For Quick Alerts
ALLOW NOTIFICATIONS  
For Daily Alerts

ಧೂಮಪಾನಿಗಳು ತಿನ್ನಲೇಬೇಕಾದ 10 ಆಹಾರಗಳಿವು

|

ವಿಶ್ವದಲ್ಲಿ ಜನರು ಅಕಾಲಿಕ ಮರಣಕ್ಕೆ ತುತ್ತಾಗಲು ಪ್ರ ಮುಖ ಕಾರಣವೆಂದರೆ ಧೂಮಪಾನ ಅಭ್ಯಾಸ ಎಂದು ಸೈಕೋಲಜಿ ಅಂಡ್‌ ಸೈನ್ಸ್ ಎಂಬ ಜರ್ನಲ್ ಹೇಳಿದೆ. ಧೂಮಪಾನಿಗಳಲ್ಲಿ ಶೇ.100ಕ್ಕೆ ನೂರು ಜನರಿಗೆ ತಮ್ಮ ಈ ಅಭ್ಯಾಸ ಅರೋಗ್ಯಕ್ಕೆಒಳ್ಳೆಯದಲ್ಲ ಎಂದು ಗೊತ್ತಿರುತ್ತದೆ. ಆದರೆ ಆ ಅಭ್ಯಾಸದಿಂದ ಹೊರ ಬರಲು ಮಾತ್ರ ಪ್ರಯತ್ನಿಸಿರುವುದಿಲ್ಲ.

ಸ್ನೇಹಿತರ ಜೊತೆಗೆ ತಮಾಷೆಗಾಗಿ ಪ್ರಾರಂಭಿಸಿದ ಧೂಮಪಾನ ಅಭ್ಯಾಸ ನಂತರ ಚಟವಾಗಿ ಪರಿಣಮಿಸುತ್ತದೆ. ಧೂಮಪಾನ ದೇಹದ ಮೇಲೆ ಬೀರುವ ಕೆಟ್ಟ ಪರಿಣಾಮ ಅರಿವು ಉಂಟಾಗಿ ಅಥವಾ ಅದರಿಂದ ಆರೋಗ್ಯ ಸಮಸ್ಯೆ ಉಂಟಾಗಿ ಧೂಮಪಾನ ಬಿಡಬೇಕೆಂದು ಮನಸ್ಸು ಬಯಸಿದರೂ ಕಲಿತ ಆ ದುಶ್ಚಟ ಬಿಡಲು ಹೆಚ್ಚಿನವರಿಗೆ ಸಾಧ್ಯವಾಗುವುದಿಲ್ಲ. ಏಕೆಂದರೆ ಅದಕ್ಕೆ ಪ್ರಮುಖ ಕಾರಣ ನಿಕೋಟಿನ್.

foods to flush out nicotine

ಧೂಮಪಾನದಲ್ಲಿರುವ ನಿಕೋಟಿನ್ ನಮ್ಮ ದೇಹವನ್ನು ಸೇರಿ, ಅದು ಮೆದುಳಿಗೆ ಇನ್ನು ಬೇಕು ಎಂಬ ಸಂದೇಶ ಕಳುಹಿಸುತ್ತದೆ, ಆದ್ದರಿಂದ ಧೂಮಪಾನಿಗಳಿಗೆ ಆಗಾಗ ಧೂಮಪಾನ ಮಾಡಬೇಕೆಂಬ ಬಯಕೆ ಉಂಟಾಗುವುದು. ನಿಕೋಟಿನ್ ಚಟಕ್ಕೆ ಬಿದ್ದವರಿಗೆ ಅದನ್ನು ಸುಲಭವಾಗಿ ಬಿಡಲು ಸಾಧ್ಯವಾಗುವುದಿಲ್ಲ. ದೇಹದಲ್ಲಿ ನಿಕೋಟಿನ್ ಅಂಶ ಅಧಿಕವಾದಾಗ ಕ್ಯಾನ್ಸರ್ , ಉಸಿರಾಟದ ತೊಂದರೆ, ಕೆಮ್ಮು , ಹೃದಯಾಘಾತ ಮುಂತಾದ ಸಮಸ್ಯೆಗಳು ಬರಬಹುದು. ನಿಕೋಟಿನ್ ಅಂಶ ಅಧಿಕವಾದರೆ ಕುರುಡುತನ, ಪಾರ್ಶ್ವವಾಯು, ಕಿವುಡುತನ ಕೂಡ ಉಂಟಾಗುವುದು.

ಕೆಲವೊಂದು ಆರೋಗ್ಯಕರ ಆಹಾರಗಳು ದೇಹದಲ್ಲಿರುವ ನಿಕೋಟಿನ್ ಅಂಶ ಹೊರಹಾಕಲು ಸಹಾಯ ಮಾಡುತ್ತವೆ. ಇಲ್ಲಿ ನಾವು ಅಂತಹ ಆಹಾರಗಳ ಪಟ್ಟಿ ನೀಡಿದ್ದೇವೆ ನೋಡಿ:

1. ಕಿತ್ತಳೆ

1. ಕಿತ್ತಳೆ

ಕಿತ್ತಳೆ ತಿನ್ನುವುದರಿಂದ ಅದರಲ್ಲಿರುವ ವಿಟಮಿನ್ ಸಿ ಹಾಗೂ ನಾರಿನಂಶ ದೇಹದಲ್ಲಿ ಚಯಾಪಚಯ ಕ್ರಿಯೆ ಸರಿಯಾದ ರೀತಿಯಲ್ಲಿ ನಡೆಯುವಂತೆ ಮಾಡುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುವುದು. ಇದರಿಂದ ದೇಹದೊಳಗಿರುವ ನಿಕೋಟಿನ್ ಅಂಶ ಮಲವಿಸರ್ಜನೆ ಮಾಡುವಾಗ ಹೊರ ಹೋಗುವುದು.

2. ಶುಂಠಿ

2. ಶುಂಠಿ

ದೇಹದಲ್ಲಿ ನಿಕೋಟಿನ್ ಅಂಶ ಸೇರಿದಾಗ ಅದು ಮತ್ತಷ್ಟು ಬೇಕೆಂಬ ಬಯಕೆ ಉಂಟಾಗುವುದು. ಅದನ್ನು ತಡೆಗಟ್ಟುವಲ್ಲಿ ಶುಂಠಿ ಸಹಕಾರಿಯಾಗಿದೆ. ಇನ್ನು ಧೂಮಪಾನದಿಂದ ಅನೇಕ ತೊಂದರೆಗಳನ್ನು ಗುಣಪಡಿಸುವಲ್ಲಿಯೂ ಶುಂಠಿ ಸಹಕಾರಿ. ಧೂಮಪಾನ ಬಿಡಬೇಕೆಂದು ಬಯಸುವುದಾದರೆ ಸ್ವಲ್ಪ ಶುಂಠಿ ಬಾಯಲ್ಲಿ ಹಾಕಿಕೊಳ್ಳಿ. ಹಾಗಂತ ತುಂಬಾ ಶುಂಠಿ ಬಳಸಬೇಡಿ. ಶುಂಠಿ ಮಿತಿಯಲ್ಲಿ ತಿನ್ನಿ ಶುಂಠಿ ಸಿಗರೇಟ್‌ ಎಳೆಯಬೇಕು ಎಂಬ ಬಯಕೆಯನ್ನು ಕಡಿಮೆ ಮಾಡುತ್ತದೆ.

 3. ಕ್ಯಾರೆಟ್

3. ಕ್ಯಾರೆಟ್

ಕ್ಯಾರೆಟ್‌ನಲ್ಲಿ ಎ, ಸಿ, ಬಿ ಮತ್ತು ಕೆ ವಿಟಮಿನ್‌ಗಳಿದ್ದು ಇದು ಧೂಮಪಾನದಿಂದಾಗಿ ಹಾನಿಗೊಳಗಾದ ದೆಹದ ನರಗಳನ್ನು ಸರಿ ಪಡಿಸುತ್ತದೆ. ಸಿಗರೇಟ್‌ ಎಳೆಯುವುದರಿಂದ ತ್ವಚೆಯೂ ಕಳೆಗುಂದುವುದು. ಸಿಗರೇಟ್‌ ಸೇವನೆ ನಿಲ್ಲಿಸಿ. ಕ್ಯಾರೆಟ್‌ ಅನ್ನು ಆಹಾರಕ್ರಮದಲ್ಲಿ ಸೇರಿಸುವುದರಿಂದ ದೇಹದಲ್ಲಿರುವ ನಿಕೋಟಿನ್ ಅಂಶ ಹೊರಹಾಕಬಹುದು.

4. ನಿಂಬೆಹಣ್ಣು

4. ನಿಂಬೆಹಣ್ಣು

ಧೂಮಪಾನ ಮಾಡುವುದರಿಂದ ಜೀವಕಣಗಳಿಗೆ ಹಾನಿಯುಂಟಾಗುವುದು. ಹಾನಿಗೊಳಗಾದ ಜೀವಕಣಗಳನ್ನು, ನರಗಳನ್ನು ಸರಿಪಡಿಸುವಲ್ಲಿ ನಿಂಬೆಹಣ್ಣು ಸಹಕಾರಿಯಾಗಿದೆ.ಧೂಮಪಾನದಿಂದಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ನಿಂಬೆಹಣ್ಣು ಸಹಕಾರಿಯಾಗಿದೆ.

5. ಬ್ರೊಕೋಲಿ

5. ಬ್ರೊಕೋಲಿ

ಬ್ರೊಕೋಲಿಯಲ್ಲಿ ವಿಟಮಿನ್ ಬಿ5 ಮತ್ತು ವಿಟಮಿನ್ ಸಿ ಇದ್ದು, ಈ ವಿಟಮಿನ್ಸ್ ಚಯಾಪಚಯ ಕ್ರಿಯೆಗೆ ತುಂಬಾ ಸಹಾಯ ಮಾಡುತ್ತದೆ. ಇದು ದೇಹದಲ್ಲಿ ನಿಕೋಟಿನ್ ಅಂಶ ಹೊರ ಹಾಕಿ ಕರುಳಿನ ಕ್ಯಾನ್ಸರ್ ಬರದಂತೆ ತಡೆಯುತ್ತದೆ.

6. ಕ್ರ್ಯಾನ್‌ಬೆರ್ರಿ

6. ಕ್ರ್ಯಾನ್‌ಬೆರ್ರಿ

ಧೂಮಪಾನಿಗಳು ತಿನ್ನಲೇಬೇಕಾದ ಹಣ್ಣುಗಳಲ್ಲಿ ಕ್ರ್ಯಾನ್‌ಬೆರ್ರಿ ಕೂಡ ಒಂದು. ಈ ಹಣ್ಣು ತಿನ್ನುವುದರಿಂದ ದೇಹದಲ್ಲಿ ನಿಕೋಟಿನ್ ಕಡಿಮೆಯಾಗಿ ಸಿಗರೇಟ್‌ ಬಯಕೆ ತಗ್ಗುವುದು. ಧೂಮಪಾನ ಬಿಡಲು ನಿಜವಾಗಲೂ ಮನಸ್ಸು ಮಾಡಿದವರು ಈ ಹಣ್ಣನ್ನು ಒಂದೊಂದೇ ಸವಿದರೆ ಸಾಕು, ಸಿಗರೇಟ್ ಬಯಕೆ ಕಡಿಮೆಯಾಗುವುದು.

7. ಕಿವಿ ಹಣ್ಣು

7. ಕಿವಿ ಹಣ್ಣು

ಕಿವಿ ಹಣ್ಣಿನಲ್ಲಿ ವಿಟಮಿನ್ ಎ, ಸಿ, ಇ ಇದ್ದು ದೇಹದಲ್ಲಿರುವ ನಿಕೋಟಿನ್ ಅಂಶ ಹೊರಹಾಕುವಲ್ಲಿ ತುಂಬಾ ಸಹಕಾರಿ. ಧೂಮಪಾನಿಗಳು ದೂಮಪಾನ ಬಿಡುವಾಗ ಖಿನ್ನತೆಗೆ ಒಳಗಾಗುತ್ತಾರೆ.ಅ ದನ್ನು ಹೋಗಲಾಡಿಸಲು ಕೂಡ ಈ ಹಣ್ಣು ಸಹಕಾರಿ.

8. ಪಾಲಾಕ್

8. ಪಾಲಾಕ್

ಧೂಮಪಾನ ಮಾಡುತ್ತಿರುವವರು ಧೂಮಪಾನ ಮಾಡಿದ್ದರೆ ಮಲಗಿದರೆ ನಿದ್ದೆ ಬರುವುದಿಲ್ಲ, ವಿಚಿತ್ರ ಸಂಕಟ ಉಂಟಾಗುತ್ತದೆ, ಸಿಗರೇಟ್ ಹೊಡೆದರೆ ಮಾತ್ರ ನಿದ್ದೆ ಬರುವುದು ಎಂಬ ಪರಿಸ್ಥಿತಿ ಇರುತ್ತದೆ. ಆದರೆ ಧೂಮಪಾನ ಬಿಟ್ಟು ನಿಮ್ಮ ಆಹಾರದಲ್ಲಿ ಪಾಲಾಕ್ ಸೇರಿಸಿ. ಪಾಲಾಕ್‌ನಲ್ಲಿ ಫಾಲಿಕ್ ಆಮ್ಲ, ವಿಟಮಿನ್ ಬಿ9 ಇದ್ದು ಸುಖನಿದ್ದೆಗೆ ಸಹಕಾರಿ.

9. ಕಳೆ

9. ಕಳೆ

ಕಳೆ, ಬ್ರೊಕೋಲಿ ನಿಕೋಟಿನ್ ಸೇರಿ ದೇಹದಲ್ಲಿರುವ ಇತರ ಕಶ್ಮಲಗಳನ್ನು ಹೊರಹಾಕುವಲ್ಲಿ ತುಂಬಾ ಸಹಕಾರಿ. ಇದನ್ನು ಸಲಾಡ್‌ನಲ್ಲಿ ಬಳಸಿ. ಇದು ನಿಕೋಟಿನ್ ಅಂಶ ಹೊರಹಾಕಿ, ದೇಹದಲ್ಲಿ ಹೊಸ ಚೈತನ್ಯ ತುಂಬುತ್ತದೆ.

10. ದಾಳಿಂಬೆ:

10. ದಾಳಿಂಬೆ:

ದಾಳಿಂಬೆ ತಿನ್ನುವುದರಿಂದ ಆರೋಗ್ಯಕ್ಕೆ ಅನೇಕ ಲಾಭಗಳಿವೆ. ಇದನ್ನು ತಿನ್ನುವುದರಿಂದ ದೇಹದಲ್ಲಿ ರಕ್ತಕಣಗಳು ಹೆಚ್ಚಾಗುವುದು ಹಾಗೂ ದೇಹದಲ್ಲೊ ರಕ್ತವನ್ನು ಶುದ್ಧೀಕರಿಸುವ ಗುಣ ಹೊಂದಿದೆ. ದಾಳಿಂಬೆ ಹಣ್ಣಿನಲ್ಲಿ ಸುಲಭವಾಗಿ ಕರಗದ ನಾರಿನಂಶವಿರುವ ಕಾರಣ ಕರುಳಿನಲ್ಲಿ ಪಚನಕ್ರಿಯೆಯ ನಂತರ ತ್ಯಾಜ್ಯಗಳೊಂದಿಗೆ ಸುಲಭವಾಗಿ ಮಿಳಿತಗೊಂಡು ಸುಖವಿಸರ್ಜನೆಗೆ ಸಹಾಯ ಮಾಡುತ್ತದೆ. ಈ ನಾರು ದಾಳಿಂಬೆ ಕಾಳಿನ ಒಳಗಿನ ಬೀಜದಲ್ಲಿ ಶೇಖರವಾಗಿದ್ದು ಪ್ರತಿದಿನದ ಬಹಿರ್ದೆಶೆಗೆ ನೆರವಾಗುತ್ತದೆ. ಇದರಿಂದ ದೇಹದಲ್ಲಿರುವ ನಿಕೋಟಿನ್ ಅಂಶ ಹೊರ ಹೋಗುವುದು.

English summary

Foods To Flush The Nicotine Out Of The Body

There are several healthy foods which help to flush the nicotine out of the body. These foods are easily available in the market, and they are:
Story first published: Friday, February 14, 2020, 16:22 [IST]
X
Desktop Bottom Promotion