For Quick Alerts
ALLOW NOTIFICATIONS  
For Daily Alerts

ಜುಲೈ 1 ರಿಂದ ಪ್ಲಾಸ್ಟಿಕ್‌ ನಿಷೇಧ: ಪ್ಲಾಸ್ಟಿಕ್‌ಗೆ ಪರ್ಯಾಯವೇನು?

|

ಮಾರ್ಕೆಟ್‌ಗೆ ಹೋಗಿ ಏನಾದರೂ ತರಬೇಕು, ಕ್ಯಾರಿಯರ್‌ ಬ್ಯಾಗ್‌ ಹಿಡಿದುಕೊಂಡು ಹೋಗುವುದೇಕೆ? ಅವರೇ ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ಹಾಕಿಕೊಂಡು ಬಂದರೆ ಆಯ್ತು ಎಂಬ ಧೋರಣೆ ಅನೇಕರಲ್ಲಿರುತ್ತೆ. ಇನ್ನು ನಾವು ದಿನ ನಿತ್ಯ ಬಳಸುವ ಹಾಲಿನಿಂದ ಹಿಡಿದು ಎಷ್ಟೋ ಆಹಾರ ಸಾಮಗ್ರಿಗಳು ಬರುವುದು ಪ್ಲಾಸ್ಟಿಕ್‌ ಕವರ್‌ನಲ್ಲಿ.

Plastic ban from July 1

ಪ್ರತಿನಿತ್ಯ ಜೀವನದಲ್ಲಿ ತುಂಬಾನೇ ಪ್ಲಾಸ್ಟಿಕ್‌ ಕವರ್ ಬಳಸುತ್ತೇವೆ, ಅಲ್ಲದೆ ಅವುಗಳನ್ನು ಮರುಬಳಕೆ ಮಾಡುವುದೂ ಇಲ್ಲ ನೇರವಾಗಿ ಕಸದ ಬುಟ್ಟಿಗೆ ಹಾಕಿ ಬಿಡುತ್ತೇವೆ, ಪ್ರತಿಯೊಂದು ಮನೆಯಿಂದಲೂ ಪರಿಸರ ಮಾಲಿನ್ಯಕ್ಕೆ ದಿನನಿತ್ಯದ ಕೊಡುಗೆ ಇದ್ದೇ ಇದೆ. ಆದರೆ ಜುಲೈ 1ರಿಂದ ಇದಕ್ಕೆ ಸ್ವಲ್ಪ ಮಟ್ಟಿಗೆ ಕಡಿವಾಣ ಬೀಳಲಿದೆ. ಹೌದು ಒಂದು ಬಾರಿ ಬಳಸುವ ಪ್ಲಾಸ್ಟಿಕ್‌ಗೆ ನಿಷೇಧ ವಿಧಿಸಲಾಗಿದೆ.

 ನಮ್ಮ ದಿನನಿತ್ಯದ ಜೀವನದಲ್ಲಿ ಒಂದು ಬಾರಿ ಬಳಸುವ ಪ್ಲಾಸ್ಟಿಕ್‌ ವಸ್ತುಗಳೆಂದರೆ:

ನಮ್ಮ ದಿನನಿತ್ಯದ ಜೀವನದಲ್ಲಿ ಒಂದು ಬಾರಿ ಬಳಸುವ ಪ್ಲಾಸ್ಟಿಕ್‌ ವಸ್ತುಗಳೆಂದರೆ:

* ಆಹಾರ ಪೊಟ್ಟಣಗಳು: ಸ್ನ್ಯಾಕ್ಸ್, ಟೀ ಪೌಡರ್, ಕಾಫಿ ಪೌಡರ್, ಚೀಸ್‌, ಮೀಟ್, ಯೋಗರ್ಟ್ ಮುಂತಾದವುಗಳು ಪ್ಲಾಸ್ಟಿಕ್‌ ಪೊಟ್ಟಣದಲ್ಲಿ ಬರುತ್ತದೆ.

* ಹಾಲು ಕವರ್‌ಗಳು

* ಮೆಟಲ್‌ ಕ್ಯಾನ್ ಒಳಗಡೆ ಪ್ಲಾಸ್ಟಿಕ್ ಕೋಟ್ ಇರುತ್ತೆ

* ಸೌಂದರ್ಯವರ್ಧಕಗಳ ಬಾಟಲಿಗಳು: ಕ್ರೀಮ್, ಶ್ಯಾಂಪೂ, ಕಂಡೀಷನರ್ ಮುಂತಾದವುಗಳು

* ಸಿಂಥೆಟಿಕ್‌ ಫ್ಯಾಬ್ರಿಕ್ಸ್: ಪಾಲಿಸ್ಟಾರ್, ನೈಲಾನ್‌, ರೇಯಾನ್‌, ಫ್ಯಾಬ್ರಿಕ್‌ ಇವುಗಳ ತಯಾರಿಯಲ್ಲಿ ಪ್ಲಾಸ್ಟಿಕ್ ಬಳಸಲಾಗುತ್ತದೆ.

* ಬೇಬಿ ವೈಪ್ಸ್, ಡಯಾಪರ್‌

* ಸ್ಯಾನಿಟರಿ ಪ್ಯಾಡ್ಗಳು

* ಟೇಪ್‌, ಗ್ಲಿಟರ್, ಸ್ಟಿಕ್ಕರ್ಸ್

* ಚಾಕೋಲೆಟ್ ಕವರ್‌ಗಳು

* ಸಿಗರೇಟ್‌ ಪ್ಯಾಕ್‌ಗಳು

* ಅಂಟುಗಳು ಇದರಲ್ಲಿ polypropelyne ಮತ್ತಿತರ ಪ್ಲಾಸ್ಟಿಕ್ ಬಳಸಲಾಗುವುದು

* ಕಾಫಿ ಕಪ್ಸ್

ಪ್ಲಾಸ್ಟಿಕ್‌ ಬದಲಿಗೆ ಬಳಸಬಹುದಾದ ವಸ್ತುಗಳು

ಪ್ಲಾಸ್ಟಿಕ್‌ ಬದಲಿಗೆ ಬಳಸಬಹುದಾದ ವಸ್ತುಗಳು

* ಸ್ಟೈನ್‌ಲೆಸ್‌ ಸ್ಟೀಲ್‌

* ಗ್ಲಾಸ್

* ಪ್ಲಾಟಿನಂ ಸಿಲಿಕೋನ್

* ಬೀವ್ಯಾಕ್ಸ್‌ ಕೋಟೆಡ್ ಕ್ಲೋಥ್‌

* ನೈಸರ್ಗಿಕವಾದ ಫೈಬರ್‌ ಬಟ್ಟೆಗಳು

* ಮರ-ಬಿದಿರಿನ ತಟ್ಟೆ, ಪೈಪ್ಸ್, ಸ್ಟ್ರಾ ಮುಂತಾದವುಗಳು

* ಮಣ್ಣಿನ ಪಾತ್ರೆಗಳು

* ಪೇಪರ್ ಪೊಟ್ಟಣಗಳು

* ಕಾರ್ಡ್‌ಬೋರ್ಡ್

ಪ್ಲಾಸ್ಟಿಕ್‌ಗೆ ಪರ್ಯಾಯವೇನು?

ಪ್ಲಾಸ್ಟಿಕ್‌ಗೆ ಪರ್ಯಾಯವೇನು?

ಬಯೋಪ್ಲಾಸ್ಟಿಕ್‌ ಬಳಕೆ ಒಳ್ಳೆಯದು

ಬಯೋಪ್ಲಾಸ್ಟಿಕ್‌ ಅಂದ್ರೆ ಗೊಬ್ಬರವಾಗಿಸಬಹುದಾದ ಪ್ಲಾಸ್ಟಿಕ್‌ ಅಂದರೆ ಮಣ್ಣಿನಲ್ಲಿ ಸುಲಭವಾಗಿ ಕರಗುವ ಪ್ಲಾಸ್ಟಿಕ್‌. ಇದನ್ನು ನೈಸರ್ಗಿಕ ವಸ್ತುಗಳನ್ನು ಬಳಸಿ ತಯಾರಿಸಲಾಗುವುದು. ಮಣ್ಣಿಗೆ ಹಾನಿಕಾರವಾದ ಪ್ಲಾಸ್ಟಿಕ್ ಬದಲಿಗೆ ಇದು ಅತ್ಯುತ್ತಮವಾದ ಆಯ್ಕೆಯಾಗಿದೆ.

ಪ್ಲಾಸ್ಟಿಕ್‌ ಏಕೆ ಬಳಸಬಾರದು?

ಪ್ಲಾಸ್ಟಿಕ್‌ ಏಕೆ ಬಳಸಬಾರದು?

* ಪ್ಲಾಸ್ಟಿಕ್ ಭೂಮಿಯನ್ನು ಸೇರಿದರೆ ಎಷ್ಟು ವರ್ಷಗಳಾದರೂ ಹಾಗೇ ಇರುತ್ತದೆ.

* ಬಯೋಡಿಗ್ರೇಡಬಲ್ ಪ್ಲಾಸ್ಟಿಕ್‌ ಬಳಸುವಾಗಲೂ ಅದರ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಆಗಬೇಕು. ಏಕೆಂದರೆ ಇದು ಮನೆಯಲ್ಲಿ ತರಕಾರಿ ಮತ್ತಿತರ ವಸ್ತುಗಳನ್ನು ಎಸೆದಾಗ ಉಂಟಾಗುವ ಗೊಬ್ಬರದಂತೆ ಕರಗುವುದಿಲ್ಲ.

 ಆಹಾರ ವಸ್ತುಗಳ ಪ್ಯಾಕೇಜ್‌ಗೆ ಪರ್ಯಾಯವೇನು?

ಆಹಾರ ವಸ್ತುಗಳ ಪ್ಯಾಕೇಜ್‌ಗೆ ಪರ್ಯಾಯವೇನು?

* ಅಣಬೆ: ಅಣಬೆ ಬೆಳೆಯುವಾಗ ತರಕಾರಿಗಳ ವೇಸ್ಟ್ ಹಾಗೂ mycelium (ಅಣಬೆಯ ಬೇರು) ಒಂದು ಪದರವಾಗಿರುತ್ತದೆ, ಇದನ್ನು ಒಣಗಿಸಿದರೆ ಅಣಬೆ ಪ್ಯಾಕ್‌ ಮಾಡಲು ಬಳಸಬಹುದು.

ಬೀಜಗಳು: ಮಣ್ಣಿನಲ್ಲಿ ಕರಗುವ ಕವರ್‌ಗಳನ್ನು ಬಳಸಿ

ಬಾಳೆ ಎಲೆಗಳು: ಇನ್ನು ಅಂಗಡಿಯಲ್ಲಿ ಆಹಾರ ಕಟ್ಟಿ ಕೊಡಲು ಪ್ಲಾಸ್ಟಿಕ್‌ ಬದಲಿಗೆ ಬಾಳೆ ಎಲೆ ಬಳಸುವುದು ಬೆಸ್ಟ್. ಸ್ವಾದ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಪ್ಲಾಸ್ಟಿಕ್‌ನಲ್ಲಿ ಹಾಕಿದ ಆಹಾರ ಆರೋಗ್ಯಕರವಲ್ಲ.

ನಿಧಾನಕ್ಕೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುತ್ತಾ ಬನ್ನಿ:

ನಾವು ಈಗ ಪ್ಲಾಸ್ಟಿಕ್ ಬಳಕೆ ಮಾಡದಿದ್ದರೆ ಅದು ಭವಿಷ್ಯದಲ್ಲಿ ನಮ್ಮ ಭೂಮಿಗೆ, ನಮ್ಮ ಮಕ್ಕಳಿಗೆ ನೀಡುವ ಕೊಡುಗೆಯಾಗಿದೆ.

* ಪ್ಲಾಸ್ಟಿಕ್‌ ಬ್ಯಾಗ್‌ಗಳ ಬಳಕೆ ಬದಲಿಗೆ ಕಾಟನ್‌ ಬ್ಯಾಗ್‌ಗಳನ್ನು ಬಳಸಿ

* ಪ್ಯಾಕೇಜ್ ಅಡಿಕೆಯ ಹಾಳೆ, ಬಾಳೆ ಎಲೆ ಮುಂತಾದವುಗಳನ್ನು ಬಳಸಿ.

* ಗಾಜಿನ ಹಾಗೂ ಸ್ಟೀಲ್‌, ಮಣ್ಣಿನ ಪಾತ್ರೆಗಳನ್ನು ಬಳಸಿ

* ಪ್ಲಾಸ್ಟಿಕ್ ಸ್ಪೂನ್ ಬದಲಿಗೆ ಮರು ಬಳಕೆ ಮಾಡುವ ಸ್ಪೂನ್‌ಗಳನ್ನು ಬಳಸಿ.

ಹೀಗೆ ಒಂದೊದೇ ಪ್ಲಾಸ್ಟಿಕ್‌ ವಸ್ತುಗಳನ್ನು ತ್ಯಜಿಸುತ್ತಾ ಬಂದರೆ ಪ್ಲಾಸ್ಟಿಕ್‌ ಮುಕ್ತ ಬದುಕು ನಡೆಸಬಹುದು.

English summary

Plastic ban from July 1 : Eco-Friendly Alternatives To Plastics In Your Everyday Life in Kannada

Plastic ban from July 1 : what aare the alternatives can use and avoid palstic Read on...
X
Desktop Bottom Promotion