For Quick Alerts
ALLOW NOTIFICATIONS  
For Daily Alerts

ಏನಿದು ಪಿರಿಯಡ್ ಅಂಡರ್‌ವೇರ್‌? ಎಷ್ಟು ಪ್ರಯೋಜನಕಾರಿ?

|

ಮಹಿಳೆಯರಲ್ಲಿ ಮುಟ್ಟು ನೈಸರ್ಗಿಕ ಕ್ರಿಯೆ. ಆದರೆ ಈ ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡುವುದು ಕೂಡ ಅಷ್ಟೇ ಮುಖ್ಯ, ಇಲ್ಲದಿದ್ದರೆ ತುರಿಕೆ, ಸೋಂಕಿನ ಸಮಸ್ಯೆ ಉಂಟಾಗುವುದು. ಹಿಂದಿನ ಕಾಲದಲ್ಲಿ ಈ ಸಮಯದಲ್ಲಿ ಬಟ್ಟೆ ಇಡುತ್ತಿದ್ದರು, ಅದು ಅವಳ ಆರೋಗ್ಯದ ದೃಷ್ಟಿಯಿಂದ ಅಷ್ಟು ಸುರಕ್ಷಿತವೂ ಆಗಿರಲಿಲ್ಲ.

ನಂತರ ಪ್ಯಾಡ್‌ ಬಂತು. ಇದು ಅವಳ ಮಾನಸಿಕ ಕಿರಿಕಿರಿಯನ್ನು ಎಷ್ಟೋ ಕಮ್ಮಿ ಮಾಡಿತು. ಆದರೆ ಪ್ಯಾಡ್‌ ಒಮ್ಮೆ ಬಳಸಿದ ಮೇಲೆ ಮತ್ತೆ ಬಳಸುವ ಆಗಿಲ್ಲ, ಇದರಿಂದ ಪರಿಸರಕ್ಕೂ ಹಾನಿ, ಇವುಗಳಿಗಿಂತ ಟ್ಯಾಂಫೂನ್ ಬಳಸುವುದು ಸುರಕ್ಷಿತ ಎಂದು ಹೇಳಲಾಗುತ್ತದೆ. ಇದನ್ನು ಮರು ಬಳಕೆ ಮಾಡಬಹುದು ಹಾಗೂ ಪರಿಸರಕ್ಕೂ ಯಾವುದೇ ಹಾನಿಯಿಲ್ಲ.

ಆದರೆ ಪ್ಯಾಡ್‌ ಆಗಲಿ, ಟ್ಯಾಂಫೂನ್‌ ಆಗಲಿ ತುಂಬಾ ರಕ್ತಸ್ರಾವ ಇರುವಾಗ ಆದರೆ ಒಕೆ, ಇಲ್ಲದಿದ್ದರೆ ಕಿರಿಕಿರಿ ಅನಿಸುವುದು. ಸ್ವಲ್ಪ ರಕ್ತಸ್ರಾವ ಆಗುತ್ತಿರುತ್ತದೆ ಪ್ಯಾಡ್‌ ಇಟ್ಟರೂ ಅದು ವೇಸ್ಟ್ ಆಗುತ್ತದೆ, ಆದರೆ ಒಫ ಉಡುಪು ಮಾತ್ರ ಹಾಕಿದರೆ ಬಟ್ಟೆಯಲ್ಲಿ ಕಲೆ ಕಾಣಬಹುದು, ಈಗ ಆ ಸಮಸ್ಯೆಯೂ ದೂರವಾಗಲಿದೆ. ಅಂಥ ದಿನಗಳಲ್ಲಿ ಧರಿಸಲೆಂದೇ ಪಿರಿಯಡ್ಸ್ ಅಂಡರ್‌ವೇರ್ ಬಂದಿದೆ.

ಏನಿದು ಪಿರಿಯಡ್ ಅಂಡರ್‌ವೇರ್? ಇದು ಹೇಗೆ ಕಾರ್ಯ ನಿರ್ವಹಿಸುತ್ತೆ?

ಏನಿದು ಪಿರಿಯಡ್ ಅಂಡರ್‌ವೇರ್? ಇದು ಹೇಗೆ ಕಾರ್ಯ ನಿರ್ವಹಿಸುತ್ತೆ?

ಪಿರಿಯಡ್‌ ಅಂಡರ್‌ವೇರ್‌ ಪ್ಯಾಡ್‌ನಂತೆ ಕಾರ್ಯ ನಿರ್ವಹಿಸುತ್ತದೆ. ಇದನ್ನು ಸ್ವಲ್ಪ ರಕ್ತಸ್ರಾವ ಇರುವಾಗ ಅಂದ್ರೆ ಪಿರಿಯಡ್ ಕೊನೆಯ ದಿನಗಳಲ್ಲಿ ಧರಿಸಿದರೆ ಯಾವುದೇ ಕಲೆ ಬಟ್ಟೆಗೆ ಆಗುವುದಿಲ್ಲ, ಪ್ಯಾಡ್‌ನ ಅಗ್ಯತವೂ ಇಲ್ಲ.

* ಇದರಲ್ಲಿ ಮೈಕ್ರೋಫೈಬರ್ ಪಾಲಿಸ್ಟರ್‌ನ ಹೆಚ್ಚಿನ ಲೇಯರ್‌ ಇದ್ದು ಇದು ರಕ್ತವನ್ನು ಹೀರುತ್ತದೆ.

* ಅಲ್ಲದೆ ಇದು ನಿಮಗೆ ಯಾವುದೇ ಒದ್ದೆ ಅನುಭವ ಉಂಟು ಆಡುವುದಿಲ್ಲ ಅಲ್ಲದೆ ಬಟ್ಟೆಗೆ ಕಲೆಯೂ ಉಂಟಾಗುವುದಿಲ್ಲ.

* ಇದರ ಮುಖ್ಯ ಉದ್ದೇಶ ರಕ್ತವನ್ನು ಹೀರಿಕೊಂಡು, ಲೀಕ್‌ ಆಗದಂತೆ ತಡೆಗಟ್ಟಿ, ಒದೆಯ ಅನುಭವವೂ ಆಗದಂತೆ ತಡೆಗಟ್ಟುತ್ತದೆ.

* ಈ ಪಿರಿಯಡ್‌ ಅಂಡರ್‌ವೇರ್‌ 1-2 ಬಾರಿ ಟ್ಯಾಂಫೂನ್ ತುಂಬುವಷ್ಟು ರಕ್ತವನ್ನು ತಡೆಗಟ್ಟುತ್ತದೆ.

ಇದನ್ನು ಹೇಗೆ ಬಳಸಬೇಕು?

ಇದನ್ನು ಹೇಗೆ ಬಳಸಬೇಕು?

ಇದನ್ನು ಅಂಡರ್‌ವೇರ್‌ನಂತೆ ಬಳಸಬೇಕು. ದುರ್ವಾಸನೆ ಬೀರುವುದನ್ನು ತಡೆಗಟ್ಟಲು 12 ಗಂಟೆಗೊಮ್ಮೆ ಬದಲಾಯಿಸಿ.

ಈ ಅಂಡರ್‌ವೇರ್ ಮರು ಬಳಕೆ ಮಾಡುವಂಥದ್ದು.

* ಇದನ್ನು ತಣ್ಣೀರಿನಲ್ಲಿ ತೊಳೆಯಬೇಕು.

* ಇದನ್ನು ವಾಶಿಂಗ್‌ ಮೆಶಿನ್‌ನಲ್ಲಿ ತೊಳೆಯುವುದಾದರೆ ತೊಳೆಯಬಹುದಾದ ಚಿಕ್ಕ ಬ್ಯಾಗ್‌ನಲ್ಲಿ ಹಾಕಿ ಡೆಲಿಕೇಟ್‌ ಅಥವಾ ಜೆಂಟ್ಲ್‌ ವಾಶ್‌ ಮಾಡಿ.

* ಸೂರ್ಯನ ಬಿಸಿಲಿನಲ್ಲಿ ಒಣಗಿಸಿ.

* ಇವುಗಳನ್ನು ಡ್ರೈಯರ್‌ನಲ್ಲಿ ಹಾಕಬೇಡಿ.

ಇದನ್ನು ಬಳಸುವುದರ ಪ್ರಯೋಜನಗಳು

ಇದನ್ನು ಬಳಸುವುದರ ಪ್ರಯೋಜನಗಳು

* ಇದು ಎಕೋ ಫ್ರೆಂಡ್ಲಿ.

* ಪ್ಯಾಡ್‌ಗಳ ಬಳಕೆ ಕಡಿಮೆಯಾಗುವುದು.

* ತೆಳು ರಕ್ತಸ್ರಾವ ಹಾಗೂ ಅಧಿಕ ರಕ್ತಸ್ರಾವ ಹೀರುತ್ತದೆ. ಇದನ್ನು ಪಿರಿಯಡ್‌ ಆಗಬಹುದು ಎಂದು ಸಂಶಯ ಇರುವಾಗ ಅಥವಾ ಮುಟ್ಟಿನ ಕೊನೆಯ ದಿನಗಳಲ್ಲಿ ಧರಿಸಬಹುದು.

* ರೇಸಿಂಗ್, ಸೈಕ್ಲಿಂಗ್ ಈ ರೀತಿಯ ಚಟುವಟಿಕೆಯಲ್ಲಿ ಇದನ್ನು ಬಳಸಬಹುದು.

* ದುರ್ವಾಸನೆ ಬೀರುವುದಿಲ್ಲ

* ತೊಳೆಯಲು ಸುಲಭ, ರಕ್ತ ಕಲೆ ಇರುವುದಿಲ್ಲ.

ಯಾವಾಗ ಇದನ್ನು ಬಳಸಬಹುದು?

ಯಾವಾಗ ಇದನ್ನು ಬಳಸಬಹುದು?

* ತುಂಬಾ ರಕ್ತಸ್ರಾವ ಇರುವವರು

* ಅನಿಯಮಿತ ಮುಟ್ಟಿನ ಸಮಸ್ಯೆ

* ರಕ್ತಸ್ರಾವ ಸರಿಯಾಗಿ ಇಲ್ಲದಿದ್ದರೆ

ಇದರ ಅಡ್ಡ ಪರಿಣಾಮವಿದೆಯೇ?

ಇದನ್ನು ಬಳಸುವುದರಿಂದ ಯಾವುದೇ ಅಡ್ಡಪರಿಣಾಮವಿಲ್ಲ, ಆದರೆ ಕೆಲವೊಮ್ಮೆ ತುಂಬಾ ಹೊತ್ತು ಬಳಸಿದರೆ ದುರ್ವಾಸನೆ ಬಿರುವುದು. ಅಲ್ಲದೆ ಇದರ ಬೆಲೆ ಕೂಡ ಸ್ವಲ್ಪ ದುಬಾರಿಯಿದೆ.

ಕೊನೆಯದಾಗಿ

ಸ್ವಲ್ಪ ರಕ್ತಸ್ರಾವ ಇದ್ದಾಗ ಪ್ಯಾಡ್‌ ಧರಿಸುವ ಬದಲು ಇದನ್ನು ಧರಿಸಿದರೆ ಒಳ್ಳೆಯದು. ಅಲ್ಲದೆ ಮುಟ್ಟಾಗಬಹುದು ಎಂದು ಸಂಶಯ ಇದ್ದಾಗ ಇದನ್ನು ಧರಿಸಬಹುದು.

English summary

Period Underwear : How it Works, Pros, Cons and How to Use it in Kannada

Period Underwear : How it Works, Pros, Cons and How to Use it in Kannada,Have a look.
X
Desktop Bottom Promotion