For Quick Alerts
ALLOW NOTIFICATIONS  
For Daily Alerts

ಪುರುಷರ ಮೆನೋಪಾಸ್‌ ಸ್ತ್ರೀಯರ ಮೆನೋಪಾಸ್‌ಗಿಂತ ಹೇಗೆ ಭಿನ್ನವಾಗಿರುತ್ತೆ?

|

ಮೆನೋಪಾಸ್‌ 40 ವರ್ಷದ ಬಳಿಕ ಮಹಿಳೆಯರನ್ನು ಕಾಡುವುದು ಸಹಜ, ಅದೇ ಮೆನೋಪಾಸ್‌ ಪುರುಷರಿಗೂ ಬರುತ್ತದೆ ಎಂಬುವುದು ಗೊತ್ತೇ? ಆದರೆ ಇದರ ಬಗ್ಗೆ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಮೆನೋಪಾಸ್‌ ಎಂಬುವುದು ಮಹಿಳೆಯರಿಗೆ ಮಾತ್ರ ಬರುವುದು ಎಂದು ಹೆಚ್ಚಿನವರು ಅಂದುಕೊಂಡಿರುತ್ತಾರೆ. ಆದರೆ ಮೆನೋಪಾಸ್‌ ಪುರುಷರನ್ನೂ ಕಾಡುತ್ತೆ.

Male menopause

ವಯಸ್ಸಾಗುತ್ತಿದ್ದಂತೆ ಹಾರ್ಮೋನ್‌ಗಳ ಬದಲಾವಣೆ ಉಂಟಾಗುತ್ತದೆ. ಆಗ ಮೆನೋಪಾಸ್ ಉಂಟಾಗುವುದು. ವಯಸ್ಸಾಗುತ್ತಿದ್ದಂತೆ ಪುರುಷರಿಗೆ ಕೆಲವು ಬದಲಾವಣೆಗಳು ಅನುಭವಕ್ಕೆ ಬರುವುದು, ಇದಕ್ಕೆ ಕಾರಣ ಪುರುಷ ಹಾರ್ಮೋನ್ ಕಡಿಮೆಯಾಗುವುದು, ಅಂದರೆ ಟೆಸ್ಟೋಸ್ಟಿರೋನ್ ಪ್ರಮಾಣ ಕಡಿಮೆಯಾಗುವುದು.

ನಾವಿಲ್ಲಿ ಪುರುಷರ ಮೆನೋಪಾಸ್ ಹಂತ ಮಹಿಳೆಯರ ಮೆನೋಪಾಸ್‌ಗಿಂತ ಹೇಗೆ ಭಿನ್ನವಾಗಿರುತ್ತದೆ, ಈ ಸಂದರ್ಭದಲ್ಲಿ ದೇಹದಲ್ಲಾಗುವ ಬದಲಾವಣೆಯೇನು ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಪುರುಷರಲ್ಲಿ ಮೆನೋಪಾಸ್ ಹಂತ ಮಹಿಳೆಯರಿಗಿಂತ ಹೇಗೆ ಭಿನ್ನವಾಗಿರುತ್ತೆ?

ಪುರುಷರಲ್ಲಿ ಮೆನೋಪಾಸ್ ಹಂತ ಮಹಿಳೆಯರಿಗಿಂತ ಹೇಗೆ ಭಿನ್ನವಾಗಿರುತ್ತೆ?

ಮಹಿಳೆಯರಲ್ಲಿ ಸ್ತ್ರೀ ಹಾರ್ಮೋನ್‌ ಸಂಪೂರ್ಣ ನಿಂತು ಹೋದರೆ, ಪುರುಷರಲ್ಲಿ ಪುರುಷ ಹಾರ್ಮೋನ್‌ ನಿಧಾನಕ್ಕೆ ಕಡಿಮೆಯಾಗುತ್ತಾ ಹೋಗುವುದು. ಪುರುಷರಲ್ಲಿ ಮೆನೋಪಾಸ್‌ ಕೆಲವರಲ್ಲಿ ಮಾತ್ರ 45-50ರ ಪ್ರಾಯದಲ್ಲಿ ಕಂಡು ಬರುತ್ತದೆ, ಆದರೆ ಹೆಚ್ಚಿನವರಲ್ಲಿ 70 ಬಳಿಕ ಈ ಸಮಸ್ಯೆ ಕಂಡು ಬರುವುದು.

ಅನೇಕ ರೀತಿಯಿಂದ ಪುರುಷ ಮೆನೋಪಾಸ್‌ ಮಹಿಳೆಯರಿಗಿಂತ ಭಿನ್ನವಾಗಿರುತ್ತದೆ. ಅಲ್ಲದೆ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಸ್ವಲ್ಪ ಕಡಿಮೆಯಾಗುವುದು, ಅದೇ ಮಹಿಳೆಯರಲ್ಲಿ ದೈಹಿಕ, ಲೈಂಗಿಕ, ಮಾನಸಿಕ ತೊಂದರೆಗಳು ಕಂಡು ಬರುವುದು.

ಆರೋಗ್ಯ ತಜ್ಞರ ಪ್ರಕಾರ ಪುರುಷರಲ್ಲಿ ವಯಸ್ಸಾಗುತ್ತಿದ್ದಂತೆ ಮೆನೋಪಾಸ್ ಸಮಸ್ಯೆ ಕಂಡು ಬರುವುದು.

 ಪುರುಷ ಮೆನೋಪಾಸ್‌ ಲಕ್ಷಣಗಳು

ಪುರುಷ ಮೆನೋಪಾಸ್‌ ಲಕ್ಷಣಗಳು

ಶಿಶ್ನ ನಿಮುರುವಿಕೆಯಲ್ಲಿ ತೊಂದರೆ

ಶೀಘ್ರ ಸ್ಖಲನ

ಮಾಂಸಖಂಡಗಳಲ್ಲಿ ಶಕ್ತಿ ಕಡಿಮೆಯಾಗುವುದು

ಅಲ್ಲದೆ ಮೈ ತೂಕ ಹೆಚ್ಚಾಗುತ್ತದೆ, ದೇಹದಲ್ಲಿ ಖನಿಜಾಂಶಗಳು , ಪೋಷಕಾಂಶಗಳು ಕಡಿಮೆಯಾಗುವುದು. ಅಲ್ಲದೆ ಸ್ವಲ್ಪ ಬೇಸರ ಕೂಡ ಈ ಸಮಯದಲ್ಲಿ ಕಾಡುವುದು.

ಪುರುಷ ಮೆನೋಪಾಸ್‌ ಕಂಡು ಹಿಡಿಯುವುದು ಹೇಗೆ, ಇದಕ್ಕೆ ಚಿಕಿತ್ಸೆ ಏನು?

ಪುರುಷ ಮೆನೋಪಾಸ್‌ ಕಂಡು ಹಿಡಿಯುವುದು ಹೇಗೆ, ಇದಕ್ಕೆ ಚಿಕಿತ್ಸೆ ಏನು?

ಪುರುಷರಲ್ಲಿ ಮೆನೋಪಾಸ್‌ ಲಕ್ಷಣಗಳು ಕಂಡು ಬಂದರೆ ಅವರಲ್ಲಿ ಟೆಸ್ಟೋಸ್ಟಿರೋನ್ ಪರೀಕ್ಷೆ ಮಾಡಿಸುವಂತೆ ವೈದ್ಯರು ಸೂಚಿಸುತ್ತಾರೆ. ಈ ರೀತಿ ಪರೀಕ್ಷೆ ಮಾಡಿದಾಗ ಟೆಸ್ಟೋಸ್ಟಿರೋನ್ ಪ್ರಮಾಣ ಕಡಿಮೆಯಾಗಿದ್ದರೆ ಅದು ಮೆನೋಪಾಸ್ ಲಕ್ಷಣಗಳಿರಬಹುದು.

ಮೆನೋಪಾಸ್‌ ತಡೆಗಟ್ಟಲು ಏನು ಮಾಡಬೇಕು?

ಮೆನೋಪಾಸ್‌ ತಡೆಗಟ್ಟಲು ಏನು ಮಾಡಬೇಕು?

ಆರೋಗ್ಯಕರ ಆಹಾರ ಪಾಲಿಸಬೇಕು

ನಿಮ್ಮ ಆಹಾರದಲ್ಲಿ ಸೊಪ್ಪು, ತರಕಾರಿ ಹೆಚ್ಚಾಗಿ ಬಳಸಬೇಕು. ಅಲ್ಲದೆ ತುಂಬಾ ಜಂಕ್ ಫುಡ್ಸ್ ತಿನ್ನುವುದು ಬಿಡಬೇಕು. ಹೀಗೆ ಮಾಡುವುದರಿಂದ ಒಬೆಸಿಟಿ ತಡೆಗಟ್ಟಬಹುದು.

ನಿಯಮಿತ ವ್ಯಾಯಾಮ

ಆರೋಗ್ಯಕರ ದೇಹಕ್ಕೆ ವ್ಯಾಯಾಮ ತುಂಬಾನೇ ಮುಖ್ಯ. ಅದರಲ್ಲೂ ವಯಸ್ಸಾದಂತೆ ಕಾಡುವ ಸಮಸ್ಯೆ ತಡೆಗಟ್ಟುವಲ್ಲಿ ವ್ಯಾಯಾಮ ತುಂಬಾನೇ ಸಹಕಾರಿಯಾಗಿದೆ.

ಸಾಕಷ್ಟು ನಿದ್ದೆ ಮಾಡಬೇಕು

ದೇಹಕ್ಕೆ 8 ಗಂಟೆ ನಿದ್ದೆ ಅವಶ್ಯಕ. ಸಮಯಕ್ಕೆ ಸರಿಯಾಗಿ ನಿದ್ದೆ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.

ಮಾನಸಿಕ ಒತ್ತಡ ಕಡಿಮೆ ಮಾಡಿ

ಮಾನಸಿಕ ಒತ್ತಡ ಹೆಚ್ಚಾದರೆ ದೇಹದ ಮೇಲೆ ಹಲವಾರು ಅಡ್ಡಪರಿಣಾಮ ಬೀರುತ್ತದೆ. ಮಾನಸಿಕ ಒತ್ತಡ ಖಿನ್ನತೆ ಉಂಟು ಮಾಡುತ್ತದೆ, ಲೈಂಗಿಕ ಸಾಮರ್ಥ್ಯ ಕುಗ್ಗಿಸುವುದು, ಒಂಥರಾ ಅಸ್ವಸ್ಥ ಮನೋಭಾವ ಉಂಟು ಮಾಡುತ್ತದೆ.

ಅದೇ ಆರೋಗ್ಯಕರ ಜೀವನಶೈಲಿ ಪುರುಷರ ಆರೋಗ್ಯ ಕಾಪಾಡುತ್ತೆ, ಅಲ್ಲದೆ ಈ ರೀತಿ ಮೆನೋಪಾಸ್ ಸಮಸ್ಯೆ ಬರುವುದನ್ನು ತಡೆಗಟ್ಟುತ್ತದೆ.

English summary

How To Manage Male Menopause Naturally in Kannada

Male menopause, How To manage this condition naturally, Here are tips, have a look.
X
Desktop Bottom Promotion