For Quick Alerts
ALLOW NOTIFICATIONS  
For Daily Alerts

ಕೋವಿಡ್ 19 ಸಾಂಕ್ರಾಮಿಕ ಬಳಿಕ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತಿದೆಯೇ?

|

ಕೊರೊನಾ ಬಂದಾಗಿನಿಂದ ನಮ್ಮೆಲ್ಲರ ಜೀವನದಲ್ಲಿ ಅನೇಕ ಬದಲಾವಣೆಗಳಾಗಿವೆ. ಓಡುತ್ತಿದ್ದ ಜಗತ್ತು ಒಂದು ಕ್ಷಣ ನಿಂತಂಥ ಅನುಭವ... ಕೊರೊನಾ ಎಂಬುವುದು ಮನುಷ್ಯರ ದೈಹಿಕ ಆರೋಗ್ಯದ ಮೇಲೆ ಮಾತ್ರ ಮಾನಸಿಕ ಆರೋಗ್ಯದ ಮೇಲೂ ತುಂಬಾ ಕೆಟ್ಟ ಪರಿಣಾಮ ಬೀರಿದೆ.

How covid 19 impacted sex drive

ಆರ್ಥಿಕ ಸಮಸ್ಯೆ, ಇರುವ ಕೆಲಸ ಹೋಗಿರುವುದು ಇವೆಲ್ಲಾ ಮನಸ್ಸಿನ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರಿದೆ. ಇನ್ನು ಕೆಲ ಸಂಸಾರಗಳಲ್ಲಿ ಗಂಡ-ಹೆಂಡತಿ ನಡುವೆ ದೈಹಿಕ ಅಂತರ ಹೆಚ್ಚಿಸಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಸಂಸಾರದಲ್ಲಿ ಈ ಕೆಳಗಿನ ಲಕ್ಷಣಗಳು ಕಂಡು ಬರುತ್ತಿವೆಯೇ? ಇದ್ದರೆ ಅದಕ್ಕೆ ಪರಿಹಾರವೇನು ಎಂದು ನೋಡೋಣ ಬನ್ನಿ:

ಕೊರೊನಾ ಸಾಂಕ್ರಾಮಿಕ ಲೈಂಗಿಕ ಆಸಕ್ತಿಯನ್ನು ಕುಗ್ಗಿಸಿದೆಯೇ?

ಕೊರೊನಾ ಸಾಂಕ್ರಾಮಿಕ ಲೈಂಗಿಕ ಆಸಕ್ತಿಯನ್ನು ಕುಗ್ಗಿಸಿದೆಯೇ?

ಕೊರೊನಾಗೆ ಹಾಗೂ ಲೈಂಗಿಕ ಆಸಕ್ತಿ ಕುಂದಲು ನೇರವಾದ ಯಾವುದೇ ಸಂಬಂಧವಿಲ್ಲ. ಆದರೆ ಮಾನಸಿಕ ಒತ್ತಡ, ಅನಾರೋಗ್ಯಕರ ಜೀವನಶೈಲಿ, ಕುಗ್ಗಿದ ಆತ್ಮವಿಶ್ವಾಸ, ಆರ್ಥಿಕ ಸಮಸ್ಯೆ ಇವೆಲ್ಲಾ ಪುರುಷರು ಹಾಗೂ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಕುಗ್ಗಿಸುತ್ತಿದೆ.

ಲಾಕ್‌ಡೌನ್, ಕ್ವಾರಂಟೈನ್‌ ಬದುಕು ಕೂಡ ಒಂದು ಕಾರಣ

ಲಾಕ್‌ಡೌನ್, ಕ್ವಾರಂಟೈನ್‌ ಬದುಕು ಕೂಡ ಒಂದು ಕಾರಣ

ಕಳೆದ ಒಂದು ವರ್ಷದಿಂದ ಜನರ ಬದುಕಿನ ರೀತಿಯೇ ಬದಲಾಗಿಸಿದೆ. ಒಂದು ಔಟಿಂಗ್ ಇಲ್ಲ, ರಿಫ್ರೆಷ್ ಇಲ್ಲ ಲಾಕ್‌ಡೌನ್‌ ಬದುಕು ಇವೆಲ್ಲಾ ಕೆಲವರಲ್ಲಿ ಖಿನ್ನತೆಯನ್ನು ಉಂಟು ಮಾಡಿದೆ ಎಂದು ಸಿಡಿಸಿ ಹೇಳಿದೆ. ಈ ಕಾರಣದಿಂದಾಗಿ ಕೆಲ ದಾಂಪತ್ಯದಲ್ಲಿ ಲೈಂಗಿಕ ಆಸಕ್ತಿ ಕುಗ್ಗಿದೆ.

ಕಳೆದು ಹೋದ ಆಸಕ್ತಿ ಮರಳಿ ಪಡೆಯುವುದು ಹೇಗೆ?

ಕಳೆದು ಹೋದ ಆಸಕ್ತಿ ಮರಳಿ ಪಡೆಯುವುದು ಹೇಗೆ?

ಈಗ ಕೊರೊನಾ ಅಲೆ ಸ್ವಲ್ಪ ತಗ್ಗಿದೆ. ಸೂಕ್ತ ಕೊರೊನಾ ಮುನ್ನೆಚ್ಚರಿಕೆಗಳನ್ನು ಒಂದು ಔಟಿಂಗ್‌ ಹೋಗಿ ಇದು ನಿಮ್ಮನ್ನು ರಿಫ್ರೆಷ್‌ ಮಾಡುತ್ತದೆ. ಸದಾ ಮನೆಯಲ್ಲಿ ಒಬ್ಬರನ್ನೊಬ್ಬರು ನೋಡಿ ಕೊಂಡು ಮಾತನಾಡೋಕೆ ಏನಿದೆ ಎಂದು ಮೌನದ ಮೊರೆಗೆ ಜಾರುತ್ತಿದ್ದರೆ ಅದಕ್ಕೆ ಬ್ರೇಕ್‌ ಹಾಕಲು ನೀವು ನಿಮ್ಮ ಸ್ನೇಹಿತರ ಭೇಟಿ ಮಾಡಿ. ಇದು ನಿಮಗೂ ಖುಷಿ ನೀಡುವುದು, ಇಬ್ಬರಿಗೆ ಹಂಚಿಕೊಳ್ಳಲು ಸಾಕಷ್ಟು ವಿಷಯವೂ ಸಿಗುವುದು.

 ಮುಕ್ತವಾಗಿ ಮಾತನಾಡಿ, ಆರೋಗ್ಯಕರ ಆಹಾರ ಸೇವಿಸಿ

ಮುಕ್ತವಾಗಿ ಮಾತನಾಡಿ, ಆರೋಗ್ಯಕರ ಆಹಾರ ಸೇವಿಸಿ

ಸಮಸ್ಯೆಗಳು ನೂರೆಂಟು ಇರಬಹುದು, ಅದಕ್ಕೆ ಒಂದು ಪರಿಹಾರ ಇದ್ದೇ ಇರುತ್ತದೆ. ಅದರ ಬಗ್ಗೆ ಚಿಂತಿಸಿ ನಿಮ್ಮಿಬ್ಬರ ಸಂಬಂಧದಲ್ಲಿ ಅಂತರ ಬೆಳೆಸಬೇಡಿ. ಅದಕ್ಕಾಗಿ ಇಬ್ಬರು ಮನಸ್ಸು ಬಿಚ್ಚಿ ಮಾತನಾಡಿ. ಆರೋಗ್ಯಕರ ಆಹಾರ ಸೇವಿಸಿ. ಉತ್ತಮ ಆಹಾರ ನಿಮ್ಮ ಆರೋಗ್ಯ ವೃದ್ಧಿಸುವುದು, ಸುಸ್ತು ದೂರ ಮಾಡುವುದು.

ಯೋಗ, ವ್ಯಾಯಾಮ ಅಭ್ಯಾಸ ಮಾಡಿ

ಯೋಗ, ವ್ಯಾಯಾಮ ಅಭ್ಯಾಸ ಮಾಡಿ

ಜೊತೆಯಾಗಿ ಯೋಗ, ವ್ಯಾಯಾಮ ಅಭ್ಯಾಸ ಮಾಡಿ. ಇದರಿಂದ ದೈಹಿಕ ಫಿಟ್ನೆಸ್‌ ಕಾಪಾಡುವುದು ಮಾತ್ರವಲ್ಲಿ ನಿಮ್ಮಿಬ್ಬರ ನಡುವಿನ ರೊಮ್ಯಾಂಟಿಕ್ ಫೀಲ್ ಹೆಚ್ಚಿಸುತ್ತೆ. ಮನಸ್ಸು ಶಾಂತವಾಗುವುದು, ದೇಹ ಚುರು-ಚುರುಕಾಗಿ ಇರುತ್ತದೆ. ಇದರಿಂದ ಬೆಡ್‌ಗೆ ಹೋದಾಗ ತಟಸ್ಥ ಮನೋಭಾವ ದೂರವಾಗಿ ನಿಮ್ಮ ಮನಸ್ಸು-ದೇಹಗಳು ಒಂದಾಗುತ್ತವೆ.

 ಅಗ್ಯತ ಬಿದ್ದರೆ ತಜ್ಞರನ್ನು ಭೇಟಿಯಾಗಿ

ಅಗ್ಯತ ಬಿದ್ದರೆ ತಜ್ಞರನ್ನು ಭೇಟಿಯಾಗಿ

ದಾಂಪತ್ಯದಲ್ಲಿ ಲೈಂಗಿಕ ಅತೃಪ್ತಿ ಅನೇಕ ಸಮಸ್ಯೆ ಉಂಟು ಮಾಡುವುದು. ಆದ್ದರಿಂದ ನಾನಾ ಕಾರಣಗಳಿಂದ ನಿಮ್ಮಲ್ಲಿ ಲೈಂಗಿಕ ಆಸಕ್ತಿ ಕುಂದಿದೆ ಅಥವಾ ನಿಮ್ಮ ಸಂಗಾತಿಯಲ್ಲಿ ಕುಂದಿದೆ ಎಂದು ಅನಿಸಲಾರಂಭಿಸಿದರೆ ಮೊದಲಿಗೆ ಮುಕ್ತವಾಗಿ ಸಂವಹನ ಮಾಡಿ ಪರಿಹಾರ ಕಂಡು ಕೊಳ್ಳಿ, ಇಲ್ಲದಿದ್ದರೆ ಸೂಕ್ತ ಲೈಂಗಿಕ ತಜ್ಞರನ್ನು ಭೇಟಿಯಾಗಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಹಿಂಜರಿಗೆ ತೋರಬೇಡಿ.

English summary

Has COVID-19 Impacted Your physical Intimacy ? Here’s How to Know in kannada

Has COVID-19 Impacted Your Sex Drive? Here’s How to Know in kannada...
Story first published: Friday, September 17, 2021, 20:14 [IST]
X
Desktop Bottom Promotion