Just In
- 45 min ago
Today Rashi Bhavishya: ಮಂಗಳವಾರದ ದಿನ ಭವಿಷ್ಯ: ವೃಷಭ, ವೃಶ್ಚಿಕ, ಮಕರ ರಾಶಿಯವರಿಗೆ ಆರ್ಥಿಕವಾಗಿ ಶುಭ ದಿನವಲ್ಲ
- 16 hrs ago
ಯೋಧರ ಚಿತಾಭಸ್ಮ ಸಂಗ್ರಹಿಸಲು ಬರೋಬ್ಬರಿ 1.2 ಲಕ್ಷ ಕಿ.ಮೀ ದೂರ ಕ್ರಮಿಸಿದ ಬೆಂಗಳೂರಿನ ವ್ಯಕ್ತಿ, ದೇಶ ಸೇವೆ ಅಂದರೆ ಇದಲ್ವೇ?
- 20 hrs ago
ಲೈಂಗಿಕತೆಯು ನೀರಸವಾಗುತ್ತಿದೆ ಎಂದು ನಿಮ್ಮ ಪತಿಗೆ ನೀವು ಹೇಗೆ ಹೇಳುತ್ತೀರಿ? ಇಲ್ಲಿದೆ ಕೆಲವು ಟಿಪ್ಸ್!
- 24 hrs ago
Today Rashi Bhavishya: ಸೋಮವಾರದ ದಿನ ಭವಿಷ್ಯ: ತುಲಾ, ಮಕರ, ಕುಂಭ ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿ ಇರಲಿ
Don't Miss
- News
ಜನಮನಗೆದ್ದ ಕುದ್ರೋಳಿ ಕ್ಷೇತ್ರದಲ್ಲಿ ಮೂಡಿದ ಧಾನ್ಯದ ತಿರಂಗ
- Movies
ತಂದೆ ಹುಟ್ಟುಹಬ್ಬದ ಹಿನ್ನೆಲೆ ಕಣ್ಣಿನ ಆಸ್ಪತ್ರೆ 50 ಲಕ್ಷ ರೂ. ನೀಡಿದ ಪ್ರಶಾಂತ್ ನೀಲ್
- Sports
ಏಷ್ಯಾ ಕಪ್ 2022: ವಿರಾಟ್ ಕೊಹ್ಲಿ ಫಾರ್ಮ್ಗೆ ಮರಳಲು ಇದನ್ನು ಮಾಡಬೇಕಿದೆ ಎಂದ ಸೌರವ್ ಗಂಗೂಲಿ
- Automobiles
ಅತ್ಯಾಧುನಿಕ ಸೌಲಭ್ಯವುಳ್ಳ ಐದು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿದ ಮಹೀಂದ್ರಾ
- Finance
Best Under A Billion: ಫೋರ್ಬ್ಸ್ ಪಟ್ಟಿಯಲ್ಲಿ ಭಾರತಕ್ಕೆ 4ನೇ ಸ್ಥಾನ
- Technology
ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಲ್ಯಾಂಗ್ವೇಜ್ ಸೆಟ್ಟಿಂಗ್ಸ್ ಬದಲಾಯಿಸುವುದು ಹೇಗೆ?
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
ಜುಲೈ 1 ರಿಂದ ಪ್ಲಾಸ್ಟಿಕ್ ನಿಷೇಧ: ಪ್ಲಾಸ್ಟಿಕ್ಗೆ ಪರ್ಯಾಯವೇನು?
ಮಾರ್ಕೆಟ್ಗೆ ಹೋಗಿ ಏನಾದರೂ ತರಬೇಕು, ಕ್ಯಾರಿಯರ್ ಬ್ಯಾಗ್ ಹಿಡಿದುಕೊಂಡು ಹೋಗುವುದೇಕೆ? ಅವರೇ ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಹಾಕಿಕೊಂಡು ಬಂದರೆ ಆಯ್ತು ಎಂಬ ಧೋರಣೆ ಅನೇಕರಲ್ಲಿರುತ್ತೆ. ಇನ್ನು ನಾವು ದಿನ ನಿತ್ಯ ಬಳಸುವ ಹಾಲಿನಿಂದ ಹಿಡಿದು ಎಷ್ಟೋ ಆಹಾರ ಸಾಮಗ್ರಿಗಳು ಬರುವುದು ಪ್ಲಾಸ್ಟಿಕ್ ಕವರ್ನಲ್ಲಿ.
ಪ್ರತಿನಿತ್ಯ ಜೀವನದಲ್ಲಿ ತುಂಬಾನೇ ಪ್ಲಾಸ್ಟಿಕ್ ಕವರ್ ಬಳಸುತ್ತೇವೆ, ಅಲ್ಲದೆ ಅವುಗಳನ್ನು ಮರುಬಳಕೆ ಮಾಡುವುದೂ ಇಲ್ಲ ನೇರವಾಗಿ ಕಸದ ಬುಟ್ಟಿಗೆ ಹಾಕಿ ಬಿಡುತ್ತೇವೆ, ಪ್ರತಿಯೊಂದು ಮನೆಯಿಂದಲೂ ಪರಿಸರ ಮಾಲಿನ್ಯಕ್ಕೆ ದಿನನಿತ್ಯದ ಕೊಡುಗೆ ಇದ್ದೇ ಇದೆ. ಆದರೆ ಜುಲೈ 1ರಿಂದ ಇದಕ್ಕೆ ಸ್ವಲ್ಪ ಮಟ್ಟಿಗೆ ಕಡಿವಾಣ ಬೀಳಲಿದೆ. ಹೌದು ಒಂದು ಬಾರಿ ಬಳಸುವ ಪ್ಲಾಸ್ಟಿಕ್ಗೆ ನಿಷೇಧ ವಿಧಿಸಲಾಗಿದೆ.

ನಮ್ಮ ದಿನನಿತ್ಯದ ಜೀವನದಲ್ಲಿ ಒಂದು ಬಾರಿ ಬಳಸುವ ಪ್ಲಾಸ್ಟಿಕ್ ವಸ್ತುಗಳೆಂದರೆ:
* ಆಹಾರ ಪೊಟ್ಟಣಗಳು: ಸ್ನ್ಯಾಕ್ಸ್, ಟೀ ಪೌಡರ್, ಕಾಫಿ ಪೌಡರ್, ಚೀಸ್, ಮೀಟ್, ಯೋಗರ್ಟ್ ಮುಂತಾದವುಗಳು ಪ್ಲಾಸ್ಟಿಕ್ ಪೊಟ್ಟಣದಲ್ಲಿ ಬರುತ್ತದೆ.
* ಹಾಲು ಕವರ್ಗಳು
* ಮೆಟಲ್ ಕ್ಯಾನ್ ಒಳಗಡೆ ಪ್ಲಾಸ್ಟಿಕ್ ಕೋಟ್ ಇರುತ್ತೆ
* ಸೌಂದರ್ಯವರ್ಧಕಗಳ ಬಾಟಲಿಗಳು: ಕ್ರೀಮ್, ಶ್ಯಾಂಪೂ, ಕಂಡೀಷನರ್ ಮುಂತಾದವುಗಳು
* ಸಿಂಥೆಟಿಕ್ ಫ್ಯಾಬ್ರಿಕ್ಸ್: ಪಾಲಿಸ್ಟಾರ್, ನೈಲಾನ್, ರೇಯಾನ್, ಫ್ಯಾಬ್ರಿಕ್ ಇವುಗಳ ತಯಾರಿಯಲ್ಲಿ ಪ್ಲಾಸ್ಟಿಕ್ ಬಳಸಲಾಗುತ್ತದೆ.
* ಬೇಬಿ ವೈಪ್ಸ್, ಡಯಾಪರ್
* ಸ್ಯಾನಿಟರಿ ಪ್ಯಾಡ್ಗಳು
* ಟೇಪ್, ಗ್ಲಿಟರ್, ಸ್ಟಿಕ್ಕರ್ಸ್
* ಚಾಕೋಲೆಟ್ ಕವರ್ಗಳು
* ಸಿಗರೇಟ್ ಪ್ಯಾಕ್ಗಳು
* ಅಂಟುಗಳು ಇದರಲ್ಲಿ polypropelyne ಮತ್ತಿತರ ಪ್ಲಾಸ್ಟಿಕ್ ಬಳಸಲಾಗುವುದು
* ಕಾಫಿ ಕಪ್ಸ್

ಪ್ಲಾಸ್ಟಿಕ್ ಬದಲಿಗೆ ಬಳಸಬಹುದಾದ ವಸ್ತುಗಳು
* ಸ್ಟೈನ್ಲೆಸ್ ಸ್ಟೀಲ್
* ಗ್ಲಾಸ್
* ಪ್ಲಾಟಿನಂ ಸಿಲಿಕೋನ್
* ಬೀವ್ಯಾಕ್ಸ್ ಕೋಟೆಡ್ ಕ್ಲೋಥ್
* ನೈಸರ್ಗಿಕವಾದ ಫೈಬರ್ ಬಟ್ಟೆಗಳು
* ಮರ-ಬಿದಿರಿನ ತಟ್ಟೆ, ಪೈಪ್ಸ್, ಸ್ಟ್ರಾ ಮುಂತಾದವುಗಳು
* ಮಣ್ಣಿನ ಪಾತ್ರೆಗಳು
* ಪೇಪರ್ ಪೊಟ್ಟಣಗಳು
* ಕಾರ್ಡ್ಬೋರ್ಡ್

ಪ್ಲಾಸ್ಟಿಕ್ಗೆ ಪರ್ಯಾಯವೇನು?
ಬಯೋಪ್ಲಾಸ್ಟಿಕ್ ಬಳಕೆ ಒಳ್ಳೆಯದು
ಬಯೋಪ್ಲಾಸ್ಟಿಕ್ ಅಂದ್ರೆ ಗೊಬ್ಬರವಾಗಿಸಬಹುದಾದ ಪ್ಲಾಸ್ಟಿಕ್ ಅಂದರೆ ಮಣ್ಣಿನಲ್ಲಿ ಸುಲಭವಾಗಿ ಕರಗುವ ಪ್ಲಾಸ್ಟಿಕ್. ಇದನ್ನು ನೈಸರ್ಗಿಕ ವಸ್ತುಗಳನ್ನು ಬಳಸಿ ತಯಾರಿಸಲಾಗುವುದು. ಮಣ್ಣಿಗೆ ಹಾನಿಕಾರವಾದ ಪ್ಲಾಸ್ಟಿಕ್ ಬದಲಿಗೆ ಇದು ಅತ್ಯುತ್ತಮವಾದ ಆಯ್ಕೆಯಾಗಿದೆ.

ಪ್ಲಾಸ್ಟಿಕ್ ಏಕೆ ಬಳಸಬಾರದು?
* ಪ್ಲಾಸ್ಟಿಕ್ ಭೂಮಿಯನ್ನು ಸೇರಿದರೆ ಎಷ್ಟು ವರ್ಷಗಳಾದರೂ ಹಾಗೇ ಇರುತ್ತದೆ.
* ಬಯೋಡಿಗ್ರೇಡಬಲ್ ಪ್ಲಾಸ್ಟಿಕ್ ಬಳಸುವಾಗಲೂ ಅದರ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಆಗಬೇಕು. ಏಕೆಂದರೆ ಇದು ಮನೆಯಲ್ಲಿ ತರಕಾರಿ ಮತ್ತಿತರ ವಸ್ತುಗಳನ್ನು ಎಸೆದಾಗ ಉಂಟಾಗುವ ಗೊಬ್ಬರದಂತೆ ಕರಗುವುದಿಲ್ಲ.

ಆಹಾರ ವಸ್ತುಗಳ ಪ್ಯಾಕೇಜ್ಗೆ ಪರ್ಯಾಯವೇನು?
* ಅಣಬೆ: ಅಣಬೆ ಬೆಳೆಯುವಾಗ ತರಕಾರಿಗಳ ವೇಸ್ಟ್ ಹಾಗೂ mycelium (ಅಣಬೆಯ ಬೇರು) ಒಂದು ಪದರವಾಗಿರುತ್ತದೆ, ಇದನ್ನು ಒಣಗಿಸಿದರೆ ಅಣಬೆ ಪ್ಯಾಕ್ ಮಾಡಲು ಬಳಸಬಹುದು.
ಬೀಜಗಳು: ಮಣ್ಣಿನಲ್ಲಿ ಕರಗುವ ಕವರ್ಗಳನ್ನು ಬಳಸಿ
ಬಾಳೆ ಎಲೆಗಳು: ಇನ್ನು ಅಂಗಡಿಯಲ್ಲಿ ಆಹಾರ ಕಟ್ಟಿ ಕೊಡಲು ಪ್ಲಾಸ್ಟಿಕ್ ಬದಲಿಗೆ ಬಾಳೆ ಎಲೆ ಬಳಸುವುದು ಬೆಸ್ಟ್. ಸ್ವಾದ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಪ್ಲಾಸ್ಟಿಕ್ನಲ್ಲಿ ಹಾಕಿದ ಆಹಾರ ಆರೋಗ್ಯಕರವಲ್ಲ.
ನಿಧಾನಕ್ಕೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುತ್ತಾ ಬನ್ನಿ:
ನಾವು ಈಗ ಪ್ಲಾಸ್ಟಿಕ್ ಬಳಕೆ ಮಾಡದಿದ್ದರೆ ಅದು ಭವಿಷ್ಯದಲ್ಲಿ ನಮ್ಮ ಭೂಮಿಗೆ, ನಮ್ಮ ಮಕ್ಕಳಿಗೆ ನೀಡುವ ಕೊಡುಗೆಯಾಗಿದೆ.
* ಪ್ಲಾಸ್ಟಿಕ್ ಬ್ಯಾಗ್ಗಳ ಬಳಕೆ ಬದಲಿಗೆ ಕಾಟನ್ ಬ್ಯಾಗ್ಗಳನ್ನು ಬಳಸಿ
* ಪ್ಯಾಕೇಜ್ ಅಡಿಕೆಯ ಹಾಳೆ, ಬಾಳೆ ಎಲೆ ಮುಂತಾದವುಗಳನ್ನು ಬಳಸಿ.
* ಗಾಜಿನ ಹಾಗೂ ಸ್ಟೀಲ್, ಮಣ್ಣಿನ ಪಾತ್ರೆಗಳನ್ನು ಬಳಸಿ
* ಪ್ಲಾಸ್ಟಿಕ್ ಸ್ಪೂನ್ ಬದಲಿಗೆ ಮರು ಬಳಕೆ ಮಾಡುವ ಸ್ಪೂನ್ಗಳನ್ನು ಬಳಸಿ.
ಹೀಗೆ ಒಂದೊದೇ ಪ್ಲಾಸ್ಟಿಕ್ ವಸ್ತುಗಳನ್ನು ತ್ಯಜಿಸುತ್ತಾ ಬಂದರೆ ಪ್ಲಾಸ್ಟಿಕ್ ಮುಕ್ತ ಬದುಕು ನಡೆಸಬಹುದು.