For Quick Alerts
ALLOW NOTIFICATIONS  
For Daily Alerts

ವೀಡಿಯೋ: ಸೂರ್ಯನಮಸ್ಕಾರದ ಪ್ರತಿಯೊಂದು ಆಸನಗಳ ಪ್ರಯೋಜನಗಳಿವು

|

ಯಾರು ಪ್ರತಿದಿನ ಸೂರ್ಯ ನಮಸ್ಕಾರ ಮಾಡುತ್ತಾರೋ ಅವರಿಗೆ ಅದರಿಂದ ದೊರೆಯುವ ಪ್ರಯೋಜನ ಹತ್ತಾರು. ಲಯಬದ್ಧವಾಗಿ ಉಸಿರನ್ನು ತೆಗೆದು ಬಿಡುತ್ತಾ ಮಾಡುವ ಸೂರ್ಯ ಸಮಸ್ಕಾರದಿಂದ ದೇಹದ ಪ್ರತಿಯೊಂದು ಅಂಗವೂ ಪ್ರಯೋಜನ ಪಡೆಯುತ್ತದೆ.

Sun Salutation

ಸೂರ್ಯ ನಮಸ್ಕಾರದ ಎಲ್ಲ ಹಂತಗಳಲ್ಲಿ ಉಸಿರನ್ನು ನಿಧಾನಕ್ಕೆ ಎಳೆದು ಬಿಡುತ್ತಾ ಮಾಡಬೇಕು. ಸೂರ್ಯ ನಮಸ್ಕಾರ ಮಾಡುವುದರಿಂದ ಹೊಟ್ಟೆಗೆ ಸಂಬಂಧಪಟ್ಟ ರೋಗಗಳು ಗುಣಮುಖವಾಗುತ್ತದೆ, ನಡು ಬಲವಾಗುತ್ತದೆ. ನಪುಂಸಕತೆ ಮರೆಯಾಗುತ್ತದೆ.

ತೊಡೆಗಳು ಮತ್ತು ಕಾಲುಗಳು ದಷ್ಟಪುಷ್ಟವಾಗಿ ಶಕ್ತಿ ಪಡೆದುಕೊಳ್ಳುತ್ತವೆ. ಇನ್ನು ಮಲಬದ್ಧತೆ ಸಮಸ್ಯೆ ಇರುವವರು ಈ ಆಸನ ಮಾಡುವುದರಿಂದ ತುಂಬಾ ಪ್ರಯೋಜನ ಪಡೆಯಬಹುದು. ಎದೆ, ಕೈಕಾಲು, ಮತ್ತು ಕುತ್ತಿಗೆ ಭಾಗವು ಬಲಿಷ್ಠವಾಗುತ್ತದೆ. ದೇಹದ ಎಲ್ಲ ಅಂಗಗಳಿಗೂ ಉಸಿರಾಟದಿಂದ ಪ್ರಾಣವಾಯು ಹರಿಯುತ್ತದೆ.

ಇಲ್ಲಿ ನಾವು ಸೂರ್ಯ ನಮಸ್ಕಾರ ಮಾಡುವ ಭಂಗಿಗಳ ಬಗ್ಗೆ ಹಾಗೂ ಪ್ರತಿಯೊಂದು ಆಸನದ ಪ್ರಯೋಜನದ ಬಗ್ಗೆ ವೀಡಿಯೋ ಸಹಿತ ವಿವರಿಸಿದ್ದೇವೆ ನೋಡಿ.

ನಮಸ್ಕಾರಾಸನ

ನಮಸ್ಕಾರಾಸನ

ಮೊದಲಿಗೆ ಎರಡೂ ಕಾಲು ಜೋಡಿಸಿಕೊಂಡು ಪೂರ್ವಕ್ಕೆ ಮುಖ ಮಾಡಿ ನಿಂತುಕೊಂಡು ಎರಡೂ ಕೈಗಳನ್ನು ನಮಸ್ಕರಿಸುವ ಭಂಗಿಯಲ್ಲಿ ಎದೆಯ ಮುಂಭಾಗದಲ್ಲಿ ಹಿಡಿದುಕೊಂಡು ಸೂರ್ಯದೇವನ್ನು ಸ್ಮರಿಸಿಕೊಳ್ಳಬೇಕು.

ಪ್ರಯೋಜನ: ಮನಸ್ಸಿನ ಏಕಾಗ್ರತೆ ಹೆಚ್ಚುವುದು, ಮನಸ್ಸು ನಿರಾಳವಾಗುವುದು.

2 : ಹಸ್ತ ಉತ್ತಾನಾಸನ

2 : ಹಸ್ತ ಉತ್ತಾನಾಸನ

ಎದೆಯ ಮುಂದಿರುವ ನಮಸ್ಕಾರದ ಭಂಗಿಯ ಕೈಗಳನ್ನು ಸಾವಕಾಶವಾಗಿ ಮೇಲಕ್ಕೇತ್ತುತ್ತ ಮುಂಗೈಗಳನ್ನು ನೋಡುತ್ತಾ ಹಿಂದಕ್ಕೆ ಬಾಗಿಕೊಳ್ಳಬೇಕು. ಸಾಧ್ಯವಾದಷ್ಟು ಬಾಗಿ ಕೆಲವು ಕ್ಷಣಗಳವರೆಗೆ ನಿಂತುಕೊಳ್ಳಬೇಕು. ದೀರ್ಘವಾದ ಉಸಿರೆಳೆದುಕೊಂಡಿರಬೇಕು.

ಪ್ರಯೋಜನ: ಅಸ್ತಮಾ, ಬೆನ್ನು ನೋವು, ಮಾನಸಿಕ ಒತ್ತಡ ಈ ಸಮಸ್ಯೆ ತಡೆಗಟ್ಟುವುದರಲ್ಲಿ ಸಹಕಾರಿ, ಈ ಆಸನ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.

3: ಹಸ್ತಪಾದಾಸನ

3: ಹಸ್ತಪಾದಾಸನ

ಈಗ ಉಸಿರು ಬಿಡುತ್ತ ಸಾವಕಾಶವಾಗಿ ಮುಂದಕ್ಕೆ ಬಾಗಿ ಎರಡು ಕೈಗಳನ್ನು ಬೇರ್ಪಡಿಸಿ ಪಾದಗಳನ್ನು ಮುಟ್ಟಲು ಪ್ರಯತ್ನಿಸಬೇಕು. ಮೊಣಕಾಲು ಮಡಚದೇ ಹಾಗೆ ಮುಟ್ಟಲು ಪ್ರಯತ್ನಿಸಬೇಕು ಸಾಧ್ಯವಾದಷ್ಟು ಬಾಗಬೇಕು. ಎರಡೂ ಅಂಗೈಗಳನ್ನು ನೇರವಾಗಿಯೇ ಇಟ್ಟುಕೊಂಡಿರಬೇಕು. ಮುಖವನ್ನು ಮೊಣಕಾಲಿಗೆ ಮುಟ್ಟಿಸಲು ಪ್ರಯತ್ನಿಸಬೇಕು.

ಪ್ರಯೋಜನ: ನಿದ್ರಾಹೀನತೆ, ಸಂಧಿವಾತ ಈ ಸಮಸ್ಯೆ ಹೋಗಲಾಡಿಸುವಲ್ಲಿ ಸಹಕಾರಿ. ಈ ಆಸನ ಕೂಡ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಮಂಡಿಗಳನ್ನು ಬಲ

 4 : ಅಶ್ವ ಸಂಚಲನಾಸನ

4 : ಅಶ್ವ ಸಂಚಲನಾಸನ

ಕ್ರಮೇಣ ಎರಡೂ ಹಸ್ತಗಳನ್ನು ನೆಲಕ್ಕೆ ತಾಗಿಸಿ ಎಡಗಾಲನ್ನು ಎರಡೂ ಕಾಲಿನ ಮಧ್ಯದಲ್ಲಿ ಇಟ್ಟು ಬಲಗಾಲನ್ನು ಹಿಂದಕ್ಕೆ ಚಾಚಬೇಕು. ಹಾಗೆಯೇ ಮುಖವನ್ನು ಮೇಲಕ್ಕೆತ್ತಿ ಸಾಧ್ಯವಾದಷ್ಟು ಹಿಂದಕ್ಕೆ ನೋಡಲು ಪ್ರಯತ್ನಿಸಬೇಕು. ಈ ಸಂದರ್ಭದಲ್ಲಿ ಬಲಗಾಲನ ಮೊಣಕಾಲನ್ನು ನೆಲಕ್ಕೆ ತಾಗಿಸಬೇಕು ಸ್ವಲ್ಪಮಟ್ಟಿಗೆ. ಅಂಗಾಲನ್ನು ಬೆರಳಿನ ಆಸರೆಯಲ್ಲಿ ಇರಿಸಬೇಕು.

ಪ್ರಯೋಜನ: ಇದು ದೇಹಕ್ಕೆ ಶಕ್ತಿಯನ್ನು ತುಬುತ್ತದೆ, ಇದು ಮೂಳೆಯ ಹಾಗೂ ಶ್ವಾಸಕೋಶದ ಆರೋಗ್ಯವನ್ನು ಹೆಚ್ಚು ಮಾಡುತ್ತದೆ. ಜೀರ್ಣಕ್ರಿಯೆಗೆ ಒಳ್ಳೆಯದು, ಕಿಡ್ನಿ, ಲಿವರ್ ಆರೋಗ್ಯ ವೃದ್ಧಿಸುತ್ತದೆ.

5: ದಂಡಾಸನ

5: ದಂಡಾಸನ

ದ್ವಿಪಾದ ಪ್ರಸರಣಾಸನ ಅಥವಾ ಎರಡೂ ಕೈಗಳ ಮಧ್ಯದಲ್ಲಿದ್ದ ಎಡಗಾಲನ್ನು ಹಿಂದಿದ್ದ ಬಲಗಾಲಿಗೆ ಸರಿಸಮನಾಗಿ ಜೋಡಿಸಿ ಕಾಲುಗಳು ನೆಲಕ್ಕೆ ತಾಗದಂತೆ ಬೆರಳಿನ ಮೇಲೆಯೇ ದೇಹವನ್ನು ನಿಯಂತ್ರಿಸಿಕೊಳ್ಳುತ್ತಿರಬೇಕು.

ಪ್ರೋಜನಗಳು: ಇದು ಕಿಬ್ಬೊಟ್ಟೆಯನ್ನು ಬಲಪಡಿಸುತ್ತದೆ, ಕೈಗಳಿಗೆ, ಭುಜಕ್ಕೆ ಶಕ್ತಿಯನ್ನು ತುಂಬುತ್ತದೆ.

6. ಅಷ್ಟಾಂಗ ನಮಸ್ಕಾರ

6. ಅಷ್ಟಾಂಗ ನಮಸ್ಕಾರ

ಅಷ್ಟಾಂಗ ನಮಸ್ಕಾರ ಮಾಡುವಾಗ ಎದೆ, ಗಲ್ಲ, ಮಂಡಿ ಮ್ಯಾಟ್‌ಗೆ ತಾಗಬೇಕು, ಹೊಟ್ಟೆ ತಾಗಬಾರದು.

ಪ್ರಯೋಜನಗಳು: ಈ ಆಸನ ಕಿಬ್ಬೊಟ್ಟೆಯನ್ನು ಬಲ ಪಡಿಸುತ್ತದೆ, ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ನಡೆಯುವಂತೆ ಮಾಡುತ್ತದೆ, ಮುಟ್ಟಿನ ಸಮಯದ ನೋವು ಕಡಿಮೆ ಮಾಡುತ್ತದೆ. ಅಸ್ತಮಾ ರೋಗಿಗಳು ಈ ಆಸನ ಮಾಡುವುದರಿಂದ ಪ್ರಯೋಜನ ಪಡೆಯಬಹುದು.

ಅಲ್ಸರ್, ಬೆನ್ನು ನೋವು, ಹೈಪರ್‌ಥೈರಾಯ್ಡ್ ಇರುವವರು ಈ ಆಸನ ಮಾಡುವ ಮುನ್ನ ವೈದ್ಯರ ಸಲಹೆ ಪಡೆಯಿರಿ.

8.ಅಧೋಮುಖ ಶ್ವಾನಾಸನ

8.ಅಧೋಮುಖ ಶ್ವಾನಾಸನ

ಇದನ್ನು ನಾಯಿಭಂಗಿ ಎಂದು ಕರೆಯುತ್ತಾರೆ ಕಾಳುಗಳು ಹಾಗೂ ಕೈಗಳನ್ನು ಮ್ಯಾಟ್‌ ಮೇಲೆ ಊರಿ, ಹಿಂಭಾಗವನ್ನು ಮೇಲಕ್ಕೆ ಎತ್ತುವ ಭಂಗಿ ಇದಾಗಿದೆ.

ಪ್ರಯೋಜನಗಳು: ಇದರಿಂದ ಹಲವಾರು ಪ್ರಯೋಜನಗಳಿವೆ. ರಕ್ತ ಸಂಚಾರ ಉತ್ತಮವಾಗಿ ನಡೆಯುವುದು, ಮಾನಸಿಕ ಒತ್ತಡ ಕಡಿಮೆಯಾಗುವುದು. ಇನ್ನು ಮೆನೋಪಾಸ್ ಹಂತದ ಸಮಸ್ಯೆಗಳು ಹೀಗಲಾಡಿಸಲು ಇದು ತುಂಬಾ ಸಹಕಾರಿ. ಬೆನ್ನುನೋವು, ತಲೆನೋವು ಕಡಿಮೆ ಮಾಡುತ್ತದೆ.

9. ಅಶ್ವಸಂಚಲನ ಆಸನ

9. ಅಶ್ವಸಂಚಲನ ಆಸನ

ಅಧೋಮುಖ ಶ್ವಾನಾಸನದಿಂದ ಅಶ್ವ ಸಂಚಲನ ಪೋಸ್‌ಗೆ ಬರಬೇಕು. ಇದರಲ್ಲಿ ಒಂದು ಕಾಲನ್ನು ಮುಂದಕ್ಕೆ ಇಡಬೇಕು, ಮತ್ತೊಂದು ಕಾಲು ಹಿಂದೆಕ್ಕೆ ಇಡಬೇಕು, ಮಂಡಿ ಮ್ಯಾಟ್‌ಗೆ ಊರದಿದ್ದರೆ ಒಳ್ಳೆಯದು, ಓಡುವಾಗ ನಿಲ್ಲುವ ರೀತಿಯ ಪೋಸ್ ಇದಾಗಿದೆ.

ಅಶ್ವ ಸಂಚಲನ ಆಸನ ಮಾಡುವಾಗ ಮೊದಲು ಬಲಗಾಲು ಮುಂದೆಕ್ಕೆ ಇಟ್ಟಿದ್ದರೆ ಈ ಬಾರಿ ಮಾಡುವಾಗ ಎಡಗಾಲು ಮುಂದೆಕ್ಕೆ ಇಡಿ.

10. ಪಾದ ಹಸ್ತಾಸನ

10. ಪಾದ ಹಸ್ತಾಸನ

ಈಗ ಅಶ್ವ ಸಂಚಲನ ಆಸನದಿಂದ ಪಾದ ಹಸ್ತಾಸನಕ್ಕೆ ಬನ್ನಿ. ಇದರ ಪ್ರಯೋಜನಗಳ ಬಗ್ಗೆ ಮೂರನೇ ಹಂತದಲ್ಲಿಯೇ ಹೇಳಲಾಗಿದೆ.

11. ಉತ್ತಾನಾಸನ

11. ಉತ್ತಾನಾಸನ

ಇದು ನೀವು ಎರಡನೇ ಸ್ಟೆಪ್‌ ಮಾಡಿದಂತೆ ಮಾಡುವುದು

 12. ನಮಸ್ಕಾರ

12. ನಮಸ್ಕಾರ

ಕೊನೆಯದಾಗಿ ಎರಡು ಕೈಗಳನ್ನು ಜೋಡಿಸಿ ನಮಸ್ಕಾರ ಮಾಡಿ.

ಈ ಆಸನಗಳನ್ನು ಪ್ರಾರಂಭದಲ್ಲಿ 6 ಬಾರಿ ಮಾಡಿ, ನಿಧಾನಕ್ಕೆ 12 ಹೀಗೆ ಅಧಿಕ ಮಾಡುತ್ತಾ ಹೋಗಬಹುದು. ಇನ್ನು ನೀವು ಈ ಆಸನ ಅಭ್ಯಾಸ ಮಾಡಿದ ಮಾಡುತ್ತಿದ್ದಂತೆ ದೇಹವನ್ನು ಸಮತೋಲನ ಮಾಡುವ ಸಾಮಾರ್ಥ್ಯ ಹೆಚ್ಚಾಗುವುದು. ಆಗ ಪ್ರತಿಯೊಂದು ಆಸನದಲ್ಲಿ 10 ಸೆಕೆಂಡ್ ನಿಲ್ಲಬಹುದು.

ದಿನಾ ಸೂರ್ಯ ನಮಸ್ಕಾರ ಮಾಡಿ, ಫಿಟ್ ಅಂಡ್‌ ಹೆಲ್ತಿ ಆಗಿರಿ.

English summary

Surya Namaskar (Sun Salutation) Benefits, How to Do

Here are Surya Namaskar asana and each asana benefits read on,
X
Desktop Bottom Promotion