For Quick Alerts
ALLOW NOTIFICATIONS  
For Daily Alerts

ಕೋವಿಡ್ 19 ವ್ಯಾಕ್ಸಿನ್‌ಗೆ ಸಂಬಂಧಿಸಿದಂತೆ ನಿಮ್ಮಲ್ಲಿ ಈ ಪ್ರಶ್ನೆಗಳಿವೆಯೇ?

|

ಭಾರತದಲ್ಲಿ ಕೊರೊನಾ ಲಸಿಕೆ ನೀಡಲು ಜನವರಿ 16ರಿಂದ ನೀಡಲು ಪ್ರಾರಂಭಿಸಿದೆ. ಮೇ. 1ರವರೆಗೆ 1,26, 328, 970 ಜನರು ಮೊದಲ ಡೋಸ್ ಪಡೆದಿದ್ದಾರೆ. 21, 390, 165 ಜನರು ಎರಡು ಡೋಸ್‌ ಪಡೆದುಕೊಂಡಿದ್ದಾರೆ. ಮೊದಲಿಗೆ ಕೊರೊನಾ ವಾರಿಯರ್ಸ್‌ಗೆ ಲಸಿಕೆ ನೀಡಲಾಯಿತು, ನಂತರ 60 ವರ್ಷ ಮೇಲ್ಪಟ್ಟವರಿಗೆ, ಅದಾದ ಬಳಿಕ 3ನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟರಿಗೆ ಲಸಿಕೆ ನೀಡಲಾಗುತ್ತಿದೆ.

ಇದೀಗ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಬಂದಾಗ ಇದರ ಕುರಿತು ಸಾಕಷ್ಟು ಪ್ರಶ್ನೆಗಳಿದ್ದೆವು, ಇದೀಗ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಬಂದಾಗಲೂ ಜನರಲ್ಲಿ ನಾನಾ ಬಗೆಯ ಪ್ರಶ್ನೆಗಳಿವೆ.

ಜನರಿಗೆ ತಮ್ಮ ಮನಸ್ಸಿನಲ್ಲಿರುವ ಸಂಶಯಕ್ಕೆ ಉತ್ತರ ಸಿಕ್ಕರೆ ಅವರು ಈ ಲಿಸಕೆ ಪಡೆಯುವುದರಲ್ಲಿ ಮತ್ತಷ್ಟು ಮುಂದೆ ಬರುತ್ತಾರೆ. ಇಲ್ಲಿ ಕೊರೊನಾ ಲಸಿಕೆ ಕುರಿತು ನಿಮ್ಮಲ್ಲಿರುವ ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ ನೋಡಿ:

ಕೋವಿಡ್ 19 ಲಸಿಕೆ ಕುರಿತ ಪ್ರಶ್ನೆಗಳು ಹಾಗೂ ಉತ್ತರಗಳು

ಕೋವಿಡ್ 19 ಲಸಿಕೆ ಕುರಿತ ಪ್ರಶ್ನೆಗಳು ಹಾಗೂ ಉತ್ತರಗಳು

ವ್ಯಾಕ್ಸಿನ್‌ನ ಪ್ರಮುಖ ಕಾರ್ಯವೇನು?

ವ್ಯಾಕ್ಸಿನ್‌ ರೋಗ ಲಕ್ಷಣಗಳು ಗಂಭೀರವಾಗುವುದನ್ನು ತಡೆಗಟ್ಟುತ್ತೆ ಹಾಗೂ ಬೇಗ ಚೇತರಿಸಿಕೊಳ್ಳುವಂತೆ ಮಾಡುವುದು

ನಾನು ಲಸಿಕೆ ಧರಿಸಿದರೆ ಕೋವಿಡ್‌ 19, ಬರುವುದೇ ಇಲ್ಲವೇ?

ಇಲ್ಲ

ಲಸಿಕೆ ಪಡೆದ ಬಳಿಕವೂ ಕೊರೊನಾ ಸೋಂಕು ತಗುಲಬಹುದು, ಆದರೆ ಲಸಿಕೆ ಬೇಗನೆ ಚೇತರಿಸಿಕೊಳ್ಳುವಂತೆ ಮಾಡುತ್ತೆ ಹಾಗೂ ಅಪಾಯದ ಮಟ್ಟವನ್ನು ತಗ್ಗಿಸುತ್ತೆ

ಬೇರೆ-ಬೇರೆ ಲಸಿಕೆ ಪಡೆಯಬಹುದೇ?

ಇಲ್ಲ

ಮೊದಲಿಗೆ ನೀವು ಯಾವ ಲಸಿಕೆ ಪಡೆಯುತ್ತೀರೋ ಅದನ್ನೇ ಸೆಕೆಂಡ್‌ ಡೋಸ್ ಆಗಿ ತೆಗೆದುಕೊಳ್ಳಬೇಕು.

ಕೋವಿಡ್ 19 ಲಸಿಕೆ ಕುರಿತ ಪ್ರಶ್ನೆಗಳು ಹಾಗೂ ಉತ್ತರಗಳು

ಕೋವಿಡ್ 19 ಲಸಿಕೆ ಕುರಿತ ಪ್ರಶ್ನೆಗಳು ಹಾಗೂ ಉತ್ತರಗಳು

ಕೋವಿಡ್ 19 ಪಾಸಿಟಿವ್ ಇದ್ದರೆ ಲಸಿಕೆ ಪಡೆಯಬಹುದೇ?

ಇಲ್ಲ

ಕೊರೊನಾದಿಂದ ಚೇತರಿಸಿಕೊಂಡ ಮೇಲೆ 4-8 ವಾರಗಳ ಬಳಿಕ ತೆಗೆದುಕೊಳ್ಳಬೇಕು.

ಯಾರು ಲಸಿಕೆ ಪಡೆಯಬಾರದು?

ಯಾರಿಗೆ ಅಲರ್ಜಿ ಸಮಸ್ಯೆಯಿದೆಯೋ ಅಥವಾ ಮೊದಲ ಡೋಸ್‌ ಪಡೆದ ಬಳಿಕ ಅಲರ್ಜಿ ಉಂಟಾಗಿದೆಯೋ ಅವರು ತೆಗೆದುಕೊಳ್ಳುವಂತಿಲ್ಲ.

ಕೋವಿಡ್ 19 ಲಸಿಕೆ ಕುರಿತ ಪ್ರಶ್ನೆಗಳು ಹಾಗೂ ಉತ್ತರಗಳು

ಕೋವಿಡ್ 19 ಲಸಿಕೆ ಕುರಿತ ಪ್ರಶ್ನೆಗಳು ಹಾಗೂ ಉತ್ತರಗಳು

ಲಸಿಕೆ ಪಡೆದ ಬಳಿಕ RTPCR/ ಸ್ವ್ಯಾಬ್‌ ಪರೀಕ್ಷೆಯಲ್ಲಿ ಪಾಸಿಟಿವ್ ಬರುವುದೇ?

ಇಲ್ಲ

ಲಸಿಕೆ ಪಡೆದ ಬಳಿಕ RTPCRನಲ್ಲಿ ವ್ಯತ್ಯಸ್ಥ ಫಲಿತಾಂಶವೇನು ಕಾಣಸುವುದಿಲ್ಲ, ಒಂದು ವೇಳೆ ಪಾಸಿಟಿವ್ ಬಂದಿದ್ದರೆ ಕೊರೊನಾ ಸೋಂಕು ಇರುತ್ತೆ.

ಗರ್ಭಿಣಿ ಅಥವಾ ಎದೆ ಹಾಲುಣಿಸುವ ಮಹಿಳೆ ಲಸಿಕೆ ಪಡೆಯಬಹುದೇ?

ಇಲ್ಲ

ಕೋವಿಡ್ 19 ಲಸಿಕೆ ಕುರಿತ ಪ್ರಶ್ನೆಗಳು ಹಾಗೂ ಉತ್ತರಗಳು

ಕೋವಿಡ್ 19 ಲಸಿಕೆ ಕುರಿತ ಪ್ರಶ್ನೆಗಳು ಹಾಗೂ ಉತ್ತರಗಳು

ಮುಟ್ಟಿನ ಸಮಯದಲ್ಲಿ ಲಸಿಕೆ ಪಡೆಯಬಹುದೇ?

ಹೌದು

ಯಾವ ಲಸಿಕೆ ಪಡೆಯುವುದು ಒಳ್ಳೆಯದು?

ಭಾರತದಲ್ಲಿ ಕೊವಾಕ್ಸಿನ್ , ಕೋವಿಶೀಲ್ಡ್ ಲಸಿಕೆ ನೀಡಲಾಗುತ್ತಿದ್ದು ನಿಮಗೆ ಲಭ್ಯವಾಗಿರುವ ಲಸಿಕೆ ಪಡೆಯಬಹುದು.

English summary

Most Common Questions About Covid-19 Vaccines And Their Answers in kannada

Here are most common questions about covid-19 vaccines and their answers in kannada, read on..
Story first published: Monday, May 3, 2021, 15:55 [IST]
X
Desktop Bottom Promotion