For Quick Alerts
ALLOW NOTIFICATIONS  
For Daily Alerts

ಕರ್ನಾಟಕದಲ್ಲಿ ಹೆಚ್ಚುತ್ತಿದೆ ಡೆಂಗ್ಯೂ, 4000ಕ್ಕೂ ಅಧಿಕ ಕೇಸ್‌ ಪತ್ತೆ: ಡೆಂಗ್ಯೂ ನಮಗೆ ಬಾರದಂತೆ ತಡೆಗಟ್ಟಲು ಏನು ಮಾಡಬೇಕು?

|

ಕರ್ನಾಟಕದಲ್ಲಿ ಮತ್ತೆ ಡೆಂಗ್ಯೂ ಕಾಟ ಹೆಚ್ಚಾಗಿದೆ, ಎಡೆ ಬಿಡದೆ ಕಾಡುತ್ತಿರುವ ಮಳೆಯಿಂದಾಗಿ ಡೆಂಗ್ಯೂ ಕೂಡ ಹೆಚ್ಚುತ್ತಿದೆ. ಕರ್ನಾಟಕದಲ್ಲಿ 4000ಕ್ಕೂ ಅಧಿಕ ಡೆಂಗ್ಯೂ ಕೇಸ್‌ಗಳು ಪತ್ತೆಯಾಗಿದ್ದು ಬೆಂಗಳೂರಿನಲ್ಲಿಯೇ 1102 ಕೇಸ್‌ಗಳು ಪತ್ತೆಯಾಗಿವೆ.

ಆಗಸ್ಟ್‌ನಲ್ಲಿ ಡೆಂಗ್ಯೂಗೆ 4 ಜನರು ಬಲಿಯಾಗಿದ್ದಾರೆ. ಅದರಲ್ಲಿ ಇಬ್ಬರು ಉಡುಪಿ ಜಿಲ್ಲೆಯವರು ಉಳಿದಿಬ್ಬರು ಚಿಕ್ಕ ಬಳ್ಳಾಪುರ ಹಾಗೂ ವಿಜಯಪುರಕ್ಕೆ ಸೇರಿದವರಾಗಿದ್ದರು.

ಪ್ರತಿದಿನ ನಗರಗಳಲ್ಲಿ 20ಕ್ಕೂ ಅಧಿಕ ಡೆಂಗ್ಯೂ ಕೇಸ್‌ಗಳು ಪತ್ತೆಯಾಗುತ್ತಿವೆ

ಪ್ರತಿದಿನ ನಗರಗಳಲ್ಲಿ 20ಕ್ಕೂ ಅಧಿಕ ಡೆಂಗ್ಯೂ ಕೇಸ್‌ಗಳು ಪತ್ತೆಯಾಗುತ್ತಿವೆ

ಬೆಂಗಳೂರಿನಲ್ಲಿ 351 ಇದ್ದ ಕೇಸ್‌ 1102 ಕ್ಕೆ ತಲುಪಿದೆ, ಪ್ರತಿದಿನ 20ಕ್ಕೂ ಅಧಿಕ ಜನರಿಗೆ ಡೆಂಗ್ಯೂ ಕಾಡುತ್ತಿದೆ. ಮೈಸೂರಿನಲ್ಲಿ 1000ಕ್ಕೂ ಅಧಿಕ ಕೇಸ್‌ಗಳು ಪತ್ತೆಯಾಗಿವೆ, ಉಡುಪಿಯಲ್ಲಿ 459, ಬೆಳಗಾವಿಯಲ್ಲಿ 161, ವಿಜಯಪುರದಲ್ಲಿ 160, ಮಂಡ್ಯ 155, ದಾವಣಗೆರೆ 143, ಚಿಕ್ಕಬಳ್ಳಾಪುರ 139,ಕಲ್ಬುರ್ಗಿ 146, ಚಾಮರಾಜನಗರ 120, ಧಾರವಾಡ 119, ಕೋಲಾರ 118, ಕೊಪ್ಪಳ 115, ಚಿಕ್ಕಮಂಗಳೂರು 108, ಬೆಳ್ಳಾರಿಯಲ್ಲಿ 108 ಕೇಸ್‌ಗಳು ಪತ್ತೆಯಾಗಿವೆ.

ಪ್ರತಿದಿನ ರಾಜ್ಯದಲ್ಲಿ ನೂರಾರು ಕೇಸ್‌ಗಳು ಪತ್ತೆಯಾಗುತ್ತಿತ್ತು ಈ ಸಮಯದಲ್ಲಿ ಡೆಂಗ್ಯೂ ಬಗ್ಗೆ ತುಂಬಾ ಮುನ್ನೆಚ್ಚರಿಕೆವಹಿಸಬೇಕಾಗಿದೆ.

ಡೆಂಗ್ಯೂ ಹೇಗೆ ಹರಡುತ್ತದೆ?

ಡೆಂಗ್ಯೂ ಹೇಗೆ ಹರಡುತ್ತದೆ?

ಡೆಂಗ್ಯೂ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ, ಬದಲಿಗೆ ಈಡೀಸ್ ಎಂಬ ಹೆಣ್ಣು ಸೊಳ್ಳೆಯಿಂದ ಹರಡುತ್ತದೆ. ಡೆಂಗ್ಯೂ ಇರುವ ವ್ಯಕ್ತಿಗೆ ಸೊಳ್ಳೆ ಕಚ್ಚಿ, ಆ ಸೊಳ್ಳೆ ಮತ್ತೊಬ್ಬರಿಗೆ ಕಚ್ಚಿದಾಗ ಡೆಂಗ್ಯೂ ಹರಡುತ್ತದೆ.ಆದ್ದರಿಂದ ಸೊಳ್ಳೆ ಕಚ್ಚದಂತೆ ತುಂಬಾ ಮುನ್ನೆಚ್ಚರಿಕೆವಹಿಸಿ. ಈ ಈಡೀಸ್ ಸೊಳ್ಳೆ ಹಗಲು ಹೊತ್ತಿನಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ಡೆಂಗ್ಯೂ ತಡೆಗಟ್ಟಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು?

ಡೆಂಗ್ಯೂ ತಡೆಗಟ್ಟಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು?

* ಜನರಿಗೆ ಸ್ವಚ್ಛ ಕುಡಿಯುವ ನೀರು ದೊರೆಯುವಂತೆ ಮಾಡುತ್ತಿದೆ

* ಕುಡಿಯುವ ನೀರಿನ ಸ್ವಚ್ಛತೆ ಕಡೆ ತುಂಬಾ ಗಮನ ಹರಿಸುತ್ತಿದೆ

* ಸೊಳ್ಳೆಗಳು ಹೆಚ್ಚಿರುವ ಕಡೆ ಸೊಳ್ಳೆ ನಾಶಕಗಳನ್ನು ಸಿಂಪಡಿಸುತ್ತಿದೆ

ಡೆಂಗ್ಯೂ ಬರುವುದನ್ನು ತಡೆಗಟ್ಟಲು ಏನು ಮಾಡಬೇಕು?

ಡೆಂಗ್ಯೂ ಬರುವುದನ್ನು ತಡೆಗಟ್ಟಲು ಏನು ಮಾಡಬೇಕು?

* ಡೆಂಗ್ಯೂ ಬರುವುದು ಸೊಳ್ಳೆಯಿಂದ, ಆದ್ದರಿಂದ ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ.

* ಬೆಡ್‌ಗೆ ಸೊಳ್ಳೆ ಪರದೆ ಹಾಕಿಸಿ

* ಬೆಳಗ್ಗೆ-ಸಂಜೆ ಮನೆ ಬಾಗಿಲು ಹಾಗೂ ಕಿಟಕಿಗಳನ್ನು ತೆರೆದಿಡಬೇಡಿ.

* ಕಿಟಕಿಗಳಿಗೆ ಸೊಳ್ಳೆಪರದೆ ಹಾಕಿಸಿದ್ದರೆ ಮಾತ್ರ ಕಿಟಕಿ ತೆರೆದಿಡಿ.

* ಮಕ್ಕಳಿಗೆ ತುಂಬು ತೋಳಿನ ಬಟ್ಟೆಗಳನ್ನು ಧರಿಸಿ, ನೀವು ಕೂಡ ಅಷ್ಟೆ.

ಡೆಂಗ್ಯೂನ ಈ ಲಕ್ಷಣಗಳು ಕಂಡು ಬಂದರೆ ಎಚ್ಚರವಹಿಸಿ

ಡೆಂಗ್ಯೂನ ಈ ಲಕ್ಷಣಗಳು ಕಂಡು ಬಂದರೆ ಎಚ್ಚರವಹಿಸಿ

* ತುಂಬಾ ತಲೆನೋವು

* ಕಣ್ಣಿನ ಹಿಂಭಾಗದಲ್ಲಿ ನೋವು

* ಮೈಕೈ ನೋವು

* ಜ್ವರ

* ಮೈಯಲ್ಲಿ ಕೆಂಪು ಗುಳ್ಳೆಗಳು/ದದ್ದುಗಳು ಕಂಡು ಬರುವುದು

* ಮೂಗು ಹಾಗೂ ವಸಡುಗಳಲ್ಲಿ ರಕ್ತಸ್ರಾವ

ಈ ರೀತಿಯ ಲಕ್ಷಣಗಳು ಕಂಡ ಬಂದ ತಕ್ಷಣ ಕೂಡಲೇ ಹೋಗಿ ಡೆಂಗ್ಯೂ ಪರೀಕ್ಷೆ ಮಾಡಿಸಿ. ತಡಮಾಡಿದರೆ ಪ್ಲೇಟ್‌ಲೆಟ್‌ ಕಡಿಮೆಯಾಗಿ ಅಪಾಯ ಹೆಚ್ಚುವುದು ಜಾಗ್ರತೆ..

English summary

Karnataka Sees Rise In Dengue Cases : Steps Taken By Health Department

Dengue Cases Increased in Karnataka: How To Stop Dengue, what are precaution should to take to avoid this disease,
Story first published: Monday, August 29, 2022, 16:56 [IST]
X
Desktop Bottom Promotion