನ್ನು ಬಾಚಿ ಹಲ್ಲುಗಳು ಎಂದು ಕರೆಯುವರು. ವಯಸ್ಕರ ದವಡೆಯಲ್ಲಿ ಎಂಟು ಬಾಚಿ ಹಲ್ಲುಗಳು ಇರುವುದು. ನಾಲ್ಕು ಮೇಲಿನ ದವಡೆ ಮತ್ತು ನಾಲ್ಕು ಕಳಗಿನ ದವಡೆಯಲ್ಲಿ ಇರುವುದು. ಇದು ತುಂಬಾ ಹರಿತವಾಗಿರುವುದು ಮತ್ತು ಆಹಾರವನ್ನು ತುಂಡು ಮಾಡಲು ನೆರವಾಗುವುದು. ಈ ಹಲ್ಲುಗಳು ನವಜಾತ ಶಿಶುವಿನಲ್ಲಿ ಮೊದಲು ಮೂಡಿ ಬರುವುದು. ಮಗುವಿಗೆ ಆರು ತಿಂಗಳು ಆಗುತ್ತಿರುವಂತೆ ಈ ಹಲ್ಲುಗಳು ಮೂಡುವುದು. ಇದರ ಬಳಿಕ 6-12 ವಯಸ್ಸಿನ ಮಧ್ಯೆ ಇದು ಉದುರುವುದು. ಇದರ ಬಳಿಕ ಶಾಶ್ವತ ಬಾಚಿ ಹಲ್ಲುಗಳು ಬರುವುದು.

ಕೋರೆ ಹಲ್ಲುಗಳು ಎಂದರೇನು?

ಕೋರೆ ಹಲ್ಲುಗಳು ಎಂದರೇನು?

ಪ್ರತಿಯೊಬ್ಬರ ಬಾಯಿಯಲ್ಲೂ ನಾಲ್ಕು ಕೋರೆ ಹಲ್ಲುಗಳು ಇರುವುದು. ಇದು ಹಲ್ಲುಗಳ ಎರಡನೇ ಜೋಡಣೆಯಾಗಿದೆ. ಇದು ಬಾಚಿಹಲ್ಲುಗಳ ಬಳಿಕ ಇರುವುದು. ಎರಡು ಕೋರೆ ಹಲ್ಲುಗಳು ಮೇಲಿನ ದವಡೆ ಮತ್ತು ಇನ್ನೆರಡು ಕೆಳಗಿನ ದವಡೆಯಲ್ಲಿ ಇರುತ್ತದೆ. ಕೋರೆ ಹಲ್ಲುಗಳು ಆಹಾರವನ್ನು ಹರಿಯಲು ನೆರವಾಗುವಂತೆ ರಚಿಸಲಾಗಿದೆ. ತುಂಬಾ ಚೂಪು ಹಾಗೂ ಹರಿತವಾಗಿ ಇರುವುದು.

ಮಕ್ಕಳಲ್ಲಿ 16-20 ತಿಂಗಳ ಮಧ್ಯೆ ಕೋರೆ ಹಲ್ಲುಗಳು ಬರುವುದು. ಮೇಲಿನ ದವಡೆಯ ಕೋರೆ ಹಲ್ಲುಗಳು ಮೊದಲು ಬರುವುದು ಮತ್ತು ಇದರ ಬಳಿಕ ಕೆಳಗಿನ ಭಾಗದಲ್ಲಿ ಮೂಡುವುದು. ಆದರೆ ಶಾಶ್ವತ ಕೋರೆ ಹಲ್ಲುಗಳು ಬರುವ ವೇಳೆ ಕೆಳಗಿನ ದವಡೆಯಲ್ಲಿ ಅದು ಮೊದಲಿಗೆ ಬರುವುದು ಮತ್ತು ಮೇಲಿನ ದವಡೆಯಲ್ಲಿ ಬಳಿಕ ಬರುವುದು. ಕೆಳಭಾಗದ ಕೋರೆ ಹಲ್ಲು 9ರ ಹರೆಯಲ್ಲಿ ಬಂದರೆ, ಮೇಲ್ಭಾಗದ ಕೋರೆ ಹಲ್ಲು 11 ಮತ್ತು 12ನೇ ವಯಸ್ಸಿಗೆ ಬರುವುದು.

ದವಡೆಗೂ ಮೊದಲ ಹಲ್ಲುಗಳು ಎಂದರೇನು?

ದವಡೆಗೂ ಮೊದಲ ಹಲ್ಲುಗಳು ಎಂದರೇನು?

ಹಲ್ಲಿನ ಮೂರನೇ ಜೋಡಣೆಯೇ ದವಡೆ ಮೊದಲ ಹಲ್ಲುಗಳು. ಇದರಲ್ಲಿ ಎಂಟು ಹಲ್ಲುಗಳು ಇರುವುದು. ನಾಲ್ಕು ದವಡೆ ಮೊದಲಿನ ಹಲ್ಲುಗಳು ಮೇಲಿನ ಭಾಗ ಮತ್ತು ನಾಲ್ಕು ಕೆಳಗಿನ ಭಾಗದಲ್ಲಿ ಇರುವುದು. ಹಲ್ಲಿನ ಗಾತ್ರಕ್ಕೆ ಇದನ್ನು ಹೋಲಿಕೆ ಮಾಡಿದರೆ ಬಾಚಿ ಹಲ್ಲು ಮತ್ತು ಕೋರೆ ಹಲ್ಲಿಗಿಂತ ಇವುಗಳು ದೊಡ್ಡದಾಗಿರುವುದು. ಇವುಗಳು ಸಮತಟ್ಟಾಗಿ ರೇಖೆಗಳನ್ನು ಹೊಂದಿರುವುದು. ಈ ರೇಖೆಗಳು ಆಹಾರವನ್ನು ಮುರಿದು, ರುಬ್ಬುವುದು ಮತ್ತು ನುಂಗಲು ತುಂಬಾ ಸುಲಭವಾಗುವಂತೆ ಮಾಡುವುದು.

ಮಕ್ಕಳಲ್ಲಿ 10-12ನೇ ವಯಸ್ಸಿನ ತನಕ ದವಡೆ ಮೊದಲಿನ ಹಲ್ಲುಗಳು ಕಾಣಲು ಸಿಗುವುದಿಲ್ಲ.

ದವಡೆ ಹಲ್ಲುಗಳು ಎಂದರೇನು?

ದವಡೆ ಹಲ್ಲುಗಳು ಎಂದರೇನು?

ಪ್ರತಿಯೊಬ್ಬ ವ್ಯಕ್ತಿಯಲ್ಲೂ 12 ದವಡೆ ಹಲ್ಲುಗಳು ಇರುವುದು. ಇದು ತುಂಬಾ ದೊಡ್ಡ ಹಾಗೂ ಬಲಿಷ್ಠವಾದ ಹಲ್ಲಗಳ ಜೋಡಣೆಯಾಗಿರುವುದು. ಮೇಲಿನ ದವಡೆಯಲ್ಲಿ ಆರು ದವಡೆ ಹಲ್ಲುಗಳು ಮತ್ತು ಕೆಳಗಿನ ದವಡೆಯಲ್ಲಿ ಆರು ದವಡೆ ಹಲ್ಲುಗಳು ಇರುವುದು. 12 ದವಡೆ ಹಲ್ಲುಗಳಲ್ಲಿ ಎಂಟು ದವಡೆ ಹಲ್ಲುಗಳು 6ನೇ ವಯಸ್ಸಿನಿಂದ 12ನೇ ವಯಸ್ಸಿನವರೆಗೆ ಬರುವುದು.

ದವಡೆ ಹಲ್ಲುಗಳು ಆಕಾರದಲ್ಲಿ ಅಗಲವಾಗಿರುವುದು ಮತ್ತು ಇದು ಆಹಾರವನ್ನು ರುಬ್ಬಲು ನೆರವಾಗುವುದು. ನೀವು ಆಹಾರ ತಿಂದ ವೇಳೆ ನಾಲಗೆಯು ಅದನ್ನು ಹಿಂದಕ್ಕೆ ಕಳುಹಿಸಿಕೊಡುವುದು. ದವಡೆ ಹಲ್ಲುಗಳು ಇದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡುವುದು ಮತ್ತು ನುಂಗಲು ಸಹಕರಿಸುವುದು.

ಸ್ವತಂತ್ರ ಹಲ್ಲು

ಸ್ವತಂತ್ರ ಹಲ್ಲು

ಕೊನೆಯದಾಗಿ ಸ್ವತಂತ್ರ ಹಲ್ಲು ಎನ್ನುವುದು ಇದೆ. ಇದು ದವಡೆ ಹಲ್ಲಿನ ಬಳಿಕ ಬರುವುದು. ಇದು 17ರಿಂದ 25ನೇ ವಯಸ್ಸಿನಲ್ಲಿ ಮೂಡಿ ಬರುವುದು.

ಕೆಲವರ ಬಾಯಿಯಲ್ಲಿ ಸ್ವತಂತ್ರ ಹಲ್ಲು ಬರಲು ಹೆಚ್ಚಿನ ಜಾಗವಿಲ್ಲದೆ ಇರಬಹುದು. ಇದರಿಂದಾಗಿ ಸ್ವತಂತ್ರ ಹಲ್ಲಿನ ಮೇಲೆ ಪರಿಣಾಮ ಬೀರಿ, ಅದು ವಸಡಿನ ಒಳಗಡೆ ನಿಲ್ಲಬಹುದು. ಹೀಗೆ ಆದರೆ ಸ್ವತಂತ್ರ ಹಲ್ಲನ್ನು ತೆಗೆಯಬೇಕಾಗುತ್ತದೆ.

ಹಲ್ಲಿನ ಬಗ್ಗೆ ನಿಮಗೆ ಈಗ ಹೆಚ್ಚಿನ ಮಾಹಿತಿಯು ಈ ಲೇಖನದ ಮೂಲಕ ಸಿಕ್ಕಿದೆ ಎಂದು ನಾವು ಭಾವಿಸುತ್ತೇವೆ. ಹಲ್ಲುಗಳು ಹಾಗೂ ಒಸಡಿನ ಆರೋಗ್ಯವನ್ನು ಚೆನ್ನಾಗಿಡಲು ನೀವು ಬಾಯಿಯ ಸರಿಯಾದ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ನೀವು ಆಗಾಗ ದಂತವೈದ್ಯರ ಬಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡರೆ ಆಗ ಖಂಡಿತವಾಗಿಯೂ ನಿಮ್ಮ ಬಾಯಿ ಹಾಗೂ ಹಲ್ಲುಗಳ ಆರೋಗ್ಯವು ಚೆನ್ನಾಗಿರುವುದು.

English summary

Types Of Teeths, Their Shapes And Functions

Here we are going to guide you about types of teeth , their shapes and functions. The teeth help you chew your food and speak comprehensively. The number of teeth in your mouth varies as you grow older, and the eruption process is meticulous and intricate. Read more.
X
Desktop Bottom Promotion