For Quick Alerts
ALLOW NOTIFICATIONS  
For Daily Alerts

ತೂಕ ಇಳಿಕೆಗೆ ಹುಣಸೆಹಣ್ಣು ಹೇಗೆ ಸೇವಿಸಬೇಕು ಹಾಗೂ ಇದರ ಆರೋಗ್ಯಕರ ಗುಣಗಳು

|

ಚಟ್ನಿ, ಸಾರು ಮಾಡುವಾಗ ಸ್ವಲ್ಪ ಹುಣಸೆಹಣ್ಣು ಕಿವುಚಿ ಹಾಕಿದರೆ ಆ ಅಡುಗೆಯ ಸ್ವಾದ ಮತ್ತಷ್ಟು ಹೆಚ್ಚುವುದು. ಇನ್ನು ಮಂಗಳೂರು ಕಡೆ ಬಂದ್ರೆ ನಿನಗೆ ಇದರಿಂದ ಕುಡಿಯಲು ಜ್ಯೂಸ್‌ ಕೂಡ ಮಾಡಿ ಕೊಡುತ್ತಾರೆ.

ಮಧುಮೇಹಿಗಳೇ ಹೀರೇಕಾಯಿ ತಿನ್ನಿ ಔಷಧಿಗಳಿಂದ ಮುಕ್ತಿ ಹೊಂದಿ | Diabetic People | Benefits of Ridge Guard
Tamarind Health Benefits and How to Consume for Weight Loss

ಹೀಗೆ ಅಡುಗೆಗೆ ಹುಣಸೆಹಣ್ಣು ಬಳಸಿ ನಿಮಗೆ ಗೊತ್ತಿರಬಹುದು. ಆದರೆ ತೂಕ ಇಳಿಕೆಗೆ ಹುಣಸೆಹಣ್ಣು ತುಂಬಾ ಪರಿಣಾಮಕಾರಿ ಎಂಬುವುದು ಗೊತ್ತೇ? ಮೈ ಬೊಜ್ಜು ಕರಗಿಸುವುದು ಮಾತ್ರವಲ್ಲ ಇನ್ನು ಹಲವು ಪ್ರಯೋಜನಗಳನ್ನು ಪಡೆಯಬಹುದು. ಇಲ್ಲಿ ನಾವು ಹುಣಸೆಹಣ್ಣು ಆಹಾರದಲ್ಲಿ ಸೇರಿಸುವುದರಿಂದ ದೊರೆಯುವ ಪ್ರಯೋಜನಗಳ ಬಗ್ಗೆ ಹೇಳಿದ್ದೇವೆ ನೋಡಿ:

ಹುಣಸೆಹಣ್ಣು ಪೋಷಕಾಂಶಗಳ ಆಗರ

ಹುಣಸೆಹಣ್ಣು ಪೋಷಕಾಂಶಗಳ ಆಗರ

ಹುಣಸೆಹಣ್ಣಿನಲ್ಲಿ ಹಲವಾರು ಪೋಷಕಾಂಶಗಳಿವೆ. ಇದರಲ್ಲಿ ವಿಟಮಿನ್ ಬಿ, ವಿಟಮಿನ್ ಸಿ ಮತ್ತು ವಿಟಮಿನ್ ಇ, ಕ್ಯಾಲ್ಸಿಯಂ, ಪೊಟಾಷ್ಯಿಯಂ, ರಂಜಕ, ಕಬ್ಬಿಣದಂಶ, ಮ್ಯಾಂಗನೀಸ್, ನಾರಿನಂಶವಿದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಅಂಶ ಹೊರಗಿನಿಂದ ದೇಹದೊಳಗೆ ಪ್ರವೇಶಿಸುವ ಸೋಂಕಾಣುಗಳನ್ನು ನಾಶಪಡಿಸುತ್ತದೆ.

ಹುಣಸೆಹಣ್ಣನ್ನು ಆಯುರ್ವೇದ ಔಷಧದಲ್ಲೂ ಬಳಸಲಾಗುವುದು

ಹುಣಸೆಹಣ್ಣನ್ನು ಆಯುರ್ವೇದ ಔಷಧದಲ್ಲೂ ಬಳಸಲಾಗುವುದು

ಹುಣಸೆಹಣ್ಣನ್ನು ಆಯುರ್ವೇದಲ್ಲಿ ಔಷಧಿಯಾಗಿ ಬಳಸಲಾಗುತ್ತದೆ. ಇದನ್ನು ತಿನ್ನುವುದರಿಂದ ಅಸಿಡಿಟಿ ಹಾಗೂ ರಕ್ತದೊತ್ತಡ ಸಮಸ್ಯೆ ನಿವಾರಿಸುತ್ತದೆ. ಇನ್ನು ಅಡುಗೆಯಲ್ಲಿ ಬಳಸುವುದರಿಂದ ಕಫ-ವಾತ, ಜೀರ್ಣಕ್ರಿಯೆ ಸಂಬಂಧಿಸಿದ ಸಮಸ್ಯೆ ಹೋಗಲಾಡಿಸುವಲ್ಲಿ ಸಹಕಾರಿಯಾಗಿದೆ. ಇನ್ನು ಮಕ್ಕಳಲ್ಲಿ ಜಂತುಹುಳ ನಿವಾರಣೆಗೆ ಕೂಡ ಇದನ್ನು ಬಳಸಲಾಗುವುದು.

ಬೊಜ್ಜು ಕರಗಿಸುತ್ತದೆ

ಬೊಜ್ಜು ಕರಗಿಸುತ್ತದೆ

ಅಡುಗೆಯಲ್ಲಿ ಹುಣಸೆಹಣ್ಣು ಬಳಸುವುದರಿಂದ ತೂಕ ನಿಯಂತ್ರಣವಾಗುತ್ತದೆ. ಹುಣಸೆಹಣ್ಣಿನಲ್ಲಿರುವ ಹೈಡ್ರೋಸಿಟ್ರಿಕ್ ಆಮ್ಲ ಕೊಬ್ಬನ್ನು ಕರಗಿಸುತ್ತದೆ. ಅಲ್ಲದೆ ಹುಣಸೆಹಣ್ಣು ಆಗಾಗ ತಿನ್ನುವ ಬಯಕೆಗೆ ಕೂಡ ಕಡಿವಾಣ ಹಾಕುತ್ತದೆ, ಆದ್ದರಿಂದ ತೂಕ ನಿಯಂತ್ರಣದಲ್ಲಿ ಇಡುವಲ್ಲಿ ತುಂಬಾನೇ ಸಹಕಾರಿ.

 ಕ್ಯಾನ್ಸರ್ ಕಣಗಳನ್ನು ನಿಯಂತ್ರಿಸುತ್ತದೆ

ಕ್ಯಾನ್ಸರ್ ಕಣಗಳನ್ನು ನಿಯಂತ್ರಿಸುತ್ತದೆ

ಹುಣಸೆಹಣ್ಣು ಕ್ಯಾನ್ಸರ್ ತಡೆಗಟ್ಟುತ್ತದೆ ಎಂಬುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆದರೆ ಇದಕ್ಕೆ ಕ್ಯಾನ್ಸರ್‌ ಕಣಗಳನ್ನು ನಿಯಂತ್ರಿಸುವ ಸಾಮಾರ್ಥ್ಯ ಇದೆ ಎಂದು ಆಯುರ್ವೇದ ಹೇಳುತ್ತದೆ.. ಇದರಲ್ಲಿ ಟಾರ್ಟರಿಕ್ ಆಮ್ಲ ಇದೆ, ಈ ಆಮ್ಲ ಕ್ಯಾನ್ಸರ್‌ ಕಣಗಳ ಬೆಳವಣಿಗೆ ತಡೆಗಟ್ಟುತ್ತದೆ.

ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಿಸುತ್ತದೆ

ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಿಸುತ್ತದೆ

ಮಧುಮೇಹಿಗಳಿಗೂ ಇದೊಂದು ಸೂಪರ್‌ಫುಡ್ ಆಗಿದೆ. ಇದು ಮಧುಮೇಹವನ್ನು ನಿಯಂತ್ರಣದಲ್ಲಿ ಇಡುವಲ್ಲಿ ತುಂಬಾನೇ ಸಹಕಾರಿ. ಅಡುಗೆಯಲ್ಲಿ ಹುಣಸೆಹಣ್ಣು ಸೇರಿಸುವುದರಿಂದ ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿ ಇಡಬಹುದು. ಮಧುಮೇಹಿಗಳು ಹುಣಸೆಹಣ್ಣಿನ ಜ್ಯೂಸ್‌ ಕುಡಿಯುವುದು ಒಳ್ಳೆಯದು.

 ಲಿವರ್‌ನ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು

ಲಿವರ್‌ನ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು

ಹುಣಸೆಹಣ್ಣನ್ನು ಹಾಗೇ ತಿನ್ನುವುದು ಅಥವಾ ಅಡುಗೆಯಲ್ಲಿ ಸೇರಿಸಿ ಬಳಸುವುದು ಲಿವರ್‌ನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ಚಯಾಪಚಯ ಕ್ರಿಯೆಗೆ ತುಂಬಾನೇ ಸಹಕಾರಿ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಹುಣಸೆಹಣ್ಣು ಸೇವನೆಯಿಂದ ಇಲ್ಲವಾಗುವುದು.

ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ

ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ

ರಕ್ತದೊತ್ತಡ ಸಮಸ್ಯೆ ಇನ್ನಿತರ ಆರೋಗ್ಯಸಮಸ್ಯೆಗಳಿಗೆ ನಾಂದಿ. ನೀವು ಹುಣಸೆಹಣ್ಣನ್ನು ದಿನಿತ್ಯದ ಆಹಾರ ಪದಾರ್ಥಗಳಲ್ಲಿ ಬಳಸುವುದರಿಂದ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು ಹಾಗೂ ಇದು ಕೆಂಪು ರಕ್ತಕಣಗಳ ಉತ್ಪತ್ತಿಗೂ ಸಹಕಾರಿ.

ಸೂಚನೆ:

  • ಹುಣಸೆಹಣ್ಣು ಆರೋಗ್ಯಕ್ಕೆ ಒಳ್ಳೆಯದು, ಆದರೆ ಇದನ್ನು ಮಿತಿಯಲ್ಲಿ ಸೇವಿಸಬೇಕು. ಅತಿಯಾಗಿ ತಿಂದ್ರೆ ಬೇಧಿ ಉಂಟಾಗಬಹುದು.
  • ಇನ್ನು ಮುಟ್ಟಿನ ಸಮಯದಲ್ಲಿ ಇದರ ಸೇವನೆಯಿಂದ ರಕ್ತಸ್ರಾವ ಹೆಚ್ಚಾಗುವುದು.
  • ಎದೆ ಹಾಲುಣಿಸುವ ತಾಯಂದಿರು ಹುಣಸೆಹಣ್ಣು ಸೇವಿಸಿದರೆ ಮಗು ವಾಂತಿ ಮಾಡುತ್ತದೆ.
English summary

Tamarind Health Benefits and How to Consume for Weight Loss

If you add Tamarind for foods, the food taste get increase but do you know the health benefits of tamarind, here why tamarind is a super food, have a look.
X
Desktop Bottom Promotion