For Quick Alerts
ALLOW NOTIFICATIONS  
For Daily Alerts

ಲವಂಗ ಹೀಗೆ ಸೇವಿಸಿ ಹೊಟ್ಟೆ ಬೊಜ್ಜು ಕರಗಿಸಬಹುದು

|

ಭಾರತೀಯರು ಅಡುಗೆಗೆ ಮಸಾಲೆ ಸಾಮಗ್ರಿ ಬಳಸುವುದು ಅಧಿಕ. ಚಕ್ಕೆ-ಲವಂಗ ಈ ರೀತಿಯ ಮಸಾಲೆ ಸಾಮಗ್ರಿ ನಾವು ಪ್ರತಿನಿತ್ಯ ಮಾಡುವ ಆಹಾರದಲ್ಲಿ ಸೇರಿಸುತ್ತೇವೆ. ಈ ಈ ಮಸಾಲೆ ಸಾಮಗ್ರಿ ಅಡುಗೆಗೆ ಸ್ವಾದಿಷ್ಟ ನೀಡುವುದು ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಕ್ಯಾನ್ಸರ್‌ನಂಥ ಮಾರಕ ಕಾಯಿಲೆಯನ್ನು ತಡೆಗಟ್ಟುವ ಸಾಮರ್ಥ್ಯ ಮಸಾಲೆ ಸಾಮಗ್ರಿಯಲ್ಲಿದೆ. ಅಲ್ಲದೆ ಇವು ತೂಕ ಇಳಿಕೆಗೂ ಸಹಕಾರಿ.

ಹೆಚ್ಚಿನವರು ಚಕ್ಕೆಯನ್ನು ತೂಕ ಇಳಿಕೆಗೆ ಬಳಸುತ್ತಾರೆ. ಚಕ್ಕೆಯಂತೆ ಲವಂಗವನ್ನೂ ಬಳಸಿ ತೂಕ ಇಳಿಕೆ ಮಾಡಬಹುದು. ಆದರೆ ಮಿತಿಯಲ್ಲಿ ಸೇವಿಸಬೇಕು. ತೂಕ ಇಳಿಕೆಗೆ ಲವಂಗವನ್ನು ಯಾವ ರೀತಿ ಬಳಸಬೇಕು, ಹೆಚ್ಚು ಬಳಸಿದರೆ ಉಂಟಾಗುವ ಅಡ್ಡಪರಿಣಾಮಗಳೇನು ಎಂಬೆಲ್ಲಾ ಮಾಹಿತಿ ತಿಳಿಯೋಣ ಬನ್ನಿ:

ಲವಂಗದಲ್ಲಿರುವ ಔಷಧೀಯ ಗುಣಗಳು

ಲವಂಗದಲ್ಲಿರುವ ಔಷಧೀಯ ಗುಣಗಳು

ಲವಂಗದಲ್ಲಿ ಮ್ಯಾಂಗನೀಸ್‌ ಇದ್ದು ಇದು ಮೂಳೆಗಳಿಗೆ ಹಾನಿಯಾಗಿದ್ದರೆ ಸರಿಪಡಿಸಲು ಸಹಕಾರಿ. ಇದರಲ್ಲಿ ವಿಟಮಿನ್‌ ಕೆ, ಪೊಟಾಷ್ಯಿಯಂ, ಬೀಟಾ ಕೆರೋಟಿನ್‌ ಹಾಗೂ ಅತ್ಯಲ್ಪ ಪ್ರಮಾಣದ್ಲಿ ಪ್ರೊಟೀನ್, ಕೊಬ್ಬು, ಕಾರ್ಬೋಹೈಡ್ರೇಟ್ಸ್ ಹಾಗೂ ನಾರಿನಂಶವಿದೆ.

ಲವಂಗದಲ್ಲಿ ಆ್ಯಂಟಿಆಕ್ಸಿಡೆಂಟ್‌ ತುಂಬಾನೇ ಇರುವುದರಿಂದ ಅತ್ಯುತ್ತಮವಾದ ನೋವು ನಿವಾರಕವಾಗಿದೆ.

ತೂಕ ಇಳಿಕೆಗೆ ಲವಂಗ ಹೇಗೆ ಸಹಕಾರಿ?

ತೂಕ ಇಳಿಕೆಗೆ ಲವಂಗ ಹೇಗೆ ಸಹಕಾರಿ?

ಲವಂಗ ಜೀರ್ಣಕ್ರಿಯೆಗೆ ಸಹಕಾರಿ. ಜೀರ್ಣಕ್ರಿಯೆ ಚೆನ್ನಾಗಿದ್ದರೆ ತೂಕ ಹೆಚ್ಚಾಗಲ್ಲ. ತೂಕ ಇಳಿಕೆ ಅಥವಾ ಹೆಚ್ಚಾಗುವುದಕ್ಕೆ ದೇಹದ ಚಯಪಚಯ ಕ್ರಿಯೆ, ಜೀರ್ಣಕ್ರಿಯೆಗೆ ನೇರ ಸಂಬಂಧವಿದೆ. ಲವಂಗವನ್ನು ಮಿತಿಯಲ್ಲಿ ಸೇವಿಸುವುದರಿಂದ ತೂಕ ಇಳಿಕೆಗೆ ಸಹಕಾರಿ. ಲವಂಗವನ್ನು ನೀವು ಯಾವುದೇ ಸಮಯದಲ್ಲಿ ಬೇಕಾದರೂ ಸೇವಿಸಬಹುದು

ತೂಕ ಇಳಿಕೆಗೆ ಲವಂಗ ಬಳಸುವುದು ಹೇಗೆ

ತೂಕ ಇಳಿಕೆಗೆ ಲವಂಗ ಬಳಸುವುದು ಹೇಗೆ

* 50ಗ್ರಾಂ ಲವಂಗ

* 50 ಗ್ರಾಂ ಚಕ್ಕೆ

* 50 ಗ್ರಾಂ ಜೀರಿಗೆ

ಪುಡಿ ತಯಾರಿಸಿ

ಪುಡಿ ತಯಾರಿಸಿ

ಈ 3 ಸಾಮಗ್ರಿಯನ್ನು ಪ್ಯಾನ್‌ನಲ್ಲಿನಲ್ಲಿ ಕಡಿಮೆ ಉರಿಯಲ್ಲಿ ಹುರಿಯಿರಿ, ಅದರಿಂದ ಸುವಾಸನೆ ಬರುವಾಗ ಸ್ಟೌವ್‌ ಆಫ್‌ ಮಾಡಿ ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ರುಬ್ಬಿ ಪುಡಿ ತಯಾರಿಸಿ.

ಬಳಸುವುದು ಹೇಗೆ?

ಒಂದು ಚಿಕ್ಕ ಚಮಚದಲ್ಲಿ ಅರ್ಧ ಚಮಚ ಪುಡಿಯನ್ನು ಒಂದು ದೊಡ್ಡ ಲೋಟ ಬಿಸಿ ನೀರಿಗೆ (1/4 ಲೀಟರ್) ಹಾಕಿ ಮಿಕ್ಸ್ ಮಾಡಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

ಸೂಚನೆ: ಯಾರಿಗೆ ಚಕ್ಕೆ-ಲವಂಗ ಅಲರ್ಜಿ ಇದೆಯೋ ಅವರು ಸೇವಿಸಬೇಡಿ.

ಅಡ್ಡಪರಿಣಾಮಗಳು

ಅಡ್ಡಪರಿಣಾಮಗಳು

ಯಾವುದೇ ಕಾರಣಕ್ಕೆ ನೀವು ಹೆಚ್ಚು ಸೇವಿಸಬಾರದು, ದಿನದಲ್ಲಿ ಚಿಕ್ಕ ಚಮದದಲ್ಲಿ ಅರ್ಧ ಚಮಚ ಅಥವಾ ಅದಕ್ಕಿಂತ ಕಡಿಮೆ ಸೇವಿಸಿ. ಚಕ್ಕೆ-ಲವಂಗ ಅಧಿಕ ಸೇವಿಸಿದರೆ ತುಂಬಾ ಸುಸ್ತು, ತಲೆಸುತ್ತು ಈ ರೀತಿಯ ಸಮಸ್ಯೆ ಕಾಣಿಸಬಹುದು. ಹೊಟ್ಟೆಯ ಆರೋಗ್ಯ ಹಾಳಾಗಬಹುದು, ಗ್ಯಾಸ್ಟ್ರಿಕ್ ಸಂಬಂಧಿಸಿದ ಸಮಸ್ಯೆ ಕಾಣಿಸಬಹುದು. ನೀವು ತೂಕ ಇಳಿಕೆಗೆ ಈ ಮಸಾಲೆ ಸಾಮಗ್ರಿ ಸೇವಿಸಿದಾಗ ಈ ರೀತಿಯೆಲ್ಲಾ ಕಂಡು ಬಂದರೆ ಮುಂದುವರೆಸಬೇಡಿ.

ಅಲ್ಲದೆ ನೀವು ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದ ಬಳಿಕ ತುಂಬಾ ಹೊತ್ತು ಆಹಾರ ಸೇವಿಸಿದೆ ಇರಬೇಡಿ. ಬೆಳಗ್ಗೆ 8 ಗಂಟೆಯ ಒಳಗಾಗಿ ಆರೋಗ್ಯಕರ ಆಹಾರ ಸೇವಿಸಿ, ಇದು ನಿಮಗೆ ತೂಕ ಇಳಿಕೆಯನ್ನು ಆರೋಗ್ಯಕರ ರೀತಿಯಲು ಮಾಡಲು ಸಹಕಾರಿಯಾಗಿದೆ.

English summary

How To Use Clove For Weight Loss? Know Benefits And Side Affects of Overeating In Kannada

How To Use Clove For Weight Loss Know Benefits And Side Affects of Overeating In Kannada, read on...
X
Desktop Bottom Promotion