Just In
- 1 hr ago
Today Rashi Bhavishya: ಮಂಗಳವಾರದ ದಿನ ಭವಿಷ್ಯ: ವೃಷಭ, ವೃಶ್ಚಿಕ, ಮಕರ ರಾಶಿಯವರಿಗೆ ಆರ್ಥಿಕವಾಗಿ ಶುಭ ದಿನವಲ್ಲ
- 17 hrs ago
ಯೋಧರ ಚಿತಾಭಸ್ಮ ಸಂಗ್ರಹಿಸಲು ಬರೋಬ್ಬರಿ 1.2 ಲಕ್ಷ ಕಿ.ಮೀ ದೂರ ಕ್ರಮಿಸಿದ ಬೆಂಗಳೂರಿನ ವ್ಯಕ್ತಿ, ದೇಶ ಸೇವೆ ಅಂದರೆ ಇದಲ್ವೇ?
- 21 hrs ago
ಲೈಂಗಿಕತೆಯು ನೀರಸವಾಗುತ್ತಿದೆ ಎಂದು ನಿಮ್ಮ ಪತಿಗೆ ನೀವು ಹೇಗೆ ಹೇಳುತ್ತೀರಿ? ಇಲ್ಲಿದೆ ಕೆಲವು ಟಿಪ್ಸ್!
- 1 day ago
Today Rashi Bhavishya: ಸೋಮವಾರದ ದಿನ ಭವಿಷ್ಯ: ತುಲಾ, ಮಕರ, ಕುಂಭ ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿ ಇರಲಿ
Don't Miss
- News
ಜನಮನಗೆದ್ದ ಕುದ್ರೋಳಿ ಕ್ಷೇತ್ರದಲ್ಲಿ ಮೂಡಿದ ಧಾನ್ಯದ ತಿರಂಗ
- Movies
ತಂದೆ ಹುಟ್ಟುಹಬ್ಬದ ಹಿನ್ನೆಲೆ ಕಣ್ಣಿನ ಆಸ್ಪತ್ರೆ 50 ಲಕ್ಷ ರೂ. ನೀಡಿದ ಪ್ರಶಾಂತ್ ನೀಲ್
- Sports
ಏಷ್ಯಾ ಕಪ್ 2022: ವಿರಾಟ್ ಕೊಹ್ಲಿ ಫಾರ್ಮ್ಗೆ ಮರಳಲು ಇದನ್ನು ಮಾಡಬೇಕಿದೆ ಎಂದ ಸೌರವ್ ಗಂಗೂಲಿ
- Automobiles
ಅತ್ಯಾಧುನಿಕ ಸೌಲಭ್ಯವುಳ್ಳ ಐದು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿದ ಮಹೀಂದ್ರಾ
- Finance
Best Under A Billion: ಫೋರ್ಬ್ಸ್ ಪಟ್ಟಿಯಲ್ಲಿ ಭಾರತಕ್ಕೆ 4ನೇ ಸ್ಥಾನ
- Technology
ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಲ್ಯಾಂಗ್ವೇಜ್ ಸೆಟ್ಟಿಂಗ್ಸ್ ಬದಲಾಯಿಸುವುದು ಹೇಗೆ?
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
ಈ ರೀತಿ ಕಂಡು ಬಂದರೆ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ ಎನ್ನುವ ಸೂಚನೆಗಳಾಗಿವೆ
2019ರ ಕೊನೆಯಲ್ಲಿ ಶುರುವಾದ ಕೊರೊನಾ ಕಾಟ 2022 ಅರ್ಧ ವರ್ಷ ಕಳೆದರೂ ಇನ್ನೂ ಮುಗಿದಿಲ್ಲ, ಅದರ ಜೊತೆಗೆ ಈಗ ಮಂಕಿಪಾಕ್ಸ್ ಕೂಡ ವಿಶ್ವವನ್ನು ಕಾಡುತ್ತಿದೆ. ಮಳೆಗಾಲ, ಈ ಸಮಯದಲ್ಲಿ ಡೆಂಗ್ಯೂ, ಮಲೇರಿಯಾ ಈ ರೀತಿಯ ಕಾಯಿಲೆ ಕೂಡ ಹೆಚ್ಚಾಗುವುದು, ಈ ಎಲ್ಲಾ ಸಮಸ್ಯೆಗಳು ಯಾರಿಗೆ ಹೆಚ್ಚು ಅಪಾಯಕಾರಿ ಗೊತ್ತಾ? ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ.
ಹೌದು ರೋಗ ನಿರೋಧಕ ಶಕ್ತಿ ಕಡಿಮೆಯಿದ್ದರೆ ಬೇಗನೆ ಕಾಯಿಲೆಗಳು ಬರುತ್ತವೆ ಅಥವಾ ವೈರಸ್ಗಳು ತಗುಲಿದರೆ ಗಂಭೀರವಾಗುವ ಸಾಧ್ಯತೆ ಹೆಚ್ಚು. ನಮ್ಮ ದೇಹದಲ್ಲಿ ರೋಗ ನಿರೋಧಕ ಕಡಿಮೆ ಇದೆಯೇ ಎಂದು ತಿಳಿಯುವುದು ಹೇಗೆ. ಈ ಸಮಸ್ಯೆಗಳು ಪದೇ ಪದೇ ಕಾಡುತ್ತಿದ್ದರೆ ರೋಗ ನಿರೋಧಕ ಶಕ್ತಿ ಕಡಿಮೆಯಿದೆ ಎಂಬುವುದರ ಸೂಚನೆಯಾಗಿದೆ, ಹೀಗಿದ್ದರೆ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಡೆ ಗಮನ ನೀಡಬೇಕಾಗಿದೆ.
ನೀವು ಗಮನಿಸಬೇಕಾದ ಎಚ್ಚರಿಕೆಯ ಸೂಚನೆಗಳಿವು:

ಅತ್ಯಧಿಕ ಒತ್ತಡ
ನಿಮ್ಮ ದೇಹದಲ್ಲಿ lymphocytes ಕಡಿಮೆಯಾದಾಗ ಅತ್ಯಧಿಕ ಮಾನಸಿಕ ಒತ್ತಡ ಉಂಟಾಗುತ್ತದೆ. ಇದರಿಂದಾಗಿ ದೇಹದಲ್ಲಿ ಬಿಳಿ ರಕ್ತ ಕಣಗಳು ಕಡಿಮೆಯಾಗುವುದು. ಯಾವಾಗ ರಕ್ತದಲ್ಲಿ ಬಿಳಿ ರಕ್ತಕಣಗಳು ಕಡಿಮೆಯಾದಾಗ ಯಾವುದಾದರೂ ವೈರಸ್ ದೇಹವನ್ನು ಪ್ರವೇಶಿಸಿದಾಗ ಅದರ ವಿರುದ್ಧ ಹೋರಾಡುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ದೇಹ ದುರ್ಬಲವಾಗುವುದು. ಆದ್ದರಿಂದ ಮಾನಸಿಕ ಒತ್ತಡದ ಕಡೆ ಗಮನ ನೀಡಿ, ಮಾನಸಿಕ ಒತ್ತಡ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು.

ಆಗಾಗ ಶೀತ, ಕೆಮ್ಮು, ಜ್ವರ ಈ ರೀತಿಯ ಸಮಸ್ಯೆ ಕಾಡುವುದು
ಅಪರೂಪಕ್ಕೆ ಶೀತ, ಕೆಮ್ಮು ಬರುವುದು ಸಹಜ. ಆದರೆ ಆಗಾಗ ಈ ರೀತಿಯ ಸಮಸ್ಯೆ ಕಾಡುತ್ತಿದ್ದರೆ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ತುಂಬಾನೇ ಕಡಿಮೆ ಇದೆ ಎಂದರ್ಥ.

ಆಗಾಗ ಹೊಟ್ಟೆ ಸಮಸ್ಯೆ ಕಾಡುವುದು
ಬೇಧಿ, ಗ್ಯಾಸ್ಟ್ರಿಕ್, ಮಲಬದ್ಧತೆ, ಹೊಟ್ಟೆ ನೋವು ಈ ರೀತಿಯ ಸಮಸ್ಯೆ ಆಗಾಗ ಕಾಡುತ್ತಿದ್ದರೆ ರೋಗ ನಿರೋಧಕ ಶಕ್ತಿ ಕಡಿಮೆ ಇದೆ ಎಂದರ್ಥ. ಇದರಿಂದಾಗಿ ವೈರಲ್ ಸೋಂಕಿನ ಸಮಸ್ಯೆ ಹೆಚ್ಚಾಗುವುದು.

ಗಾಯ ಒಣಗಲು ತುಂಬಾ ಸಮಯ ತೆಗೆದುಕೊಂಡರೆ
ಏನಾದರೂ ಗಾಯವಾದರೆ ಅದು ಒಣಗಲು ತುಂಬಾ ಸಮಯ ತೆಗೆದುಕೊಂಡರೆ ರೋಗ ನಿರೋಧಕ ಶಕ್ತಿ ಕಡಿಮೆ ಇದೆ ಎಂದರ್ಥ. ಆಗ ಗಾಯ ಒಣಗದೆ ಚಿಕ್ಕ ಗಾಯ ದೊಡ್ಡದಾಗಿ ಇನ್ನಿತರ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು.

ತುಂಬಾ ಸುಸ್ತು, ಆಗಾಗ ತಲೆಸುತ್ತು ಬರುವುದು
ನಿಮಗೆ ತುಂಬಾ ಸುಸ್ತು, ತಲೆ ಸುತ್ತು ಬರುವುದು ಈ ರೀತಿಯ ಸಮಸ್ಯೆ ಕಾಡುತ್ತಿದ್ದರೆ ರೋಗ ನಿರೋಧಕ ಶಕ್ತಿ ಕುಂದಿದ್ದರೆ ಆ ರೀತಿಯೆಲ್ಲಾ ಆಗುವುದು.
ಆದ್ದರಿಂದ ಇದರಲ್ಲಿ ಯಾವುದೇ ಲಕ್ಷಣಗಳು ಕಂಡು ಬಂದಿದ್ದರೂ ನಿರ್ಲಕ್ಷ್ಯ ಮಾಡದೆ ವೈದ್ಯರಿಗೆ ತೋರಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ.