For Quick Alerts
ALLOW NOTIFICATIONS  
For Daily Alerts

20ರ ನಂತರ ಹೆಣ್ಮಕ್ಕಳಿಗೆ ಮದುವೆಯಾದರೆ ದೊರೆಯಲಿದೆ ಈ ಪ್ರಯೋಜನಗಳು

|

ಹೆಣ್ಣಿನ ಮದುವೆ ವಯಸ್ಸನ್ನು 21ಕ್ಕೆ ಏರಿಸಲಾಗಿದೆ, ಹೆಣ್ಣಿನ ದುವೆ ವಯಸ್ಸನ್ನು 18-21 ವರ್ಷಕ್ಕೆ ಏರಿಸಿರುವುದು ಹೆಣ್ಣಿಗೆ ವರದಾನವಾಗಿದೆ. ಎಷ್ಟೋ ಹೆಣ್ಣು ಮಕ್ಕಳಿಗೆ 18 ವರ್ಷ ತುಂಬುವಷ್ಟರಲ್ಲಿ ಮದುವೆ ಮಾಡಲಾಗುತ್ತಿತ್ತು. 18 ವರ್ಷಕ್ಕೆ ಮದುವೆಯಾಗಿರುವುದರಿಂದ ಎಷ್ಟೋ ಹೆಣ್ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ನೋವನ್ನು ಅನುಭವಿಸುತ್ತಿದ್ದಾರೆ.

Increase women’s marriage age to 21

18 ವರ್ಷ ಅಂದರೆ ಆಗಷ್ಟೇ ಪಿಯುಸಿ ಮುಗಿದಿರುತ್ತದೆ, ಮುಂದಿನ ಭವಿಷ್ಯ ಏನು, ನಾವು ಏನಾಗಬೇಕು ಎಂಬ ಸ್ಪಷ್ಟ ಕಲ್ಪನೆ ಎಷ್ಟೋ ಹೆಣ್ಮಕ್ಕಳಿಗೆ ಇರುವುದೇ ಇಲ್ಲ, ಅಪ್ಪ-ಅಮ್ಮ ಮದುವೆ ಮಾಡ್ಕೋ ಎಂದಾಗ ಮದುವೆಯಾಗುತ್ತಾರೆ, ಇನ್ನು ಕೆಲವರು ಹದಿಹರೆಯದ ಪ್ರೀತಿಯಲ್ಲಿ ಬಿದ್ದು 18 ತುಂಬುವುದನ್ನೇ ಕಾಯುತ್ತಾ, 18 ತುಂಬಿದ ದಿನವೇ ಪಲಾಯನವಾಗಿ ಮದುವೆಯಾದವರೂ ಇದ್ದರೆ.

ಆದರೆ ಇವರೆಲ್ಲಾ ಬದುಕನ್ನು ಕೆಲವು ವರ್ಷಗಳ ಬಳಿಕ ನೋಡಿದಾಗ ಚಿಕ್ಕ ಪ್ರಾಯದಲ್ಲಿ ಮದುವೆಯಾದ ಎಷ್ಟೋ ಹೆಣ್ಮಕ್ಕಳ ಸಂಸಾರ ನೌಕೆ ಹಳಿ ತಪ್ಪಿರುತ್ತದೆ. ನಾನು ದುಡುಕಿ ತಪ್ಪು ಮಾಡಿದೆ ಎಂದು ಕೊರಗುತ್ತಿರುತ್ತಾರೆ. ಇತ್ತ ವಿದ್ಯಾಭ್ಯಾಸವೂ ಇಲ್ಲದೆ, ಅತ್ತ ಆರ್ಥಿಕ ಸ್ವಾವಲಂಬನೆಯೂ ಇಲ್ಲ ಬದುಕು ಅತಂತ್ರವಾಗಿರುವ ಎಷ್ಟೋ ಹೆಣ್ಮಕ್ಕಳು ನಮ್ಮ ನಡುವೆ ಇದ್ದಾರೆ. ಅದೇ ವಯಸ್ಸು ಸ್ವಲ್ಪ ಪಕ್ವವಾದ ಮೇಲೆ ಆದರೆ ಟೊಳ್ಳು ಪ್ರೀತಿ ಯಾವುದೆಂದು ಅರ್ಥ ಮಾಡಿಕೊಳ್ಳುತ್ತಾರೆ, ವಿದ್ಯಾಭ್ಯಾಸವೂ ಮುಗಿದಿರುತ್ತದೆ, ಕೆಲವರು ಆರ್ಥಿಕವಾಗಿಯೂ ಸ್ವಾವಲಂಬಿಯಾಗಿರುತ್ತಾರೆ. ಅಲ್ಲದೆ 20ರ ಮೇಲೆ 18ರ ಪ್ರಾಯದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳೂ ಇರಲ್ಲ.

ಮದುವೆ ವಯಸ್ಸು ಕನಿಷ್ಠ 20 ಆಗಿರುವುದರಿಂದ ಆರೋಗ್ಯದ ದೃಷ್ಟಿಯಿಂದ ಮಹಿಳೆಯರಿಗೆ ಈ ಪ್ರಯೋಜನಗಳಿವೆ:

 ಮೊದಲ ಹೆರಿಗೆ 21 ವರ್ಷದ ನಂತರ ಆದರೆ ಒಳ್ಳೆಯದು

ಮೊದಲ ಹೆರಿಗೆ 21 ವರ್ಷದ ನಂತರ ಆದರೆ ಒಳ್ಳೆಯದು

ಚಿಕ್ಕ ಪ್ರಾಯದಲ್ಲಿ ಗರ್ಭಿಣಿಯಾದರೆ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುವುದು. ವಯಸ್ಸು 20 ದಾಟಿದರೆ ಮಹಿಳೆಯರ ಆರೊಗ್ಯವೂ ಚೆನ್ನಾಗಿರುತ್ತದೆ, ಅಲ್ಲದೆ ಭೌತಿಕವಾಗಿಯೂ ಅವಳು ಸ್ವಲ್ಪ ಪಕ್ವವಾಗಿರುವುದರಿಂದ ಮನೆ, ಕುಟುಂಬ, ಮಗು ನಿರ್ವಹಣೆ ಮಾಡುವುದು ಮತ್ತಷ್ಟು ಸುಲಭವಾಗುವುದು. ಚಿಕ್ಕ ಪ್ರಾಯದಲ್ಲಿ ಆದರೆ

ಅವಳ ಮೇಲೆ ತುಂಬಾನೇ ಮಾನಸಿಕ ಒತ್ತಡ ಬೀಳುವುದು.

 ಚಿಕ್ಕ ಪ್ರಾಯದಲ್ಲಿ ಹೆರಿಗೆಯಾದವರಲ್ಲಿ ಶಿಶುವಿನ ಮರಣ ಸಂಖ್ಯೆ ಅಧಿಕ

ಚಿಕ್ಕ ಪ್ರಾಯದಲ್ಲಿ ಹೆರಿಗೆಯಾದವರಲ್ಲಿ ಶಿಶುವಿನ ಮರಣ ಸಂಖ್ಯೆ ಅಧಿಕ

ಚಿಕ್ಕ ಪ್ರಾಯದಲ್ಲಿ ಮದುವೆಯಾದ ಹೆಣ್ಣು ಮಕ್ಕಳಿಗೆ ಜನಿಸಿದ ಶಿಶುಗಳ ಸಾವಿನ ಸಂಖ್ಯೆ ಅಧಿಕವಿದೆ ಎಂದು ಅಧ್ಯಯನ ವರದಿ ಹೇಳಿದೆ. ಅಲ್ಲದೆ ಮಹಿಳೆಯರಲ್ಲೂ ರಕ್ತಹೀನತೆ ಹೆರಿಗೆ ಸಮಯದಲ್ಲಿ ಅಧಿಕ ರಕ್ತಸ್ರಾವ ಈ ರೀತಿಯ ಸಮಸ್ಯೆ ಕಂಡು ಬರುವುದು.

ಚಿಕ್ಕ ಪ್ರಾಯದ ಸ್ತ್ರೀಯರಿಗೆ ಜನಿಸಿದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಹೆಚ್ಚು

21-29 ವರ್ಷದ ಸ್ತ್ರೀಯರಿಗೆ ಜನಿಸಿದ ಮಕ್ಕಳಿಗೆ ಹೋಲಿಸಿದರೆ ಕಡಿಮೆ ಪ್ರಾಯದ ಸ್ತ್ರೀಯರಿಗೆ ಜನಿಸಿದ ಮಕ್ಕಳಿಗೆ ಆರೋಗ್ಯ ಸಮಸ್ಯೆ ಹೆಚ್ಚು ಎಂದು ಅಧ್ಯಯನ ವರದಿ ಹೇಳಿದೆ.

ಚಿಕ್ಕ ಪ್ರಾಯದಲ್ಲಿ ಮದುವೆಯಾದರೆ ಕಂಡು ಬರುವ ಮಾನಸಿಕ ಸಮಸ್ಯೆಗಳು

ಚಿಕ್ಕ ಪ್ರಾಯದಲ್ಲಿ ಮದುವೆಯಾದರೆ ಕಂಡು ಬರುವ ಮಾನಸಿಕ ಸಮಸ್ಯೆಗಳು

* ಭಾವನೆಗಳಲ್ಲಿ ಪಕ್ವತೆಯ ಕೊರತೆ (ಯಾವುದು ಸರಿ, ಯಾವುದು ತಪ್ಪು ಎಂದು ತಿಳಿಯುವುದಿಲ್ಲ)

* ಖಿನ್ನತೆ, ಮಾನಸಿಕ ಒತ್ತಡ, ಹೆರಿಗೆಯ ಬಳಿಕ ಕಾಡುವ ಖಿನ್ನತೆ, ಕೌಟಂಬಿಕ ದೌರ್ಜನ್ಯದಿಂದ ಮಾನಸಿಕ ಹಿಂಸೆ, ಗರ್ಭಪಾತದಂಥ ಸಮಸ್ಯೆಗಳು ಹೆಚ್ಚಾಗುವುದು.

* ಹಿರಿಯರ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗದಿದ್ದರೆ ತುಂಬಾ ಮಾನಸಿಕ ಒತ್ತಡ ಅನುಭವಿಸಬೇಕಾಗುವುದು. ಅಂದರೆ ಮದುವೆಯಾಗಿ ಬಂವಳು ಮನೆ ನಿಭಾಯಿಸಬೇಕು, ಬೇಗನೆ ಮಗುವನ್ನು ನೀಡಬೇಕು ಎಂಬ ನಿರೀಕ್ಷೆಗಳು ಇರುತ್ತದೆ. ಅವುಗಳನ್ನು ಪೂರೈಸಲು ಸಾಧ್ಯವಾಗದೇ ಹೋದಾಗ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ, ಇದು ಖಿನ್ನತೆಗೂ ಕಾರಣವಾಗುವುದು.

* ತಮ್ಮ ಗುರಿ ಅಥವಾ ಕನಸು ಈಡೇರಲಿಲ್ಲ (ಓದಬೇಕು, ಕೆಲಸಕ್ಕೆ ಸೇರಬೇಕು ಮುಂತಾವುಗಳು) ಎಂಬ ಕೊರಗು ಕಾಡಿ ಖಿನ್ನತೆ ಉಂಟಾಗಬಹುದು.

20 ವರ್ಷದ ಬಳಿಕ ಮದುವೆಯಾದರೆ ಪರಿಸ್ಥಿತಿ ನಿಭಾಯಿಸುವ ಪಕ್ವತೆ ಇರುವುದು

20 ವರ್ಷದ ಬಳಿಕ ಮದುವೆಯಾದರೆ ಪರಿಸ್ಥಿತಿ ನಿಭಾಯಿಸುವ ಪಕ್ವತೆ ಇರುವುದು

20-21 ವರ್ಷದ ಬಳಿಕ ಹೆಣ್ಮಕ್ಕಳಲ್ಲಿ ಪಕ್ವತೆ ಹೆಚ್ಚುವುದು, ಒಳ್ಳೆಯ ಶಿಕ್ಷಣ ಪಡೆಯಲು ಸಾಧ್ಯವಾಗುವುದು, ತಮಗೆ ಸೂಕ್ತವಾಗುವ ಸಂಗಾತಿಯ ಆಯ್ಕೆ ಮಾಡಬಹುದು ಮದುವೆಯಾಗಿ ಹೋದ ಮೇಲೆ ಆ ಮನೆ ನಿಭಾಯಿಸುವ ಪಕ್ವತೆ ಬೆಳೆಯುವುದು, ಹೆಣ್ಮಕ್ಕಳ ಮಾನಸಿಕ ಆರೋಗ್ಯ ಹದಗೆಟ್ಟರೆ ದೈಹಿಕ ಆರೋಗ್ಯದ ಮೇಲೂ ಪ್ರಭಾವ ಬೀರುವುದು, ಈಗ ಮದುವೆ ವಯಸ್ಸು ಹೆಚ್ಚಾಗಿರುವುದರಿಂದ ಅದು ಮಹಿಳೆಯರ ಆರೋಗ್ಯಕ್ಕೆ ಗುಣ ತರಲಿದೆ.

English summary

Increase women’s marriage age to 21 for health benefits in Kannada

Increase women’s marriage age to 21 for health benefits in Kannada, Read on...
Story first published: Tuesday, December 21, 2021, 18:28 [IST]
X
Desktop Bottom Promotion