For Quick Alerts
ALLOW NOTIFICATIONS  
For Daily Alerts

ನಿಮ್ಮಲ್ಲಿ ಈ ಲಕ್ಷಣಗಳು ಕಂಡುಬಂದರೆ ಕ್ಯಾನ್ಸರ್‌ನ ಮುನ್ಸೂಚನೆ ಇರಬಹುದು!

|

ಮನುಷ್ಯನನ್ನು ಬಾಧಿಸುವ ಮಾರಣಾಂತಿಕ ಕಾಯಿಲೆಗಳಲ್ಲಿ ಕ್ಯಾನ್ಸರ್‌ ಸಹ ಭೀಕರ ರೋಗವಾಗಿದೆ. ಹಂತ ಹಂತವಾಗಿ ಮನುಷ್ಯನನ್ನು ಕೊಲ್ಲು ಈ ಕಾಯಿಲೆ ದೈಹಿಕವಾಗಿ ಅಲ್ಲದೆ ಮಾನಸಿಕವಾಗಿಯೂ ಸಾಕಷ್ಟು ನರಳಾಟ ಪಡುವಂತೆ ಮಾಡುತ್ತದೆ.

Early Warning Signs That Cancer Is Growing In Your Body In Kannada

ಇಂಥಾ ಭೀಕರ ಕಾಯಿಲೆಯನ್ನು ಪತ್ತೆ ಮಾಡಲು ವೈದ್ಯಕೀಯ ಲೋಕದಲ್ಲಿ ಸಾಕಷ್ಟು ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ. ಆದರೆ ನಿಮಗೆ ತಿಳಿದಿರಲಿ ನಮ್ಮ ದೇಹದಲ್ಲಿ ಆಗುವ ಕೆಲವು ಬದಲಾವಣೆಗಳು ಕ್ಯಾನ್ಸರ್‌ನ ಮುನ್ಸೂಚನೆಯನ್ನು ನೀಡುತ್ತದೆ. ಈ ಬಗ್ಗೆ ನೀವು ನಿರ್ಲಕ್ಷ್ಯವಹಿಸದೆ ಹೆಚ್ಚು ಗಮನಹರಿಸಿದರೆ ಆರಂಭಿಕ ಹಂತದಲ್ಲೇ ಇದಕ್ಕೆ ನೀವು ಚಿಕಿತ್ಸೆ ಆರಂಭಿಸಬಹುದು.

ಯಾವುದು ಆ ಮುನ್ಸೂಚನೆ ಮುಂದೆ ನೋಡೋಣ:

1. ಎದೆ ನೋವು ಅಥವಾ ದೀರ್ಘಕಾಲದ ಕೆಮ್ಮು

1. ಎದೆ ನೋವು ಅಥವಾ ದೀರ್ಘಕಾಲದ ಕೆಮ್ಮು

ಬ್ರಾಂಕೈಟಿಸ್ ಮತ್ತು ಅತಿಯಾದ ಕೆಮ್ಮು ಕೆಲವು ಸಂದರ್ಭಗಳಲ್ಲಿ ಶ್ವಾಸಕೋಶದ ಗೆಡ್ಡೆಗಳು ಮತ್ತು ರಕ್ತಕ್ಯಾನ್ಸರ್‌ನ ರೋಗಲಕ್ಷಣಗಳಾಗಿರಬಹುದು. ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಕೆಲವರು ಸಾಮಾನ್ಯವಾಗಿ ಎದೆ ನೋವು ಹಾಗೂ ಅದು ತೋಳಿನ ಕೆಳಗೆ ಮತ್ತು ಭುಜದವರೆಗೆ ವಿಸ್ತರಿಸುವ ಬಗ್ಗೆ ವೈದ್ಯರಲ್ಲಿ ತಿಳಿಸಿರುವುದು ಕಂಡುಬಂದಿದೆ. ಆದ್ದರಿಂದ ಬ್ರಾಂಕೈಟಿಸ್, ಅತಿಯಾದ ಕೆಮ್ಮು, ಎದೆನೋವು, ತೋಳುಗಳ ನೋವು ನಿಮ್ಮನ್ನು ಎಡೆಬಿಡದೆ ಕಾಡಿದರೆ ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು.

2. ಉಸಿರಾಟ ಸಮಸ್ಯೆ ಅಥವಾ ಉಬ್ಬಸದ ಕೊರತೆ

2. ಉಸಿರಾಟ ಸಮಸ್ಯೆ ಅಥವಾ ಉಬ್ಬಸದ ಕೊರತೆ

ಆಗಾಗ್ಗೆ ಉಸಿರಾಟದ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ಅದು ಶ್ವಾಸಕೋಶ ಕ್ಯಾನ್ಸರ್‌ನ ಮುನ್ಸೂಚನೆ ಇರಬಹುದು. ಉಸಿರು ಬಿಗಿಹಿಡಿದಂಥ ಅನುಭವ, ಶಕ್ತಿಹೀನತೆ ಪದೇ ಪದೇ ಉಸಿರಾಡಲು ಕಷ್ಟವಾದರೆ ಇದು ಶ್ವಾಸಕೋಶದ ಕ್ಯಾನ್ಸರ್‌ನ ಮೊದಲ ಲಕ್ಷಣಗಳಲ್ಲಿ ಒಂದಾಗಿದೆ.

3. ನುಂಗಲು ತೊಂದರೆ

3. ನುಂಗಲು ತೊಂದರೆ

ನೀವು ಆಹಾರ ಸೇವಿಸುವಾಗ ಆಹಾರ ನಿಮ್ಮ ಗಂಟಲಿನಿಂದ ಇಳಿಯಲು ಕಷ್ಟವಾಗುತ್ತಿದ್ದರೆ ಇದು ಸಹ ಶ್ವಾಸಕೋಶದ ಕ್ಯಾನ್ಸರ್‌ನ ಮೊದಲ ರೋಗಲಕ್ಷಣಗಳಲ್ಲಿ ಒಂದಾಗಿದೆ. ಇದನ್ನು ಗಂಟಲು ಕ್ಯಾನ್ಸರ್ ಮತ್ತು ಅನ್ನನಾಳದ ಕ್ಯಾನ್ಸರ್‌ ಸಹ ಆಗರಬಹುದು.

4. ಸೋಂಕು, ಆಗಾಗ್ಗೆ ಜ್ವರ, ನಿಲ್ಲದ ರಕ್ತಸ್ರಾವ ಅಥವಾ ಅತಿಯಾದ ಮೂಗೇಟುಗಳು

4. ಸೋಂಕು, ಆಗಾಗ್ಗೆ ಜ್ವರ, ನಿಲ್ಲದ ರಕ್ತಸ್ರಾವ ಅಥವಾ ಅತಿಯಾದ ಮೂಗೇಟುಗಳು

ನಿಮಗೆ ಸೋಂಕಿನ ಸಮಸ್ಯೆ ಇದ್ದರೆ, ಆಗಾಗ್ಗೆ ಜ್ವರ ಕಾಡುತ್ತಿದ್ದರೆ, ನಿಲ್ಲದ ರಕ್ತಸ್ರಾವ ಹಾಗೂ ಮೂಗೇಟುಗಳು ಆಗುತ್ತಿದ್ದರೆ ಇದು ರಕ್ತ ಕಣಗಳ ಕ್ಯಾನ್ಸರ್‌ನ ಲಕ್ಷಣಗಳಾಗಿರಬಹುದು-ಲ್ಯುಕೇಮಿಯಾ. ಈ ರೋಗವು ದೇಹವು ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಕ್ಷೀಣಿಸುತ್ತದೆ. ಇದಕ್ಕೆ ಆರಂಭಿಕ ಹತಂದಲ್ಲೇ ಪರೀಕ್ಷೆ ಮಾಡಿಸುವುದೇ ಸೂಕ್ತ ಚಿಕಿತ್ಸೆ.

5. ಅನಗತ್ಯ ಗಂಟುಗಳು

5. ಅನಗತ್ಯ ಗಂಟುಗಳು

ನಿಮ್ಮ ದೇಹದಲ್ಲಿ ಅದರಲ್ಲೂ ಕಂಕುಳು, ಕುತ್ತಿಗೆ ಅಥವಾ ತೊಡೆಸಂದುಗಳಲ್ಲಿ ಅಥವಾ ದುಗ್ಧರಸ ಗ್ರಂಥಿಗಳ ಮೇಲೆ ಅನಗತ್ಯ ಗಂಟುಗಳು ಕಂಡುಬಂದರೆ ಇದನ್ನು ನಿರ್ಲಕ್ಷಿಸಬೇಡಿ. ದುಗ್ಧರಸ ವ್ಯವಸ್ಥೆಯಲ್ಲಿನ ಬದಲಾವಣೆಗಳು ಕ್ಯಾನ್ಸರ್‌ನ ಲಕ್ಷಣಗಳಾಗಿರಬಹುದು.

6. ಕಿಬ್ಬೊಟ್ಟೆ ನೋವು, ತೂಕ ಹೆಚ್ಚಳ ಮತ್ತು ದೌರ್ಬಲ್ಯ

6. ಕಿಬ್ಬೊಟ್ಟೆ ನೋವು, ತೂಕ ಹೆಚ್ಚಳ ಮತ್ತು ದೌರ್ಬಲ್ಯ

ಅಂಡಾಶಯದ ಕ್ಯಾನ್ಸರ್ ನಿಂದ ಬಳಲುತ್ತಿರುವ ಹೆಚ್ಚಿನ ಮಹಿಳೆಯರಿಗೆ ಹೊಟ್ಟೆ ಉಬ್ಬುವುದು ಹೆಚ್ಚು ವರದಿಯಾಗಿದೆ. ಹೊಟ್ಟೆಯಲ್ಲಿ ಮತ್ತು ಸೊಂಟದಲ್ಲಿ ಸೆಳೆತ ಮತ್ತು ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿ ಅಂಡಾಶಯದ ಕ್ಯಾನ್ಸರ್‌ನ ಸೂಚನೆಯಾಗಿದೆ. ಅಲ್ಲದೆ ಅನಗತ್ಯವಾಗಿ ನೀವು ಪದೇ ಪದೇ ದಣಿಯುವುದು ಸಹ ಕೆಲವು ಕ್ಯಾನ್ಸರ್‌ನ ಲಕ್ಷಣಗಳಾಗಿದೆ.

7. ಹಠಾತ್ ತೂಕ ನಷ್ಟ

7. ಹಠಾತ್ ತೂಕ ನಷ್ಟ

ಕರುಳಿನ ಕ್ಯಾನ್ಸರ್‌ನಿಂದ ಬಳಲುವವರಿಗೆ ಆರಂಭಿಕ ಹಂತದಲ್ಲಿ ಕಾಣಿಸಿಕೊಳ್ಳುವ ಲಕ್ಷಣವೇ ಹಠಾತ್‌ ತೂಕ ಇಳಿಕೆಯಾಗುವುದು. ಇದು ಯಕೃತ್ತಿನ ಕ್ಯಾನ್ಸರ್ ಲಕ್ಷಣವಾಗಿರಬಹುದು, ಇದು ತ್ಯಾಜ್ಯ ಮತ್ತು ಹಸಿವು ಬರದಂತೆ ತಡೆಯುವ ದೇಹದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

8. ಸ್ತನದಲ್ಲಿ ಬದಲಾವಣೆ

8. ಸ್ತನದಲ್ಲಿ ಬದಲಾವಣೆ

ಮಹಿಳೆಯರಿಗೆ ಸ್ತನಗಳಲ್ಲಿ ಯಾವುದೇ ವಿಚಿತ್ರ ಬದಲಾವಣೆಗಳು ಕಂಡುಬಂದರೂ ನಿರ್ಲಕ್ಷ್ಯ ಮಾಡದೇ ವೈದ್ಯರನ್ನು ಸಂಪರ್ಕಿಸಿ. ತಲೆಕೆಳಗಾದ, ಚಪ್ಪಟೆಯಾದ ಅಥವಾ ಪಕ್ಕಕ್ಕೆ ತಿರುಗಲು ಪ್ರಾರಂಭಿಸಿದ ಮೊಲೆತೊಟ್ಟು ಸಹ ಸ್ತನ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು.

9. ಉಗುರುಗಳಲ್ಲಿ ಬದಲಾವಣೆಗಳು

9. ಉಗುರುಗಳಲ್ಲಿ ಬದಲಾವಣೆಗಳು

ಬೆರಳಿನ ಉಗುರುಗಳಲ್ಲಿ ಕೆಲವು ವಿಚಿತ್ರ ಅಥವಾ ಅಪರೂಪದ ಬದಲಾವಣೆಗಳನ್ನು ಹೊಂದಿದ್ದರೆ ಹಲವಾರು ರೀತಿಯ ಕ್ಯಾನ್ಸರ್ ಅನ್ನು ಇದು ಸೂಚಿಸಬಹುದು. ಕಪ್ಪು ಗೆರೆ, ಕಂದು ಅಥವಾ ನಿಮ್ಮ ಉಗುರುಗಳ ಕೆಳಗೆ ಒಂದು ಚುಕ್ಕೆ ಸಾಮಾನ್ಯವಾಗಿ ಚರ್ಮದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಉಗುರುಗಳಲ್ಲಿನ ಬದಲಾವಣೆ ಕೆಲವು ಬಾರಿ ಯಕೃತ್ತಿನ ಕ್ಯಾನ್ಸರ್‌ನ ಲಕ್ಷಣಗಳೂ ಆಗಿರಬಹುದು.

English summary

Early Warning Signs That Cancer Is Growing In Your Body In Kannada

Here we are going to tell you Early Warning Signs That Cancer Is Growing In Your Body In Kannada. You do not have to depend on routine examination and tests alone in order to keep you from various diseases as well as cancer. It is also important to pay attention to anything unexplainable, odd and different. Read more.
Story first published: Wednesday, May 26, 2021, 12:04 [IST]
X
Desktop Bottom Promotion