For Quick Alerts
ALLOW NOTIFICATIONS  
For Daily Alerts

ನಿಮ್ಮ ಗಂಟಲು ನೋವನ್ನು ಕ್ಷಣ ಮಾತ್ರದಲ್ಲಿ ಶಮನ ಮಾಡುವ ಶಕ್ತಿ ಈ ಗಿಡಮೂಲಿಕೆಯಲ್ಲಿದೆ

|

ಶುಂಠಿ ಭಾರತೀಯ ಪಾಕಪದ್ಧತಿಯ ಒಂದು ಅವಿಭಾಜ್ಯ ಭಾಗವಾಗಿದೆ. ರುಚಿಗೆ ಮಾತ್ರವಲ್ಲ, ಅದರ ವಿವಿಧ ಔಷಧೀಯ ಪ್ರಯೋಜನಗಳಿಗಾಗಿ ಶುಂಠಿಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಶುಂಠಿಯ ಸಾಮಾನ್ಯ ಮತ್ತು ವೈಜ್ಞಾನಿಕವಾಗಿ ಸಾಬೀತಾಗಿರುವ ಆರೋಗ್ಯ ಪ್ರಯೋಜನವೆಂದರೆ ಅದು ಗಂಟಲು ನೋವಿಗೆ ಚಿಕಿತ್ಸೆ ನೀಡುತ್ತದೆ.

ನೋಯುತ್ತಿರುವ ಗಂಟಲನ್ನು ಎರಡು ರೀತಿಯಲ್ಲಿ ಹಿತಗೊಳಿಸಲು ಶುಂಠಿ ಸಹಾಯ ಮಾಡುತ್ತದೆ - ಒಂದು ನೋವನ್ನು ನಿವಾರಿಸುವ ಮೂಲಕ ಮತ್ತು ಎರಡನೆಯದು ಸೋಂಕುಗಳ ವಿರುದ್ಧ ಹೋರಾಡುವ ಮೂಲಕ. ಗಂಟಲು ನೋವಿಗೆ ಶುಂಠಿಯನ್ನು ಸೇವಿಸುವ ಸುಲಭ ಮಾರ್ಗಗಳು ಹಾಗೂ ಅದರಲ್ಲಿರುವ ಔಷಧೀಯ ಗುಣಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಶುಂಠಿಯ ಔಷಧೀಯ ಗುಣಗಳು ಹಾಗೂ ಅದನ್ನು ಸೇವಿಸುವ ವಿಧಾನಗಳನ್ನು ಈ ಕೆಲಗೆ ನೀಡಲಾಗಿದೆ:

ಶುಂಠಿಯ ಔಷಧೀಯ ಗುಣಲಕ್ಷಣಗಳು:

ಶುಂಠಿಯ ಔಷಧೀಯ ಗುಣಲಕ್ಷಣಗಳು:

೧.ಶುಂಠಿಯಲ್ಲಿ ಶೋಗಾಲ್ಗಳು ಮತ್ತು ಜಿಂಜರೋಲ್ಗಳು ಎಂಬ ಜೈವಿಕ ಸಂಯುಕ್ತಗಳು ಸಮೃದ್ಧವಾಗಿದೆ. ಜೊತೆಗೆ ಇದು ಕೆಲವು ಆಹಾರಗಳಲ್ಲಿ ಮಾತ್ರ ಕಂಡುಬರುವ ಫೈಟೊನ್ಯೂಟ್ರಿಯೆಂಟ್ಸ್ ಹೊಂದಿದೆ. ಈ ಬಯೋಆಕ್ಟಿವ್ ಸಂಯುಕ್ತಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಗಂಟಲು ನೋವನ್ನು ನಿರ್ವಹಿಸಲು ಮತ್ತು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಶುಂಠಿಯಲ್ಲಿ ಆಂಟಿಮೈಕ್ರೊಬಿಯಲ್ ಗುಣಗಳಿದ್ದು ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

೨. ಒಂದು ಟೆಸ್ಟ್-ಟ್ಯೂಬ್ ಅಧ್ಯಯನದ ಪ್ರಕಾರ, ಶೇಕಡಾ 10 ರಷ್ಟು ಶುಂಠಿ ಸಾರವು ಬಾಯಿಯ ಸೋಂಕಿಗೆ ಕಾರಣವಾಗುವ ಸೂಕ್ಷ್ಮಜೀವಿಗಳಾದ ಸ್ಟ್ರೆಪ್ಟೋಕೊಕಸ್ ಮ್ಯುಟಾನ್ಸ್, ಕ್ಯಾಂಡಿಡಾ ಅಲ್ಬಿಕಾನ್ಸ್ ಮತ್ತು ಎಂಟರೊಕೊಕಸ್ ಬೆಳವಣಿಗೆಯನ್ನು ತಡೆಯುತ್ತದೆ.

ಶುಂಠಿಯು ಉತ್ಕರ್ಷಣ ನಿರೋಧಕ ಗುಣಗಳನ್ನು ಸಹ ಹೊಂದಿದೆ, ಇದು ವಿವಿಧ ರೋಗಗಳ ವಿರುದ್ಧ ರಕ್ಷಣಾತ್ಮಕ ಮತ್ತು ಗುಣಪಡಿಸುವ ಪ್ರಯೋಜನಗಳನ್ನು ಹೊಂದಿದೆ. ಒಣಗಿದ ಶುಂಠಿಗೆ ಹೋಲಿಸಿದರೆ ತಾಜಾ ಶುಂಠಿ ಹೆಚ್ಚು ಉತ್ಕರ್ಷಣ ನಿರೋಧಕ ಪ್ರಯೋಜನಗಳನ್ನು ಹೊಂದಿದೆ ಎಂದು ಅಧ್ಯಯನವು ಕಂಡುಹಿಡಿದಿದೆ.

೩. ಶುಂಠಿಯಲ್ಲಿನ ಸಂಯುಕ್ತಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಇದರಿಂದಾಗಿ ಚೇತರಿಕೆಯ ಸಮಯ ಕಡಿಮೆಯಾಗುತ್ತದೆ. ಜೊತೆಗೆ ಬ್ಯಾಕ್ಟೀರಿಯಾ, ರೋಗಕಾರಕಗಳು ಮತ್ತು ಜೀವಾಣುಗಳ ವಿರುದ್ಧ ಹೋರಾಡಿ ನೋಯುತ್ತಿರುವ ಗಂಟಲನ್ನು ಶಮನಗೊಳಿಸಲು ಶುಂಠಿ ಸಹಾಯ ಮಾಡುತ್ತದೆ.

೪. ದೇಹದಲ್ಲಿನ ಉರಿಯೂತಕ್ಕೆ ಕಾರಣವಾಗುವ ಪ್ರೋಟೀನ್‌ಗಳನ್ನು ತಡೆಯಲು ಶುಂಠಿ ಸಹಾಯ ಮಾಡುತ್ತದೆ.

ಗಂಟಲು ನೋವನ್ನು ಶಮನಗೊಳಿಸಲು ಶುಂಠಿಯನ್ನು ಸೇವಿಸುವ ಮಾರ್ಗಗಳು:

ಗಂಟಲು ನೋವನ್ನು ಶಮನಗೊಳಿಸಲು ಶುಂಠಿಯನ್ನು ಸೇವಿಸುವ ಮಾರ್ಗಗಳು:

ಹಸಿ ಶುಂಠಿ:

ತರಕಾರಿ ಮಾರಾಟಗಾರ ಮತ್ತು ಕಿರಾಣಿ ಅಂಗಡಿಗಳಲ್ಲಿ ಸುಲಭವಾಗಿ ಲಭ್ಯವಿದೆ. ಅದರ ಸಿಪ್ಪೆಯನ್ನ್ ತೆಗೆದುಹಾಕುವ ಮೂಲಕ ನೀವು ಇದನ್ನು ಬಳಸಬಹುದು. ಒಂದು ಇಂಚಿನ ತುಂಡನ್ನು ಕತ್ತರಿಸಿ ಅದನ್ನು ಅಗಿಯಿರಿ. ಅದು ರಸ ಬಿಟ್ಟ ಬಳಿಕ ಅದನ್ನು ನುಂಗಬಹುದು.

ಶುಂಠಿ ಚೂರ್ಣ:

ಶುಂಠಿ ಚೂರ್ಣ:

ನೀವು ಔಷಧಾಲಯದಿಂದ ಅಥವಾ ಸ್ಥಳೀಯ ಕಿರಾಣಿ ಅಂಗಡಿಯಿಂದ ಶುಂಠಿ ಚೂರ್ಣವನ್ನು ಪಡೆಯಬಹುದು. ಸೇವಿಸುವ ಮೊದಲು ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ. ನೀವು ಖರೀದಿಸುತ್ತಿರುವ ಉತ್ಪನ್ನವು ನಿಜವಾದ ಶುಂಠಿಯನ್ನು ಹೊಂದಿದೆಯೆ ಎಂದು ಖಚಿತಪಡಿಸಿಕೊಳ್ಳಿ.

ಶುಂಠಿ ಚಹಾ:

ಶುಂಠಿ ಚಹಾ:

ಬಿಸಿ ಶುಂಠಿ ಚಹಾ ನೋಯುತ್ತಿರುವ ಗಂಟಲನ್ನು ಶಮನಗೊಳಿಸಲು ಜನಪ್ರಿಯ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಬೆಚ್ಚಗಿನ ಚಹಾವು ಉಬ್ಬಿರುವ ಗಂಟಲಿಗೆ ಹಿತಕರವಾಗಿರುತ್ತದೆ. ಒಂದು ಕಪ್ ನೀರಿನಲ್ಲಿ 2 ಟೀ ಚಮಚ ಒಣ ಶುಂಠಿಯನ್ನು ಕುದಿಸಿ ಅಥವಾ ಒಂದು ಕಪ್ ನೀರಿನಲ್ಲಿ 2 ಇಂಚಿನ ಹಸಿ ಶುಂಠಿಯನ್ನು ಹಾಕುವ ಮೂಲಕ ನೀವು ಮನೆಯಲ್ಲಿ ಶುಂಠಿ ಚಹಾವನ್ನು ತಯಾರಿಸಬಹುದು.

ಇದನ್ನ್ ಐದು ನಿಮಿಷಗಳ ಕಾಲ ಕುದಿಯಲು ಬಿಡಿ, ನಂತರ ಅದನ್ನು ತಣಿಸಿ ಸೇವಿಸಿ. ನೀವು ಇದನ್ನು ದಿನಕ್ಕೆ ಎರಡು ಮೂರು ಬಾರಿ ಕುಡಿಯಬಹುದು. ಚಹಾದ ರುಚಿ ಮತ್ತು ಔಷಧೀಯ ಗುಣಗಳನ್ನು ಹೆಚ್ಚಿಸಲು ನೀವು ಒಂದು ಟೀಚಮಚ ಜೇನುತುಪ್ಪವನ್ನು ಕೂಡ ಸೇರಿಸಬಹುದು.

ಶುಂಠಿಯನ್ನು ಯಾರು ಸೇವಿಸಬಾರದು?:

ಶುಂಠಿಯನ್ನು ಯಾರು ಸೇವಿಸಬಾರದು?:

ಶುಂಠಿ ಹೆಚ್ಚಿನ ಜನರಿಗೆ ಸುರಕ್ಷಿತವಾಗಿದೆ ಆದರೆ ಇದು ಕೆಲವರಲ್ಲಿ ಅಲರ್ಜಿಯನ್ನು ಉಂಟುಮಾಡುತ್ತದೆ. ಅಲ್ಲದೆ, ವೈದ್ಯರು ಸೂಚಿಸಿದ ಔಷಧಿಗೆ ಶುಂಠಿ ಬದಲಿಯಾಗಿಲ್ಲ ಎಂಬುದನ್ನು ನೆನಪಿಡಿ. ನೀವು ಅದನ್ನು ಔಷಧಿಯೊಂದಿಗೆ ಸೇವಿಸಬಹುದು. ನೀವು ಗರ್ಭಿಣಿಯಾಗಿದ್ದರೆ, ಹೆಚ್ಚು ಶುಂಠಿ ಸೇವಿಸುವುದರಿಂದ ಗ್ಯಾಸ್ಟ್ರಿಕ್ ಅಸ್ವಸ್ಥತೆ ಉಂಟಾಗುತ್ತದೆ.

English summary

Ginger For Sore Throat: Benefits And Ways To Consume In Kannada

here we told about Ginger for Sore Throat: Benefits and Ways to Consume in Kannada, read on
Story first published: Thursday, March 18, 2021, 17:50 [IST]
X
Desktop Bottom Promotion