For Quick Alerts
ALLOW NOTIFICATIONS  
For Daily Alerts

ಚಿಕನ್‌ಪಾಕ್ಸ್ ಬಾರದಂತೆ ತಡೆಗಟ್ಟಲು ಏನು ಮಾಡಬೇಕು?

|

ಚಿಕನ್‌ಪಾಕ್ಸ್ ಎಂಬುವುದು ಒಂದು ಗಂಭೀರ ಕಾಯಿಲೆಯಾಗಿದ್ದು, ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದರಿಂದ ಇದರ ಕುರಿತು ತುಂಬಾ ಎಚ್ಚರವಹಿಸಬೇಕು. ನಿಮಗೆ ಇದುವರೆಗೆ ಚಿಕನ್‌ಪಾಕ್ಸ್ ಬರದಿದ್ದರೆ, ಇದನ್ನು ತಡೆಗಟ್ಟುವ ಯಾವುದೇ ಲಸಿಕೆ ತೆಗೆದುಕೊಳ್ಳದಿದ್ದರೆ ಚಿಕನ್‌ಪಾಕ್ಸ್ ಇರುವವರ ಹತ್ತಿರ ಹೋಗುವಾಗ ಮುನ್ನಚ್ಚರಿಕೆವಹಿಸಬೇಕು, ಇಲ್ಲದಿದ್ದರೆ ಈ ಕಾಯಿಲೆ ಅವರಿಂದ ನಿಮಗೆ ಹರಡುವ ಸಾಧ್ಯತೆ ಹೆಚ್ಚು.

ಚಿಕನ್‌ಪಾಕ್ಸ್ ಹರ್ಪೀಸ್‌ ವೈರಸ್‌ ಆದ ವಾರ್ಸಿಲ್ಲಾ ಜೋಸ್ಟರ್ ವೈರಸ್‌ನಿಂದ ಹರಡುತ್ತದೆ. ನಾವಿಲ್ಲಿ ಚಿಕನ್‌ಪಾಕ್ಸ್ ಮನೆಯಲ್ಲಿ ಯಾರಿಗಾದರೂ ಬಂದ್ರೆ ಯಾರು ಅವರಿಂದ ದೂರವಿರಬೇಕು, ಇದು ಹರಡುವುದನ್ನು ತಡೆಗಟ್ಟುವುದು ಹೇಗೆ ಎಂಬ ಮಾಹಿತಿ ನೀಡಿದ್ದೇವೆ ನೋಡಿ:

ಯಾರು ಚಿಕನ್‌ಪಾಕ್ಸ್ ಬಂದವರಿಂದ ದೂರವಿರಬೇಕು?

ಯಾರು ಚಿಕನ್‌ಪಾಕ್ಸ್ ಬಂದವರಿಂದ ದೂರವಿರಬೇಕು?

ಮನೆಯಲ್ಲಿ ಯಾರಿಗಾದರೂ ಚಿಕನ್‌ಪಾಕ್ಸ್ ಬಂದ್ರೆ ಅವರಿಂದ ಮನೆಯ ಕೆಲವರು ದೂರವಿರಬೇಕಾಗುತ್ತದೆ, ಅವರೆಂದ್ರೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು, ಮಕ್ಕಳು, ಗರ್ಭಿಣಿಯರು, ಹಾಗೂ ಈ ಹಿಂದೆ ಚಿಕನ್‌ಪಾಕ್ಸ್ ಬಾರದೇ ಇರುವವರು. ಇಲ್ಲದಿದ್ದರೆ ಚಿಕನ್‌ಪಾಕ್ಸ್ ಹರಡುವುದು. ಇನ್ನಿ ಗರ್ಭಿಣಿಯರಿಗೆ ಚಿಕನ್‌ಪಾಕ್ಸ್ ಬಂದ್ರೆ ಗರ್ಭದಲ್ಲಿರುವ ಮಗುವಿಗೂ ತೊಂದರೆ ಉಂಟಾಗುವುದರಿಂದ ತುಂಬಾ ಎಚ್ಚರಿಕೆವಹಿಸಬೇಕು.

ಚಿಕನ್‌ಪಾಕ್ಸ್ ಯಾವ ರೀತಿ ಹರಡುತ್ತದೆ?

ಚಿಕನ್‌ಪಾಕ್ಸ್ ಯಾವ ರೀತಿ ಹರಡುತ್ತದೆ?

ಚಿಕನ್‌ಪಾಕ್ಸ್ ಗುಳ್ಳೆಗಳು ಕಾಣಿಸಿಕೊಳ್ಳು ಒಂದೆರಡು ದಿನದ ಮುಂಚೆಯೇ ಹರಡಬಹುದು. ಈ ಸಮಯದಲ್ಲಿ ಚಿಕನ್‌ಪಾಕ್ಸ್ ಬರುವ ವ್ಯಕ್ತಿಯಲ್ಲಿ ಮೈಕೈ ನೋವು, ವಿಪರೀತ ತಲೆನೋವು ಕಂಡು ಬಂದಿರುತ್ತದೆ. ಇನ್ನು ಮೈಯಲ್ಲಿ ಗುಳ್ಳೆಗಳು ಬಂದು ಅದರ ಕೊನೆಯ ಗುಳ್ಳೆ ಒಡೆದು ಒಣಗುವವರೆಗೆ ಇದು ಹರಡುವ ಸಾಧ್ಯತೆ ಹೆಚ್ಚು.

ಇನ್ನು ಚಿಕನ್‌ಪಾಕ್ಸ್ ಇರುವ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ ಎಂಜಲು ಮೂಲಕವೂ ಹರಡುತ್ತದೆ. ಅಲ್ಲದೆ ಚಿಕನ್‌ಪಾಕ್ಸ್ ಇರುವ ವ್ಯಕ್ತಿಯನ್ನು ಮುಟ್ಟುವುದರಿಂದ ಅಥವಾ ಅವರು ಬಳಸಿದ ವಸ್ತುಗಳು ಅಥವಾ ಬಟ್ಟೆಗಳನ್ನು ಮುಟ್ಟುವುದರಿಂದಲೂ ಹರಡುವುದು.

ಇನ್ನು ಹೆಚ್ಚಿನವರಿಗೆ ತಿಳಿಯದ ವಿಷಯವೆಂದರೆ ಕೆಲವರಲ್ಲಿ ಚಿಕನ್‌ಪಾಕ್ಸ್ ವೈರಸ್‌ ವರ್ಷದಿಂದ ಇರುತ್ತದೆ, ಇನ್ನು ಕೆಲವರಲ್ಲಿ ಕೆಲ ದಶಕದಿಂದ ಇರುತ್ತದೆ, ಅವರಿಂದಲೂ ಹರಡಬಹುದು.

ಯಾರು ಚಿಕನ್‌ಪಾಕ್ಸ್ ಲಸಿಕೆ ತೆಗೆದುಕೊಳ್ಳಬೇಕು?

ಯಾರು ಚಿಕನ್‌ಪಾಕ್ಸ್ ಲಸಿಕೆ ತೆಗೆದುಕೊಳ್ಳಬೇಕು?

ಮಗು ಜನಿಸಿದ 11ರಿಂದ 14 ತಿಂಗಳ ಒಳಗಾಗಿ ಒಮದು ಲಸಿಕೆ ಪಡೆದುಕೊಳ್ಳಬೇಕು, ನಂತರ 15-23 ತಿಂಗಳ ಒಳಗಾಗಿ ಮತ್ತೊಂದು ಲಸಿಕೆ ತೆಗೆದುಕೊಳ್ಳಬೇಕು.

ಅಲ್ಲದೆ ಇದುವರೆಗೆ ಯಾರು ಚಿಕನ್‌ಪಾಕ್ಸ್‌ಗೆ ಲಸಿಕೆ ತೆಗೆದುಕೊಂಡಿಲ್ಲವೋ ಅವರು ತೆಗೆದುಕೊಳ್ಳಬಹುದು, ಇನ್ನು ಹದಿಹರೆಯದವರು, ಗರ್ಭಧಾರಣೆ ಬಯಸುವವರು ಲಸಿಕೆ ತೆಗೆದುಕೊಳ್ಳುವ ಮೂಲಕ ಚಿಕನ್ ಪಾಕ್ಸ್ ಅಪಾಯ ತಡೆಗಟ್ಟಬಹುದು.

ಲಸಿಕೆಯ ಅಡ್ಡಪರಿಣಾಮ

ಇತರ ಲಸಿಕೆ ತೆಗೆದುಕೊಂಡಾಗ ಕಂಡು ಬರುವ ಅಡ್ಡಪರಿಣಾಮಗಳಂತೆ ಚಿಕನ್‌ಪಾಕ್ಸ್‌ಗೆ ಲಸಿಕೆ ತೆಗೆದುಕೊಂಡಾಗ ಜ್ವರ ಕಾಣಿಸಬಹುದು, ಆದರೆ ಒಂದೆರಡು ದಿನದಲ್ಲಿ ಸರಿ ಹೋಗುವುದು.

ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಚಿಕನ್‌ಪಾಕ್ಸ್ ಇರುವವರು ಸಂಪರ್ಕಕ್ಕೆ ಬಂದ್ರೆ

ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಚಿಕನ್‌ಪಾಕ್ಸ್ ಇರುವವರು ಸಂಪರ್ಕಕ್ಕೆ ಬಂದ್ರೆ

ಒಂದು ವೇಳೆ ನೀವು ಚಿಕನ್‌ಪಾಕ್ಸ್ ಇರುವವರ ಸಂಪರ್ಕಕ್ಕೆ ಬಂದ್ರೆ ಲಸಿಕೆ ತೆಗೆದುಕೊಂಡ್ರೆ ಇದು ಬಾರದಂತೆ ತಡೆಗಟ್ಟಬಹುದು. ಇನ್ನು ಗರ್ಭಿಣಿಯರು ಚಿಕನ್‌ಪಾಕ್ಸ್‌ಗೆ ಲಸಿಕೆ ತೆಗೆದುಕೊಳ್ಳುವಂತಿಲ್ಲ. ಗರ್ಭಿಣಿಯರು ಚಿಕನ್‌ಪಾಕ್ಸ್ ಇರುವವರ ಸಂಪರ್ಕಕ್ಕೆ ಬಂದ್ರೆ ಕೂಡಲೇ ವೈದ್ಯರನ್ನು ಭೇಟಿಯಾಗಬೇಕು. ಸಂಪರ್ಕಕ್ಕೆ ನಾಲ್ಕು ದಿನದ ಒಳಗಾಗಿ ಸ್ಪೆಷಲ್‌ ಆ್ಯಂಟಿಬಾಡೀಸ್ ನೀಡಲಾಗುವುದು. ಇದು ಚಿಕನ್‌ಪಾಕ್ಸ್ ಬೆಳವಣಿಗೆಯನ್ನು ತಡೆಗಟ್ಟುತ್ತದೆ. ಇನ್ನು ಮಗು ಹುಟ್ಟುವ ಕೆಲ ದಿನ ಮುನ್ನ ಅಥವಾ ಜನಿಸಿದ ಬಳಿಕ ತಾಯಿಗೆ ಚಿಕನ್‌ಪಾಕ್ಸ್ ಬಂದ್ರೆ ಪ್ಯಾಸಿವ್‌ ಇಮ್ಯುನೈಷೇಷನ್ ಮೂಲಕ ಮಗುವಿಗೆ ಚಿಕನ್‌ಪಾಕ್ಸ್ ಬಾರದಂತೆ ತಡೆಗಟ್ಟಬಹುದು.

ಚಿಕನ್‌ಪಾಕ್ಸ್ ಹರಡದಂತೆ ಹೇಗೆ ತಡೆಗಟ್ಟಬಹುದು?

ಚಿಕನ್‌ಪಾಕ್ಸ್ ಹರಡದಂತೆ ಹೇಗೆ ತಡೆಗಟ್ಟಬಹುದು?

* ಚಿಕನ್‌ಪಾಕ್ಸ್ ಇರುವ ವ್ಯಕ್ತಿಯ ಸಂಪರ್ಕಕ್ಕೆ ಬಂದ್ರೆ ಕೂಡಲೇ ವೈದ್ಯರನ್ನು ಭೇಟಿ ಮಾಡಬೇಕು. ಚಿಕನ್‌ಪಾಕ್ಸ್‌ ಇರುವವರು ಮನೆಯವರಿಂದ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯಬೇಕು.

*ಇನ್ನು ಮಕ್ಕಳಿಗೆ ಚಿಕನ್‌ಪಾಕ್ಸ್ ಬಂದ್ರೆ ಅವರನ್ನು ಶಾಲೆಗೆ ಕಳುಹಿಸಬಾರದು ಅಲ್ಲದೆ ಇತರ ಮಕ್ಕಳ ಜೊತೆ ಆಡಲು ಬಿಡಬಾರದು.

* ಮೈಯಲ್ಲಿ ಗುಳ್ಳೆಗಳು ಬಂದಾಗ ಕೆರೆದು ಗುಳ್ಳೆಗಳನ್ನು ಒಡೆಯಬೇಡಿ, ಇದರಿಂದಲೂ ಹರಡಬಹುದು. ಇನ್ನು ಮಕ್ಕಳ ಉಗುರುಗಳನ್ನು ಕತ್ತರಿಸಿ, ಇದರಿಂದ ಅವರು ಪರಚಿ ಗಾಯವಾಗುವುದನ್ನು ತಪ್ಪಿಸಬಹುದು.

Source: NCBI Resource

English summary

How can you avoid getting chickenpox in Kannada

Here are tips to avoid geting chickenpox, read on.
X
Desktop Bottom Promotion