For Quick Alerts
ALLOW NOTIFICATIONS  
For Daily Alerts

ದೆಹಲಿ ವ್ಯಕ್ತಿಯಲ್ಲಿ ಮಂಕಿಪಾಕ್ಸ್, ದೇಶದಲ್ಲಿ ಹೆಚ್ಚಿಸಿದೆ ಆತಂಕ: ಇದರ ಬಗ್ಗೆ ತಿಳಿಯಲೇಬೇಕಾದ ಸಂಗತಿಗಳಿವು

|

ಕೇರಳದಲ್ಲಿ 3 ಕೇಸ್‌ಗಳು ಪತ್ತೆಯಾದ ಬಳಿಕ ಇದೀಗ ದೆಹಲಿಯಲ್ಲಿ ಒಂದು ಮಂಕಿಪಾಕ್ಸ್ ಕೇಸ್‌ ಪತ್ತೆಯಾಗಿದೆ.ಭಾರತದಲ್ಲಿ ಒಟ್ಟು ನಾಲ್ಕು ಮಂಕಿಪಾಕ್ಸ್‌ ಕೇಸ್‌ಗಳು ಪತ್ತೆಯಾಗಿವೆ.

Monkeypox

ಅದರಲ್ಲೂ ಈ ಬಾರಿ ಯಾವುದೇ ಟ್ರಾವೆಲ್ ಹಿಸ್ಟರಿಯಿಲ್ಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಕಂಡು ಬಂದಿರುವುದು ಭಾರತದಲ್ಲಿ ಮಂಕಿಪಾಕ್ಸ್ ಆತಂಕ ಹೆಚ್ಚಿಸಿದೆ.

ದೆಹಲಿ ವ್ಯಕ್ತಿಯಲ್ಲಿ ಪತ್ತೆಯಾದ ಮಂಕಿಪಾಕ್ಸ್

ದೆಹಲಿ ವ್ಯಕ್ತಿಯಲ್ಲಿ ಪತ್ತೆಯಾದ ಮಂಕಿಪಾಕ್ಸ್

31 ವರ್ಷದ ದೆಹಲಿಯ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಕಂಡು ಬಂದಿದೆ, ಈತನನ್ನು ದೆಹಲಿಯ ಲೋಕ ನಾಯಕ್‌ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಎರಡು ದಿನದ ಹಿಂದೆ ಎರಡು ವಾರದಿಂದ ಜ್ವರ ಇದೆ, ಮೈಯಲ್ಲಿ ಗುಳ್ಳೆಗಳು ಎದ್ದಿದೆ ಎಂದು ಆಸ್ಪತ್ರೆಗೆ ಬಂದಿದ್ದ, ಇದು ಮಂಕಿಪಾಕ್ಸ್‌ ಇರಬಹುದು ಎಂದು ಸಂಶಯಿಸಿದ ಆಸ್ಪತ್ರೆಯ ಸಿಬ್ಬಂದಿ ಆತನನ್ನು ಐಸೋಲೇಷನ್‌ ವಾರ್ಡ್‌ನಲ್ಲಿ ಇರಿಸಿ ಆತನ ಬ್ಲಡ್‌ ಸ್ಯಾಂಪಲ್‌ ತೆಗೆದು ಪರೀಕ್ಷಿಸಿದಾಗ ಮಂಕಿಪಾಕ್ಸ್ ಪಾಸಿಟಿವ್‌ ಬಂದಿದೆ.

 ಈತನಿಗೆ ಸೋಂಕು ತಗುಲಿದ್ದು ಹೇಗೆ?

ಈತನಿಗೆ ಸೋಂಕು ತಗುಲಿದ್ದು ಹೇಗೆ?

ಈ ವ್ಯಕ್ತಿ ಭಾರತದಿಂದ ಹೊರಗಡೆ ಹೋಗಿರಲಿಲ್ಲ ಆದರೆ ಕಾಯಿಲೆ ಬೀಳುವ ಮುನ್ನ ಹಿಮಾಚಲ ಪ್ರದೇಶಕ್ಕೆ ಹೋಗಿದ್ದ. ಈ ಹಿಂದೆ ಮಂಕಿಪಾಕ್ಸ್ ಪತ್ತೆಯಾದ ಕೇರಳದವರು ವಿದೇಶದಿಂದ ಹಿಂತಿರುಗಿದ್ದರು, ಆದರೆ ದೆಹಲಿ ವ್ಯಕ್ತಿ ವಿದೇಶಕ್ಕೆ ಹೋಗಿರಲಿಲ್ಲ, ಈ ಕಾರಣದಿಂದ ಭಾರತದೊಳಗಡೆ ನಿಧಾನಕ್ಕೆ ಮಂಕಿಪಾಕ್ಸ್ ಹರಡುತ್ತಿದೆಯೇ ಎಂಬ ಆತಂಕ ಎದುರಾಗಿದೆ.

ಮಂಕಿಪಾಕ್ಸ್ ಹೇಗೆ ಹರಡುತ್ತದೆ?

ಮಂಕಿಪಾಕ್ಸ್ ಹೇಗೆ ಹರಡುತ್ತದೆ?

ಮಂಕಿಪಾಕ್ಸ್ ಪ್ರಾಣಿಗಳಿಂದ ಮನುಷ್ಯನಿಗೆ ಹರಡಿದೆ, ಇದೀಗ ಮನುಷ್ಯರಿಂದ ಮನುಷ್ಯರಿಗೆ ಹರಡಲಾರಂಭಿಸಿದೆ. ಮಂಕಿಪಾಕ್ಸ್ ವೈರಸ್ ತಗುಲಿದ ವ್ಯಕ್ತಿಯ ದೇಹದ ದ್ರವಗಳು ತಾಗಿದರೆ ಅಥವಾ ಮಂಕಿಪಾಕ್ಸ್ ಇರುವ ವ್ಯಕ್ತಿಯ ಜೊತೆ ಲೈಂಗಿಕ ಕ್ರಿಯೆ ನಡೆಸಿದರೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು.

ಎಂಜಲು, ಮಂಕಿಪಾಕ್ಸ್ ವೈರಸ್‌ ತಗುಲಿದ ವ್ಯಕ್ತಿಯ ಬಟ್ಟೆ ಮುಟ್ಟುವುದರಿಂದ ಹರಡುವುದು.

 ಮಂಕಿಪಾಕ್ಸ್ ಲಕ್ಷಣಗಳೇನು?

ಮಂಕಿಪಾಕ್ಸ್ ಲಕ್ಷಣಗಳೇನು?

ಮಂಕಿಪಾಕ್ಸ್ ಲಕ್ಷಣಗಳು ಸ್ಮಾಲ್‌ಪಾಕ್ಸ್‌ನಂತೆಯೇ ಕಂಡು ಬರುವುದು. ಇದರ ಸಾಮಾನ್ಯ ಲಕ್ಷಣಗಳೆಂದರೆ

* ಜ್ವರ

* ಮೈಕೈ ನೋವು

* ಬೆನ್ನು ನೋವು

* ನಿಶ್ಯಕ್ತಿ

* ದುಗ್ಧ ರಸ ಊದಿಕೊಳ್ಳುವುದು

* ನ್ಯೂಮೋನಿಯಾ

* ತ್ವಚೆ ಸೋಂಕು

* ಗೊಂದಲ

* ಕಣ್ಣಿನಲ್ಲಿ ಸಮಸ್ಯೆ

ಮಂಕಿಪಾಕ್ಸ್‌ನಿದ ಸಾವು ಸಂಭವಿಸುವುದೇ?

ಮಂಕಿಪಾಕ್ಸ್‌ನಿದ ಸಾವು ಸಂಭವಿಸುವುದೇ?

ಮಂಕಿಪಾಕ್ಸ್ ಅದರಷ್ಟಕ್ಕೇ ಗುಣವಾಗುವುದು ಆದರೆ ರೋಗ ನಿರೋಧಕ ಶಕ್ತಿ ತುಂಬಾ ಕಡಿಮೆ ಇರುವವರಿಗೆ, ಮಕ್ಕಳಿಗೆ ಬಂದರೆ ಅಪಾಯಕಾರಿ. ಕೇರಳದಲ್ಲಿ ಮಂಕಿವೈರಸ್ ತಗುಲಿರುವ ಮೂವರು ವ್ಯಕ್ತಿಗಳ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಮಂಕಿಪಾಕ್ಸ್ ಈ ವಿಶ್ವದ ಮೇಲೆ ಬೀರಿರುವ ಕೆಟ್ಟ ಪರಿಣಾಮ

ಕೊರೊನಾ ಬಳಿಕ ಇದೀಗ ಮಂಕಿಪಾಕ್ಸ್ ವಿಶ್ವದ ಮೇಲೆ ಕೆಟ್ಟ ಪರಿಣಾಮ ಬೀರಿದೆ. 75 ದೆಶಗಳಲ್ಲಿ ಇದುವರೆಗೆ 16, 000 ಕೇಸ್‌ಗಳು ಪತ್ತೆಯಾಗಿದೆ.

English summary

Monkeypox virus reaches Delhi; All you need to know about Monkeypox disease in kannada

In India Slowly Increasing Monkeypox, One More Case Found At Delhi: All you need to know about Monkeypox disease in kannada,
X
Desktop Bottom Promotion