For Quick Alerts
ALLOW NOTIFICATIONS  
For Daily Alerts

ಹಲಸಿನ ಬೀಜ ಯಾವೆಲ್ಲಾ ಆರೋಗ್ಯ ಸಮಸ್ಯೆ ಸೂಪರ್ ಮದ್ದು ಗೊತ್ತೇ?

|

ಮೇ, ಜೂನ್ ತಿಂಗಳು ಹಲಸಿನ ಹಣ್ಣಿನ ಸೀಸನ್‌, ಹಲಸಿನ ಹಣ್ಣಿನ ತೊಳೆ ತಿಂದು ಬೀಜವನ್ನು ಕೆಲವರು ಬಿಸಾಡುತ್ತಾರೆ. ಆದರೆ ಅದನ್ನು ಹಾಗೇ ಬಿಸಾಡುವ ಬದಲು ಎತ್ತಿಟ್ಟು ಸಾರು ಮಾಡಿ, ಸ್ನಾಕ್ಸ್‌ ಮಾಡಿ ತಿನ್ನಬಹುದು. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ?

ಹಲಸಿನ ಬೀಜದಲ್ಲಿ ಸಾಕಷ್ಟು ಪ್ರೊಟೀನ್‌ ಅಂಶವಿದೆ ಅಲ್ಲದೆ ವಿಟಿಮಿನ್ ಬಿ, ಪೊಟಾಷ್ಯಿಯಂನಂಥ ಪೋಷಕಾಂಶಗಳೂ ಇವೆ. ಇದರಲ್ಲಿರುವ ಥೈಯಾಮಿನ್, ರಿಬೋಫ್ಲೇವಿನ್ ನಿಮ್ಮ ಕಣ್ಣು, ತ್ವಚೆ, ಕೂದಲಿನ ಆರೋಗ್ಯಕ್ಕೆ ಒಳ್ಳೆಯದು, ಅಲ್ಲದೆ ಈ ಬೀಜದಲ್ಲಿ ಅಲ್ಪ ಪ್ರಮಾಣದಲ್ಲಿ ಸತುವಿನಂಶ, ಕಬ್ಬಿಣದಂಶ,ಕ್ಯಾಲ್ಸಿಯಂ, ತಾಮ್ರ, ಪೊಟಾಷ್ಯಿಯಂ, ಮೆಗ್ನಿಷ್ಯಿಯಂ ಅಂಶ ಕೂಡ ಇದೆ.

ಹಲಸಿನ ಬೀಜದಲ್ಲಿ ಆಂಟಿಮೈಕ್ರೊಬಿಯಲ್ ಗುಣವಿದೆ, ಅಂದ್ರೆ ನೀರಿನಿಂದ ಉಂಟಾಗುವ ಕಾಯಿಲೆಗೆ ಕಾರಣವಾದ ಬ್ಯಾಕ್ಟಿರಿಯಾಗಳನ್ನು ನಿಷ್ಖ್ರಿಯಗೊಳಿಸುವ ಗುಣವಿದೆ. ಇದನ್ನು ಜೀರ್ಣಕ್ರಿಯೆಗೆ ಮನೆಮದ್ದಾಗಿಯೂ ನೀಡಲಾಗುವುದು.

ಇದರ ಇನ್ನೂ ಅಧಿಕ ಪ್ರಮುಖ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ:

ಯೌವನದ ಸೌಂದರ್ಯ ಕಾಪಾಡುತ್ತೆ:

ಯೌವನದ ಸೌಂದರ್ಯ ಕಾಪಾಡುತ್ತೆ:

ಮುಖದಲ್ಲಿ ನೆರಿಗೆ ಬೀಳುವುದನ್ನು ತಡೆಗಟ್ಟಬೇಕು, ತುಂಬಾ ಸುಂದರವಾಗಿ ಕಾಣಬೇಕೆಂದು ನೀವು ಬಯಸುವುದಾದರೆ ಅದಕ್ಕೆ ನೀವು ಹಲಸಿನ ಬೀಜ ಬಳಸುವುದು. ನೀವು ಹಲಸಿನ ಬೀಜದ ಸಿಪ್ಪೆ ಸುಲಿದು ತಣ್ಣನೆಯ ಹಾಲಿನಲ್ಲಿ ಹಾಕಿ ನುಣ್ಣನೆ ರುಬ್ಬಿಕೊಳ್ಳಿ. ನಂತರ ಅದನ್ನು ಫ್ರಿಜ್‌ನಲ್ಲಿಟ್ಟು ದಿನಾ ಮುಖಕ್ಕೆ ಹಚ್ಚಿ, ಒಣಗಿದ ಮೇಲೆ ಹದ ಬಿಸಿ ಬೀರಿನಿಂದ ತೊಳೆಯರಿ. ಈ ರೀತಿ ಮಾಡುತ್ತಿದ್ದರೆ ನಿಮ್ಮ ತ್ವಚೆ ತುಂಬಾ ಸುಂದರವಾಗಿರುತ್ತೆ.

ತ್ವಚೆ ಸಮಸ್ಯೆ ಹೋಗಲಾಡಿಸುತ್ತೆ, ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು

ತ್ವಚೆ ಸಮಸ್ಯೆ ಹೋಗಲಾಡಿಸುತ್ತೆ, ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು

ಹಲಸಿನ ಬೀಜದಲ್ಲಿ ಪ್ರೊಟೀನ್ ಹಾಗೂ ಇತರ ಪೋಷಕಾಂಶಗಳು ಇರುವುದರಿಂದ ಮಾನಸಿಕ ಒತ್ತಡ ಕಡಿಮೆ ಮಾಡುವುದು. ಅಲ್ಲದೆ ಇದನ್ನು ತಿನ್ನುವುದರಿಂದ ತ್ವಚೆಯಲ್ಲಿ ಮಾಯಿಶ್ಚರೈಸರ್ ಕಾಪಾಡಲು ಸಹಕಾರಿ, ಅಲ್ಲದೆ ಕೂದಲಿನ ಆರೋಗ್ಯಕ್ಕೂ ಒಳ್ಳೆಯದು.

ರಕ್ತ ಹೀನತೆ ಸಮಸ್ಯೆ ತಡೆಗಟ್ಟುತ್ತೆ

ರಕ್ತ ಹೀನತೆ ಸಮಸ್ಯೆ ತಡೆಗಟ್ಟುತ್ತೆ

ಎಷ್ಟೋ ಜನರು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಂಥವರು ದಿನಾ ಸ್ವಲ್ಪ ಹಲಸಿನ ಬೀಜ ಬೇಯಿಸಿ ತಿನ್ನುವುದು ಒಳ್ಳೆಯದು. ಇದರಲ್ಲಿ ಕಬ್ಬಿಣದಂಶ ಅಧಿಕವಿದೆ, ಅಲ್ಲದೆ ಹೃದಯ ಹಾಗೂ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು.

ಕೂದಲಿನ ಆರೋಗ್ಯಕ್ಕೆ ಹಾಗೂ ಕಣ್ಣಿನ ಆರೋಗ್ಯಕ್ಕೆ

ಕೂದಲಿನ ಆರೋಗ್ಯಕ್ಕೆ ಹಾಗೂ ಕಣ್ಣಿನ ಆರೋಗ್ಯಕ್ಕೆ

ಹಲಸಿನ ಬೀಜದಲ್ಲಿ ವಿಟಮಿನ್ ಎ ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೆ ಇದು ಇರುಳು ಕುರುಡುತನ ಕೂಡ ತಡೆಗಟ್ಟುತ್ತದೆ. ಇದು ಕೂದಲು ಕವಲೊಡೆಯುವುದನ್ನು ತಡೆಗಟ್ಟಿ ಕೂದಲಿನ ಆರೋಗ್ಯ ಹೆಚ್ಚಿಸುತ್ತೆ.

ಜೀರ್ಣಕ್ರಿಯೆ ತಡೆಗಟ್ಟುತ್ತೆ

ಜೀರ್ಣಕ್ರಿಯೆ ತಡೆಗಟ್ಟುತ್ತೆ

ಅಜೀರ್ಣ ಸಮಸ್ಯೆ ಉಂಟಾದಾಗ ಇದನ್ನು ತಿಂದಾಗ ತಕ್ಷಣ ಆರಾಮ ಅನಿಸುವುದು. ಬಿಸಿಲಿನಲ್ಲಿ ಬೀಜವನ್ನು ಒಣಗಿಸಿ ಅದನ್ನು ಪುಡಿ ಮಾಡಿ ಇಡಬೇಕು. ಇದನ್ನು ಅಜೀರ್ಣ ಸಮಸ್ಯೆಯಾದಾಗ ನೀರಿನಲ್ಲಿ ಕಲೆಸಿ ಕುಡಿದರೆ ಒಳ್ಳೆಯದು.

ಸ್ನಾಯುಗಳನ್ನು ಬಲ ಪಡಿಸುತ್ತೆ

ಸ್ನಾಯುಗಳನ್ನು ಬಲ ಪಡಿಸುತ್ತೆ

ಇನ್ನು ಬಾಡಿ ಮಸಲ್‌ ಬರಬೇಕೆನ್ನುವವರು ಇದನ್ನು ತಿನ್ನುವುದು ಒಳ್ಳೆಯದು. ಬೀಜವನ್ನು ಒಣಗಿಸಿ ಪುಡಿ ಮಾಡಿಟ್ಟು ಹಾಲಿನಲ್ಲಿ ಮಿಶ್ರ ಮಾಡಿ ಕುಡಿಯಬಹುದು.

ಕೊನೆಯದಾಗಿ: ಹಲಸಿನ ಬೀಜದಲ್ಲಿ ಯಾವುದೇ ರಾಸಾಯನಿಕ ಅಂಶವಿರಲ್ಲ, ನೀವೇ ಇದನ್ನು ಒಣಗಿಸಿ ಇಟ್ಟು, ಬೇಕದಾಗ ಸಾರು ಮಾಡಬಹುದು, ಸುಟ್ಟು ತಿನ್ನಬಹುದು, ಬೇಯಿಸಿ ತಿನ್ನಬಹುದು. ಇನ್ನು ಈ ಸೀಸನ್‌ನಲ್ಲಿ ಆದ ಹಲಸಿನ ಬೀಜವನನ್ನು ವರ್ಷದವರೆಗೆ ಸಂಗ್ರಹಿಸಿ ಇಡಬಹುದು.

English summary

Health Benefits of Jackfruit Seeds in Kannada

Health benefits of jackfruit seeds in Kannada, read on...
X
Desktop Bottom Promotion