For Quick Alerts
ALLOW NOTIFICATIONS  
For Daily Alerts

ಕೋವಿಡ್‌ 19 ತಡೆಗಟ್ಟುವ ಪಂಚ ಸೂತ್ರಗಳಿವು

|

ಮತ್ತೆ ಕೊರೊನಾ ಆತಂಕ ಎದುರಾಗಿದೆ, ಈ ಸಮಯದಲ್ಲಿ ಮೈ ಮರೆಯುವಂತಿಲ್ಲ, ಏಕೆಂದರೆ 2ನೇ ಅಲೆಯಲ್ಲಿ ಎಷ್ಟೊಂದು ಕಷ್ಟ-ನೋವುಗಳು ಉಂಟಾಗಿತ್ತು ಎಂಬುವುದು ಇನ್ನೂ ನಮ್ಮ ಕಣ್ಮುಂದೆ ಇದೆ. ವಿಶ್ವದೆಲ್ಲಡೆ ಒಮಿಕ್ರಾನ್‌ ಕಂಡು ಬರುತ್ತಿದೆ.

ಭಾರತದಲ್ಲಿಯೂ ಒಮಿಕ್ರಾನ್‌ನ 3 ಕೇಸ್‌ಗಳು ಕಂಡು ಬಂದಿದೆ. ಆದರೆ ಇತ್ತೀಚೆಗೆ ಡೆಲ್ಟಾ ಕೇಸ್‌ ಕೂಡ ಹೆಚ್ಚಾಗುತ್ತಿದೆ. ಈ ಮೊದಲು ಎಷ್ಟೊಂದು ಮುನ್ನೆಚ್ಚರಿಕೆ ವಹಿಸಿದರೂ ಅದೇ ಮುನ್ನೆಚ್ಚರಿಕೆವಹಿಸದಿದ್ದರೆ ಅಪಾಯ ತಪ್ಪಿದ್ದಲ್ಲ. ಕೋವಿಡ್‌ 19 ತಡೆಗಟ್ಟಲು ಸರ್ಕಾರ ತೀರ್ಮಾನಿಸಿದರಷ್ಟೇ ಸಾಲದು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಕೋವಿಡ್‌ 19 ತಡೆಗಟ್ಟಲು ಈ ಪಂಚಸೂತ್ರ ಪಾಲಿಸಿ ಎಂದು ಹೇಳಿದೆ ಯಾವುದು ಆ ಪಂಚ ಸೂತ್ರ ನೋಡೋಣ ಬನ್ನಿ:

Pancha Sutras Tips to Prevent Covid-19 in kannada

* ಸರ್ಕಾರ ಮಾರ್ಗಸೂಚಿಯಲ್ಲಿ ಸೂಚಿಸಿರುವ ಪಂಚ ಸೂತ್ರಗಳೇನು?

1. ಸಮಯಕ್ಕೆ ಸರಿಯಾಗಿ ಎರಡು ಡೋಸ್ ಲಸಿಕೆ ಪಡೆಯಿರಿ:

1. ಸಮಯಕ್ಕೆ ಸರಿಯಾಗಿ ಎರಡು ಡೋಸ್ ಲಸಿಕೆ ಪಡೆಯಿರಿ:

ಭಾರತದಲ್ಲಿ ಕೋವಿಶೀಲ್ಡ್ ಹಾಗೂ ಕೊವಾಕ್ಸಿನ್‌ ಎಂಬ ಎರಡು ಲಸಿಕೆಗಳು ಲಭ್ಯವಿದೆ. ಈ ಎರಡು ಲಸಿಕೆಗಳು ಕೋವಿಡ್‌ 19 ತಡೆಗಟ್ಟುವಲ್ಲಿ ಸಮರ್ಥವಾಗಿದೆ ಎಂದು ಈಗಾಗಲೇ ಸಾಬೀತಾಗಿದೆ.

ಕೋವಿಡ್ 19 ಕೊರೊನಾ ಲಸಿಕೆ ತೆಗೆಯದವರಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿದೆ, ಲಸಿಕೆ ಪಡೆದವರಿಗೆ ಕೋವಿಡ್ 19 ತಗುಲಿದರೂ ಬೇಗನೆ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ದಕ್ಷಿಣ ಆಫ್ರಿಕದಲ್ಲಿ ನಡೆಸಿದ ಅಧ್ಯಯನ ವರದಿ ಅಲ್ಲಿ ಒಮಿಕ್ರಾನ್‌ನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರಲ್ಲಿ ಲಸಿಕೆ ಪಡೆಯದವರೇ ಹೆಚ್ಚು ಎಂದು ಹೇಳಿದೆ.

2. ಮಾಸ್ಕ್ ಅನ್ನು ಮೂಗು ಮತ್ತು ಬಾಯಿ ಮುಚ್ಚುವಂತೆ ಧರಿಸಿ

2. ಮಾಸ್ಕ್ ಅನ್ನು ಮೂಗು ಮತ್ತು ಬಾಯಿ ಮುಚ್ಚುವಂತೆ ಧರಿಸಿ

ಕೆಲವರು ಮಾಸ್ಕ್‌ ಧರಿಸುವುದು ನೋಡುವಾಗ ಈ ರೀತಿ ಮಾಸ್ಕ್‌ ಧರಿಸಿ ಪ್ರಯೋಜವೇನು ಎಂದು ಅನಿಸುವುದು, ಏಕೆಂದರೆ ಮಾಸ್ಕ್‌ ಕುತ್ತಿಗೆಯಲ್ಲಿ ಧರಿಸಿರುತ್ತಾರೆ ಅಥವಾ ಸಡಿಲವಾಗಿ ಮಾಸ್ಕ್‌ ಧರಿಸಿರುತ್ತಾರೆ. ಈ ರೀತಿ ಮಾಸ್ಕ್‌ ಧರಿಸಿಯೂ ಪ್ರಯೋಜನವಿಲ್ಲ. ಮಾಸ್ಕ್‌ ಅನ್ನು ಬಾಯಿ ಹಾಗೂ ಮೂಗು ಮುಚ್ಚುವಂತೆ ಧರಿಸಿ. ಅದರಲ್ಲೂ ಈಗ ಕೊರೊನಾ ಹೆಚ್ಚುತ್ತಿರುವುದರಿಂದ ಡಬಲ್ ಮಾಸ್ಕ್ ಧರಿಸುವುದು ಇನ್ನೂ ಒಳ್ಳೆಯದು. ಆಗಾಗ ಮಾಸ್ಕ್‌ ಮುಟ್ಟುತ್ತಾ ಇರಬೇಡಿ. ಬಟ್ಟೆಯ ಮಾಸ್ಕ್‌ ಧರಿಸುವುದದಾದರೆ ಸ್ವಚ್ಛವಾಗಿರುವ, ಒಣಗಿರುವ ಮಾಸ್ಕ್ ಧರಿಸಿ. ಮಾಸ್ಕ್ ಅನ್ನು ಪ್ರತಿದಿನ ತೊಳೆಯಿರಿ.

3. ಕೈಗಳನ್ನು ಆಗಾಗ ತೊಳೆಯಿರಿ, ಸ್ಯಾನಿಟೈಸರ್ ಬಳಸಿ

3. ಕೈಗಳನ್ನು ಆಗಾಗ ತೊಳೆಯಿರಿ, ಸ್ಯಾನಿಟೈಸರ್ ಬಳಸಿ

ಸೋಪು ಹಾಕಿ ಕೈಗಳನ್ನು ಆಗಾಗ ತೊಳೆಯಿರಿ, ಹೊರಗಡೆ ಹೋಗುವಾಗ ಸ್ಯಾನಿಟೈಸರ್‌ ಬಳಸಿ.

4. ಅಗ್ಯತವಿದ್ದಾಗ ಮಾತ್ರ ಮನೆಯಿಂದ ಹೊರಗಡೆ ಬನ್ನಿ

4. ಅಗ್ಯತವಿದ್ದಾಗ ಮಾತ್ರ ಮನೆಯಿಂದ ಹೊರಗಡೆ ಬನ್ನಿ

ಸುಮ್ಮನೆ ಹೊರಗಡೆ ತಿರುಗಾಡಬೇಡಿ, ಅಗ್ಯತವಿದ್ದಾಗ ಮಾತ್ರ ಮನೆಯಿಂದ ಹೊರಗಡೆ ಕಾಲಿಡಿ, ಮನೆಯಿಂದ ಹೊರಗಡೆ ಹೋಗುವಾಗ ಅಗ್ಯತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಮನೆಯಿಂದ ಹೊರಬನ್ನಿ.

5. ಗುಂಪು ಇರುವ ಕಡೆ ಓಡಾಡಬೇಡಿ

5. ಗುಂಪು ಇರುವ ಕಡೆ ಓಡಾಡಬೇಡಿ

ಜನರು ಗುಂಪು ಇರುವ ಕಡೆ ಹೋಗಬೇಡಿ, ಒಂದು ವೇಳೆ ಅಮಥ ಸ್ಥಳಗಳಿಗೆ ಹೋಗಲೇಬೇಕಾದ ಅನಿವಾರ್ಯತೆ ಇದ್ದರೆ ತುಂಬಾ ಮುನ್ನೆಚ್ಚರಿಕೆವಹಿಸಿ, ಆದಷ್ಟೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ.

English summary

Pancha Sutras Tips to Prevent Covid-19 in kannada

Pancha Sutras Tips to Prevent Covid-19 in kannada, Read on...
Story first published: Monday, December 13, 2021, 10:19 [IST]
X
Desktop Bottom Promotion