For Quick Alerts
ALLOW NOTIFICATIONS  
For Daily Alerts

ನಿಮಗೆ ನೀವೇ ಸ್ಥೈರ್ಯ ತುಂಬಿಕೊಳ್ಳಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

|

ಆರೋಗ್ಯಕರ ಜೀವನಶೈಲಿ ಹಾಗೂ ಜೀವನ ನಡೆಸಲು ಆಧುನಿಕ ಯುಗದಲ್ಲಿ ಜನರು ತುಂಬಾ ಕಷ್ಟಪಡುತ್ತಿದ್ದಾರೆ. ಹಿಂದೆ ನಿಗದಿತ ಸಮಯಕ್ಕೆ ಊಟ, ತಿಂಡಿ, ನಿದ್ರೆ ಹೀಗೆ ಎಲ್ಲವೂ ಆಗುತ್ತಲಿತ್ತು. ಆದರೆ ಇಂದು ಮಧ್ಯಾಹ್ನ ವೇಳೆ ಬೆಳಗ್ಗಿನ ಉಪಾಹಾರ, ಸಂಜೆ ವೇಳೆ ಊಟ, ಮಧ್ಯರಾತ್ರಿ ವೇಳೆ ರಾತ್ರಿ ಊಟ ಆಗುತ್ತಲಿದೆ. ಯಾರಿಗೂ ಇಂದು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸಲು ಪುರುಸೊತ್ತು ಇಲ್ಲ.

ಇಂತಹ ಸಂದರ್ಭದಲ್ಲಿ ಕೊರೋನಾ ಎನ್ನುವ ವೈರಸ್ ಕೂಡ ವಿಶ್ವವನ್ನೇ ಕಾಡುತ್ತಲಿದೆ. ಕಳೆದ ಕೆಲವು ತಿಂಗಳಿಂದ ಹೆಚ್ಚಿನ ಸಮಯ ಮನೆಯಲ್ಲೇ ಕಳೆದಿರುವಂತಹ ಜನರಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಜಡತ್ವ ಉಂಟಾಗಿರುವುದು ನಿಜ.

ಯಾಕೆಂದರೆ ಕೆಲವರು ಕೆಲಸವಿಲ್ಲದೆ ಮನೆಯಲ್ಲೇ ಕುಳಿತುಕೊಂಡು ಖಿನ್ನತೆಗೆ ಒಳಗಾಗಿರುವರು. ಅಂತವರು ತಮ್ಮ ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸುವ ಜತೆಗೆ ಜೀವನಶೈಲಿಯಲ್ಲಿ ಕೆಲವು ಬದಲಾವಣೆ ಮಾಡಿಕೊಂಡು ಆರೋಗ್ಯಕಾರಿ ಆಹಾರ ಕ್ರಮ ಕೂಡ ಪಾಲಿಸಿಕೊಂಡು ಹೋದರೆ ಆಗ ಖಂಡಿತವಾಗಿಯೂ ನೆರವಾಗಲಿದೆ.

ನಾವು ನಿಮಗೆ ಸಂಪೂರ್ಣ ಆರೋಗ್ಯ ಮತ್ತು ಮಾನಸಿಕವಾಗಿ ಆರೋಗ್ಯವಾಗಿರುವ ಬಗ್ಗೆ ತಿಳಿಸಲಿದ್ದೇವೆ.

1. ಆಲೋಚನೆ

1. ಆಲೋಚನೆ

ಜೀವನಶೈಲಿಯಲ್ಲಿ ಮೊದಲ ಬದಲಾವಣೆಯೆಂದರೆ ಅದು ನಾವು ಮಾಡುವ ಆಲೋಚನೆ. ಯಾವ ರೀತಿಯಲ್ಲಿ ಆಲೋಚಿಸುತ್ತೇವೋ ಅದೇ ರೀತಿಯಾಗಿ ನಮ್ಮ ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಇರುವುದು. ಒತ್ತಡಕ್ಕೆ ಒಳಗಾಗುವುದು ಮಾನವ ಸಹಜ ಲಕ್ಷಣ. ಇದು ದೊಡ್ಡ ಮಟ್ಟದಲ್ಲಿ ಯಾವುದೇ ಪರಿಣಾಮ ಬೀರದೆ ಇದ್ದರೆ ಆಗ ನೀವು ಇದರ ಬಗ್ಗೆ ಹೆಚ್ಚು ಚಿಂತೆ ಮಾಡಬೇಕಾಗಿಲ್ಲ.

ನಾವು ತಿನ್ನುವ ಬಗ್ಗೆ ಹೆಚ್ಚು ಆಲೋಚನೆ ಮಾಡುತ್ತಲಿರುತ್ತೇವೆ. ಆದರೆ ದೇಹಕ್ಕೆ ಇದರಿಂದ ಹೆಚ್ಚು ಪೋಷಕಾಂಶಗಳು ಸಿಗದೆ ಇರಬಹುದು. ಹೀಗಾಗಿ ನೀವು ಪ್ರತಿಯೊಂದು ವಿಚಾರದ ಧನಾತ್ಮಕ ವಿಚಾರಗಳ ಬಗ್ಗೆ ಆಲೋಚನೆ ಮಾಡಬೇಕು ಮತ್ತು ವಾಸ್ತವಿಕವಾಗಿ ದೃಷ್ಟಿ ಹರಿಸಬೇಕು. ಅತಿಯಾಗಿ ಆಲೋಚಿಸಿದರೆ ಅದರಿಂದ ಒತ್ತಡವು ಹೆಚ್ಚಾಗುವುದು ಮತ್ತು ನೀವು ಮಾಡುವಂತಹ ಕೆಲಸವು ಫಲಪ್ರದವಾಗದು.

2. ಆಂತರಿಕ ಶಕ್ತಿ

2. ಆಂತರಿಕ ಶಕ್ತಿ

ಪ್ರತಿಯೊಬ್ಬರಲ್ಲೂ ಆಂತರಿಕವಾಗಿ ಒಂದು ಶಮನಕಾರಿ ಶಕ್ತಿಯು ಇರುವುದು. ಇದೇ ನಿಮ್ಮ ಸ್ಥೈರ್ಯ ತುಂಬುವ ಅಸ್ತ್ರ. ಇದು ನಿಮಗೆ ಇತರರಿಂದ ತಿಳಿಯುವುದಿಲ್ಲ, ನಿಮ್ಮಲ್ಲಿನ ಆಂತರಿಕ ಶಕ್ತಿಯನ್ನು ನೀವೇ ಗುರುತಿಸಿಕೊಂಡು ಬೆಳೆಸಬೇಕು.

3. ಆಹಾರ

3. ಆಹಾರ

ನಾವು ಏನು ತಿನ್ನುತ್ತೇವೆ ಎನ್ನುವುದು ನಮ್ಮ ದೇಹದಲ್ಲಿ ಪ್ರತಿಫಲನ ನೀಡುವುದು ಮಾತ್ರವಲ್ಲದೆ, ನಮ್ಮ ಆಲೋಚನೆ ಮತ್ತು ಆಂತರಿಕ ಶಾಂತಿಯ ಮೇಲೂ ಇದು ಪರಿಣಾಮ ಬೀರುವುದು. ನಾವು ತಿನ್ನುವ ವೇಳೆ ಬಿಡುಗಡೆಯಾಗುವಂತಹ ಹಾರ್ಮೋನ್ ಉತ್ತಮ ಭಾವನೆ ಉಂಟು ಮಾಡುವುದು.

ಅತಿಯಾದ ಸಕ್ಕರೆ ಮತ್ತು ಕೊಬ್ಬಿನ ಆಹಾರವು ನಮ್ಮ ದೇಹಕ್ಕೆ ಹೊರಗಿನಿಂದ ಮಾತ್ರವಲ್ಲದೆ ಆಂತರಿಕವಾಗಿಯೂ ಅದು ಪರಿಣಾಮ ಬೀರುವುದು. ಜಂಕ್ ಫುಡ್ ಸೇವನೆ ಮಾಡಿದರೆ ಅದರಿಂದ ದೇಹದಲ್ಲಿ ಆಲಸ್ಯವು ಉಂಟಾಗುವುದು ಮತ್ತು ದೃಷ್ಟಿ ಕೇಂದ್ರೀಕರಿಸಲು ಆಗದು. ಆರೋಗ್ಯ ಅಥವಾ ಅನಾರೋಗ್ಯಕರ ಆಹಾರವನ್ನು ನಾವು ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡುತ್ತೇವೆ ಎನ್ನುವುದರ ಮೇಲೆ ಎಲ್ಲವೂ ಅವಲಂಬಿಸಿದೆ. ಒಂದು ಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ಅದರಿಂದ ದೇಹವು ಆರೋಗ್ಯವಾಗಿರುವುದು.

4. ಯೋಗ/ವ್ಯಾಯಾಮ

4. ಯೋಗ/ವ್ಯಾಯಾಮ

ದೈಹಿಕವಾಗಿ ಯಾವ ವ್ಯಾಯಾಮಗಳನ್ನು ಮಾಡಬೇಕು ಎನ್ನುವುದಕ್ಕೆ ಯಾವುದೇ ರೀತಿಯ ನಿರ್ಬಂಧಗಳು ಇಲ್ಲ. ದೇಹವು ಇಚ್ಛಿಸಿದಷ್ಟು ವ್ಯಾಐಅಮ ಮಾಡಬಹುದು ಮತ್ತು ತಮ್ಮ ಶಕ್ತಿಯನ್ನು ಅವರು ಬೆಳೆಸಬಹುದು. ಯೋಗವು ದೇಹ ಹಾಗೂ ಮನಸ್ಸಿಗೆ ತುಂಬಾ ಪರಿಣಾಮ ಬೀರುವುದು. ಇದರಿಂದ ದೇಹವು ಸದೃಢವಾಗುವುದು ಮತ್ತು ಮನಸ್ಸಿನ ಮೇಲೆ ನಿಗ್ರಹ ಬರುವುದು.

5. ನಿದ್ರೆ

5. ನಿದ್ರೆ

ಮನುಷ್ಯರು ಮೆದುಳಿನ ಸಾಮರ್ಥ್ಯದ ತುಂಬಾ ಕಡಿಮೆ ಭಾಗವನ್ನು ಮಾತ್ರ ಬಳಸುವರು. ಆದರೆ ಇದನ್ನು ಅತ್ಯಧಿಕವಾಗಿ ಬಳಸಿಕೊಂಡು 8 ಗಂಟೆಗಳ ನಿದ್ರೆಯ ವೇಳೆ ದೈಹಿಕವಾಗಿಯೂ ಕ್ರಿಯಾಶೀಲರಾಗಿರುವರು. ನಿದ್ರೆಯ ವೇಳೆ ನಮ್ಮ ದೇಹವು ಮನಸ್ಸು ಮತ್ತು ಅಂಗಾಂಶಗಳನ್ನು ಸರಿಪಡಿಸುವ ಕೆಲಸ ಮಾಡುವುದು. ಇದರಿಂದ ನಮ್ಮ ದೇಹಕ್ಕೆ ಸರಿಯಾದ ವಿಶ್ರಾಂತಿಯು ಅತೀ ಅಗತ್ಯವಾಗಿರುವುದು.

6. ಆಟೋಟ

6. ಆಟೋಟ

ನಾವು ಇಂದು ಪ್ರತಿನಿತ್ಯವೂ ಮನೆಯಲ್ಲೇ ಇರುವಾಗ ಅಥವಾ ಕಚೇರಿಗೆ ಹೋದರೂ ಅದರಿಂದ ಏಕತಾನತೆಯ ಜೀವನವು ಉಂಟಾಗುವುದು. ಹೀಗಾಗಿ ಖಿನ್ನತೆಯು ಕಾಡುವುದು ಮತ್ತು ಅದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಇಂತಹ ಸಮಯದಲ್ಲಿ ಮನೆಯಲ್ಲಿ ಕೆಲವೊಂದು ಗೇಮ್ಸ್ ಗಳನ್ನು ಆಡಿದರೆ ಅದರಿಂದ ಖಂಡಿತವಾಗಿಯೂ ಮನಸ್ಸಿಗೆ ಖುಷಿ ಸಿಗುವುದು.

English summary

How To Give Priority To Mental And Physical Health

Here are some of the changes we can bring in our life to form a lifestyle for us which can help in overall well-being of our body as health is not just physical it is about mental wellness too Read more.
X
Desktop Bottom Promotion