For Quick Alerts
ALLOW NOTIFICATIONS  
For Daily Alerts

ಮಂಕಿಪಾಕ್ಸ್ vs ಕೊರೊನಾವೈರಸ್‌: ಈ ಎರಡು ವೈರಸ್‌ನಲ್ಲಿ ಮೈ ಮೇಲೆ ಏಳುವ ಗುಳ್ಳೆಗಳು ಹೇಗೆ ಭಿನ್ನವಾಗಿವೆ?

|

ಕೊರೊನಾ ಜೊತೆಗೆ ಈಗ ಮಂಕಿಪಾಕ್ಸ್ ಎಂಬ ಕಾಯಿಲೆ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಕೊರೊನಾದಿಂದ ಇಡೀ ಜಗತ್ತು ಅನುಭವಿಸಿದ ನಷ್ಟ ಅಷ್ಟಿಟ್ಟಲ್ಲ, ಈಗಲೂ ಕೊರೊನಾ ಮಹಾಮಾರಿ ಸಂಪೂರ್ಣವಾಗಿ ತೊಲಗಿಲ್ಲ, ಕೊರೊನಾದಿಂದ ಜನ ಜೀವನ ಜರ್ಜರಿತವಾಗಿದೆ ಈಗ ಅದರ ಜೊತೆಗೆ ಮಂಕಿಪಾಕ್ಸ್ ಎಂಬ ಕಾಯಿಲೆ ಸೇರಿಕೊಂಡಿದೆ. ಈಗಾಗಲೇ 131 ಕೇಸ್‌ಗಳು ಕನ್‌ಫರ್ಮ್‌ ಆಗಿದ್ದು 106 ಕೇಸ್‌ಗಳನ್ನು ಮಂಕಿಪಾಕ್ಸ್ ಇರಬಹುದು ಎಂದು ಸಂಶಯಿಸಲಾಗಿದೆ.

ಯುಸ್‌, ಯುಕೆ, ಆಸ್ಟ್ರೇಲಿಯಾ, ಬೆಲ್ಜಿಯಂ, ಡೆನ್ಮಾರ್ಕ್‌, ಫೈನ್‌ಲ್ಯಾಂಡ್‌, ಫ್ರಾನ್ಸ್‌, ಇಟಲಿ ಸೇರಿ 19 ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ಕಂಡು ಬಂದಿದೆ. ಈ ರೋಗದ ಕುರಿತು ಪ್ರತಿಯೊಂದು ರಾಷ್ಟ್ರವು ಮುನ್ನೆಚ್ಚರಿಕೆವಹಿಸುತ್ತಿದೆ, ಬ್ರಿಟನ್ ಮುಂತಾದ ಕಡೆ ಈ ವೈರಸ್‌ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ.

ಈಗ ಕೋವಿಡ್‌ 19 ಕೂಡ ಅಧಿಕವಾಗುತ್ತಿರುವುದರಿಂದ ಕೊರೊನಾವೈರಸ್‌ ಹಾಗೂ ಮಂಕಿಪಾಕ್ಸ್ ಎರಡರ ಲಕ್ಷಣಗಳು ಒಂದೇ ಇದೆಯೇ ಎಂದು ನೋಡುವುದಾದರೆ ಈ ಎರಡು ಕಾಯಿಲೆಗಳ ರೋಗ ಲಕ್ಷಣಗಳು ಭಿನ್ನವಾಗಿದೆ. ಕೋವಿಡ್‌ 19 ಬಂದಾಗಲೂ ಕೆಲವರಿಗೆ ಮೈಯಲ್ಲಿ ಗುಳ್ಳೆಗಳು ಬರುತ್ತದೆ, ಮಂಕಿಪಾಕ್ಸ್‌ನಲ್ಲೂ ಬರುತ್ತಿದೆ, ಆದರೆ ಎರಡು ಗುಳ್ಳೆಗಳು ಒಂದೇ ರೀತಿಯಿಲ್ಲ.

ಹಾಗಾದರೆ ಮಂಕಿಪಾಕ್ಸ್‌ ಹಾಗೂ ಕೋವಿಡ್ 19 ಲಕ್ಷಣಗಳು ಹೇಗೆ ಭಿನ್ನವಾಗಿದೆ ನೋಡಿ:

ಮಂಕಿಪಾಕ್ಸ್‌ vs.ಕೋವಿಡ್ 19

ಮಂಕಿಪಾಕ್ಸ್‌ vs.ಕೋವಿಡ್ 19

ನೋವೆಲ್‌ ಕೊರೊನಾವೈರಸ್‌ ಕೋವಿಡ್‌ 19 ಮನುಷ್ಯನ ಶ್ವಾಸಕೋಶಕ್ಕೆ ಮೊದಲು ದಾಳಿ ಮಾಡುತ್ತದೆ. ಕೋವಿಡ್‌ SARS-CoV-2 ಗೆ ಸೇರಿದ ವೈರಸ್‌ ಆಗಿದೆ, ಅದೇ ಮಂಕಿಪಾಕ್ಸ್ Orthopoxvirus genusನಿಂದ ಬರುವ ಕಾಯಿಲೆಯಾಗಿದೆ.

ಕೋವಿಡ್‌ 19 ಒಬ್ಬರಿಂದ ಒಬ್ಬರಿಗೆ ಉಸಿರಾಟದ ಮೂಲಕ, ಡ್ರಾಪ್‌ಲೆಟ್‌ ಮೂಲಕ ಹರಡುವುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮಂಕಿಪಾಕ್ಸ್ ವೈರಸ್‌ ತಗುಲಿರುವ ವ್ಯಕ್ತಿಯ ನಿಕಟ ಸಂಪರ್ಕದಿಂದ, ದೇಹದ ದ್ರವದ ಮೂಲಕ, ಸೋಂಕು ತಗುಲಿರುವ ವ್ಯಕ್ತಿಯ ಎದುರಗಡೆ ತುಂಬಾ ಹೊತ್ತು ನಿಂತಾಗ, ಬಾಯಿ ಹಾಗೂ ಗಂಟಲಿನ ದ್ರವದ ಮೂಲಕ ಕೂಡ ಹರಡುತ್ತದೆ.

ಮಂಕಿಪಾಕ್ಸ್‌ ಗಂಭೀರತೆ ಬಗ್ಗೆ ನೋಡುವುದಾದರೆ Otago ಯೂನಿವರ್ಸಿಟಿಯ ಬಯೋಕೆಮಿಸ್ಟ್ರಿ ಪ್ರೊಫೆಸರ್‌ ಕೌರ್ಟ್‌ ಕ್ರೌಸ್‌ ಹೇಳುವ ಪ್ರಕಾರ ಮಂಕಿಪಾಕ್ಸ್‌ ಕೂಡ ಗಂಭೀರ ರೋಗ ಲಕ್ಷಣಗಳನ್ನು ಬೀರಬಹುದು, ಆದರೆ ನೂರರಲ್ಲಿ ಒಬ್ಬರೋ- ಇಬ್ಬರಿಗಷ್ಟೇ ರೋಗ ಲಕ್ಷಣಗಳು ಗಂಭೀರವಾಗಬಹುದು.

ಕೊರೊನಾವೈರಸ್‌ ಹಾಗೂ ಮಂಕಿಪಾಕ್ಸ್‌ ನಡುವಿನ ದೊಡ್ಡ ವ್ಯತ್ಯಾಸವೆಂದರೆ ಮಂಕಿಪಾಕ್ಸ್‌ ಕೊರೊನಾವೈರಸ್‌ನಷ್ಟು ವೇಗವಾಗಿ ಹರಡುತ್ತಿಲ್ಲ. ಅಲ್ಲದೆ ಮಂಕಿಪಾಕ್ಸ್‌ ರೋಗ ಗಂಭೀರವಾಗುವ ಸಾಧ್ಯತೆ ಶೇ.1ರಷ್ಟಿದೆ ಅಷ್ಟೇ.

ಮೈಯಲ್ಲಿ ಗುಳ್ಳೆಗಳು ಏಳುವುದು ಕೋವಿಡ್ 19 ಅಥವಾ ಮಂಕಿಪಾಕ್ಸ್‌ ಲಕ್ಷಣಗಳಾಗಿರಬಹುದು

ಮೈಯಲ್ಲಿ ಗುಳ್ಳೆಗಳು ಏಳುವುದು ಕೋವಿಡ್ 19 ಅಥವಾ ಮಂಕಿಪಾಕ್ಸ್‌ ಲಕ್ಷಣಗಳಾಗಿರಬಹುದು

ಮಂಕಿಪಾಕ್ಸ್ ಕಾಯಿಲೆಯ ಪ್ರಮುಖ ಲಕ್ಷಣವೆಂದರೆ ಮೈ ಮೇಲೆ ಅದರಲ್ಲೂ ಕುತ್ತಿಗೆ ಭಾಗದಲ್ಲಿ ಗುಳ್ಳೆಗಳು ಏಳುವುದು ಮಂಕಿಪಾಕ್ಸ್‌ನಲ್ಲಿ ಚಿಕನ್‌ಪಾಕ್ಸ್‌ ರೀತಿ ಗುಳ್ಳೆಗಳು ಕಂಡು ಬರಬಹುದು.

ಕೋವಿಡ್‌ 19ನಲ್ಲೂ ಗುಳ್ಳೆಗಳು ಕಂಡು ಬರುವುದು. ಆದರೆ ಅದರ ಜೊತೆಗೆ ಉಸಿರಾಟದ ತೊಂದರೆ, ಕೆಮ್ಮು ಎಲ್ಲಾ ಇರುತ್ತದೆ. ಇನ್ನು ಮಂಕಿಪಾಕ್ಸ್ ಹಾಗೂ ಕೋವಿಡ್‌ 19 ವೈರಸ್‌ ತಗುಲಿದಾಗ ಚಳಿ-ಜ್ವರ ಕಂಡು ಬರುವುದು.

ಮಂಕಿಪಾಕ್ಸ್‌ ಗುಳ್ಳೆಗಳು ನೋಡಲು ಹೇಗಿರುತ್ತದೆ?

ಯುಕೆಯ ಹೆಲ್ತ್‌ ಸೆಕ್ಯೂರಿಟಿ ಏಜೆನ್ಸಿ (UKHSA) ಪ್ರಕಾರ ಮಂಕಿಪಾಕ್ಸ್‌ ವೈರಸ್‌ ತಗುಲಿದಾಗ ಮೊದಲು ಗುಳ್ಳೆಗಳು ಮುಖ ಹಾಗೂ ಕುತ್ತಿಗೆ ಭಾಗದಲ್ಲಿ ಕಂಡು ಬರುತ್ತದೆ, ನಂತರ ದೇಹದ ಇತರ ಭಾಗಗಳಲ್ಲಿ ಕಂಡು ಬರುತ್ತದೆ.

ಈ ಗುಳ್ಳೆಗಳು ಒಂದೊಂದು ಹಂತದಲ್ಲಿ ಬದಲಾವಣೆಯಾಗುವುದು. ಮೊದಲು ಚಿಕ್ಕದಾಗಿ ಕಾಣಿಸಿಕೊಳ್ಳುವುದು, ನಂತರ ದೊಡ್ಡದಾಗುವುದು, ಅದರಲ್ಲಿ ಕೀವು ತುಂಬಿಕೊಳ್ಳುವುದು, ನಂತರ ಚಿಕಿತ್ಸೆ ಬಳಿಕ ಒಣಗಿ ಬೀಳುವುದು.

ಕೋವಿಡ್‌ 19ನಿಂದ ಬರುವ ಗುಳ್ಳೆಗಳು ಹೇಗಿರುತ್ತದೆ?

ಕೋವಿಡ್‌ 19ನಿಂದ ಬರುವ ಗುಳ್ಳೆಗಳು ಹೇಗಿರುತ್ತದೆ?

ಕೋವಿಡ್ 19ನಿಂದ ಬರುವ ಗುಳ್ಳೆಗಳು ಹೀಟ್‌ ರ‍್ಯಾಶ್‌ ಆದಾಗ ಬರುತ್ತದೆ ಅಲ್ವಾ ಆ ರೀತಿ ಇರುತ್ತದೆ. ಗುಳ್ಳೆಗಳು ಕೆಂಪು-ಕೆಂಪಗೆ ಇರುತ್ತದೆ, ತುಂಬಾ ತುರಿಕೆ ಇರುತ್ತದೆ. ಈ ರೀತಿ ದೇಹದ ಯಾವುದೇ ಭಾಗದಲ್ಲೂ ಕಂಡು ಬರಬಹುದು. ಮೊಣಕೈ, ಮಂಡಿ, ಹಿಂಬದಿ, ಕಾಲು, ಕೈಗಳು ಹೀಗೆ ದೇಹದ ಯಾವುದೇ ಭಾಗದಲ್ಲಿ ಕಂಡು ಬರುವುದು.

ಈ ಗುಳ್ಳೆಗಳು ತುಂಬಾನೇ ತುರಿಸುತ್ತದೆ, ಪಾದಗಳು, ಅಂಗೈ, ತುಟಿ, ಕಣ್ಣಿನ ಬದಿ ಈ ಭಾಗಗಳಲ್ಲೂ ತುರಿಕೆ ಕಂಡು ಬರುವುದು. ಕೋವಿಡ್‌ 19ನಿಂದ ಬರುವ ಗುಳ್ಳೆ ಮುಖದಲ್ಲಿ ಕಂಡು ಬರುವುದು ಕಡಿಮೆ.

ಮಂಕಿಪಾಕ್ಸ್‌ , ಕೋವಿಡ್‌ 19 ಇತರ ವಿಭಿನ್ನ ಲಕ್ಷಣಗಳು

ಮಂಕಿಪಾಕ್ಸ್‌ , ಕೋವಿಡ್‌ 19 ಇತರ ವಿಭಿನ್ನ ಲಕ್ಷಣಗಳು

ಕೋವಿಡ್ 19ನ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ಗಂಟಲಿನಲ್ಲಿ ಕೆರೆತ, ಕೆಮ್ಮು, ಸುಸ್ತು, ಶೀತ, ಮೈಕೈ ನೋವು, ತಲೆನೋವು, ಉಸಿರಾಟದಲ್ಲಿ ತೊಂದರೆ, ಎದೆನೋವು, ವಾಸನೆ ಹಾಗೂ ರುಚಿ ಇಲ್ಲವಾಗುವುದು, ಬೇಧಿ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮಂಕಿಪಾಕ್ಸ್‌ ಸಾಮಾನ್ಯ ಲಕ್ಷಣಗಳೆಂದರೆ ತಲೆನೋವು, ಜ್ವರ, ಗಂಟಲು ಕೆರೆತ, ಅಸ್ವಸ್ಥತೆ, ಆಯಾಸ ಮತ್ತು ಲಿಂಫಾಡೆನೋಪತಿ ಈ ರೀತಿಯ ಲಕ್ಷಣಗಳು ಕಂಡು ಬರುವುದು.'

ಮೈಯಲ್ಲಿ ಗುಳ್ಳೆಗಳು ಬಂದರೆ ನಿರ್ಲಕ್ಷ್ಯ ಮಾಡಬೇಡಿ, ಚಿಕನ್‌ಪಾಕ್ಸ್ ಕೂಡ ಆಗಿರಬಹುದು...ಭಾರತದಲ್ಲಿ ಮಂಕಿವೈರಸ್‌ ಇದುವರೆಗೆ ಪತ್ತೆಯಾಗಿಲ್ಲ.

English summary

Monkeypox vs. Coronavirus: How a COVID-19 rash differs from a Monkeypox rash in Kannada

Monkeypox vs. Coronavirus: How a COVID-19 rash differs from a Monkeypox rash in Kannada.
X
Desktop Bottom Promotion