For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಲು ಊಟ ಬಿಡುವ ಹವ್ಯಾಸ ನಿಮಗಿದ್ಯಾ? ಹಾಗಾದರೆ ಖಂಡಿತವಾಗ್ಲೂ ಈ ರೋಗಗಳಿಗೆ ನೀವು ತುತ್ತಾಗುತ್ತೀರಿ!

|

ಊಟ ಮಾಡುವುದು ಮನುಷ್ಯನ ಜೀವನದ ಪ್ರಮುಖ ಅಂಗವಾಗಿದೆ. ಅದರಲ್ಲೂ ಊಟದಿಂದ ನಮ್ಮ ದೇಹ ಸಧೃಡ ಸಾಮರ್ಥ್ಯ ಆರೋಗ್ಯದಿಂದ ಬೆಳೆಯುತ್ತದೆ ಎಂದು ಈ ಹಿಂದಿನಿಂದಲೂ ಹೇಳುವುದುಂಟು. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕರು ಊಟ ಸೇವನೆಗೆ ಬ್ರೇಕ್ ಹಾಕಿದ್ದಾರೆ. ಹೌದು, ಊಟ ಬಿಡುವುದರಿಂದ ತೂಕ ನಷ್ಟವಾಗುತ್ತದೆ ಈ ಮೂಲಕ ಫಿಟ್ ಅಂಡ ಫೈನ್ ಆಗಿ ಕಾಣಿಸಿಕೊಳ್ಳಬಹುದು ಎಂದು ನಂಬಿದ್ದಾರೆ. ಆದರೆ ನಿಜಕ್ಕೂ ಈ ರೀತಿಯ ಕೆಲಸ ಮಾಡುತ್ತಿದ್ದರೆ ಇದು ತಪ್ಪು.

Side effects of skipping dinner for weight loss in kannada

ಊಟ ಬಿಟ್ಟರೆ ನೀವು ಫಿಟ್ ಆಗುವುದಿಲ್ಲ. ಅಥವಾ ತೂಕ ಇಳಿಯುವುದಿಲ್ಲ. ಊಟ ಬಿಟ್ಟರೆ ಪೋಷಕಾಂಶಗಳನ್ನು ಕಳೆದುಕೊಳ್ಳುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ. ಹೀಗಾಗಿ ಊಟ ಬಿಡುವುದು ಉತ್ತಮ ಆಯ್ಕೆಯಲ್ಲ. ಊಟ ಬಿಡುವುದು ಹಾನಿಕಾರಕ ಮಾತ್ರವಲ್ಲದೇ ಹಲವು ಅಡ್ಡಪರಿಣಾಮಗಳು ಉಂಟಾಗುತ್ತದೆ. ಹಾಗಾದರೆ ಊಟ ಬಿಡುವುದರಿಂದ ನಿಮ್ಮ ಆರೋಗ್ಯದ ಮೇಲಾಗುವ ಪರಿಣಾಮಗಳೇನು? ಊಟ ಬಿಟ್ಟರೆ ಏನಾಗುತ್ತದೆ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಆಹಾರ ಬಿಡಬೇಡಿ ಲೈಟ್ ಆದರೂ ಮಾಡಿ!

ಆಹಾರ ಬಿಡಬೇಡಿ ಲೈಟ್ ಆದರೂ ಮಾಡಿ!

ನಮ್ಮಲ್ಲಿ ಪುರುಷರಿಗಿಂತ ಮಹಿಳೆಯರೇ ಜಾಸ್ತಿ ಊಟ ಬಿಟ್ಟು ಡಯಟ್ ಮಾಡುವುಂಟು. ಹೀಗಾಗಿ ನೀವು ಯಾವುದಾದರೂ ವಿಷಯವನ್ನು ಓದಿ ಅಥವಾ ಕೇಳಿ ಏಕಾಏಕಿ ಊಟ ಬಿಡಲು ಹೋಗಬೇಡಿ. ಯಾಕೆಂದರೆ ಊಟ ನಿಮ್ಮ ದೈನಂದಿನ ಆಹಾರದ ಅತ್ಯಗತ್ಯ ಭಾಗವಾಗಿದೆ ಏಕೆಂದರೆ ದೇಹವು ಅಗತ್ಯವಿರುವ ಪೋಷಕಾಂಶಗಳು ಮತ್ತು ಕ್ಯಾಲೊರಿಗಳನ್ನು ಊಟದಿಂದ ಪಡೆಯುತ್ತದೆ. ಯಾವಾಗದರೂ ಕೆಲವೊಂದು ಬಾರಿ ಊಟ ಬಿಡುವುದರಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ ನಿತ್ಯವೂ ಊಟ ಬಿಟ್ಟು ಡಯಟ್ ಮಾಡುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ ಕೊಂಚವಾದರೂ ಊಟವನ್ನು ಅಂದರೆ ಲೈಟ್ ಆಗಿ ಊಟ ಮಾಡಲೇಬೇಕು. ಒಂದು ಅಧ್ಯಯನದ ಪ್ರಕಾರ ಭಾರೀ ಉಪಹಾರ ಮತ್ತು ಲಘು ಭೋಜನವು ನಿಮ್ಮನ್ನು ಫಿಟ್ ಮತ್ತು ಫೈನ್ ಆಗಿರಲು ಸಹಾಯ ಮಾಡುತ್ತದೆ. ಇದು ಬೊಜ್ಜು ಮತ್ತು ಅಧಿಕ ರಕ್ತದ ಸಕ್ಕರೆಯನ್ನು ತಡೆಯುತ್ತದೆ ಎಂದು ಹೇಳಿದೆ.

ಊಟ ಬಿಟ್ಟರೆ ಏನಾಗುತ್ತದೆ?

ಊಟ ಬಿಟ್ಟರೆ ಏನಾಗುತ್ತದೆ?

ಊಟ ಬಿಟ್ಟರೆ ಹಲವು ಆರೋಗ್ಯ ಸಮಸ್ಯೆಗಳು ಮನುಷ್ಯನಿಗೆ ಕಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಲೈಟ್ ಊಟವಾದರೂ ಮಾಡಲೇಬೇಕು ಎಂದು ಸಲಹೆ ನೀಡಿರುವ ವೈದ್ಯರು, ರಾಜನಂತೆ ಬೆಳಗಿನ ಉಪಾಹಾರ ಮತ್ತು ಬಡವನಂತೆ ರಾತ್ರಿಯ ಊಟವನ್ನು ಮಾಡು ಎಂಬ ಮಾತಿನಂತೆ ನಿಮ್ಮ ಆಹಾರ ಪದ್ದತಿ ಇರಬೇಕು ಎಂದಿದ್ದಾರೆ. ಊಟ ಅಂದರೆ ಸುಮ್ಮನೆ ಮಾಡುವುದಲ್ಲ, ಅಗತ್ಯವಿರುವ ಪೌಷ್ಟಿಕಾಂಶವನ್ನು ಹೊಂದಿರುವ ಸರಿಯಾದ ಆಹಾರವನ್ನು ಮಾಡುವುದು ಮುಖ್ಯವಾಗಿದೆ ಎಂದು ವೈದ್ಯರುಗಳು ತಿಳಿಸಿದ್ದಾರೆ. ಇನ್ನು ತೂಕ ಇಳಿಸಲು ಕ್ಯಾಲೋರಿ ಬಗ್ಗೆ ಗಮನವಹಿಸಬೇಕಾಗುತ್ತೆ. ಹೀಗಾಗಿ ಜನರು ಕ್ಯಾಲೋರಿ ಊಟದಲ್ಲಿ ಜಾಸ್ತಿ ಇದೆ ಎಂದು ಊಟವನ್ನೇ ಬಿಟ್ಟು ಬಿಡುತ್ತಾರೆ. ಇಂತಹ ಪ್ರಮಾದ ಎಸೆಯಬೇಡಿ. ಯಾಕೆಂದರೆ ಊಟವನ್ನು ಬಿಟ್ಟುಬಿಡುವುದು, ವಿಶೇಷವಾಗಿ ರಾತ್ರಿಯ ಊಟವನ್ನು ಬಿಡುವುದು ನಿಮ್ಮ ಆರೋಗ್ಯದ ಮೇಲೆ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಬಹುದು. ಹಾಗಾದರೆ ಊಟ ಬಿಟ್ಟರೆ ಯಾವ ಸಮಸ್ಯೆಗಳು ಕಾಡುತ್ತದೆ? ಇಲ್ಲಿದೆ ಲಿಸ್ಟ್.

ಶಕ್ತಿಯ ಮಟ್ಟ ಕುಂದುತ್ತದೆ!

ಶಕ್ತಿಯ ಮಟ್ಟ ಕುಂದುತ್ತದೆ!

ಊಟ ತಿಂದರೆ ನಮ್ಮಲ್ಲಿ ಶಕ್ತಿ, ಸಾಮರ್ಥ್ಯ ಇರುತ್ತದೆ. ಕೆಲಸಗಳನ್ನು ಮಾಡಬಹುದು. ಊಟ ತಿನ್ನದಿದ್ದರೆ ಶಕ್ತಿ ಇಲ್ಲದಂತೆ ಆಗುತ್ತದೆ ಅಥವಾ ಶಕ್ತಿ ಕುಂಡುತ್ತದೆ. ಇದು ಕಾಮನ್ ಸೆನ್ಸ್ ಆಗಿದೆ. ಹೌದು, ಕ್ಯಾಲೋರಿ ಎಂದರೆ ನಮ್ಮ ದೇಹಕ್ಕೆ ಶಕ್ತಿ ಕೊಡುವ ಒಂದು ರೀತಿಯ ಇಂಧನ ಇದ್ದಂತೆ. ಈ ಇಂಧನ ಇಲ್ಲದಿದ್ದರೆ ನಮ್ಮ ದೇಹ ಎಂಬ ಯಂತ್ರ ಓಡೋದಿಲ್ಲ. ಕ್ಯಾಲೋರಿಯನ್ನು ನಾವು ಊಟದಿಂದ ಪಡೆಯುತ್ತೇವೆ. ಹೀಗಾಗಿ ಊಟ ಮಾಡದಿದ್ದರೆ ಕ್ಯಾಲೋರಿ ಸಿಗೋದಿಲ್ಲ. ಸಮತೋಲನದ ಕ್ಯಾಲೋರಿ ಇಲ್ಲದಿದ್ದರೆ ನಮ್ಮ ದೇಹದಲ್ಲಿ ಶಕ್ತಿ, ಸಾಮಾರ್ಥ್ಯ ಇರುವುದಿಲ್ಲ.

ನಿಮ್ಮ ದೇಹದ ಹಸಿವಿನ ಸೂಚನೆಗಳ ಮೇಲೆ ಪರಿಣಾಮ!

ನಿಮ್ಮ ದೇಹದ ಹಸಿವಿನ ಸೂಚನೆಗಳ ಮೇಲೆ ಪರಿಣಾಮ!

ನೀವು ಊಟ ಮಾಡದೆ ಇರುವುದರಿಂದ ನಿಮ್ಮ ದೇಹದಲ್ಲಿ ಉಂಟಾಗುವ ಹಸಿವಿನ ಸೂಚನೆಗಳ ಮೇಲೆ ಪರಿಣಾಮ ಬೀರಲಿದೆ. ನಮ್ಮ ದೇಹದಲ್ಲಿರುವ ಲೆಪ್ಟಿನ್ ಹಾರ್ಮೋನ್ ನಿಮ್ಮ ಹೊಟ್ಟೆ ತುಂಬಿದೆ ಎನ್ನುವ ಸೂಚನೆಯನ್ನು ನೀಡುತ್ತದೆ. ಊಟ ಬೇಡ ಹೊಟ್ಟೆ ತುಂಬಿದೆ ಎಂದು ಹೇಳುತ್ತದೆ. ಇನ್ನು ನಿಮ್ಮ ದೇಹದಲ್ಲಿರುವ ಗ್ರೆಲಿನ್ ಹಾರ್ಮೋನ್ ನಿಮಗೆ ಹಸಿವಾಗುತ್ತಿದೆ ಎಂದು ನಿಮಗೆ ತಿಳಿಸುತ್ತದೆ. ಒಂದು ವೇಳೆ ನೀವು ಊಟವನ್ನು ಬಿಟ್ಟರೆ ಈ ಹಾರ್ಮೋನ್ ಗಳು ಸರಿಯಾಗಿ ಕಾರ್ಯನಿರ್ವಹಿಸೋದಿಲ್ಲ. ಉದಾಹರಣೆಗೆ ಅದು ಹಸಿವಾಗಿದೆ ಎಂದು ಸೂಚನೆ ಕೊಟ್ಟು ನೋವು ಊಟ ಮಾಡದೆ ಇದ್ದರೆ ಅದರ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುತ್ತದೆ. ಮುಂದಿನ ದಿನಗಳಲ್ಲಿ ನಿಮಗೆ ಹಸಿವು ಆದ ಹಾಗೇ ಅನುಭವವೇ ಬರದೆ ಇರಬಹುದು. ಅಲ್ಲದೇ ಹೊಟ್ಟೆ ತುಂಬಿದ ಹಾಗೇ ಅನಿಸದೇ ಇರಬಹುದು. ಹೀಗಾಗಿ ಊಟ ಮಿಸ್ ಮಾಡಿಕೊಳ್ಳುವುದು ಸಮಸ್ಯೆಯನ್ನು ಸೃಷ್ಟಿಸುತ್ತದೆ.

ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳ ಮೇಲೆ ಪರಿಣಾಮ ಬೀರುತ್ತದೆ!

ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳ ಮೇಲೆ ಪರಿಣಾಮ ಬೀರುತ್ತದೆ!

ನಿಮಗೆ ಹಸಿವಿದ್ದರೂ ನೀವು ಊಟ ಮಾಡುವುದಿಲ್ಲ. ಇದರಿಂದ ನಿಮ್ಮ ದೇಹದಲ್ಲಿ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ಗಳ ಕೊರತೆ ಉಂಟಾಗುತ್ತದೆ. ಇವುಗಳ ಅಸಮತೋಲನ ನಿಮ್ಮ ದೇಹದಲ್ಲಿ ಸಮಸ್ಯೆ ಉಂಟು ಮಾಡುತ್ತದೆ. ಊಟ ಮಾಡದಾಗ ನಮ್ಮ ದೇಹವು ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ಗಳನ್ನು ಕೇಳುತ್ತದೆ. ಆದರೆ ಊಟ ಮಾಡದೆ ಇರುವುದರಿಂದ ದೇಹಕ್ಕೆ ಕಾರ್ಬ್ ಮತ್ತು ಸಕ್ಕರೆ ಸಿಗುವುದಿಲ್ಲ. ಊಟದಿಂದ ನಮಗೆ ನಿಯಮಿತವಾಗಿ ಕಾರ್ಬೋಹೈಡ್ರೇಟ್ ಗಳು, ಸಕ್ಕರೆ ಅಂಶ ಸಿಗುವುದರಿಂದ ದೇಹವು ಆರೋಗ್ಯವಾಗಿರುತ್ತದೆ.

ಜೀರ್ಣಕ್ರಿಯೆಯಲ್ಲಿ ಸಮಸ್ಯೆ!

ಜೀರ್ಣಕ್ರಿಯೆಯಲ್ಲಿ ಸಮಸ್ಯೆ!

ರಾತ್ರಿಯ ಊಟವನ್ನು ಬಿಟ್ಟುಬಿಡುವುದರಿಂದ ನಿಮ್ಮ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ದೇಹಕ್ಕೆ ಊಟ ಸಿಗದೆ ಇರುವುದರಿಂದ ವಾಕರಿಕೆ, ಅತಿಸಾರ ಅಥವಾ ಮಲಬದ್ಧತೆ ಉಂಟಾಗಬಹುದಾಗಿದೆ. ಊಟ ಮಾಡಿ ಡೈಜೇಷನ್ ಆಗುವುದು ಅದೊಂದು ಪ್ರಕ್ರಿಯೆ ಆಗಿದೆ. ಆದರೆ ಈ ಪ್ರಕ್ರಿಯೆ ನಡೆಯದೆ ಇದ್ದಾಗ ಜಡತ್ವ ಉಂಟಾಗುತ್ತದೆ. ಕೆಲಸವು ಮತ್ತೆ ನಡೆಯಲು ಸಮಸ್ಯೆ ಆಗಬಹುದು.

ಈಟಿಂಗ್ ಡಿಸಾರ್ಡರ್!

ಈಟಿಂಗ್ ಡಿಸಾರ್ಡರ್!

ಊಟವನ್ನು ಬಿಟ್ಟುಬಿಡುವ ಜನರಿಗೆ ಈಟಿಂಗ್ ಡಿಸಾರ್ಡರ್ ಗಳು ಕಾಡಬಹುದು. ಅನೋರೆಕ್ಸಿಯಾ, ಬುಲಿಮಿಯಾ, ಅಥವಾ ಆರ್ಥೋರೆಕ್ಸಿಯಾ ಮುಂತಾದ ಅಸ್ವಸ್ಥತೆಗಳನ್ನು ಹೊಂದುವ ಅಪಾಯವು ಊಟ ಬಿ‍ಡುವ ಜನರಲ್ಲಿ ಹೆಚ್ಚಬಹುದು. ಅಂದರೆ ಊಟ ಸಿಗದೆ ನ್ಯೂನ್ಯತೆಗಳು ಸಂಭವಿಸಬಹುದು.

ನಿದ್ದೆಯ ಮೇಲೆ ಪರಿಣಾಮ!

ನಿದ್ದೆಯ ಮೇಲೆ ಪರಿಣಾಮ!

ಉತ್ತಮವಾದ ರಾತ್ರಿ ಊಟ ಮಾಡಿದರೆ ಉತ್ತಮವಾದ ನಿದ್ದೆ ಬರುತ್ತದೆ ಎನ್ನುವ ಮಾತಿದೆ. ಆದರೆ ನೀವು ರಾತ್ರಿ ಊಟ ಟ್ಟರೆ ನಿಬಿಮ್ಮ ನಿದ್ರೆಯ ಚಕ್ರದ ಮೇಲೆ ಪರಿಣಾಮ ಬೀರಬಹುದು ಮತ್ತು ನೀವು ನಿದ್ರಾಹೀನರಾಗಬಹುದು. ನಿದ್ರಾಹೀನತೆಯು ಮ್ಮ ನಿರೋಗನಿರೋಧಕ ಶಕ್ತಿ, ಮನಸ್ಥಿತಿ, ಶಕ್ತಿ ಮತ್ತು ಚಯಾಪಚಯ ಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು.

ಆತಂಕದ ಅನುಭವ!

ಆತಂಕದ ಅನುಭವ!

ನಮ್ಮ ಹೊಟ್ಟೆ ಖಾಲಿ ಇದ್ದರೆ ಅಥವಾ ಹಸಿವು ಇದ್ದರೆ ನಮಗೆ ಸಾಮಾನ್ಯವಾಗಿ ಕೋಪ ಬರುವುದು, ಒತ್ತಡ ಇರುವ ಹಾಗೇ ಅನಿಸುತ್ತದೆ. ಹೌದು, ಇದು ನಿಜ ಕೂಡ. ರಾತ್ರಿ ಹೊತ್ತಿನ ಊಟ ಬಿಡುವ ವ್ಯಕ್ತಿಗಳು ರಾತ್ರಿಗೆ ಜಂಕ್ ಫುಡ್ ಗಳ ಮೊರೆ ಹೋಗಬಹುದು. ನಿತ್ಯವೂ ಜಂಕ್ ಫುಡ್ ಸೇವನೆಯಿಂದ ದೇಹದಲ್ಲಿ ಕಾರ್ಟಿಸೋಲ್ (ಒತ್ತಡದ ಹಾರ್ಮೋನ್) ಮಟ್ಟ ಹೆಚ್ಚುತ್ತದೆ. ಇದು ಮಾನಸಿಕ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

Read more about: dinner weight ತೂಕ ರೋಗ
English summary

Side effects of skipping dinner for weight loss in kannada

Here we are discussing about Side effects of skipping dinner for weight loss in kannada. Read more.
X
Desktop Bottom Promotion