For Quick Alerts
ALLOW NOTIFICATIONS  
For Daily Alerts

ರುಚಿ ಮತ್ತು ವಾಸನೆ ಘ್ರಾಣಿಸುವಂತಹ ಶಕ್ತಿ ಕಡಿಮೆಯಾಗಿದೆಯೇ? ಇಲ್ಲಿದೆ ಮನೆಮದ್ದು

|

ನಾವು ತಿನ್ನುವಂತಹ ಆಹಾರವು ರುಚಿಯಾಗಿ, ಸುವಾಸನೆಭರಿತವಾಗಿದ್ದರೆ ದಬಾಯಿಸಿ ಊಟ ಮಾಡಬೇಕು ಎಂದು ಅನಿಸುವುದು ಇದೆ. ಅದೇ ಈ ಆಹಾರದಲ್ಲಿ ಯಾವುದೇ ರುಚಿ ಹಾಗೂ ಸುವಾಸನೆಯು ನಿಮಗೆ ತಿಳಿಯದೆ ಇದ್ದರೆ ಆಗ ತಿಂದ ಆಹಾರವು ಖಂಡಿತವಾಗಿಯೂ ಮಣ್ಣು ತಿಂದಂತೆ ಆಗಬಹುದು. ಹೀಗಾಗಿ ಪ್ರತಿಯೊಬ್ಬ ಮನುಷ್ಯನಿಗೂ ರುಚಿ ಹಾಗೂ ಸುವಾಸನೆಯು ಕಂಡುಹಿಡಿಯುವಂತಹ ಶಕ್ತಿಯನ್ನು ದೇವರು ನೀಡಿರುವರು. ಇದರಲ್ಲಿ ನಾಲಗೆಯು ರುಚಿ ಹಾಗೂ ಮೂಗು ಸುವಾಸನೆ ಕಂಡು ಹಿಡಿಯುವುದು. ಇವೆರಡು ಸರಿಯಾಗಿಲ್ಲದ ಪಕ್ಷದಲ್ಲಿ ಆಹಾರವು ಬಾಯಿಗೆ ರುಚಿಸದು.

ಆದರೆ ಕೆಲವೊಂದು ಅನಾರೋಗ್ಯ ಹಾಗೂ ದೇಹಕ್ಕೆ ವಯಸ್ಸಾಗುತ್ತಾ ಹೋದಂತೆ ರುಚಿ ಹಿಡಿಯುವ ಮತ್ತು ವಾಸನೆ ಘ್ರಾಣಿಸುವಂತಹ ಶಕ್ತಿಯು ಕಡಿಮೆ ಆಗುತ್ತಾ ಹೋಗುವುದು. ಕೆಲವೊಮ್ಮೆ ಜ್ವರ ಹಾಗೂ ಶೀತದ ಸಂದರ್ಭದಲ್ಲೂ ಈ ಸಮಸ್ಯೆಯು ಬರುವುದು. ಇಂತಹ ಸಮಸ್ಯೆಗಳು ಇದ್ದರೆ ಆಗ ಖಂಡಿತವಾಗಿಯೂ ಭೀತಿ ಪಡಬೇಕಾಗಿಲ್ಲ. ಯಾಕೆಂದರೆ ಕೆಲವು ಮನೆಮದ್ದುಗಳನ್ನು ಬಳಸಿಕೊಂಡು ಈ ಸಮಸ್ಯೆ ನಿವಾರಿಸಬಹುದು. ಅಂತಹ ಮನೆಮದ್ದುಗಳು ಯಾವುದು ಎಂದು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ. ಶೀತ, ಜ್ವರದ ಸಂದರ್ಭದಲ್ಲಿ ಇಂತಹ ಸಮಸ್ಯೆ ಇದ್ದರೆ ಖಂಡಿತವಾಗಿಯೂ ಮನೆಮದ್ದುಗಳು ಪರಿಣಾಮಕಾರಿ. ಆ ಮನೆಮದ್ದುಗಳು ಯಾವುದು ಎಂದು ತಿಳಿಯಲು ಓದಲು ಮುಂದಾಗಿ...

1. ಹರಳೆಣ್ಣೆ

1. ಹರಳೆಣ್ಣೆ

ಹರಳೆಣ್ಣೆಯಲ್ಲಿ ಇರುವಂತಹ ರಿಕನೋಲಿಕ್ ಆಮ್ಲವು ತುಂಬಾ ಪರಿಣಾಮಕಾರಿ ಉರಿಯೂತ ಶಮಕಾರಿ ಗುಣ ಹೊಂದಿದೆ. ಹರಳೆಣ್ಣೆಯ ಒಂದು ಹನಿಯನ್ನು ಮೂಗಿನ ಹೊಳ್ಳೆಗೆ ಹಾಕಿದರೆ ಅದರಿಂದ ಶೀತ ಹಾಗೂ ಜ್ವರದಿಂದ ಆಗಿರುವಂತಹ ಊತ ಮತ್ತುಉರಿಯೂತವು ನಿವಾರಣೆ ಆಗುವುದು. ಇದರಿಂದ ವಾಸನೆ ಹಾಗೂ ರುಚಿಯ ಪ್ರಜ್ಞೆಯನ್ನು ಅದು ಮರಳಿ ಸ್ಥಾಪಿಸುವುದು.

ಅಗತ್ಯ ವಸ್ತುಗಳು

ಒಂದು ಚಮಚ ಬಿಸಿ ಮಾಡಿ ತಣ್ಣಗೆ ಮಾಡಿರುವ ಹರಳೆಣ್ಣೆ

ಬಳಸುವುದು ಹೇಗೆ

ಮೂಗಿನ ಎರಡು ಹೊಳ್ಳೆಗಳಿಗೆ ಒಂದೊಂದು ಹನಿ ಹರಳೆಣ್ಣೆ ಹಾಕಿ.

ಇದನ್ನು ಎಷ್ಟು ಸಲ ಮಾಡಬೇಕು

ಇದನ್ನು ದಿನದಲ್ಲಿ ಎರಡು ಸಲ ಮಾಡಿ. ಒಂದು ಸಲ ಬೆಳಗ್ಗೆ ಮತ್ತು ಮತ್ತೊಂದು ಸಲ ಸಂಜೆ.

2. ಬೆಳ್ಳುಳ್ಳಿ

2. ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಸೂಕ್ಷ್ಮಾಣು ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಶೀತ ಮತ್ತು ಜ್ವರದ ಲಕ್ಷಣಗಳೊಂದಿಗೆ ಕಟ್ಟಿದ ಮೂಗು ನಿವಾರಣೆ ಮಾಡುವುದು. ಇದರೊಂದಿಗೆ ಸುಲಭವಾಗಿ ಉಸಿರಾಡಲು ಮತ್ತು ರುಚಿ ಹಾಗೂ ವಾಸನೆ ಪ್ರಜ್ಞೆಯನ್ನು ಮರಳಿಸಲು ನೆರವಾಗುವುದು.

ಅಗತ್ಯ ವಸ್ತುಗಳು

2-3 ಕತ್ತರಿಸಿಕೊಂಡು ಬೆಳ್ಳುಳ್ಳಿ ಎಸಲು

1 ಕಪ್ ನೀರು

ಏನು ಮಾಡಬೇಕು

ಒಂದು ತವಾಗೆ ಹಾಕಿ ಒಂದು ಕಪ್ ನೀರು ಕುದಿಸಿ

ಇದಕ್ಕೆ ಕತ್ತರಿಸಿಕೊಂಡ ಬೆಳ್ಳುಳ್ಳಿ ಹಾಕಿ ಮತ್ತು ಹಾಗೆ ಕೆಲವು ನಿಮಿಷ ಬಿಸಿ ಮಾಡಿ.

ಇದರ ಬಳಿಕ ಇದನ್ನು ಸೋಸಿಕೊಂಡು ಚಾದಂತೆ ಕುಡಿಯಿರಿ.

ಎಷ್ಟು ಸಲ ಇದನ್ನು ಕುಡಿಯಬೇಕು?

ದಿನದಲ್ಲಿ ಎರಡು ಸಲ ನೀವು ಇದನ್ನು ಕುಡಿಯಿರಿ.

3. ಶುಂಠಿ

3. ಶುಂಠಿ

ಬಿಸಿಯಾಗಿಸುವ ಗುಣ ಹೊಂದಿರುವ ಶುಂಠಿಯು ಶೀತ ನಿವಾರಣೆ ಮಾಡಲು ನೆರವಾಗುವುದು. ಶುಂಠಿಯಲ್ಲಿ ಇರುವಂತಹ ಪ್ರಬಲ ಸುವಾಸನೆಯು ವಾಸನೆಯ ಪ್ರಜ್ಞೆ ಹೆಚ್ಚಿಸುವುದು ಮತ್ತು ಇದರ ರುಚಿಯು ನಾಲಗೆಯ ರುಚಿಯ ಮೊಗ್ಗುಗಳನ್ನು ಉತ್ತೇಜಿಸುವುದು.

ಅಗತ್ಯ ವಸ್ತುಗಳು

ಸಿಪ್ಪೆ ತೆಗೆದಿರುವ ಸಣ್ಣ ಶುಂಠಿ ತುಂಡು

ಏನು ಮಾಡಬೇಕು

ನಿಯಮಿತವಾಗಿ ಸಿಪ್ಪೆ ತೆಗೆದಿರುವಂತಹ ಶುಂಠಿಯನ್ನು ಜಗಿಯಿರಿ.

ನೀವು ಶುಂಠಿ ಚಾ ಕೂಡ ಕುಡಿಯಬಹುದು.

ಎಷ್ಟು ಸಲ ತಿನ್ನಬೇಕು

ಇದನ್ನು ಪ್ರತಿನಿತ್ಯವೂ ಮಾಡಿ.

ಸೂಚನೆ: ನೀವು ಅತಿಯಾಗಿ ಶುಂಠಿ ಸೇವಿಸಿದರೆ ಅದರಿಂದ ಎದೆಯುರಿ ಉಂಟಾಗಬಹುದು, ಗಂಟಲಿನ ಕಿರಿಕಿರಿ ಕಾಣಿಸಬಹುದು. ಕೆಲವೊಂದು ಸಂದರ್ಭದಲ್ಲಿ ಅತಿಸಾರ ಆಗಬಹುದು.

4. ಕೆಂಪು ಮೆಣಸು

4. ಕೆಂಪು ಮೆಣಸು

ಕೆಂಪು ಮೆಣಸಿನಲ್ಲಿ ಕ್ಯಾಪ್ಸೈಸಿನ್ ಎನ್ನುವ ಅಂಶವಿದ್ದು, ಮೂಗು ಕಟ್ಟುವಿಕೆ ನಿವಾರಣೆ ಮಾಡುವುದು. ಇದರೊಂದಿಗೆ ರುಚಿ ಹಾಗೂ ವಾಸನೆಯ ಪ್ರಜ್ಞೆಯನ್ನು ಮರಳಿ ಪಡೆಯಲು ಇದು ನೆರವಾಗುವುದು.

ಅಗತ್ಯ ವಸ್ತುಗಳು

ಒಂದು ಚಮಚ ಕೆಂಪು ಮೆಣಸು

1 ಚಮಚ ಜೇನುತುಪ್ಪ

1 ಕಪ್ ಬಿಸಿ ನೀರು

ನೀವು ಏನು ಮಾಡಬೇಕು?

ಒಂದು ಲೋಟ ನೀರಿಗೆ ಒಂದು ಚಮಚ ಜೇನುತುಪ್ಪ ಮತ್ತು ಕೆಂಪು ಮೆಣಸಿನ ಹುಡಿ ಹಾಕಿ ಕಲಸಿಕೊಳ್ಳಿ.

ಇದನ್ನು ಕುಡಿಯಿರಿ.

ಇದನ್ನು ಎಷ್ಟು ಸಲ ಮಾಡಬೇಕು?

ದಿನದಲ್ಲಿ ಒಂದು ಸಲವಾದರೂ ಇದನ್ನು ಕುಡಿಯಿರಿ.

ಸೂಚನೆ: ಕೆಂಪು ಮೆಣಸಿನ ಹುಡಿ ಹೆಚ್ಚು ಸೇವಿಸಿದರೆ ಅದರಿಂದ ಹೊಟ್ಟೆ ನೋವು ಬರಬಹುದು. ನೀವು ರಕ್ತದೊತ್ತಡಕ್ಕೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಆಗ ನೀವು ಮೊದಲು ವೈದ್ಯರ ನೆರವು ಪಡೆಯಿರಿ.

5. ಲಿಂಬೆ

5. ಲಿಂಬೆ

ಲಿಂಬೆಯು ಆಮ್ಲೀಯ ಗುಣ ಹೊಂದಿದೆ ಮತ್ತು ಇದರಲ್ಲಿ ವಿಟಮಿನ್ ಸಿ ಇದ್ದು, ಸೂಕ್ಷ್ಮಾಣು ವಿರೋಧಿ ಗುಣ ಹೊಂದಿದೆ. ಇದರ ರಾಸಾಯನಿಕ ಸಂಯೋಜನೆಯ ಪ್ರಬಲ ಘಾಟು ಹೊಂದಿದೆ. ಇದು ಕಟ್ಟಿದ ಮತ್ತು ಸೋರುತ್ತಿರುವ ಮೂಗಿನ ಸಮಸ್ಯೆ ಉಂಟು ಮಾಡುವ ಸೋಂಕನ್ನು ಕಡಿಮೆ ಮಾಡಲು ನೆರವಾಗುವುದು. ಇದರಿಂದ ರುಚಿ ಹಾಗೂ ವಾಸನೆ ಪ್ರಜ್ಞೆಯು ಹೆಚ್ಚಾಗುವುದು.

ಅಗತ್ಯ ವಸ್ತುಗಳು

½ ಲಿಂಬೆ

1 ಲೋಟ ನೀರು

ಜೇನುತುಪ್ಪ(ಅಗತ್ಯವಿದ್ದಷ್ಟು)

ತಯಾರಿಸುವುದು ಹೇಗೆ?

ಒಂದು ಲೋಟ ನೀರಿಗೆ ಅರ್ಧ ಲಿಂಬೆ ರಸ ಹಾಕಿಕೊಳ್ಳಿ.

ಇದಕ್ಕೆ ಜೇನುತುಪ್ಪ ಹಾಕಿ ಸರಿಯಾಗಿ ಮಿಶ್ರಣ ಮಾಡಿ.

ಇದನ್ನು ತಕ್ಷಣವೇ ಕುಡಿಯಿರಿ.

ಎಷ್ಟು ಸಲ ಕುಡಿಯಬೇಕು?

ದಿನದಲ್ಲಿ ಎರಡು ಸಲ ನೀವು ಊಟಕ್ಕೆ ಮೊದಲು ಇದನ್ನು ಕುಡಿಯಿರಿ.

ಸೂಚನೆ: ಗಂಟಲಿನ ಸಮಸ್ಯೆಯಿದ್ದರೆ ನೀವು ಇದನ್ನು ಬಳಸಬೇಡಿ. ಯಾಕೆಂದರೆ ಸಮಸ್ಯೆಯು ಮತ್ತಷ್ಟು ಹೆಚ್ಚಾಗಬಹುದು.

6. ಆಪಲ್ ಸೀಡರ್ ವಿನೇಗರ್

6. ಆಪಲ್ ಸೀಡರ್ ವಿನೇಗರ್

ಆಪಲ್ ಸೀಡರ್ ವಿನೇಗರ್ ನಲ್ಲಿ ಸೂಕ್ಷ್ಮಾಣು ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಸೋಂಕು ಉಂಟು ಮಾಡುವ ಸೂಕ್ಷ್ಮಾಣು ವಿರುದ್ಧ ಹೋರಾಡುವುದು ಮತ್ತು ಮೂಗು ಕಟ್ಟುವಿಕೆ ನಿವಾರಣೆ ಮಾಡಿ, ವಾಸನೆ ಮತ್ತು ರುಚಿಯ ಪ್ರಜ್ಞೆ ಹೆಚ್ಚಿಸುವುದು.

ಅಗತ್ಯ ವಸ್ತುಗಳು

1 ಚಮಚ ಆಪಲ್ ಸೀಡರ್ ವಿನೇಗರ್

1 ಕಪ್ ನೀರು

ಜೇನುತುಪ್ಪ(ಅಗತ್ಯವಿದ್ದರೆ)

ಏನು ಮಾಡಬೇಕು?

ಒಂದು ಲೋಟ ಬಿಸಿ ನೀರಿಗೆ ಆಪಲ್ ಸೀಡರ್ ವಿನೇಗರ್ ಹಾಕಿ.

ಬೇಕಾದಷ್ಟು ಜೇನುತುಪ್ಪ ಹಾಕಿ.

ಇದನ್ನು ಸರಿಯಾಗಿ ಮಿಶ್ರಣ ಮಾಡಿ ಕುಡಿಯಿರಿ.

ಎಷ್ಟು ಸಲ ಹೀಗೆ ಕುಡಿಯಬೇಕು?

ದಿನದಲ್ಲಿ ಒಂದು ಸಲ ಕುಡಿಯಿರಿ.

ಸೂಚನೆ: ಆಪಲ್ ಸೀಡರ್ ವಿನೇಗರ್ ನ್ನು ಅನಿಯಮಿತವಾಗಿ ಕುಡಿದರೆ ಅದರಿಂದ ಹಲ್ಲಿನ ಸಮಸ್ಯೆ, ಅಜೀರ್ಣ ಸಮಸ್ಯೆ ಮತ್ತು ದೇಹದಲ್ಲಿ ಪೊಟಾಶಿಯಂ ಮಟ್ಟವು ಹೆಚ್ಚಾಗಬಹುದು.

7. ಆಯಿಲ್ ಪುಲ್ಲಿಂಗ್

7. ಆಯಿಲ್ ಪುಲ್ಲಿಂಗ್

ಆಯಿಲ್ ಪುಲ್ಲಿಂಗ್ ನಿಂದಾಗಿ ಬಾಯಿಯ ಆರೋಗ್ಯವು ಉತ್ತಮವಾಗುವುದು. ಇದರಿಂದಾಗಿ ಬಾಯಿಯ ಕೆಟ್ಟ ರುಚಿಯನ್ನು ದೂರ ಮಾಡಲು ಇದು ನೆರವಾಗುವುದು. ಗಂಟಲಿನ ಊತದ ಲಕ್ಷಣವನ್ನು ಕಡಿಮೆ ಮಾಡಲು ಇದು ನೆರವಾಗುವುದು ಮತ್ತು ಬಾಯಿಯ ರುಚಿಯನ್ನು ತಾಜಾಗೊಳಿಸುವುದು.

ಅಗತ್ಯ ವಸ್ತುಗಳು

1 ಚಮಚ ತೆಂಗಿನ ಎಣ್ಣೆ ಅಥಾ ಎಳ್ಳೆಣ್ಣೆ

ನೀವು ಏನು ಮಾಡಬೇಕು

10-15 ನಿಮಿಷ ಕಾಲ ತೆಂಗಿನ ಎಣ್ಣೆ ಅಥವಾ ಎಳ್ಳೆಣ್ಣೆಯನ್ನು ಸರಿಯಾಗಿ ಬಾಯಿಯಲ್ಲಿ ತಿರುಗಿಸಿ.

ಇದನ್ನು ಉಗಿದ ಬಳಿಕ ಹಲ್ಲುಜ್ಜಿಕೊಳ್ಳಿ.

ಎಷ್ಟು ಸಲ ಮಾಡಬೇಕು

ಇದನ್ನು ಪ್ರತಿನಿತ್ಯ ಬೆಳಗ್ಗೆ ಮಾಡಬೇಕು.

8. ಓಂ ಕಾಳುಗಳು

8. ಓಂ ಕಾಳುಗಳು

ಓಂ ಕಾಳುಗಳಲ್ಲಿ ಉರಿಯೂತ ಶಮನಕಾರಿ ಗುಣಗಳೂ ಇವೆ ಮತ್ತು ಇದು ಮೂಗು ಕಟ್ಟುವಿಕೆ ನಿವಾರಣೆ ಮಾಡುವುದು. ಇದರಿಂದ ವಾಸನೆ ಹಾಗೂ ರುಚಿಯನ್ನು ಹೆಚ್ಚಿಸಲು ನೆರವಾಗುವುದು.

ಅಗತ್ಯ ವಸ್ತುಗಳು

1 ಚಮಚ ಓಮ ಕಾಳು

ಸಣ್ಣ ತೆಳು ಬಟ್ಟೆ

ಏನು ಮಾಡಬೇಕು?

ಒಂದು ಚಮಚ ಓಮ ಕಾಳುಗಳನ್ನು ತೆಳುವಾದ ಸಣ್ಣ ಬಟ್ಟೆಯಲ್ಲಿ ಹಾಕಿ.

ಬಟ್ಟೆಯನ್ನು ಬಿಗಿಯಾಗಿ ಕಟ್ಟಿ ಮತ್ತು ಇದರ ಸುವಾಸನೆಯನ್ನು ಮೂಗಿನ ಮೂಲಕ ತೆಗೆದುಕೊಳ್ಳಿ.

ಎಷ್ಟು ಸಲ ಹೀಗೆ ಮಾಡಬೇಕು

ದಿನದಲ್ಲಿ ಹಲವಾರು ಸಲ ನೀವು ಹೀಗೆ ಮಾಡಬಹುದು.

9. ದಾಲ್ಚಿನಿ

9. ದಾಲ್ಚಿನಿ

ದಾಲ್ಚಿನಿಯಲ್ಲಿ ಉರಿಯೂತ ಶಮನಕಾರಿ ಮತ್ತು ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ. ಇದು ಮೂಗು ಕಟ್ಟುವಿಕೆ ಉಂಟು ಮಾಡಿರುವ ಸೋಂಕನ್ನು ನಿವಾರಣೆ ಮಾಡುವುದು. ಇದರಿಂದ ರುಚಿ ಹಾಗೂ ವಾಸನೆಯ ಪ್ರಜ್ಞೆಯು ಹೆಚ್ಚುವುದು.

ಅಗತ್ಯ ವಸ್ತುಗಳು

½ ಚಮಚ ದಾಲ್ಚಿನಿ ಹುಡಿ

1 ಚಮಚ ಜೇನುತುಪ್ಪ

ಏನು ಮಾಡಬೇಕು?

ಒಂದು ಚಮಚ ಜೇನುತುಪ್ಪಕ್ಕೆ ಅರ್ಧ ಚಮಚದಷ್ಟು ದಾಲ್ಚಿನಿ ಹುಡಿ ಹಾಕಿ ಮಿಶ್ರಣ ಮಾಡಿ.

ಈ ಪೇಸ್ಟ್ ನ್ನು ಹಾಗೆ ನಾಲಗೆ ಮೇಲೆ ಹಚ್ಚಿಕೊಂಡು ಹತ್ತು ನಿಮಿಷ ಕಾಲ ಬಿಡಿ.

ಎಷ್ಟು ಸಲ ಹೀಗೆ ಮಾಡಬೇಕು?

ದಿನದಲ್ಲಿ ಎರಡು ಸಲ ಹೀಗೆ ಮಾಡಿ.

ಸೂಚನೆ: ಅತಿಯಾಗಿ ದಾಲ್ಚಿನಿ ತಿಂದರೆ ಅದರಿಂದ ಬಾಯಿಯಲ್ಲಿ ಊತ ಬರಬಹುದು. ಇದರಿಂದ ನೀವು ಇದನ್ನು ಮಿತವಾಗಿ ಬಳಕೆ ಮಾಡಿ.

10. ಪುದೀನಾ

10. ಪುದೀನಾ

ಪುದೀನಾ ಎಲೆಗಳಲ್ಲಿ ಮೆಂಥಾಲ್ ಎನ್ನುವ ಅಂಶವಿದ್ದು, ಇದು ಉರಿಯೂತ ಶಮನಕಾರಿ ಹಾಗೂ ಸೂಕ್ಷ್ಮಾಣು ವಿರೋಧಿ ಗುಣ ಹೊಂದಿದೆ. ಇದು ಶೀತ ಮತ್ತು ಜ್ವರದ ಲಕ್ಷಣಗಳನ್ನು ಕಡಿಮೆ ಮಾಡುವುದರ ಜತೆಗೆ ವಾಸನೆ ಹಾಗೂ ರುಚಿಯ ಪ್ರಜ್ಞೆಯು ಮರಳಿ ಬರಲು ನೆರವಾಗುವುದು.

ಅಗತ್ಯ ವಸ್ತುಗಳು

10-15 ಪುದೀನಾ ಎಲೆಗಳು

ಒಂದು ಕಪ್ ನೀರು

ಜೇನುತುಪ್ಪ

ಏನು ಮಾಡಬೇಕು

ಒಂದು ಕಪ್ ನೀರಿಗೆ 10-15 ಪುದೀನಾ ಎಲೆಗಳನ್ನು ಹಾಕಿ.

ಇದನ್ನು ಒಂದು ಸಣ್ಣ ಬಾಣಲೆಯಲ್ಲಿ ಬಿಸಿ ಮಾಡಿ.

ಬಳಿಕ ತೆಗೆದು ಸೋಸಿಕೊಳ್ಳಿ.

ಇದನ್ನು ತಣ್ಣಗಾದ ಬಳಿಕ ಜೇನುತುಪ್ಪ ಬೆರೆಸಿ ಕುಡಿಯಿರಿ.

ಎಷ್ಟು ಸಲ ಕುಡಿಯಬೇಕು?

ಪುದೀನಾ ಚಾವನ್ನು ಎರಡು ಸಲ ಕುಡಿಯಬೇಕು.

11. ಕರಿಬೇವಿನ ಎಲೆಗಳು

11. ಕರಿಬೇವಿನ ಎಲೆಗಳು

ಕರಿಬೇವಿನ ಎಲೆಗಳಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ ಎಂದು ಹಲವಾರು ಸಂಶೋಧನೆಗಳು ಹೇಳಿವೆ. ಇದು ಶೀತ ಮತ್ತು ಜ್ವರದಿಂದ ಉಂಟಾಗಿರುವಂತಹ ಉರಿಯೂತವನ್ನು ಕಡಿಮೆ ಮಾಡಿ, ಕಟ್ಟಿದ ಮೂಗು ನಿವಾರಣೆ ಮಾಡುವುದು ಮತ್ತು ಇದರಿಂದಾಗಿ ರುಚಿ ಹಾಗೂ ವಾಸನೆಯ ಪ್ರಜ್ಞೆಯು ಮರಳುವುದು.

ಅಗತ್ಯ ವಸ್ತುಗಳು

10-15 ಕರಿಬೇವಿನ ಎಲೆಗಳು

1 ಲೋಟ ನೀರು

ಏನು ಮಾಡಬೇಕು

ಒಂದು ಲೋಟ ನೀರಿಗೆ 10-15 ಕರಿಬೇವಿನ ಎಲೆಗಳನ್ನು ಹಾಕಿ.

30 ಅಥವಾ ಅದಕ್ಕಿಂತ ಹೆಚ್ಚು ನಿಮಿಷ ಅದನ್ನು ನೆನೆಸಿಡಿ.

ಈ ಮಿಶ್ರಣವನ್ನು ಕುಡಿಯಿರಿ.

ಎಷ್ಟು ಸಲ?

ದಿನದಲ್ಲಿ ಎರಡು ಸಲ ಕುಡಿಯಿರಿ.

12. ನೀಲಗಿರಿ ಎಣ್ಣೆ

12. ನೀಲಗಿರಿ ಎಣ್ಣೆ

ನೀಲಗಿರಿ ಎಣ್ಣೆಯಲ್ಲಿ ನೀಲಗಿರಿ ಅಂಶವಿದೆ. ಇದು ಉರಿಯೂತ ಶಮನಕಾರಿ ಮತ್ತು ಇದರಲ್ಲಿನ ಮ್ಯೂಕೋಲಿಟಿಕ್ ಗುಣವು ಮೇಲ್ಭಾಗದ ಉಸಿರಾಟದ ಸಮಸ್ಯೆ ನಿವಾರಣೆ ಮಾಡುವುದು ಮತ್ತು ವಾಸನೆ ಮತ್ತು ರುಚಿಯ ಪ್ರಜ್ಞೆಯು ಮರಳಿ ಬರಲು ಇದು ನೆರವಾಗುವುದು.

ಅಗತ್ಯ ವಸ್ತುಗಳು

1 ಹನಿ ನೀಲಗಿರಿ ಎಣ್ಣೆ

1 ಪಿಂಗಾಣಿ ನೀರು

ಒಂದು ಟವೆಲ್

ನೀವು ಏನು ಮಾಡಬೇಕು

ಒಂದು ಪಿಂಗಾಣಿ ಬಿಸಿ ನೀರಿಗೆ ಒಂದು ಹನಿ ನೀಲಗಿರಿ ಎಣ್ಣೆ ಹಾಖಿ.

ಇದರ ಹಬೆಯನ್ನು ಮೂಗಿನ ಮೂಲಕ ಎಳೆಯಿರಿ ಮತ್ತು ತಲೆಗೆ ಟವೆಲ್ ಹಾಕಿ.

10-15 ನಿಮಿಷ ಕಾಲ ಹೀಗೆ ಮಾಡಿ.

ಇದನ್ನು ಎಷ್ಟು ಸಲ ಮಾಡಬೇಕು?

ದಿನದಲ್ಲಿ 1 ಅಥವಾ 2 ಸಲ ಹೀಗೆ ಮಾಡಿ.

ಸೂಚನೆ: ಅತಿಯಾಗಿ ನೀಲಗಿರಿ ಎಣ್ಣೆಯನ್ನು ಹಬೆ ಎಳೆದುಕೊಂಡರೆ ಅದರಿಂದ ನಿಶ್ಯಕ್ತಿ, ಹೊಟ್ಟೆನೋವು, ವಾಕರಿಕೆ ಇತ್ಯಾದಿ ಬರಬಹುದು. ಇದರಿಂದ ನೀವು ಹೇಳಿದಷ್ಟು ಪ್ರಮಾಣದಲ್ಲಿ ಮಾತ್ರ ಬಳಸಿ.

13. ವಿಟಮಿನ್ ಗಳು

13. ವಿಟಮಿನ್ ಗಳು

ವಿಟಮಿನ್ ಡಿ ಕೊರತೆಯಿದ್ದರೆ ಆಗ ರುಚಿ ಹಾಗೂ ವಾಸನೆಯ ಪ್ರಜ್ಞೆಯು ಕಡಿಮೆ ಆಗಬಹುದು. ವಿಟಮಿನ್ ಎ, ಬಿ ಮತ್ತು ಇ ಕೀಮೋಸೆನ್ಸರಿ ನಿಯಂತ್ರಣ ಮಾಡುವುದು. ಆದರೆ ಇವುಗಳ ಕೊರತೆಯಿಂದಾಗಿ ವಾಸನೆ ಹಾಗೂ ರುಚಿಯ ಪ್ರಜ್ಞೆ ಕಡಿಮೆ ಆಗುವುದು ಎನ್ನುವುದಕ್ಕೆ ವೈದ್ಯಕೀಯವಾಗಿ ದೃಢವಾದ ಸಾಕ್ಷ್ಯಗಳಿಲ್ಲ. ವಿಟಮಿನ್ ಗಳಿಂದ ಸಮೃದ್ಧವಾಗಿರುವಂತಹ ಆಹಾರವಾಗಿರುವ ಚಿಪ್ಪು ಮೀನುಗಳು, ಧಾನ್ಯಗಳು, ಚೀಸ್ ಮತ್ತು ಹಾಲನ್ನು ಬಳಸಿಕೊಂಡು ಕೊರತೆ ನೀಗಿಸಿ. ವೈದ್ಯರ ಸಲಹೆ ಪಡೆದುಕೊಂಡು ನೀವು ಇದಕ್ಕೆ ಸಪ್ಲಿಮೆಂಟ್ ಕೂಡ ಬಳಕೆ ಮಾಡಬಹುದಾಗಿದೆ.

ರುಚಿ ಹಾಗೂ ವಾಸನೆ ಹೆಚ್ಚಿಸುವಲ್ಲಿ ನೀವು ಸೇವಿಸುವಂತಹ ಆಹಾರವು ಪ್ರಮುಖ ಪಾತ್ರ ವಹಿಸುವುದು ಎಂದು ನೀವು ತಿಳಿದುಕೊಳ್ಳಬೇಕು. ನೀವು ಕೆಲವು ಮನೆಮದ್ದುಗಳನ್ನು ಬಳಸುವ ಜತೆಗೆ ಆಹಾರದಲ್ಲೂ ಬದಲಾವಣೆ ಮಾಡಿಕೊಳ್ಳಬೇಕು. ಈ ಆಹಾರ ಕ್ರಮಗಳನ್ನು ಬಳಸಿಕೊಂಡು ರುಚಿ ಹಾಗೂ ವಾಸನೆ ಪ್ರಜ್ಞೆ ಹೆಚ್ಚು ಮಾಡಿ.

ಆಹಾರ ಕ್ರಮ

ಪ್ರೋಟೀನ್ ಅಧಿಕವಾಗಿರುವಂತಹ ಮೀನು, ಕೋಳಿ ಅಥವಾ ಸೋಯಾವು ತುಂಬಾ ರುಚಿಕರವಾಗಿರುವ ಕಾರಣದಿಂದಾಗಿ ಇದು ರುಚಿಯ ಪ್ರಜ್ಞೆ ಹೆಚ್ಚಿಸುವುದು. ಮೊಟ್ಟೆ, ಚೀಸ್ ಮತ್ತು ಬಿಳಿ ಮಾಂಸವನ್ನು ಕೂಡ ನೀವು ಸೇವಿಸಬಹುದು. ಸತುವಿನ ಅಂಶವು ಅಧಿಕವಾಗಿ ಇರುವಂತಹ ಬೀಜಗಳು, ದ್ವಿದಳ ಧಾನ್ಯಗಳು, ಧಾನ್ಯಗಳು, ಚಿಪ್ಪುಮೀನುಗಳು ಮತ್ತು ಡಾರ್ಕ್ ಚಾಕಲೇಟ್ ಸೇವಿಸಬೇಕು. ಸತುವಿನಿಂದಾಗಿ ಆಹಾರ ಸೇವನೆಯು ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ. ಇದರಿಂದ ಸತು ಪರಿಣಾಮಕಾರಿ ಆಗಿ ರುಚಿಯ ಪ್ರಜ್ಞೆ ಹೆಚ್ಚು ಮಾಡುವುದು.

ಪರಿಸ್ಥಿತಿಯನ್ನು ನಿರ್ವಹಿಸಲು ನೀವು ಜೀವನಶೈಲಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕು. ಇದಕ್ಕೆ ಕೆಲವೊಂದು ಸಲಹೆಗಳು ಇಲ್ಲಿವೆ.

ತಡೆಯಲು ಸಲಹೆಗಳು

ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ ಮತ್ತು ದೇಹದಲ್ಲಿ ತೇವಾಂಶ ಕಾಪಾಡಿಕೊಳ್ಳಿ.

ಹಬೆಯನ್ನು ಎಳೆದುಕೊಳ್ಳಿ.

ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಿ.

ರುಚಿ ಮತ್ತು ವಾಸನೆ ಪ್ರಜ್ಞೆಯು ಕಡಿಮೆ ಆಗಲು ಪ್ರಮುಖ ಕಾರಣವಾಗಿರುವಂತಹ ಜ್ವರ ಹಾಗೂ ಶೀತವು ಬರದೆ ಇರುವಂತೆ ಎಚ್ಚರಿಕೆ ವಹಿಸಿಕೊಳ್ಳಿ. ಇದಕ್ಕೆ ನೀವು ಮುನ್ನೆಚ್ಚರಿಕೆ ವಹಿಸಿ.

ರುಚಿ ಮತ್ತು ವಾಸನೆಯ ಸಮಸ್ಯೆಯು ವಯಸ್ಸಾದಂತೆ ಕಂಡುಬರುವುದು. ಕೆಲವೊಂದು ಸಂದರ್ಭದಲ್ಲಿ ಇದು ತಾತ್ಕಾಲಿಕವಾಗಿ ಇರುವುದು. ಮೂಗಿನ ಹೊಳ್ಳೆಯ ಸೋಂಕಿನ ಉರಿಯೂತದಿಂದಾಗಿ ಹೀಗೆ ಆಗಬಹುದು. ಮೇಲೆ ಹೇಳಿರುವಂತಹ ಕೆಲವು ಮನೆಮದ್ದುಗಳನ್ನು ಬಳಕೆ ಮಾಡಿದರೆ ಖಂಡಿತವಾಗಿಯೂ ಇದರಿಂದ ಗುಣಮುಖರಾಗಬಹುದು. ವಯಸ್ಸಾಗಿರುವುದು, ಅಲ್ಝೈಮರ್ ಕಾಯಿಲೆ, ರಾಸಾಯನಿಕಕ್ಕೆ ಒಗ್ಗಿಕೊಳ್ಳುವುದರ ಪರಿಣಾಮವಾಗಿ ರುಚಿ ಮತ್ತು ವಾಸನೆ ಕಳೆದುಕೊಳ್ಳುವುದು ಶಾಶ್ವತವಾಗಿ ಇರಬಹುದು. ಇದರಿಂದ ನೀವು ವೈದ್ಯರನ್ನು ಸಂಪರ್ಕಿಸಿ ಅವರಿಂದ ಸಲಹೆ ಪಡೆಯುವುದು ಮುಖ್ಯ.

English summary

Home Remedies For Loss Of Taste And Smell

If you are looking for ways to enhance your lost sense of smell and taste naturally, these home remedies will definitely help you to solve your problem. Read more.
Story first published: Saturday, January 11, 2020, 15:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X