For Quick Alerts
ALLOW NOTIFICATIONS  
For Daily Alerts

ಹೊಕ್ಕಳು, ಬಾಯಿ ಅಥವಾ ಪಾದಗಳಿಂದ ದುರ್ವಾಸನೆ ಬರುತ್ತಿದ್ದರೆ, ಈ ಮನೆಮದ್ದುಗಳನ್ನು ಪ್ರಯತ್ನಿಸಿ

|

ಪ್ರತಿಯೊಬ್ಬರ ದೇಹದಿಂದಲೂ ಒಂದು ರೀತಿಯ ವಾಸನೇ ಬಂದೇ ಬರುವುದು, ಅದು ಸಾಮಾನ್ಯ ಕೂಡ. ಆದರೆ, ಕೆಲವೊಮ್ಮೆ ಅದೇ ವಾಸನೆ ಹೆಚ್ಚಾಗಿ, ಇತರರು ನಿಮ್ಮನ್ನು ದೂರ ಇಡಲು ಪ್ರಾರಂಭಿಸಿದರೆ ಅದು ತುಂಬಾ ಅಹಿತಕರ ಮತ್ತು ಕೆಟ್ಟದಾಗಿರುತ್ತದೆ. ಆದ್ದರಿಂದ, ನಿಮ್ಮ ದೇಹದಿಂದ ಬರುವ ಕೆಟ್ಟ ವಾಸನೆಯಿಂದಾಗಿ ಯಾರೂ ನಿಮ್ಮಿಂದ ದೂರವಿರಲು ಬಯಸದಿದ್ದರೆ, ಈ ವಾಸನೆಯ ಬಗ್ಗೆ ಜಾಗರೂಕರಾಗಿರಬೇಕು.

body smel

ದೇಹದ ವಾಸನೆಯು ಕೇವಲ ಕೆಟ್ಟ ಕಂಕುಳಡಿಗೆ ಸೀಮಿತವಾಗಿಲ್ಲ, ಪಾದಗಳು, ಬಾಯಿ ಮತ್ತು ಹೊಕ್ಕಳು ಕೂಡ ಕೆಟ್ಟ ವಾಸನೆಯನ್ನು ಉಂಟುಮಾಡಬಹುದು. ಆದ್ದರಿಂದ ಇವುಗಳ ವಾಸನೆ ಕಡಿಮೆ ಮಾಡಲು ಕೆಲವು ಮನೆಮದ್ದುಗಳನ್ನು ಹೇಳಲಿದ್ದೇವೆ.

ದೇಹದ ವಿವಿಧ ಭಾಗಗಳ ದುರ್ವಾಸನೆ ಕಡಿಮೆ ಮಾಡಲು ಮನೆಮದ್ದುಗಳನ್ನು ಈ ಕೆಳಗೆ ನೀಡಲಾಗಿದೆ:

ಹೊಕ್ಕುಳ ವಾಸನೆಗಾಗಿ ತೆಂಗಿನ ಎಣ್ಣೆ:

ಹೊಕ್ಕುಳ ವಾಸನೆಗಾಗಿ ತೆಂಗಿನ ಎಣ್ಣೆ:

ತೆಂಗಿನ ಎಣ್ಣೆಯು ಮಧ್ಯಮ-ಸರಪಳಿ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ, ಇದು ಉರಿಯೂತದ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಈ ಗುಣಲಕ್ಷಣಗಳು ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುವುದು ಮಾತ್ರವಲ್ಲದೆ ಹೊಕ್ಕುಳಿನ ಉರಿಯೂತವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

ಬಳಸುವ ವಿಧಾನ:

ನಿಮ್ಮ ಬೆರಳುಗಳಲ್ಲಿ ಸ್ವಲ್ಪ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ. ಅದನ್ನು ನೇರವಾಗಿ ನಿಮ್ಮ ಹೊಕ್ಕುಳಿಗೆ ಹಚ್ಚಿಕೊಳ್ಳಿ. ನಿಮ್ಮ ಚರ್ಮವು ಎಣ್ಣೆಯನ್ನು ಹೀರಿಕೊಳ್ಳಲು ಅದನ್ನು ಹಾಗೆಯೇ ಬಿಡಿ. ಇದರಿಂದ ಹೊಕ್ಕಳ ವಾಸನೆ ಕಡಿಮೆಯಾಗುವುದು.

ಕಂಕುಳಡಿಗೆ ಆಪಲ್ ಸೈಡರ್ ವಿನೆಗರ್:

ಕಂಕುಳಡಿಗೆ ಆಪಲ್ ಸೈಡರ್ ವಿನೆಗರ್:

ಆಪಲ್ ಸೈಡರ್ ವಿನೆಗರ್ ದೇಹವನ್ನು ಎಫ್ಫೋಲಿಯೇಟ್ ಮಾಡಲು ಸಹಾಯ ಮಾಡುತ್ತದೆ ಏಕೆಂದರೆ ಇದು ರಾಸಾಯನಿಕ ಎಕ್ಸ್‌ಫೋಲಿಯೇಟರ್ ಆಗಿ ಕಾರ್ಯನಿರ್ವಹಿಸುವ ಆಲ್ಫಾ ಹೈಡ್ರಾಕ್ಸಿ ಆಮ್ಲಗಳನ್ನು ಹೊಂದಿರುತ್ತದೆ ಜೊತೆಗೆ ಡೆಡ್ ಸೆಲ್‌ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಇದರಿಂದಾಗಿ ಹೊಸ ಮತ್ತು ಪುನರ್ಯೌವನಗೊಳಿಸಿದ ಚರ್ಮದ ಕೋಶಗಳು ಹುಟ್ಟಿಕೊಳ್ಳುವುದು. ಇದು ಬ್ಯಾಕ್ಟೀರಿಯಾವನ್ನು ತೊಡೆದುಹಾಕುವ ಮೂಲಕ ವಾಸನೆಯನ್ನು ಕಡಿಮೆ ಮಾಡುತ್ತದೆ.

ಬಳಸುವ ವಿಧಾನ:

ಒಂದು ಕಪ್ ರೋಸ್ ವಾಟರ್ ಮತ್ತು ಒಂದು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ. ಬಳಕೆಗೆ ಮೊದಲು ಚೆನ್ನಾಗಿ ಅಲ್ಲಾಡಿಸಿ. ಅದನ್ನು ನಿಮ್ಮ ಕಂಕುಳಿಗೆ ಸ್ಪ್ರೇ ಮಾಡಿ. ನೀರಿನಿಂದ ತೊಳೆಯುವ ಮೊದಲು ಅದನ್ನು 10 ರಿಂದ 15 ನಿಮಿಷಗಳ ಕಾಲ ಬಿಡಿ.

ಪಾದದ ವಾಸನೆಗೆ ಉಪ್ಪು ನೀರು:

ಪಾದದ ವಾಸನೆಗೆ ಉಪ್ಪು ನೀರು:

ಬೇಕಿಂಗ್ ಸೋಡಾ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುವ ಮೂಲಕ ಮತ್ತು ವಾಸನೆಯನ್ನು ತಟಸ್ಥಗೊಳಿಸುವ ಮೂಲಕ ಕೆಟ್ಟ ವಾಸನೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಕಲ್ಲುಪ್ಪು ಪಾದಗಳಿಂದ ಡೆಡ್ ಸೆಲ್‌ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಬಳಸುವ ವಿಧಾನ:

ಅರ್ಧ ಬಕೆಟ್ ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದರಲ್ಲಿ ಕಲ್ಲುಪ್ಪು ಮತ್ತು ಅಡಿಗೆ ಸೋಡಾವನ್ನು ಮಿಶ್ರಣ ಮಾಡಿ. ನೀರನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಅದರಲ್ಲಿ ಪಾದಗಳನ್ನು ಸುಮಾರು 15 ರಿಂದ 20 ನಿಮಿಷಗಳ ಕಾಲ ನೆನೆಸಿಡಿ. ನಂತರ ಫೂಟ್ ಸ್ಕ್ರಬ್ ಬಳಸಿ ಪಾದಗಳನ್ನು ಸ್ಕ್ರಬ್ ಮಾಡಿ.

ನಂತರ ಸರಳ ನೀರಿನಿಂದ ತೊಳೆಯಿರಿ.

ಬಾಯಿಯ ದುರ್ವಾಸನೆಗೆ ಹೋಮ್‌ಮೇಡ್ ಮೌತ್ ಫ್ರೆಶ್ನರ್:

ಬಾಯಿಯ ದುರ್ವಾಸನೆಗೆ ಹೋಮ್‌ಮೇಡ್ ಮೌತ್ ಫ್ರೆಶ್ನರ್:

ಈ ಮೌತ್ ಫ್ರೆಶ್ನರ್‌ನಲ್ಲಿ ಲವಂಗ ಮತ್ತು ಶುಂಠಿ ಇವೆ. ಇವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ಬಾಯಿಯ ಆರೋಗ್ಯವನ್ನು ಉತ್ತೇಜಿಸುತ್ತದೆ.

ಬಳಸುವ ವಿಧಾನ:

ಒಂದು ಪಾತ್ರೆಯಲ್ಲಿ, ನಾಲ್ಕು ಗ್ಲಾಸ್ ನೀರು ಹಾಕಿ, ಅದನ್ನು ಬಿಸಿಮಾಡಲು ಪ್ರಾರಂಭಿಸಿ. ಇದಕ್ಕೆ ಎರಡು ತುಂಡು ಶುಂಠಿ, 20 ಲವಂಗ ಮತ್ತು ಪುದೀನಾ ಎಲೆಗಳನ್ನು ಹಾಕಿ ಕುದಿಸಿ. ಇದನ್ನು 2 ನಿಮಿಷಗಳ ಕಾಲ ಕುದಿಸಿ. ಸ್ಟವ್ ಆಫ್ ಮಾಡಿ ಮತ್ತು ಅದನ್ನು ತಣ್ಣಗಾಗಲು ಬಿಡಿ. ತದನಂತರ ಇದನ್ನು ಮೌತ್ ವಾಶ್ ಆಗಿ ಬಳಸಿ. ಇದನ್ನು ಕೋಣೆಯ ಉಷ್ಣಾಂಶದಲ್ಲಿ ಅಥವಾ ರೆಫ್ರಿಜರೇಟರ್ನಲ್ಲಿ ಈ ಮೌತ್ವಾಶ್ ಅನ್ನು ಸಂಗ್ರಹಿಸಬಹುದು.

ಈ ಮನೆಮದ್ದುಗಳನ್ನು ಅಳವಡಿಸಿಕೊಳ್ಳುವ ಮೂಲಕ ದೇಹದ ಈ ಭಾಗಗಳಿಂದ ಬರುವ ದುರ್ವಾಸನೆಯನ್ನು ಸ್ವಲ್ಪ ಮಟ್ಟಿಗೆ ಹೋಗಲಾಡಿಸಬಹುದು.

English summary

Home Remedies for Different Parts of Body Odour in Kannada

Here we talking about Home remedies for different parts of body odour in kannada, read on
Story first published: Wednesday, October 27, 2021, 16:53 [IST]
X
Desktop Bottom Promotion