For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಕಾಡುವ ಕಾಯಿಲೆಗೆ ಈ ಆಯುರ್ವೇದ ಮದ್ದು ಬೆಸ್ಟ್

|

ಮಳೆಗಾಲ ಬಂದರೆ ಸಾಕು ರೋಗ ರುಜಿನಗಳು ಮನುಷ್ಯನನ್ನು ಅಂಟಿಕೊಳ್ಳುತ್ತದೆ. ಮಳೆಯಿಂದಾಗಿ ಸೊಳ್ಳೆಗಳು ಉತ್ಪತ್ತಿಯಾಗುತ್ತದೆ, ಇದರಿಂದ ಜ್ವರ ಬರುತ್ತದೆ. ಶೀತಗಳಿಯಿಂದಾಗಿ ಕಫ, ಕೆಮ್ಮು, ಶೀತ ಉಂಟಾಗುತ್ತದೆ. ಹೀಗೆ ವಿವಿಧ ರೋಗಗಳ ಕಾಲ ಎಂದರೆ ಮಳೆಗಾಲ ಎನ್ನುತ್ತಾರೆ.

Monsoon Health Problems

ಈ ಸಮಯದಲ್ಲಿ ಎಷ್ಟೇ ಜಾಗೃತೆ ವಹಿಸಿದರೂ ಅನಾರೋಗ್ಯ ಸಾಮಾನ್ಯವಾಗಿ ಕಾಡುತ್ತದೆ. ಆಯುರ್ವೇದದ ಪ್ರಕಾರ ಕಾಲಮಾನಗಳು ಬದಲಾದ ಹಾಗೆ ದೈಹಿಕವಾಗಿಯೂ ಬದಲಾವಣೆ ಉಂಟಾಗಿ, ಅನಾರೋಗ್ಯ ಕಾಣಿಸಿಕೊಳ್ಳುತ್ತದಂತೆ ಹಾಗಾದರೆ ಮಳೆಗಾಲದಲ್ಲಿ

ನಮ್ಮ ಆರೋಗ್ಯವನ್ನು ನಾವು ಹೇಗೆ ಕಾಪಾಡಿಕೊಳ್ಳಬಹುದು? ಆಯುರ್ವೇದ ಮೂಲಕ ಹೇಗೆ ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದು? ಇಲ್ಲಿದೆ ಈ ಬಗ್ಗೆ ಟಿಪ್ಸ್:

ಯಾವೆಲ್ಲ ಆರೋಗ್ಯ ಸಮಸ್ಯೆ ಕಾಡುತ್ತೆ!

ಯಾವೆಲ್ಲ ಆರೋಗ್ಯ ಸಮಸ್ಯೆ ಕಾಡುತ್ತೆ!

ಈಗಾಗಲೇ ಹೇಳಿದ ಹಾಗೇ ಮಳೆಗಾಲ ಎಂದರೆ ಉತ್ತಮ ಆರೋಗ್ಯಕ್ಕೆ ಒಳ್ಳೆಕಾಲವಲ್ಲ. ಮಳೆಗಾಲ ಶುರುವಾದೊಡನೆ ತೇವಾಂಶ ಹೆಚ್ಚಳದಿಂದ ಮನುಷ್ಯನ ದೇಹದಲ್ಲೂ ಅನೇಕ ಬದಲಾವಣೆಗಳು ಉಂಟಾಗುತ್ತವೆ. ಶೀತ ನೆಗಡಿ, ಜ್ವರ. ಅತಿಸಾರದಂತಹ ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ. ನಿಂತ ನೀರಿನಲ್ಲಿ ಸೊಳ್ಳೆಗಳು ಸಂತಾನ ಉತ್ಪತ್ತಿಯಾಗಿ ಮಲೇರಿಯಾ, ಟೈಫಾಯ್ಡ್‌, ಇವೇ ಮೊದಲಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಮುಖ್ಯವಾಗಿ ವಾತ, ಪಿತ್ತದಂತಹ ಆರೋಗ್ಯ ಸಮಸ್ಯೆಗಳು ಕಾಡುತ್ತದೆ.

ವಾತ ಸಮಸ್ಯೆ ಜಾಸ್ತಿ!

ವಾತ ಸಮಸ್ಯೆ ಜಾಸ್ತಿ!

ಮಳೆಗಾಲದಲ್ಲಿ ವಾತ ದೋಷ ಜಾಸ್ತಿಯಾಗುತ್ತದೆ. ಬೇಸಿಗೆಯ ಶುಷ್ಕ ಅಥವಾ ನಿರ್ಜಲೀಕರಣದ ಶಾಖದ ಸಮಯದಲ್ಲಿ ವಾತ ದೋಷವು ಸಂಗ್ರಹಗೊಳ್ಳುತ್ತದೆ. ಮಳೆಗಾಲದ ಅಸಿಡಿಕ್ ವಾತಾವರಣದ ಪರಿಸ್ಥಿಯಿಂದ ಇದು ಉಲ್ಬಣಗೊಳ್ಳುತ್ತದೆ. ಇದರಿಂದಾಗಿ ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತದೆ.

ಪಿತ್ತ!

ಪಿತ್ತ!

ಪಿತ್ತವು ಮಳೆಗಾಲದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಯಾಗಿದೆ. ಮಳೆಗಾಲ ಎಂದರೆ ವಾತಾವರಣದಲ್ಲಿ ಆಮ್ಲೀಯ ಗುಣಗಳು ಹೆಚ್ಚಿರುತ್ತದೆ ಹಾಗೇ ಜೀರ್ಣಕ್ರಿಯೆಯೂ ಸರಿ ಇರುವುದಿಲ್ಲ. ಇದರಿಂದ ಪಿತ್ತ ನಮ್ಮ ದೇಹದಲ್ಲಿ ಸಂಗ್ರಹಗೊಳ್ಳುತ್ತದೆ. ಇನ್ನು ಮಳೆಗಾಲ ಕಳೆದು ಮತ್ತೆ ಬೇಸಿಗೆಗಾಲ ಆರಂಭವಾಗುತ್ತಿದ್ದಂತೆ ಕಾಲಮಾನ ಬದಲಾವಣೆಯಿಂದ ಪಿತ್ತ ಉಲ್ಬಣಗೊಳ್ಳುತ್ತದೆ. ಪಿತ್ತದ ಪ್ರಕ್ರಿಯೆ ಆರಂಭಗೊಳ್ಳುವುದು ಮಳೆಗಾಲದಲ್ಲಿ.

ಇತರ ಆರೋಗ್ಯ ಸಮಸ್ಯೆ

ಇತರ ಆರೋಗ್ಯ ಸಮಸ್ಯೆ

ಇದಲ್ಲದೇ ಮಳೆಗಾಲದಲ್ಲಿ ಕೆಲವೊಂದು ಚಟುವಟಿಕೆಗಳಿಂದ ಕೆಲವರಿಗೆ ತೀವ್ರ ಆರೋಗ್ಯ ಸಮಸ್ಯೆ ಕಾಡಬಹುದು. ಉದಾಹರಣೆಗೆ ಮಳೆಯಯಲ್ಲಿ ಕೆಲಸ ಮಾಡುವವರಿಗೆ ತೀವ್ರ ತರದ ಕಾಯಿಲೆ ಅಂಟಿಕೊಳ್ಳಬಹುದು. ಮಳೆಗಾಲದಲ್ಲಿ ಜೀರ್ಣಕ್ರಿಯೆ ಸಾಮಸ್ಯೆ ಉಂಟಾಗುತ್ತದೆ. ಮಳೆಗಾಲದಲ್ಲಿ ಶೀತ ವಾತವರಣದಿಂದ ರಕ್ತನಾಳಗಳಲ್ಲಿ ಸಂಕೋಚನವನ್ನು ಉಂಟುಮಾಡುತ್ತವೆ, ಇದು ಅಧಿಕ ರಕ್ತದೊತ್ತಡ ಮತ್ತು ಹೃದಯದ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೇ ಮಳೆಗಾಲದಲ್ಲಿ ರಕ್ತದ ಸಂಬಂಧಿ ಸಮಸ್ಯೆ ಉಂಟಾಗುವುದರಿಂದ ಮಧುಮೇಹದವರ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಇದಲ್ಲದೇ ಕಾಲರ, ಹಳದಿ ರೋಗ, ಥೈರಾಯ್ಡ್ ನಂತಹ ಸಮಸ್ಯೆ ಕೂಡ ಉಲ್ಬಣಿಸುವ ಸಮಯವೇ ಮಳೆಗಾಲ.

ಆರೋಗ್ಯ ತಪಾಸಣೆ ನಡೆಸಿ!

ಆರೋಗ್ಯ ತಪಾಸಣೆ ನಡೆಸಿ!

ಮಳೆಗಾಲ ಬಂದರೆ ಅನಾರೋಗ್ಯಗಳು ಸಂಭವಿಸುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಹೀಗಾಗಿ ಈ ವೇಳೆ ಆರೋಗ್ಯ ತಪಾಸಣೆ ಮಾಡುತ್ತಿರಿ. ಸಣ್ಣ-ಪುಟ್ಟ ಆರೋಗ್ಯ ಬದಲಾವಣೆಗಳಾದರೆ ಕೂಡಲೇ ಅದಕ್ಕೆ ತಕ್ಕಂತೆ ಆರೋಗ್ಯ ತಪಾಸಣೆ ನಡೆಸಿ ಬೇಕಾದ ಸೂಕ್ತ ಕ್ರಮಗಳನ್ನು ಕೈಗೊಳ್ಳಿ. ಇನ್ನು ಆಹಾರ ಪದ್ದತಿಯನ್ನು ಅನುಸರಿಸಿ. ಜೀರ್ಣಕ್ರಿಯೆ ಮಳೆಗಾಲದಲ್ಲಿ ಸರಿ ಇರುವುದಿಲ್ಲ. ಹೀಗಾಗಿ ಜೀರ್ಣವಾಗುವ ಆಹಾರ ಕ್ರಮಗಳನ್ನು ಪಾಲಿಸಿ.

ಮನೆ ಮದ್ದು!

ಮನೆ ಮದ್ದು!

ಮಳೆಗಾಲದಲ್ಲಿ ಮನೆ ಮದ್ದಿನ ಮೊರೆ ಹೋಗುವ ಮೂಲಕ ರೋಗ ಬರದಂತೆ ತಡೆಯಬಹುದು. ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ ನಿರೋಧಕ ಶಕ್ತಿ ಜಾಸ್ತಿ ಹೀಗಿರುವ ಬೆಳ್ಳುಳ್ಳಿ ಸೇವಿಸಬಹುದು. ಬಿಸಿ ನೀರು ಸೇವಿಸಬಹುದು. ಹಾಲಿಗೆ ಕೊಂಚ ಅರಶಿನ ಸೇರಿಸಿ ಸೇವಿಸಿದರೆ ಕೆಮ್ಮು ಮತ್ತು ಶೀತವನ್ನು ದೂರವಿಡಬಹುದು. ಬೇವಿನ ಎಲೆಗಳು ರುಚಿಯಲ್ಲಿ ಕಹಿಯಾದರೂ ವೈರಸ್‌ ಎದುರಿಸಲು ಈ ಎಲೆಗಳು ಸಮರ್ಥವಾಗಿವೆ. ಹೀಗಾಗಿ ಬೇವಿನ ಎಲೆಯ ಕಷಾಯ ಮಾಡಿಕೊಂಡು ಕುಡಿಯಬಹುದು. ತುಳಸಿ ಎಲೆಗಳು ಬ್ಯಾಕ್ಟೀರಿಯಾ ನಿರೋಧಕ ಮತ್ತು ಶಿಲೀಂಧ್ರ ನಿವಾರಕ ಗುಣಗಳನ್ನು ಹೊಂದಿದ್ದು ಜ್ವರ, ಮಲೇರಿಯಾ, ಗಂಟಲಬೇನೆ ಮೊದಲಾದ ತೊಂದರೆಗಳಿಂದ ರಕ್ಷಿಸುತ್ತದೆ. ಕೊಂಚ ನೀರನ್ನು ಕುದಿಸಿ ಇದರಲ್ಲಿ ಹತ್ತರಿಂದ ಹದಿನೈದು ತುಳಸಿ ಎಲೆಗಳನ್ನು ಸೇರಿಸಿ ತಣಿಸಿ. ಬಳಿಕ ಈ ನೀರನ್ನು ಸೋಸಿ ಬಿಸಿಬಿಸಿ ಇದ್ದಂತೆಯೇ ದಿನಕ್ಕೆ ಎರಡು ಬಾರಿ ಕುಡಿಯಬೇಕು.

ಪಂಚಕರ್ಮ ಚಿಕಿತ್ಸೆ!

ಪಂಚಕರ್ಮ ಚಿಕಿತ್ಸೆ!

ಆಯುರ್ವೇದದ ಪ್ರಮುಖ ಚಿಕಿತ್ಸೆಯಾದ ಪಂಚಕರ್ಮ ಚಿಕಿತ್ಸೆಯು ದೇಹ, ಮನಸ್ಸು ಹಾಗೂ ಆತ್ಮವನ್ನು ಸಮತೋಲನವಾಗಿ ಕಾಪಾಡುವ ಗುರಿ ಹೊಂದಿದೆ. ಇದು ಕೇವಲ ರೋಗಿಗಳಲ್ಲದೆ ಆರೋಗ್ಯವಂತರು ಕೂಡಾ ಪಡೆಯಬಹುದಾದ ಚಿಕಿತ್ಸೆ. ದೇಹದಿಂದ ಟಾಕ್ಸಿನ್ಸ್ ಹೊರತೆಗೆದು, ಕಟ್ಟಿಕೊಂಡ ನಾಳಗಳನ್ನು ಸ್ವಚ್ಛತೆ, ಜೀರ್ಣಕ್ರಿಯೆ ಸರಾಗ, ಮೆಟಾಬಾಲಿಸಂ ಹೆಚ್ಚಳ, ತೂಕ ಇಳಿಕೆ, ಒತ್ತಡ ಶಮನ, ರೋಗ ನಿರೋಧಕ ಶಕ್ತಿ ಹೆಚ್ಚಳ ಮುಂತಾದ ಆರೋಗ್ಯ ಲಾಭಗಳು ಪಂಚಕರ್ಮದಿಂದ ಸಿಗುತ್ತವೆ. ಹೀಗಾಗಿ ಮಳೆಗಾಲದಲ್ಲಿ ಪಂಚಕರ್ಮ ಚಿಕಿತ್ಸೆ ಮೊರೆ ಹೋಗಬಹುದು.

English summary

Monsoon Health Problems: Ayurvedic Solution To Keep Diseases at Bay in Kannada

Monsoon Health Problem: Here are best ayurvedic solution to common health problem of rainy season, read on...
X
Desktop Bottom Promotion