For Quick Alerts
ALLOW NOTIFICATIONS  
For Daily Alerts

ಅಂಗಾಂಗ ದಾನಿಗಳ ದಿನ 2021: ಅಂಗಾಂಗ ದಾನ ಮಾಡುವುದು ಹೇಗೆ, ಯಾವೆಲ್ಲಾ ಅಂಗಾಂಗಗಳನ್ನು ದಾನ ಮಾಡಬಹುದು?

|

ಪ್ರತೀವರ್ಷ ಆಗಸ್ಟ್ 13ರಂದು ಅಂಗಾಂಗ ದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಅಂಗಾಗ ದಾನ ಮಾಡಲು ಬಯಸುವವರು ತಮ್ಮ ಹೆಸರನ್ನು ನೋಂದಾಯಿಸುತ್ತಾರೆ. ರಕ್ತದಾನದಷ್ಟೇ ಪುಣ್ಯ ದಾನ ಅಂಗಾಂಗ ದಾನ. ನಂತರ ನಮ್ಮ ದೇಹದ ಅಂಗಾಂಗಗಳು ಬೂದಿಯಾಗುವ ಅಥವಾ ಮಣ್ಣಿನಲ್ಲಿ ಕರಗುವ ಬದಲಿಗೆ ನಮ್ಮ ದೇಹದ ಅಂಗಾಂಗಗಳಿಂದ ಮತ್ತೊಬ್ಬ ವ್ಯಕ್ತಿಗೆ ಪ್ರಾಣದಾನ ಮಾಡ ಬಯಸುವವರು ಅಂಗಾಂಗ ದಾನ ಮಾಡುತ್ತಾರೆ.

ಈ ವರ್ಷ ಚಲನಚಿತ್ರ ನಟ ಸಂಚಾರಿ ವಿಜಯ್‌ ಅವರ ಅಂಗಾಂಗ ದಾನ ಮಾಡಲಾಯಿತು, ಚಿತ್ರ ನಟಿ ಜಯಂತಿಯವರ ಕಣ್ಣುಗಳನ್ನು ದಾನ ಮಾಡಲಾಯಿತು.

ಯಾರು ಅಂಗಾಂಗ ದಾನ ಮಾಡಬಹುದು?

ಯಾರು ಅಂಗಾಂಗ ದಾನ ಮಾಡಬಹುದು?

ವಯಸ್ಸಿನ ಅಂತರವಿಲ್ಲದೆ, ಲಿಂಗಬೇಧವಿಲ್ಲದೆ ಯಾರು ಬೇಕಾದರೂ ಅಂಗಾಂಗ ದಾನ ಮಾಡಬಹುದು. 18 ವಯಸ್ಸಿನ ಕೆಳಗಿನವರ ಅಂಗಾಂಗವನ್ನು ಪೋಷಕರು ದಾನ ಮಾಡಬಹುದು.

 ಅಂಗಾಂಗ ದಾನ ಹೇಗೆ ಮಾಡಬಹುದು?

ಅಂಗಾಂಗ ದಾನ ಹೇಗೆ ಮಾಡಬಹುದು?

  • ಅಂಗಾಂಗ ದಾನ ಮಾಡಬಯಸುವ ವ್ಯಕ್ತಿ ಬದುಕಿದ್ದಾಗಲೇ ಅಂಗಾಂಗ ದಾನಕ್ಕೆ ಹೆಸರುನೋಂದಾಯಿಸಿಕೊಳ್ಳಬಹುದು.
  • ಸಾವಿನ ನಂತರ ಕುಟುಂಬದವರ ಒಪ್ಪಿಗೆ ಮೇರೆಗೆ ಅಂಗಾಂಗ ದಾನ ಮಾಡಬಹುದು
  • ಅಂಗಾಂಗ ದಾನ ಮಾಡ ಬಯಸುವವರು ಈ ಸರಳ ಸ್ಟೆಪ್ಸ್ ಪಾಲಿಸಬೇಕು

    ಅಂಗಾಂಗ ದಾನ ಮಾಡ ಬಯಸುವವರು ಈ ಸರಳ ಸ್ಟೆಪ್ಸ್ ಪಾಲಿಸಬೇಕು

    ವ್ಯಕ್ತಿ ಬದುಕಿದ್ದಾಗಲೇ ಅಂಗಾಂಗ ದಾನ ಬಯಸುವವರು ಅರ್ಜಿ ಭರ್ತಿ ಮಾಡಬೇಕು, ಇದನ್ನು ORBOನಿಂದ ಪಡೆದು ಕೊಳ್ಳಬಹುದು ಅಥವಾ ಮೇಲ್ ಮುಖಾಂತರವೂ ಪಡೆದುಕೊಳ್ಳಬಹುದು.

    ಸ್ಟೆಪ್ 1: ಅಂಗಾಂಗ ದಾನ ಮಾಡಲು ಅರ್ಜಿಯನ್ನು ಅದಕ್ಕೆ ಸಂಬಂಧಿಸಿದ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬೇಕು.

    ಸ್ಟೆಪ್ 2: ನಂತರ ಅರ್ಜಿ ಭರ್ತಿ ಮಾಡಬೇಕು.

    ಸ್ಟೆಪ್ 3: ಇಬ್ಬರು ಸಾಕ್ಷಿಯಾಗಿ ಸಹಿ ಮಾಡಬೇಕು, ಅದರಲ್ಲೊಬ್ಬರು ನಿಮ್ಮ ಹತ್ತಿರದ ಸಂಬಂಧಿಯಾಗಿರಬೇಕು.

    ಸ್ಟೆಪ್ 4: ನೀವು ಡೋನರ್‌ ಕಾರ್ಡ್ ಬಯಸಿದ್ದರೆ ಅದನ್ನು ನಿಮ್ಮ ನೋಂದಾಯಿತ ನಂಬರ್‌ನೊಂದಿಗೆ ಕಳುಹಿಸಿಕೊಡಲಾಗುವುದು.

    ಸ್ಟೆಪ್ 5: ನೀವು ಅಂಗಾಂಗ ದಾನ ಮಾಡಲು ಬಯಸಿದ್ದರೆ ಅದನ್ನು ನಿಮ್ಮ ಹತ್ತಿರದವರಿಗೆ ತಿಳಿಸಿರಬೇಕು.

    ನೋಂದಾವಣೆ ಮಾಡದಿದ್ದರೆ ಏನು ಮಾಡಬೇಕು?

    ನೋಂದಾವಣೆ ಮಾಡದಿದ್ದರೆ ಏನು ಮಾಡಬೇಕು?

    ನೋಂದಾವಣೆ ಮಾಡದವರ ದೇಹದ ಅಂಗಾಂಗ ದಾನವನ್ನು ಕೂಡ ಸ್ವೀಕರಿಸಲಾಗುವುದು. ವ್ಯಕ್ತಿ ಅಂಗಾಂಗ ದಾನಕ್ಕೆ ನೋಂದಾವಣೆ ಮಾಡದೆ ಮರಣವೊಂದಿದರೆ ಕುಟುಂಬದವರು ಇಚ್ಛೆ ಪಟ್ಟರೆ ಅಂಗಗಳನ್ನು ದಾನ ಮಾಡಬಹುದು. ಅಂಗಾಂಗ ದಾನಕ್ಕೆ ನಿಗದಿತ ಸಮಯದೊಳಗೆ ದೇಹವನ್ನು ಆಸ್ಪತ್ರೆಯವರಿಗೆ ನೀಡಬೇಕಾಗುತ್ತದೆ. ಅವರು ಮೃತದೇಹದಿಂದ ಅಂಗಾಂಗ ಪಡೆದ ಬಳಿಕ ಗೌರವಪೈರ್ವ ರೀತಿಯಲ್ಲಿ ಮೃತದೇಹವನ್ನು ಹಿಂತಿರುಗಿಸುತ್ತಾರೆ.

     ನೀವು ಅಂಗಾಂಗ ದಾನ ಮಾಡ ಬಯಸುವುದಾದರೆ ಏನು ಮಾಡಬೇಕು?

    ನೀವು ಅಂಗಾಂಗ ದಾನ ಮಾಡ ಬಯಸುವುದಾದರೆ ಏನು ಮಾಡಬೇಕು?

    1. NOTTO

    ಕೇಂದ್ರ ಸರ್ಕಾರದ ನ್ಯಾಷನಲ್ ಆರ್ಗನ್ ಅಂಡ್ ಟಿಶ್ಯೂ ಟ್ರಾನ್ಸ್‌ಫ್ಲಾಂಟ್‌ ಆರ್ಗನೈಸೇಷನ್(NOTTO)ಇದರಲ್ಲಿ ನೋಂದಾವಣೆ ಮಾಡಿಕೊಳ್ಳಬೇಕು.

    Official website: www.notto.gov.in

    2. ROTTO

    ಸ್ಥಳೀಯವಾಗಿ ಇಲ್ಲಿ ಅಂಗಾಂಗ ದಾನ ಮಾಡಬಹುದು.

    1. ಸೇಂ. ಜಿಎಸ್ ಮೆಡಿಕಲ್ ಕಾಲೇಜ್ ಹಾಗೂ ಕೆಇಎಮ್ ಆಸ್ಪತ್ರೆ , ಮುಂಬಯಿ

    Official website: https://www.kem.edu/

    2. ಗೌರ್ವನ್‌ಮೆಂಟ್ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್, ಒಮ್ನಾದುರಾರ್, ಚೆನ್ನೈ

    Official website: http://www.tngmssh.tn.gov.in/

    3. ಇನ್ಸಿಟ್ಯೂಟ್ ಆಫ್ ಪಿಜಿ ಮೆಡಿಕಲ್ ಎಜುಲೇಷನ್ ಅಂಡ್ ರಿಸರ್ಚ್‌, ಕೋಲ್ಕತ್ತಾ

    Official website: http://www.ipgmer.gov.in/

    4. ಪಿಜಿಐಎಂಆರ್ ಚಂಡೀಗಢ

    Official website: http://pgimer.edu.in/PGIMER_PORTAL/PGIMERPORTAL/home.jsp

    5.ಗೌಹಾಟಿ ಮೆಡಿಕಲ್ ಕಾಲೇಜ್

    Official website: http://gmchassam.gov.in/

    ಯಾವೆಲ್ಲಾ ಅಂಗಾಂಗಗಳನ್ನು ದಾನ ಮಾಡಬಹುದು?

    ಕಿಡ್ನಿ

    ಶ್ವಾಸಕೋಶ

    ಹೃದಯ

    ಕಣ್ಣುಗಳು

    ಲಿವರ್‌

    ಪ್ಯಾಂಕ್ರಿಯಾಸ್

    ಅಕ್ಷಿಪಟಲ

    ಚಿಕ್ಕ ನರಗಳು

    ತ್ವಚೆಯ ನರಗಳು

    ಮೂಳೆಯ ನರಗಳು

    ಹೃದಯ

    ರಕ್ತನಾಳಗಳು (Veins)

    ಈಗಲೂ ಶೇ. 90ರಷ್ಟು ರೋಗಿಗಳು ಅಂಗಾಗಗಳ ದಾನ ಸಿಗದೆ ಸಾವನ್ನಪ್ಪುತ್ತಿದ್ದಾರೆ. ನಾವು ಸತ್ತ ಮೇಲೆ ನಮ್ಮ ದೇಹದ ಅಂಗಾಂಗಗಳು ಸುಟ್ಟು ಹೋಗುವುದು, ಮಣ್ಣಾಗುವುದಕ್ಕಿಂತ ಒಬ್ಬ ವ್ಯಕ್ತಿಯ ಪ್ರಾಣ ಉಳಿಸುವಂತಾದರೆ ಎಂಥ ಪುಣ್ಯಕಾರ್ಯವಲ್ಲವೇ?

English summary

Organ Donation Day 2021: How you can become a donor; list of organs you can donate

How you can become a donor, list of organs you can donate, how to organ donation.
X
Desktop Bottom Promotion