For Quick Alerts
ALLOW NOTIFICATIONS  
For Daily Alerts

10 ಸೆಕೆಂಡ್‌ ಒಂಟಿ ಕಾಲಿನಲ್ಲಿ ನಿಲ್ಲಲು ಸಾಧ್ಯವಾಗದಿದ್ದರೆ ಆಯುಷ್ಯ ಕಡಿಮೆಯಂತೆ!

|

ನಮ್ಮ ದೇಹದ ಮೇಲೆ ನಮಗೆ ಬ್ಯಾಲೆನ್ಸ್‌ ಇರಬೇಕು. ವಯಸ್ಸಾಗುತ್ತಾ ಬರುತ್ತಿದ್ದಂತೆ ಈ ಬ್ಯಾಲೆನ್ಸ್ ಕಡಿಮೆಯಾಗುವುದು. ಆದರೆ ಯೋಗ, ವ್ಯಾಯಾಮ ಮಾಡುತ್ತಿದ್ದರೆ ಎಷ್ಟು ವಯಸ್ಸಾದರೂ ಈ ಸಮಸ್ಯೆ ಬರಲ್ಲ. ನಡೆಯುವಾಗ ನಿಮಗೆ ಬ್ಯಾಲೆನ್ಸ್‌ ಆಗಿದೆ ಎಂದು ಅನಿಸಬಹುದು. ಆದರೆ ಒಂಟಿ ಕಾಲಿನಲ್ಲಿ ನಿಲ್ಲಲು ಹೇಳಿದರೆ ನಿಮ್ಮ ದೇಹವನ್ನು ಬ್ಯಾಲೆನ್ಸ್‌ ಮಾಡಲು ಸಾಧ್ಯವೇ?

Body Balance

ಒಂಟಿ ಕಾಲಿನಲ್ಲಿ ನಿಂತು ದೇಹವನ್ನು ವ್ಯಾಲೆನ್ಸ್ ಮಾಡುವುದಕ್ಕೂ, ನಿಮ್ಮ ಆಯುಷ್ಯೂಕ್ಕೂ ಸಂಬಂಧವಿದೆಯಂತೆ, ಹಾಗಂತ ಅಧ್ಯಯನ ವರದಿ ಹೇಳಿದೆ.

ಒಂಟಿ ಕಾಲಿನಲ್ಲಿ ನಿಲ್ಲುವುದಕ್ಕೂ ನಮ್ಮ ಆಯುಷ್ಯಕ್ಕೂ ಇರುವ ಸಂಬಂಧವೇನು ಎಂದು ನೋಡೋಣ ಬನ್ನಿ:

ಒಂಟಿ ಕಾಲಿನಲ್ಲಿ ನಿಲ್ಲುವುದಕ್ಕೂ ಆಯುಷ್ಯದ ಭವಿಷ್ಯಕ್ಕೂ ಇರುವ ಸಂಬಂಧವೇನು?

ಒಂಟಿ ಕಾಲಿನಲ್ಲಿ ನಿಲ್ಲುವುದಕ್ಕೂ ಆಯುಷ್ಯದ ಭವಿಷ್ಯಕ್ಕೂ ಇರುವ ಸಂಬಂಧವೇನು?

ಇತ್ತೀಚೆಗೆ Sports Medicine ಎಂಬ ಬ್ರಿಟಿಷ್‌ ಜರ್ನಲ್‌ ವರದಿ ಪ್ರಕಾರ ವಯಸ್ಕರಿಗೆ ಒಂಟಿ ಕಾಲಿನಲ್ಲಿ ನಿಂತು ದೇಹವನ್ನು ಬ್ಯಾಲೆನ್ಸ್‌ ಮಾಡಲು ಸಾಧ್ಯವಾಗದಿದ್ದರೆ, ಒಂಟಿ ಕಾಲಿನಲ್ಲಿ ಬ್ಯಾಲೆನ್ಸ್‌ ಮಾಡಲು ಸಾಧ್ಯವಾಗುವವರಿಗಿಂತ ಮಾಡಲು ಸಾಧ್ಯವಾಗದವರಿಗೆ ಇನ್ನೂ 10 ವರ್ಷದಲ್ಲಿ ಸಾವು ಬರುವ ಸಾಧ್ಯತೆ ಇದೆ ಎಂದು ಅಧ್ಯಯನ ವರದಿ ಹೇಳಿದೆ. ಯಾರಿಗೆ ಒಂಟಿ ಕಾಲಿನಲ್ಲಿ ದೇಹವನ್ನು ಬ್ಯಾಲೆನ್ಸ್ ಮಾಡಲು ಸಾಧ್ಯವಿಲ್ಲವೋ ಅವರ ದೇಹ ದುರ್ಬಲವಾಗಿರುತ್ತದೆ ಎಂದು ಹೇಳಿದೆ.

 ಒಂಟಿ ಕಾಲಿನಲ್ಲಿ ನಿಲ್ಲಲು ಸಾಧ್ಯವಾದರೆ

ಒಂಟಿ ಕಾಲಿನಲ್ಲಿ ನಿಲ್ಲಲು ಸಾಧ್ಯವಾದರೆ

ಒಂಟಿ ಕಾಲಿನಲ್ಲಿ ನಿಲ್ಲಲು ಸಾಧ್ಯವಾದರೆ ನಿಮ್ಮ ದೇಹದ ಸಾಮರ್ಥ್ಯ ಚೆನ್ನಾಗಿದೆ ಎಂದರ್ಥ. ಒಂಟಿ ಕಾಲಿನಲ್ಲಿ ನಿಲ್ಲುವುದರಿಂದ ದೇಹದ ಆರೋಗ್ಯ ಹೆಚ್ಚುವುದು, ಆದ್ದರಿಂದ ಒಂದು 10 ನಿಮಿಷ ಒಂಟಿ ಕಾಲಿನಲ್ಲಿ ನಿಲ್ಲುವ ಅಭ್ಯಾಸ ಒಳ್ಳೆಯದು.

 ಅಧ್ಯಯನ ವರದಿ ಏನು ಹೇಳಿದೆ?

ಅಧ್ಯಯನ ವರದಿ ಏನು ಹೇಳಿದೆ?

ಯಾರಿಗೆ 10 ಸೆಕೆಂಡ್‌ ಒಂಟಿ ಕಾಲಿನಲ್ಲಿ ನಿಲ್ಲಲು ಸಾಧ್ಯವಿಲ್ಲವೋ ಅವರಿಗೆ ದೇಹ ಬ್ಯಾಲೆನ್ಸ್ ಕಡಿಮೆಯಾಗುವುದು, ಇದರಿಂದ ಮೈ ತೂಕ ಹೆಚ್ಚುವುದು, ಲೈಂಗಿಕ ಆಸಕ್ತಿ ಕಡಿಮೆಯಾಗುವುದು, ಹೃದಯ ಸಂಬಂಧಿ ಸಮಸ್ಯೆ, ಹೈಪರ್‌ ಟೆನ್ಷನ್, ಒಬೆಸಿಟಿ, ಅಧಿಕ ಕೊಲೆಸ್ಟ್ರಾಲ್, ಮಧುಮೇಹ ಈ ರೀತಿಯ ಸಮಸ್ಯೆಯಿಂದಾಗಿ ಆರೋಗ್ಯ ಹಾಳಾಗಿ ಆಯುಷ್ಯ ಕಡಿಮೆಯಾಗುವುದು ಎಂದು ಅಧ್ಯಯನ ವರದಿ ಹೇಳಿದೆ.

ಈ ಕುರಿತು ತಜ್ಞರು ಹೇಳುವುದೇನು?

ಈ ಕುರಿತು ತಜ್ಞರು ಹೇಳುವುದೇನು?

ಹೆಲ್ತ್‌ ಶಾಟ್ ಪ್ರಕಾರ ಡಾ ನವೀದ್ ಸತ್ತಾರ್ ( ಗ್ಲಾಸ್ಗೋ ವಿಶ್ವವಿದ್ಯಾನಿಲಯದ metabolic medicine in the Institute of Cardiovascular & Medical Sciences ಪ್ರೊಫೆಸರ್) ಒಂಟಿ ಕಾಲಿನಲ್ಲಿ ನಿಲ್ಲುವುದಕ್ಕೂ ಆಯುಷ್ಯ ಕುರಿತು ಹೇಳಿರುವ ಅಧ್ಯಯನ ವರದಿ ಎಲ್ಲರಿಗೂ ಅನ್ವಯಿಸಬೇಕಾಗಿಲ್ಲ ಎಂದು ಹೇಳಿದೆ.

ಒಂಟಿ ಕಾಲಿನಲ್ಲಿ ನಿಂತರೆ ದೊರೆಯುವ ಪ್ರಯೋಜನವೇನು?

ಒಂಟಿ ಕಾಲಿನಲ್ಲಿ ನಿಂತರೆ ದೊರೆಯುವ ಪ್ರಯೋಜನವೇನು?

ಇದರಿಂದ ಮೆದುಳಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಸ್ನಾಯುಗಳು ಬಲವಾಗುವುದು, ರಕ್ತ ಸಂಚಾರ ಉತ್ತಮವಾಗಿರುತ್ತದೆ, ನರಗಳ ಸಮಸ್ಯೆ ಇರಲ್ಲ. ಆರೋಗ್ಯ ಚೆನ್ನಾಗಿದ್ದರೆ ಆಯುಷ್ಯ ಕೂಡ ಹೆಚ್ಚುವುದು.

ಯೋಗದಲ್ಲಿ ವೃಕ್ಷಾಸನ

ಯೋಗದಲ್ಲಿ ವೃಕ್ಷಾಸನ

ಯೋಗಾದಲ್ಲಿ ವೃಕ್ಷಾಸನ ಇದೆ. ಇದು ಒಂಟಿ ಕಾಲಿನಲ್ಲಿ ನಿಲ್ಲುವ ಯೋಗಾಸನ ಅಭ್ಯಾಸವಾಗಿಎ. ಮೊದಲು ಮಾಡುವಾಗ ಗೋಡೆಯ ಸಪೋರ್ಟ್‌ ತೆಗೆದುಕೊಳ್ಳಿ, ನಂತರ ನಿಧಾನಕ್ಕೆ ದೇಹಕ್ಕೆ ಬ್ಯಲೆನ್ಸ್ ಬರುತ್ತೆ, ಆಗ ಆರಾಮವಾಗಿ ಒಂಟಿ ಕಾಲಿನಲ್ಲಿ ನಿಲ್ಲಲು ಸಾಧ್ಯವಾಗುವುದು. ಇದರಿಂದ ಏಕಾಗ್ರತೆ ಜೊತೆಗೆ ಆರೋಗ್ಯ ಕೂಡ ವೃದ್ಧಿಸುವುದು.

English summary

Failure To Stand On 1 Leg For 10 Seconds Linked To Increased Risk of Death:Study

Failure To Stand On 1 Leg For 10 Seconds Linked To Increased Risk of Death:Study, Read on..
Story first published: Friday, June 24, 2022, 19:14 [IST]
X
Desktop Bottom Promotion