For Quick Alerts
ALLOW NOTIFICATIONS  
For Daily Alerts

ಮಹಿಳೆಯರೇ, ಈ ಲಸಿಕೆ ಪಡೆದರೆ ಗರ್ಭಕಂಠ ಕ್ಯಾನ್ಸರ್‌ ತಡೆಗಟ್ಟಬಹುದು

|

ಸರ್ವಿಕಲ್ ಕ್ಯಾನ್ಸರ್ ಅಥವಾ ಗರ್ಭಕಂಠದ ಮಹಿಳೆಯರನ್ನು ಕಾಡುವ ಭಯಾನಕ ಕಾಯಿಲೆಗಳಲ್ಲಿ ಒಂದಾಗಿದೆ. ಈ ಕ್ಯಾನ್ಸರ್‌ಗೆ ಅನೇಕ ಮಹಿಳೆಯರು ಬಲಿಯಾಗಿದ್ದಾರೆ. ಭಾರತದ ಹೆಚ್ಚಿನ ಮಹಿಳೆಯರು ತಮ್ಮ ಆರೋಗ್ಯದ ಕಡೆ ಗಮನ ನೀಡುವುದಿಲ್ಲ, ನಿಯಮಿತ ಪರೀಕ್ಷೆ ಮಾಡಿಸುವುದಿಲ್ಲ, ಈ ಕಾರಣದಿಂದಾಗಿ ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆಯೂ ಹೆಚ್ಚುತ್ತಿದೆ.

ಗರ್ಭಕಂಠದ ಕ್ಯಾನ್ಸರ್ ಅಷ್ಟೇ ಪ್ರಾರಂಭದಲ್ಲಿ ಎಚ್ಚೆತ್ತುಕೊಂಡರೆ ಈ ಕಾಯಿಲೆಯಿಂದ ಬೇಗನೆ ಚೇತರಿಸಿಕೊಳ್ಳಬಹುದು ಹಾಗೂ ಇದನ್ನು ಬಾರದಂತೆ ತಡೆಗಟ್ಟಲು ಕೂಡ ವಿಧಾನವಿದೆ. ಹೌದು ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಲಸಿಕೆ ಭಾರತದಲ್ಲಿ ಲಭ್ಯವಿದೆ. ಅದನ್ನು ತೆಗೆದುಕೊಳ್ಳುವುದರಿಮದ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಬಹುದಾಗಿದೆ.

ಗರ್ಭಕಂಠದ ಕ್ಯಾನ್ಸರ್ ಹಾಗೂ ಅದನ್ನು ತಡೆಗಟ್ಟುವ ಲಸಿಕೆ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ:

ಗರ್ಭಕಂಠದ ಕ್ಯಾನ್ಸರ್ ಬರಲು ಕಾರಣವೇನು?

ಗರ್ಭಕಂಠದ ಕ್ಯಾನ್ಸರ್ ಬರಲು ಕಾರಣವೇನು?

ಗರ್ಭಕಂಠದ ಕ್ಯಾನ್ಸರ್ ಪ್ಯಾಪಿಲೋಮವೈರಸ್(papillomavirus)ನಿಂದ ಉಂಟಾಗುವುದು. ಇದು ಲೈಂಗಿಕ ಸೋಂಕಿನಿಂದಾಗಿ ಉಂಟಾಗುವುದು. ಗುಪ್ತಾಂಗದ ನೈರ್ಮಲ್ಯದ ಕಡೆ ಹೆಚ್ಚು ಗಮನ ನೀಡದೇ ಇದ್ದರೆ ಈ ಕ್ಯಾನ್ಸರ್ ಅಪಾಯ ಹೆಚ್ಚು. ಯಾರು ಗುಪ್ತಾಂಗದ ಶುಚಿತ್ವ ಕಡೆಗೆ ಹೆಚ್ಚು ಗಮನ ನೀಡುತ್ತಾರೋ ಅವರಿಗೆ ಈ ಗರ್ಭಕಂಠದ ಅಪಾಯ ಕಡಿಮೆ. ಗರ್ಭಕಂಠದ ಕ್ಯಾನ್ಸರ್ ನಗರ ಪ್ರದೇಶದ ಮಹಿಳೆಯರಿಗಿಂತ ಹಳ್ಳಿಗಳಲ್ಲಿರುವ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

 ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವುದು ಹೇಗೆ?

ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವುದು ಹೇಗೆ?

ಗರ್ಭಕಂಠದ ಕ್ಯಾನ್ಸರ್ ಅನ್ನು HPV ಲಸಿಕೆ ಮೂಲಕ ತಡೆಗಟ್ಟಬಹುದು. ಈ ಲಸಿಕೆಯನ್ನು ಪಡೆಯುವುದರಿಂದ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಬಹುದು. ಲೈಂಗಿಕಕ್ರಿಯೆ ಸಕ್ರೀಯವಾಗಿರುವವರಲ್ಲಿ ಈ ಸೋಂಕು ಹೆಚ್ಚಾಗಿ ಕಂಡು ಬರುವುದು. ಕೆಲವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ ಅವರಿಗೆ ಲೈಂಗಿಕ ಸೋಂಕು ಉಂಟಾಗುವುದಿಲ್ಲ. ಆದರೆ ಕೆಲವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ, ಆಗ ಈ ರೀತಿ ಗರ್ಭಕಂಠದ ಕ್ಯಾನ್ಸರ್ ಉಂಟಾಗುವ ಅಪಾಯ ಇದೆ. ಆದರೆ HPV ಲಸಿಕೆ ಪಡೆದುಕೊಂಡರೆ ಶೇ. 95ರಷ್ಟು ಲೈಂಗಿಕ ಸೋಂಕು ತಡೆಗಟ್ಟಬಹುದು.

ಯಾರು HPV ಲಸಿಕೆ ಪಡೆಯಬಹುದು?

ಯಾರು HPV ಲಸಿಕೆ ಪಡೆಯಬಹುದು?

ಹದಿಹರೆಯ ಪ್ರಾಯದ ಹೆಣ್ಣು ಮಕ್ಕಳಿಗೆ ಈ ಲಸಿಕೆ ನೀಡಲಾಗುವುದು, ಅವರು ಲೈಂಗಿಕವಾಗಿ ಸಕ್ರಿಯವಾಗುವ ಮುನ್ನ ಅಂದರೆ 12 ಅಥವಾ 12ನೇ ವಯಸ್ಸಿನಲ್ಲಿ ಈ ಲಸಿಕೆ ಪಡೆಯುವುದರಿಂದ ಗರ್ಭಕಂಠದ ಅಪಾಯವನ್ನು ಶೇ. 70ರಷ್ಟು ತಪ್ಪಿಸಬಹುದು. ಆದರೆ ಈ ಲಸಿಕೆ ಪಡೆದ ಗರ್ಭಕಂಠದ ಕ್ಯಾನ್ಸರ್ ಅಪಾಯ ಇಲ್ಲವೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಮಹಿಳೆಯರು ಲೈಂಗಿಕವಾಗಿ ಸಕ್ರೀಯವಾದಾಗ ಅಂದರೆ ಮದುವೆ ಬಳಿಕ ನಿಯಮಿತ ತಪಾಸಣೆ ಮಾಡಿಸುವುದು ಒಳ್ಳೆಯದು.

11-26 ವಯಸ್ಸಿನ ಹೆಣ್ಣು ಮಕ್ಕಳು ಈ ಲಸಿಕೆ ಪಡೆಯಬಹುದು. ಯುಎಸ್‌ನಲ್ಲಿ 45 ವರ್ಷದವರೆಗೂ ಈ ಲಸಿಕೆ ನೀಡಲಾಗುವುದು. ಮಹಿಳೆಯರು ಈ ಲಸಿಕೆ ಪಡೆಯುವುದರಿಂದ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಬಹುದು.

ಯಾರು ಮದುವೆಗೆ ಮೊದಲು ಈ ಲಸಿಕೆ ಪಡೆಯುತ್ತಾರೋ ಅವರಲ್ಲಿ ಲೈಂಗಿಕ ಸೋಂಕು ವಿರುದ್ಧ ಹೋರಾಡುವ ಪ್ರತಿರೋಧಕ ಶಕ್ತಿ ಅಧಿಕವಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

English summary

Study Confirms HPV Vaccine Prevents Cervical Cancer in Women

Study confirms HPV vaccine prevents cervical cancer in Women, read on...
X
Desktop Bottom Promotion