For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಈ 5 ಹರ್ಬಲ್ ಟೀ ಬೆಸ್ಟ್: ಇವು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ

|

ನಾವು ಆರೋಗ್ಯವಾಗಿರಲು ಕಾಲಕ್ಕೆ ತಕ್ಕಂತೆ ಆಹಾರ ಸೇವಿಸಬೇಕು. ಈಗ ಮಳೆಗಾಲ, ಮಳೆಗಾಲದಲ್ಲಿ ಬೇಸಿಗೆಕಾಲಕ್ಕಿಂತ ಸಂಪೂರ್ಣ ಭಿನ್ನವಾದ ಆಹಾರ ಸೇವಿಸಬೇಕು. ಈ ಸಮಯದಲ್ಲಿ ಚಕ್ಕೆ, ಲವಂಗ, ಕರಿಮೆಣಸು, ಏಲಕ್ಕಿ ಹಾಕಿ ಮಾಡಿರುವ ಮಸಾಲೆ ಆಹಾರ ಪದಾರ್ಥ ಒಳ್ಳೆಯದು. ಟೀ ಕೂಡ ಅಷ್ಟೇ ಮಾಮೂಲಿ ಟೀಗಿಂತ ಮಳೆಗಾಲದಲ್ಲಿ ಹರ್ಬಲ್‌ ಟೀ ಕುಡಿಯುವುದು ಬೆಸ್ಟ್.

ಏಕೆಂದರೆ ಮಳೆಗಾಲದಲ್ಲಿ ಜೀರ್ಣವಾಗುವುದು ಸ್ವಲ್ಪ ನಿಧಾನ, ಅಲ್ಲದೆ ಶೀತ-ಕೆಮ್ಮು ಈ ರೀತಿಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಆದರೆ ಹರ್ಬಲ್‌ ಟೀ ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದರಿಂದ ಸಾಮಾನ್ಯವಾಗಿ ಕಾಡುವ ಶೀತ-ಕೆಮ್ಮು ಈ ಬಗೆಯ ಸಮಸ್ಯೆಗಳು ಕಡಿಮೆಯಾಗುವುದು. ಆದ್ದರಿಂದ ಮಳೆಗಾಲದಲ್ಲಿ ಹರ್ಬಲ್ ಟೀ ಕುಡಿಯುವುದು ಬೆಸ್ಟ್.

ಮಳೆಗಾಲದಲ್ಲಿ ಈ ಹರ್ಬಲ್ ಟೀಗಳು ಬೆಸ್ಟ್‌:

1. ತುಳಸಿ ಟೀ

1. ತುಳಸಿ ಟೀ

ಒಂದು ಕಪ್‌ ನೀರು ತೆಗೆದು ಅದಕ್ಕೆ 5 ಎಸಳು ತುಳಸಿ ಹಾಕಿ ಕುದಿಸಿ, ನಂತರ ಅದಕ್ಕೆ ಸ್ವಲ್ಪ ಜೇನು ಸೇರಿಸಿ, ಕುಡಿಯಿರಿ.

2. ಶುಂಠಿ ಟೀ

2. ಶುಂಠಿ ಟೀ

ಮಳೆಗಾಲದಲ್ಲಿ, ಚಳಿಗಾಲದಲ್ಲಿ ಶುಂಠಿ ಟೀ ತುಂಬಾನೇ ಒಳ್ಳೆಯದು. ಇದು ಮೈಯನ್ನು ಬೆಚ್ಚಗಿಡುತ್ತದೆ. ಹಾಲಿಗೆ ಸ್ವಲ್ಪ ಶುಂಠಿ ಜಜ್ಜಿ ಹಾಕಿ ಅದಕ್ಕೆ ಟೀ ಪುಡಿ ಸೇರಿಸಿ ಕುದಿಸಿ ಕುಡಿಯಿರಿ. ಸಕ್ಕರೆ ಬೇಕಿದ್ದರೆ ಸೇರಿಸಬಹುದು, ಆದರೆ ಸಕ್ಕರೆ ಸೇರಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

3. ಪುದೀನಾ ಟೀ

3. ಪುದೀನಾ ಟೀ

3 ಕಪ್‌ ನೀರಿಗೆ 2-3 ಮೂರು ಪುದೀನಾ ಎಲೆ ತೆಗೆದು ಕೈಯಿಂದ ತುಂಡು-ತುಂಡು ಮಾಡಿ ನೀರಿಗೆ 10 ನಿಮಿಷ ಕುದಿಸಿ ಅದಕ್ಕೆ ಸ್ವಲ್ಪ ಜೇನು ಸೇರಿಸಿ ಕುಡಿಯಿರಿ.

4. ಗ್ರೀನ್‌ ಟೀ

4. ಗ್ರೀನ್‌ ಟೀ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ತೆಗೆದುಕೊಂಡರೆ ತುಂಬಾ ಒಳ್ಳೆಯದು, ಇದು ಹೊಟ್ಟೆ ಬೊಜ್ಜು ಕರಗಿಸುತ್ತೆ.

5. ಲೆಮನ್‌ ಗ್ರಾಸ್

5. ಲೆಮನ್‌ ಗ್ರಾಸ್

ಎರಡು ಲೆಮನ್ ಗ್ರಾಸ್ ತುಂಡು ತೆಗೆದುಕೊಂಡು ಅದನ್ನು ಮುರಿದು 2 ಕಪ್‌ ನೀರಿನಲ್ಲಿ ಹಾಕಿ ಕುದಿಸಿ, ಕುದಿಸುವಾಗ ಸ್ವಲ್ಪ ಚಕ್ಕೆ ಪುಡಿ ಸೆರಿಸಿ, ನಂತರ ಸೊಸಿ ಜೇನು ಸೇರಿಸಿ ಕುಡಿಯಿರಿ.

English summary

Herbal Teas to boost Immunity During Monsoon in Kannada

Herbal Teas to boost Immunity During Monsoon in Kannada, Read on....
Story first published: Friday, June 17, 2022, 12:53 [IST]
X
Desktop Bottom Promotion