For Quick Alerts
ALLOW NOTIFICATIONS  
For Daily Alerts

ಈಗ ಈ ಮನೆಕೆಲಸಗಳನ್ನ ಮಾಡೋದ್ರಿಂದ, ವೃದ್ಧಾಪ್ಯದಲ್ಲಿ ಮರೆಗುಳಿತನ ಬರೋದಿಲ್ಲ!

|

ಹೆಚ್ಚಿನವರಿಗೆ ವಯಸ್ಸಾದ ಮೇಲೆ ಕಾಡುವ ಒಂದು ಸಮಸ್ಯೆ ಎಂದರೆ ಡಿಮೆನ್ಷಿಯಾ ಅಥವಾ ಮರೆಗುಳಿತನ. ಇದೊಂದು ದೀರ್ಘಕಾಲದ ಮಾನಸಿಕ ಆರೋಗ್ಯ ಸ್ಥಿತಿಯಾಗಿದ್ದು, ಪ್ರತಿವರ್ಷ ಪ್ರಪಂಚದಾದ್ಯಂತ ಲಕ್ಷಾಂತರ ವೃದ್ಧರಲ್ಲಿ ಕಾಣಿಸಿಕೊಳ್ಳುತ್ತಿದೆ. ನೆನಪಿನ ಶಕ್ತಿ ಇಲ್ಲದಿರುವಿಕೆ, ಚಿಂತನೆ ಮಾಡುವ ಸಾಮರ್ಥ್ಯದ ಕುಸಿಯುವಿಕೆಯು ವ್ಯಕ್ತಿಯ ದಿನನಿತ್ಯದ ಜೀವನದ ಮೇಲೆ ತೀವ್ರ ಪರಿಣಾಮ ಬೀರುವುದು. ಈ ಸಮಸ್ಯೆ ಬರದೇ ಇರುವಂತೆ ತಡೆಯಲು ಯಾವುದೇ ಮಾರ್ಗವಿಲ್ಲ ಅಥವಾ ಅದಕ್ಕೆ ಚಿಕಿತ್ಸೆಯೂ ಇಲ್ಲ. ಔಷಧಗಳು ಮತ್ತು ಚಿಕಿತ್ಸೆಗಳ ಸಹಾಯದಿಂದ ಮಾತ್ರ ಇದನ್ನು ನಿರ್ವಹಿಸಬಹುದು.

ಆದರೆ, ಬಾಲ್ಯದಿಂದಲೂ ಕೆಲವು ಸಣ್ಣ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಮತ್ತು ದೈಹಿಕ ಚಟುವಟಿಕೆಯನ್ನು ಮಾಡುವ ಮೂಲಕ ಮರೆಗುಳಿತದ ಅಪಾಯವನ್ನು ಕಡಿಮೆ ಮಾಡಬಹುದು. ಕೆಲವು ಮನೆಕೆಲಸಗಳನ್ನು ಮಾಡುವ ಮೂಲಕ, ಸಕ್ರಿಯವಾಗಿರುವುದರಿಂದ ವೃದ್ಧಾಪ್ಯದಲ್ಲಿ ಮರೆಗುಳಿತನ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಹಾಗಾದರೆ ಆ ಆ ಕೆಲಸಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.

ಡಿಮೆನ್ಷಿಯಾ ಅಥವಾ ಮರೆಗುಳಿತನ ಸಮಸ್ಯೆಗೆ ಮನೆಯ ಕೆಲಸಗಳು ಹೇಗೆ ಪ್ರಯೋಜನಕಾರಿ?:

ಡಿಮೆನ್ಷಿಯಾ ಅಥವಾ ಮರೆಗುಳಿತನ ಸಮಸ್ಯೆಗೆ ಮನೆಯ ಕೆಲಸಗಳು ಹೇಗೆ ಪ್ರಯೋಜನಕಾರಿ?:

ಒಂದು ಅಧ್ಯಯನದ ಪ್ರಕಾರ, ಕ್ಲೀನಿಂಗ್ ಮತ್ತು ತೋಟಗಾರಿಕೆಯಂತಹ ಸಾಮಾನ್ಯ ಪ್ರಾಪಂಚಿಕ ಚಟುವಟಿಕೆಗಳು ಬುದ್ಧಿಮಾಂದ್ಯತೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದೆ. ಇಂತಹ ಕೆಲವು ಮನೆಕೆಲಸಗಳಲ್ಲಿ ತೊಡಗುವುದರಿಂದ ಹೆಚ್ಚಿನ ನೆನಪಿನ ಶಕ್ತಿ ಸೃಷ್ಟಿಸಲು ಸಹಾಯ ಮಾಡುತ್ತದೆ. ಆಶ್ಚರ್ಯವೆನೇಂದರೆ, ಯಾವುದೇ ರೀತಿಯ ಕಠಿಣ ದೈಹಿಕ ವ್ಯಾಯಾಮವನ್ನು ಮಾಡುವವರಿಗೆ ಹೋಲಿಸಿದರೆ ಮನೆಯ ಕೆಲಸಗಳನ್ನು ಮಾಡುವವರಲ್ಲಿ ಹೆಚ್ಚಿನ ಮೆದುಳಿನ ಶಕ್ತಿಯಿರುತ್ತದೆ. ನರವಿಜ್ಞಾನ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವವರಿಗೆ ಪ್ರಯೋಜನಕಾರಿಯಾಗಲಿರುವ ನಿರ್ದಿಷ್ಟವಾದ ಈ 5 ಮನೆಕೆಲಸಗಳನ್ನು ಉಲ್ಲೇಖ ಮಾಡಿದೆ.

ಸ್ವಚ್ಛಗೊಳಿಸುವಿಕೆ:

ಸ್ವಚ್ಛಗೊಳಿಸುವಿಕೆ:

ಸ್ವಚ್ಛಗೊಳಿಸುವಿಕೆ ಮತ್ತು ನಿಮ್ಮ ಮಾನಸಿಕ ಆರೋಗ್ಯಕ್ಕೆ ಬಲವಾದ ಸಂಬಂಧವಿದೆ. ನಿಮ್ಮ ಸುತ್ತಮುತ್ತಲಿನ ಮನೆ ಮತ್ತು ಜಾಗವನ್ನು ಸ್ವಚ್ಛಮಾಡುವುದು ಒತ್ತಡ, ಆತಂಕ ಮತ್ತು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಸ್ವಚ್ಛಗೊಳಿಸುವಿಕೆಯು ಧ್ಯಾನಮಯವಾಗಿದ್ದು, ಇದು ಮೆದುಳಿನಲ್ಲಿ ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ, ಜೊತೆಗೆ ಸಕಾರಾತ್ಮಕ ಭಾವನೆಯನ್ನು ಉಂಟುಮಾಡುತ್ತದೆ. ಇದು ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುವುದಲ್ಲದೇ, ಮರೆಗುಳಿತನದ ಸಂದರ್ಭದಲ್ಲಿ ಸಾಮಾನ್ಯ ಕೆಲಸವಾಗಿದೆ.

ಅಚ್ಚುಕಟ್ಟುಗೊಳಿಸುವಿಕೆ:

ಅಚ್ಚುಕಟ್ಟುಗೊಳಿಸುವಿಕೆ:

ನಿಮ್ಮ ಜಾಗವನ್ನು ಗಲೀಜಾಗಿ ಇಟ್ಟುಕೊಳ್ಳುವುದರಿಂದ ಖಿನ್ನತೆಯ ಲಕ್ಷಣಗಳು ಇನ್ನಷ್ಟು ಹದಗೆಡಿಸಬಹುದು ಎಂದು ಅಧ್ಯಯನಗಳು ಸೂಚಿಸುತ್ತವೆ. ಆದ್ದರಿಂದ ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ವ್ಯವಸ್ಥಿತಗೊಳಿಸುವುದರಿಂದ ಒತ್ತಡದ ಮಟ್ಟವನ್ನು ಕಡಿಮೆಮಾಡಬಹುದು. ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ ಜನರಿಗೆ, ನೀಟ್ ಆಗಿ ಇಡುವ ಕೆಲಸುವ ಗಮನವನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ ಜೊತೆಗೆ ಮೂಡ್ ಸ್ವಿಂಗ್‌ಗಳ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಅಡುಗೆ ಮಾಡುವುದು:

ಅಡುಗೆ ಮಾಡುವುದು:

ಅಡುಗೆ ಮಾಡುವುದು ಕೇವಲ ಮನೆಯ ಕೆಲಸವಲ್ಲ. ಇದು ಮೆದುಳನ್ನು ಉತ್ತೇಜಿಸುವ ಚಟುವಟಿಕೆಯಾಗಿದ್ದು, ನಿಮ್ಮ ಮೆದುಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಈ ಚಟುವಟಿಕೆಯು ಮೆದುಳಿನ ಮುಂಭಾಗವನ್ನು ಬಲಪಡಿಸಿ, ಅದಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಕಾರ್ಯಗಳನ್ನು ಸುಧಾರಿಸುತ್ತದೆ. ಗಿಡಮೂಲಿಕೆಗಳು ಮತ್ತು ಮಸಾಲೆಗಳ ಬಗ್ಗೆ ತಿಳಿದುಕೊಳ್ಳುವುದು ಇಂದ್ರಿಯ ತೀಕ್ಷ್ಣತೆ ಮತ್ತು ಸ್ಮರಣೆಯನ್ನು ಸುಧಾರಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಪಾಕವಿಧಾನಕ್ಕೆ ಗಮನ ಕೊಡುವುದರಿಂದ ಗಮನವನ್ನು ಸುಧಾರಿಸಲು ಮತ್ತು ಮೆದುಳಿನ ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ.

ತೋಟಗಾರಿಕೆ:

ತೋಟಗಾರಿಕೆ:

ಪ್ರಕೃತಿಯಲ್ಲಿ ಸಮಯ ಕಳೆಯುವುದು ನಿಮ್ಮ ಮನಸ್ಸು, ದೇಹ ಮತ್ತು ಆತ್ಮವನ್ನು ಪುನಶ್ಚೇತನಗೊಳಿಸಲು ಸಹಾಯ ಮಾಡುತ್ತದೆ. ತೋಟಗಾರಿಕೆ ಇತರರೊಂದಿಗೆ ಸಂಪರ್ಕ ಸಾಧಿಸಲು ಮತ್ತು ನಿಮ್ಮ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮಾನಸಿಕ ನೆಮ್ಮದಿಯನ್ನು ಹೆಚ್ಚಿಸುತ್ತದೆ ಮತ್ತು ಇತರರೊಂದಿಗೆ ಆರೋಗ್ಯಕರ ಸಂಬಂಧಗಳನ್ನು ಬೆಳೆಸಲು ಸಹಾಯ ಮಾಡುತ್ತದೆ. ಇದಲ್ಲದೆ, ಸೂರ್ಯನ ಮೇಲೆ ಸ್ವಲ್ಪ ಸಮಯ ಕಳೆಯುವುದು ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸಬಹುದು ಮತ್ತು ನಿಮಗೆ ಶಾಂತ ಭಾವನೆಯನ್ನು ಉಂಟುಮಾಡಬಹುದು.

ಇತರ ಮನೆಗೆಲಸ:

ಇತರ ಮನೆಗೆಲಸ:

ನೆಲ ಒರೆಸುವುದು, ಪಾತ್ರೆ ತೊಳೆಯುವುದು ಮತ್ತು ಬಟ್ಟೆ ಒಗೆಯವುದು ಸೇರಿದಂತೆ ಭಾರೀ ಮನೆಕೆಲಸಗಳು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಇದು ಖಿನ್ನತೆಯ ಲಕ್ಷಣಗಳನ್ನು ಸರಾಗಗೊಳಿಸಲು ಸಹಾಯ ಮಾಡುತ್ತದೆ. ಜೊತೆಗೆ ಮನಸ್ಥಿತಿಯನ್ನು ಸುಧಾರಿಸಿ, ತೃಪ್ತಿಯ ಭಾವವನ್ನು ನೀಡುತ್ತದೆ. ಆದಾಗ್ಯೂ, ಜಂಟಿ ನೋವಿನಿಂದ ಬಳಲುತ್ತಿರುವವರು ಹೆಚ್ಚಿನ ಹೊರೆ ಕೆಲಸ ಮಾಡುವುದನ್ನು ತಪ್ಪಿಸಬೇಕು ಏಕೆಂದರೆ ಇದು ಮುರಿತಕ್ಕೆ ಕಾರಣವಾಗಬಹುದು.

English summary

Household Chores that are Good for your Mental Health and Reduce Risk of Dementia

Here we talking about household chores that are good for your mental health and reduce risk of dementia, read on
Story first published: Monday, September 20, 2021, 17:23 [IST]
X
Desktop Bottom Promotion