For Quick Alerts
ALLOW NOTIFICATIONS  
For Daily Alerts

ಸಿದ್ಧವಾಯ್ತು ಮತ್ತೊಂದು ಕೊರೊನಾ ಲಸಿಕೆ: ಜೈಕೋವಿ-ಡಿ, ಇದರ ವಿಶೇಷತೆ ಏನು?

|

ಒಂದು ಕಡೆ ಕೊರೊನಾ 2 ಅಲೆಯ ಆರ್ಭಟ, ಮತ್ತೊಂದೆಡೆ ಕೊರೊನಾ ಲಸಿಕೆಯ ಕೊರತೆ ಜನರನ್ನು ಆತಂಕಕ್ಕೆ ದೂಡಿದೆ. ತಜ್ಞರೇ ಹೇಳಿರುವಂತೆ ಕೊರೊನಾ ಗೆಲ್ಲಲು ಎಲ್ಲರು ಕೊರೊನಾ ಲಸಿಕೆ ಪಡೆದುಕೊಳ್ಳುವಂತಾಗಬಹುದು. ಸರ್ಕಾರವು 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಪಡೆಯುವಂತೆ ಸೂಚಿಸಿದೆ.

ZyCoV-D covid vaccine

ಆದರೆ ಲಸಿಕೆಗಾಗಿ ಬಂದವರಿಗೆ ಕೊರೊನಾ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ, ಇದು ಸರ್ಕಾರದ ಮೇಲೆ ಒತ್ತಡ ಬೀರಿದರೆ ಜನರಲ್ಲಿ ಎಲ್ಲರಿಗೆ ಸಿಗುವಂತೆ ಕೊರೊನಾ ಲಸಿಕೆ ಯಾವಾಗ ಲಭ್ಯವಾಗುವುದು ಎಂಬ ಪ್ರಶ್ನೆ ಮೂಡಿತ್ತು. ಈಗ ಅದಕ್ಕೆ ಉತ್ತರವಾಗಿ ಅಹ್ಮದಾಬಾದ್‌ನ ಜೈಡಸ್‌ ಕ್ಯಾಡಿಲಾ ಕಂಪನಿ ಭರವಸೆಯನ್ನು ಮೂಡಿಸಿದೆ.

ಜೂನ್ ತಿಂಗಳಿನಲ್ಲಿ ZyCoV-D ಕೋವಿಡ್‌ 19 ಲಸಿಕೆ ತಯಾರಿಸಿ ನೀಡುವುದಾಗಿ ಕಂಪನಿ ಹೇಳಿದೆ. ಇದರ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ:

ಭಾರತದಲ್ಲಿ ಕೊರೊನಾ ಲಸಿಕೆ ಉತ್ಯಾದನೆಯಲ್ಲಿ 2ನೇ ದೊಡ್ಡ ಕಂಪನಿ

ಭಾರತದಲ್ಲಿ ಕೊರೊನಾ ಲಸಿಕೆ ಉತ್ಯಾದನೆಯಲ್ಲಿ 2ನೇ ದೊಡ್ಡ ಕಂಪನಿ

ನೋವೆಲ್‌ ಕೊರೊನಾ ವೈರಸ್‌ ವಿರುದ್ಧ ಲಸಿಕೆ ಉತ್ಪಾದನೆಯಲ್ಲಿ ಕೊವಾಕ್ಸಿನ್ ಉತ್ಪಾದನೆಯ ಭಾರತ್ ಬಯೋಟೆಕ್ ಮೊದಲ ಸ್ಥಾನದಲ್ಲಿದ್ದರೆ ಜೈಕೋವಿ-ಡಿ ಲಸಿಕೆ ಉತ್ಪಾದನೆ ಜೈಡಸ್ ಕ್ಯಾಡಿಲಾ 2ನೇ ಸ್ಥಾನದಲ್ಲಿದೆ.

ಜೈಕೋವಿ-ಡಿ 3 ಡೋಸ್‌ನ ಲಸಿಕೆಯಾಗಿದೆ

ಜೈಕೋವಿ-ಡಿ 3 ಡೋಸ್‌ನ ಲಸಿಕೆಯಾಗಿದೆ

ಕೊವಾಕ್ಸಿನ್ , ಕೋವಿಶೀಲ್ಡ್ ಎರಡು ಡೋಸ್‌ನ ಲಸಿಕೆಯಾದರೆ ಜೈಕೋವಿ-ಡಿ ಮೂರು ಡೋಸ್‌ನ ಲಸಿಕೆಯಾಗಿದೆ. ಈ ಲಸಿಕೆಯ ಟ್ರಯಲ್‌ನಲ್ಲಿ 12-17ವರ್ಷ ಒಳಗಿನ ಮಕ್ಕಳನ್ನು ಸಹ ಒಳಪಡಿಸಿದೆ.

ವರ್ಷದಲ್ಲಿ 24 ಕೋಟಿ ಲಸಿಕೆ ಉತ್ಪಾದಿಸಲಿರುವ ಜೈಕೋವಿ-ಡಿ

ವರ್ಷದಲ್ಲಿ 24 ಕೋಟಿ ಲಸಿಕೆ ಉತ್ಪಾದಿಸಲಿರುವ ಜೈಕೋವಿ-ಡಿ

ಈ ಲಸಿಕೆ ನೀಡಲು ಅನುಮತಿ ದೊರೆತ ಕೂಡಲೇ ಜೂನ್‌ನಲ್ಲಿ ಲಭ್ಯವಾಗಲಿದ್ದು ಈ ವರ್ಷ 240 ಮಿಲಿಯನ್ ಅಂದ್ರೆ 24 ಕೋಟಿ ಲಸಿಕೆ ಉತ್ಪಾದನೆಯ ಗುರಿಯನ್ನು ಹೊಂದಿದೆ.

ಈ ಲಸಿಕೆಯನ್ನು ಇದುವರೆಗೆ ಸ್ವಯಂಪ್ರೇರೀತರಾಗಿ ಬಂದಿರುವ 28,000 ಜನರ ಮೇಲೆ ಪ್ರಯೋಗಿಸಲಾಗಿದೆ. ಆದ್ದರಿಂದ ಈ ಲಸಿಕೆಯ ಟ್ರಯಲ್ ನಲ್ಲಿ ಒಳಪಟ್ಟವರ ಸಂಖ್ಯೆ ಇತರ ವ್ಯಾಕ್ಸಿನ್ ಟ್ರಯಲ್ ಸಂಖ್ಯೆಗಿಂತ ಅಧಿಕವಿದೆ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ZyCoV-D ಒಂದು DNA ವ್ಯಾಕ್ಸಿನ್ ಆಗಿದ್ದು, ಇದು ಕೊರೊನಾವೈರಸ್‌ ದೇಹ ಒಳ ಪ್ರವೇಶಿಸಲು ಕಾರಣವಾಗುವ ವೈರಲ್ ಮೆಂಬರೇನ್ ಪ್ರೋಟೀನ್ ವಿರುದ್ಧ ಹೋರಾಡುತ್ತದೆ.

ಇದು ಪ್ಲಾಸ್ಮಿಡ್ ಡಿಎನ್‌ಎ ಆಧಾರಿತ ಲಸಿಕೆಯಾಗಿದ್ದು ಇದರಲ್ಲಿ ಸರ್ಕ್ಯೂಲರ್ ಮತ್ತು ಎಕ್ಸ್ಟ್ರಾಕ್ರೋಮೋಸೋಮಲ್ ಬ್ಯಾಕ್ಟಿರಿಯಾ ಡಿಎನ್‌ಎ ಬಳಸಿ ತಯಾರಿಸಲಾಗಿದೆ.

English summary

Explained: ZyCoV-D Covid Vaccine, How Does ZyCoV-D Work?

Explained: ZyCoV-D covid vaccine, how does ZyCoV-D rork, read on,
Story first published: Saturday, May 15, 2021, 20:43 [IST]
X
Desktop Bottom Promotion