For Quick Alerts
ALLOW NOTIFICATIONS  
For Daily Alerts

ಹುದುಗು ಬರಿಸಿದ ಆಹಾರದಿಂದ ಆರೋಗ್ಯ ಹೆಚ್ಚುತ್ತೆ, ಕಾಸು ಉಳಿಯುತ್ತೆ!

|

ದಕ್ಷಿಣ ಭಾರತದ ಕಡೆ ಇಡ್ಲಿ, ದೋಸೆ ಈ ಬಗೆಯ ಆಹಾರ ಹೆಚ್ಚಾಗಿ ಸೇವಿಸುತ್ತೇವೆ, ನಾನಾ ಬಗೆಯ ದೋಸೆ ಹಾಗೂ ಇಡ್ಲಿ ಮಾಡುವಾಗ ಹಿಟ್ಟನ್ನು ಹುದುಗು ಬರಿಸಿ ಮಾಡುತ್ತೇವೆ, ಹುದುಗು ಚೆನ್ನಾಗಿ ಬರದಿದ್ದರೆ ದೋಸೆ, ಇಡ್ಲಿಅಷ್ಟು ರುಚಿ ಇರಲ್ಲ ಆದರೆ ಚೆನ್ನಾಗಿ ಹುದುಗು ಬಂದ ಅಡುಗೆ ಇದೆಯೆಲ್ಲಾ ತಿನ್ನಲು ತುಂಬಾನೇ ರುಚಿ.

How Fermented Foods Helps to Incraese The health

ಈ ಹುದುಗು ಬರಿಸಿರುವ ಹಿಟ್ಟಿನಿಂದ ಮಾಡಿದ ಅಡುಗೆ ತುಂಬಾನೇ ರುಚಿಯಾಗಿರುವುದು ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು, ಏಕೆಂದರೆ ಇಮಥ ಆಹಾರಗಳಲ್ಲಿ ಪ್ರೊಬಯೋಟಿಕ್‌ (probiotics)ಇರುತ್ತೆ. ಇವುಗಳು ಒಳ್ಳೆಯ ಬ್ಯಾಕ್ಟಿರಿಯಾಗಳಾಗಿದ್ದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಯಾರು ಹುದುಗು ಬಂದ ಆಹಾರ ಹೆಚ್ಚಾಗಿ ಸೇವಿಸುತ್ತಾರೋ ಅವರಿಗೆ ಯಾವುದೇ ಸಪ್ಲಿಮೆಂಟ್ಸ್‌ ಬೇಕಾಗಿಲ್ಲ, ಆರೋಗ್ಯ ತುಂಬಾನೇ ಚೆನ್ನಾಗಿರುತ್ತೆ.'

ಇನ್ನು ಹೋಂಮೇಡ್‌ ವೈನ್, ಯೋಗರ್ಟ್‌ ಇವುಗಳೆನ್ನೆಲ್ಲಾ ಹುದುಗು ಬರಿಸಿ ತಯಾರಿಸಲಾಗುವುದು. ನೀವು ಹುದುಗು ಬರಿಸಿದ ಆಹಾರ ಸೇವನೆ ಮಾಡಿದರೆ ಈ ಪ್ರಯೋಜನಗಳಿವೆ:

1. ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು

1. ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು

ಹುದುಗು ಬರಿಸಿದ ಆಹಾರದಲ್ಲಿ ಪ್ರೊಬಯೋಟಿಕ್‌ ಇರುತ್ತದೆ, ಈ ಪ್ರೊಬಯೋಟಿಕ್‌ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು, ಜೀರ್ಣಕ್ರಿಯೆ ಸಮಸ್ಯೆ ಇರುವವರು ಪ್ರೊಬಯೋಟಿಕ್‌ ಆಹಾರ ಸೇವಿಸುವುದು ತುಂಬಾ ಒಳ್ಳೆಯದು.

ರಾತ್ರ ಅನ್ನವನ್ನು ಮಣ್ಣಿನ ಮಾತ್ರೆಯಲ್ಲಿ ಹಾಕಿಟ್ಟು ಬೆಳಗ್ಗೆ ತಿಂದರೆ ಕೂಡ ಜೀರ್ಣಕ್ರಿಯೆಗೆ ಒಳ್ಳೆಯದು, ಇದರಲ್ಲಿ ಪ್ರೊಬಯೋಟಿಕ್‌ ಇರುತ್ತದೆ.

2. ಹೆಚ್ಚು ನ್ಯೂಟ್ರಿಷಿಯನ್‌ ಇರುತ್ತೆ

2. ಹೆಚ್ಚು ನ್ಯೂಟ್ರಿಷಿಯನ್‌ ಇರುತ್ತೆ

ಪ್ರೊಬಯೋಟಿಕ್‌ ಬ್ಯಾಕ್ಟಿರಿಯಾ ವಿಟಮಿನ್‌ಗಳು ಹಾಗೂ ಖನಿಜಾಂಶಗಳನ್ನು ಉತ್ಪತ್ತಿ ಮಾಡುತ್ತವೆ, ಇದರಿಂದ ಆಹಾರದಲ್ಲಿ ಹೆಚ್ಚಿನ ಪೋಷಕಾಂಶವಿರುತ್ತೆ. ಆದ್ದರಿಂದ ಹುದುಗು ಬರಿಸಿದ ಆಹಾರ ಹೆಚ್ಚಾಗಿ ಸೇವಿಸಿದರೆ ಯಾವುದೇ ಸಪ್ಲಿಮೆಂಟ್ಸ್ ಬೇಕಾಗಿಲ್ಲ.

 3. ರೋಗ ನಿರೋಧಕ ಶಕ್ತಿ ಹೆಚ್ಚುವುದು

3. ರೋಗ ನಿರೋಧಕ ಶಕ್ತಿ ಹೆಚ್ಚುವುದು

ಹುದುಗು ಬರಿಸಿದ ಆಹಾರ ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಮಾತ್ರವಲ್ಲ ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಈ ಪ್ರೊಬಯೋಟಿಕ್‌ ಬ್ಯಾಕ್ಟಿರಿಯಾ ನಿಮ್ಮ ರೋಗ ನಿರೋಧಕ ಕಣಗಳು ಯಾವುದಾದರೂ ರೋಗಾಣು ದೇಹವನ್ನು ಪ್ರವೇಶಿಸಿದರೆ ಬೇಗನೆ ಪ್ರತಿಕ್ರಿಯಿಸಿ ಅದರ ವಿರುದ್ಧ ಹೋರಾಡುತ್ತೆ.

4. ಹುದುಗು ಬರಿಸಿದ ಆಹಾರ ನೀವೇ ತಯಾರಿಸಿ

4. ಹುದುಗು ಬರಿಸಿದ ಆಹಾರ ನೀವೇ ತಯಾರಿಸಿ

ಈಗ ಎಲ್ಲಾ ಬಗೆಯ ಆಹಾರಗಳು ಸ್ಟೋರ್‌ಗಳಲ್ಲಿ ಸಿಗುತ್ತೆ, ಇವುಗಳನ್ನು ನೀವೇ ಮಾಡಿ ಬಳಸಿದರೆ ಹೆಚ್ಚು ಸುರಕ್ಷಿತ ಹಾಗೂ ಹಣದ ಉಳಿತಾಯ ಕೂಡ ಆಗುವುದು. ಹುದುಗು ಬರಿಸಿದ ಹಿಟ್ಟನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟ ಫ್ರಿಡ್ಜ್‌ನಲ್ಲಿಟ್ಟರೆ ವಾರದವರೆಗೂ ಬಳಸಬಹುದು.

5. ಹಣದ ಉಳಿತಾಯ ಮಾಡುತ್ತೆ

5. ಹಣದ ಉಳಿತಾಯ ಮಾಡುತ್ತೆ

ನೀವು ಹುದುಗು ಬರಿಸಿದ ಆಹಾರ ಹೆಚ್ಚಾಗಿ ಸೇವಿಸುವುದರಿಂದ ಆರೋಗ್ಯ ಚೆನ್ನಾಗಿರುತ್ತೆ, ಇದರಿಂದ ಆಸ್ಪತ್ರೆ ಖರ್ಚು ಉಳಿಯುತ್ತೆ, ಹಣದ ಉಳಿತಾಯವಾಗುತ್ತೆ.

ಈ ಆಹಾರಗಳ ಸೇವನೆಯಿಂದ ಪೋಷಕಾಂಶಗಳು ದೊರೆಯುವುದು ಹಾಗೂ ಆರೋಗ್ಯವೂ ವೃದ್ಧಿಸುವುದು.

English summary

How Fermented Foods Helps to Incraese The health

Here we explained why fermented foods increase the healh and helps to save the money, read on.. .
Story first published: Tuesday, August 16, 2022, 17:01 [IST]
X
Desktop Bottom Promotion