For Quick Alerts
ALLOW NOTIFICATIONS  
For Daily Alerts

50ರ ಬಳಿಕ ನಿಮ್ಮ ಫಿಟ್ನೆಸ್‌ ಕಾಪಾಡಲು ಅಡ್ಡಿಯಾಗುವ ಕಟ್ಟುಕತೆಗಳಿವು!

|

ಭೂಮಿ ಮೇಲಿನ ಜಡ ವಸ್ತುಗಳನ್ನು ಬಿಟ್ಟರೆ ಪ್ರತಿಯೊಂದಕ್ಕೂ ವಯಸ್ಸಾಗುತ್ತಾ ಹೋಗುತ್ತದೆ. ಅದಕ್ಕೆ ಮನುಷ್ಯನು ಹೊರತಾಗಿಲ್ಲ. ಆದರೆ ವಯಸ್ಸಾದ ಬಳಿಕ ಆತ ತನ್ನ ಜಾಣ್ಮೆಯಿಂದ ಜೀವನ ಸಾಗಿಸಲು ಕೆಲವೊಂದು ದಾರಿಗಳನ್ನು ಹುಡುಕಿಕೊಂಡಿರುತ್ತಾನೆ.

myths about fitness

ಬಾಲ್ಯ, ಹದಿಹರೆಯ ಮತ್ತು ವೃದ್ಧಾಪ್ಯವು ಮನುಷ್ಯನ ಜೀವನದ ಪ್ರಮುಖ ಮೂರು ಹಂತಗಳು. ಇಲ್ಲಿ ಬಾಲ್ಯದಲ್ಲಿ ತಮ್ಮ ಆರೋಗ್ಯದ ಬಗ್ಗೆ ಪೋಷಕರು ಕಾಳಜಿ ವಹಿಸಿದರೆ, ಹದಿಹರೆಯದಲ್ಲಿ ನಾವೇ ಆರೋಗ್ಯ ನೋಡಿಕೊಳ್ಳಬೇಕು ಮತ್ತು ವೃದ್ಧಾಪ್ಯದಲ್ಲಿ ಮಕ್ಕಳು ಅಥವಾ ಬೇರೆ ಯಾರಾದರೂ ನಮ್ಮ ಆರೋಗ್ಯದ ಕಾಳಜಿ ವಹಿಸುವರು.

ಆದರೆ ವಯಸ್ಸಾದ ಬಳಿಕ ಕೆಲವೊಂದು ವ್ಯಾಯಾಮಗಳನ್ನು ಮಾಡಬಾರದು ಮತ್ತು ಇದರಿಂದ ಮೂಳೆಗಳಿಗೆ ಹಾನಿ ಆಗುವುದು ಇತ್ಯಾದಿ ಸುಳ್ಳುಗಳು ನಮ್ಮ ಸುತ್ತಲೂ ತಿರುಗುತ್ತಲೇ ಇರುತ್ತದೆ. ಆದರೆ ದೈಹಿಕ ಚಟುವಟಿಕೆಯನ್ನು ನಮ್ಮ ದೇಹವು ಯಾವುದೇ ಸಂದರ್ಭದಲ್ಲೂ ಮಾಡಬಹುದು. ಇದಕ್ಕೆ ವಯಸ್ಸು ಅಡ್ಡಿಯಾಗದು ಎನ್ನುತ್ತಾರೆ ದೈಹಿಕ ತಜ್ಞ ಅಲಿಸ್ ಬೆಲ್.

50ರ ಹರೆಯದ ಬಳಿಕ ತುಂಬಾ ಚಟುವಟಿಕೆಯಿಂದ ಇರುವವರು ಹೆಚ್ಚು ಶಕ್ತಿ, ಉತ್ಸಾಹ, ಸಮತೋಲನ ಮತ್ತು ಅರಿವಿನ ಪ್ರದರ್ಶನ ಹೊಂದಿರುವರು ಎಂದು ಅಧ್ಯಯನಗಳು ಕೂಡ ದೃಢಪಡಿಸಿವೆ. ಹಾಗಿದ್ದರೆ ಯಾವೆಲ್ಲಾ ಕಟ್ಟುಕತೆಗಳು ವಯಸ್ಕರನ್ನು ಕಾಡುತ್ತದೆ ಮುಂದೆ ನೋಡೋಣ:

1. ನನಗಿನ್ನು ಓಡಲು ಸಾಧ್ಯವಿಲ್ಲ!

1. ನನಗಿನ್ನು ಓಡಲು ಸಾಧ್ಯವಿಲ್ಲ!

ದೈಹಿಕ ಚಟುವಟಿಕೆ ಎನ್ನುವುದು ಕೇವಲ ವೃದ್ಧರಿಗೆ ಮಾತ್ರವಲ್ಲದೆ ಪ್ರತಿಯೊಬ್ಬರಿಗೂ ಆರೋಗ್ಯದ ದೃಷ್ಟಿಯಿಂದ ಅತೀ ಅಗತ್ಯ. ದೈಹಿಕ ಚಟುವಟಿಕೆ ಇಲ್ಲದೆ ಇರುವ ವ್ಯಕ್ತಿಯು ಒಂದು ಐದು ಕಿ.ಮೀ. ಅಥವಾ ಮ್ಯಾರಥಾನ್ ನಲ್ಲಿ ಓಡಲು ಸಾಧ್ಯವಾಗದು. ಆದರೆ ಯಾವಾಗಲೂ ಓಡುತ್ತಿರುವವರು ತಮಗೆ ವಯಸ್ಸಾಗಿದೆ ಎಂದು ಇದನ್ನು ನಿಲ್ಲಿಸಬಾರದು.

ಓಡುವುದು ಹೃದಯದ ಆರೋಗ್ಯ ಮತ್ತು ಮಾನಸಿಕ ಸ್ಪಷ್ಟತೆಗೆ ತುಂಬಾ ಒಳ್ಳೆಯದು. ವಯಸ್ಸಾದ ಬಳಿಕ ಓಡುವುದರಿಂದ ಗಂಟುಗಳ ಮೇಲೆ ಭಾರ ಬೀಳುವುದು ಮತ್ತು ಇದನ್ನು ಕಡೆಗಣಿಸಬೇಕು ಎಂದು ಹೇಳಲಾಗುತ್ತದೆ. ಹೆಚ್ಚಾಗಿ ವಯಸ್ಸಾದ ಬಳಿಕ ಕೆಲವು ಅತ್ಯುತ್ತಮ ಓಟಗಾರರಾಗಿದ್ದಾರೆ ಮತ್ತು ಇದರಿಂದ ಯಾವುದೇ ಸಮಸ್ಯೆಯಾಗದೆ ಅವರು ಲಾಭ ಪಡೆದುಕೊಂಡಿದ್ದಾರೆ.

ಓಡುವಂತಹ ಆಯ್ಕೆಯು ಆ ವ್ಯಕ್ತಿಗೆ ಸಂಬಂಧಿಸಿದ್ದಾಗಿದೆ. ಓಡುವುದರಿಂದ ಸಂಧಿವಾತ ಮತ್ತು ಗಂಟಿಗೆ ಹಾನಿ ಆಗುವುದು ಎನ್ನುವುದು ಸರಿಯಲ್ಲ. ವಯಸ್ಸಾದ ಬಳಿಕವೂ ಕೆಲವು ಜನರು ಉತ್ತಮವಾಗಿ ಓಡಿದ್ದಾರೆ. ಅವರು ಓಡುವ ದೂರ ಮತ್ತು ವೇಗವು ಆರೋಗ್ಯವನ್ನು ತುಂಬಾ ಸುಧಾರಣೆ ಮಾಡಿದೆ.

2. ನಡೆದರೆ ಸಾಕು

2. ನಡೆದರೆ ಸಾಕು

ನಡೆಯುವುದು ಒಂದು ಒಳ್ಳೆಯ ವ್ಯಾಯಾಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ನಮ್ಮ ದೇಹಕ್ಕೆ ನಡೆಯುವುದಕ್ಕಿಂತಲೂ ಹೆಚ್ಚಿಗೆ ಬೇಕಾಗಿದೆ. ವ್ಯಾಯಾಮ ಮಾಡಿದರೆ ಅದರಿಂದ ದೇಹಕ್ಕೆ ದೀರ್ಘಕಾಲಿಕ ಲಾಭಗಳು ಇವೆ. ಇದರಲ್ಲಿ ಮುಖ್ಯವಾಗಿ ದೇಹಕ್ಕೆ ಶಕ್ತಿ ಸಿಗುವುದು, ಸ್ಥಿತಿಸ್ಥಾಪಕತ್ವ ಮತ್ತು ಹೃದಯದ ಪರಿಸ್ಥಿತಿ, ಒತ್ತಡದ ಪರಿಸ್ಥಿತಿಯಲ್ಲಿ ದೇಹವು ಹೊಂದಿಕೊಳ್ಳುವುದು.

ನಡೆಯುವುದರಿಂದ ಹೃದಯಕ್ಕೆ ಹೆಚ್ಚಿನ ಲಾಭವಿದೆ ಎಂದು ಹೇಳಲಾಗುತ್ತದೆ. ಆದರೆ ಕೇವಲ ನಡೆದರೆ ಅದು ನಿಮ್ಮ ಹೃದಯಕ್ಕೆ ಬೇಕಾದ ಒತ್ತಡ ಹಾಕದು ಮತ್ತು ಅಪಧಮನಿ ಸುಧಾರಣೆಗೆ ನೆರವಾಗುವುದು. ವೇಗವಾಗಿ ನಡೆಯುವುದು ಅಥವಾ ಜಾಗಿಂಗ್ ಮಾಡಿದರೆ ಅದರಿಂದ ನಿಮ್ಮ ದೇಹಕ್ಕೆ ಹೆಚ್ಚಿನ ಲಾಭವಾಗಲಿದೆ.

3. ಭಾರ ಎತ್ತುವುದು ಗಂಟುಗಳಿಗೆ ತುಂಬಾ ಕೆಟ್ಟದು

3. ಭಾರ ಎತ್ತುವುದು ಗಂಟುಗಳಿಗೆ ತುಂಬಾ ಕೆಟ್ಟದು

ವಯಸ್ಸಾಗುತ್ತಾ ಬಂತು ಇನ್ನು ಜಿಮ್ ನಲ್ಲಿ ಹೆಚ್ಚು ಭಾರ ಎತ್ತಬಾರದು ಎನ್ನುವ ಮಾತುಗಳು ಕೇಳಿಬರುತ್ತಿದೆ. 50,60 ಅಥವಾ 70ರ ಹರೆಯ ದಾಟಿದ ಬಳಿಕ ಕೆಲವು ಜನರು ಹೆಚ್ಚು ಭಾರ ಎತ್ತಲು ಹಿಂಜರಿಯುವರು. ಭಾರ ಎತ್ತುವುದು ವ್ಯಾಯಾಮದ ಅತೀ ದೊಡ್ಡ ಸವಾಲು. ಆದರೆ ಇದು ಕೆಟ್ಟದಕ್ಕಿಂತಲೂ ಒಳ್ಳೆಯದನ್ನೇ ಮಾಡುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ವಯಸ್ಸಾದ ಬಳಿಕ ಸರಿಯಾದ ಕ್ರಮ ಹಾಗೂ ಪ್ರಮಾಣದ ಭಾರವನ್ನು ಎತ್ತಿದರೆ ಅದು ನಿಜವಾಗಿಯೂ ದೇಹವನ್ನು ಸಕಲ ರೀತಿಯಲ್ಲಿ ಸುಧಾರಣೆ ಮಾಡುವುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರ ಎತ್ತುವಿಕೆಯು ದೀರ್ಘಕಾಲಕ್ಕೆ ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು ಮತ್ತು ಇದು ಬಲ ಕೂಡ ನೀಡುವುದು. ಭಾರ ಎತ್ತುವಿಕೆಯು ಸಂಧಿವಾತ ಅಥವಾ ಗಂಟಿನ ಸಮಸ್ಯೆಗೆ ಕಾರಣವಾಗುವುದು ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ.

4. ಕೆಟ್ಟ ಸಮತೋಲನ ಸರಿಪಡಿಸಲು ಆಗದು

4. ಕೆಟ್ಟ ಸಮತೋಲನ ಸರಿಪಡಿಸಲು ಆಗದು

ಸಮತೋಲನ ಎನ್ನುವುದು ಫಿಟ್ನೆಸ್ ನ ಮತ್ತೊಂದು ರೂಪವಾಗಿದೆ. ನೀವು ಇದರ ಬಗ್ಗೆ ಹೆಚ್ಚು ಕೆಲಸ ಮಾಡಿದಷ್ಟು ಒಳ್ಳೆಯ ಫಲಿತಾಂಶ ಸಿಗುವುದು. ಕಾಲುಗಳಲ್ಲಿ ಬೀಳದಂತೆ ಸ್ಥಿರವಾಗಿ ನಿಲ್ಲುವುದು ಕೂಡ ಆರೋಗ್ಯ ಕಾಪಾಡಲು ಸಹಕಾರಿ. ಇದನ್ನು ಯಾವತ್ತಿಗೂ ಕಡೆಗಣಿಸಲೇಬಾರದು. ಯಾಕೆಂದರೆ ಇದು ದೀರ್ಘಕಾಲಕ್ಕೆ ತುಂಬಾ ಉಪಯುಕ್ತವಾಗಲಿದೆ.

5. ನನಗೆ ಬಗ್ಗಲು ಆಗದು

5. ನನಗೆ ಬಗ್ಗಲು ಆಗದು

ಕೆಲವರಿಗೆ ಬಗ್ಗಲು, ಆಚೀಚೆ ಬಾಗಲು ಆಗದು. ಇದರರ್ಥ ಅವರ ದೇಹವು ತುಂಬಾ ಬಿಗಿಯಾಗಿದೆ ಎಂದು ಹೇಳಬಹುದು. ನಿಮ್ಮ ದೇಹವು ಎಷ್ಟು ಬಾಗಬಹುದು ಅಥವಾ ಬಗ್ಗಬಹುದು ಎನ್ನುವುದರ ಮೇಲೆ ಅನುವಂಶೀಯತೆಯು ಪ್ರಮುಖ ಪಾತ್ರ ವಹಿಸುವುದು. ನೀವು ಯೋಗ ಅಥವಾ ಬೇರೆ ವ್ಯಾಯಮ ಮಾಡಿಕೊಂಡು ಇದನ್ನು ಸರಿಪಡಿಸಿಕೊಳ್ಳಬಹುದು.

6. ಗಾಯಾಳುವಾಗಿದ್ದೆ ಮತ್ತು ವ್ಯಾಯಾಮ ಮಾಡಲಾರೆ

6. ಗಾಯಾಳುವಾಗಿದ್ದೆ ಮತ್ತು ವ್ಯಾಯಾಮ ಮಾಡಲಾರೆ

ಮೊಣಕಾಲು ಹಾಗೂ ಸೊಂಟದ ಶಸ್ತ್ರಚಿಕಿತ್ಸೆಗೆ ಒಳಗಾದ ಜನರು ಆದಷ್ಟು ಬೇಗನೆ ನಡೆದಾಡಬೇಕು ಎಂದು ವೈದ್ಯರು ಸೂಚಿಸುವರು. ಯಾಕೆಂದರೆ ರಕ್ತ ಸಂಚಾರವು ಸರಿಯಾಗಿದ್ದರೆ ಆಗ ಅದು ಬೇಗನೆ ಗುಣಪಡಿಸಲು ನೆರವಾಗುವುದು. ನೀವು ಗಾಯಾಳುವಾಗಿದ್ದರೆ ಆಗ ವೈದ್ಯರಲ್ಲಿ ಮಾತನಾಡಿ ಅಥವಾ ವೃತ್ತಿಪರ ತರಬೇತುದಾರ ಜತೆಗೆ ಮಾತನಾಡಿ. ಸಾಮಾನ್ಯ ವ್ಯಾಯಾಮ ಮಾಡುವ ಮೂಲಕವು ಕೆಲವು ನೋವನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನಗಳು ಹೇಳಿವೆ. ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವ ಸುಧಾರಣೆ ಮಾಡಿದರೆ ಅದರಿಂದ ಗಂಟಿನ ಕಿರಿಕಿರಿ ಮತ್ತು ಗಂಟಿನ ಲ್ಯೂಬ್ರಿಕೆಂಟ್ಸ್ ಸುಧಾರಣೆ ಆಗುವುದು. ವ್ಯಾಯಾಮವು ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಮೂಲಕ ನೋವನ್ನು ಕಡಿಮೆ ಮಾಡುವುದು ಎಂದು ಅಧ್ಯಯನಗಳು ತಿಳಿಸಿವೆ.

7. ಅಧಿಕ ತೀವ್ರತೆಯ ವಿರಾಮದ ತರಬೇತಿ ಅಪಾಯಕಾರಿ

7. ಅಧಿಕ ತೀವ್ರತೆಯ ವಿರಾಮದ ತರಬೇತಿ ಅಪಾಯಕಾರಿ

ಅಧಿಕ ತೀವ್ರತೆಯ ವಿರಾಮದ ತರಬೇತಿ (ಎಚ್ಐಐಟಿ)ಯು ದೇಹಕ್ಕೆ ತುಂಬಾ ಒಳ್ಳೆಯದು ಎಂದು ಹಲವಾರು ಅಧ್ಯಯನಗಳು ಈಗಾಗಲೇ ಹೇಳಿವೆ. ಇದರ ಬಗ್ಗೆ ನಿಮಗೆ ಗೊಂದಲವಿದ್ದರೆ ಆಗ ನೀವು ಫಿಟ್ನೆಸ್ ವೃತ್ತಿಪರರ ಜತೆಗೆ ಮಾತನಾಡಿ. ಇದು ಎಲ್ಲಾ ವಯೋಮಿತಿಯವರ ಮೇಲೆ ಪರಿಣಾಮ ಬೀರುವಂತಹ ವ್ಯಾಯಾಮದ ವಿಧಾನವಾಗಿದೆ ಎಂದು ಜೋನ್ಸ್ ಹೇಳುತ್ತಾರೆ. ಹೃದಯದ ಕಾಯಿಲೆ ಮತ್ತು ಮಧುಮೇಹ ಇರುವವರಿಗೂ ಎಚ್ಐಐಟಿ ತುಂಬಾ ಒಳ್ಳೆಯದು.

8. ಸ್ಕ್ವಾಟ್ ಗಳು ಮೊಣಕಾಲಿಗೆ ಹಾನಿ ಉಂಟು ಮಾಡಬಹುದು

8. ಸ್ಕ್ವಾಟ್ ಗಳು ಮೊಣಕಾಲಿಗೆ ಹಾನಿ ಉಂಟು ಮಾಡಬಹುದು

ಹಲವಾರು ಮಂದಿ ತರಬೇತುದಾರರು ತಮ್ಮ ನೆಚ್ಚಿನ ವ್ಯಾಯಾಮವು ಸ್ಕ್ವಾಟ್ ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಸರಿಯಾದ ಕ್ರಮದಲ್ಲಿ ಸ್ಕ್ವಾಟ್ ಮಾಡಿದರೆ ಅದರಿಂದ ಮೊಣಕಾಲಿನ ನೋವು ಅಥವಾ ಗಾಯವಾಗದು. ದೇಹದ ಕೆಳಗಿನ ಭಾಗವನ್ನು ಬಲಿಷ್ಠಗೊಳಿಸಲು ಇದು ಒಂದು ಒಳ್ಳೆಯ ವ್ಯಾಯಾಮ ಕ್ರಮವಾಗಿದೆ ಎಂದು ಫಿಟ್ನೆಸ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

9. ಸಂಧಿವಾತದ ಕಾರಣದಿಂದಾಗಿ ವ್ಯಾಯಾಮ ಅಸಾಧ್ಯ

9. ಸಂಧಿವಾತದ ಕಾರಣದಿಂದಾಗಿ ವ್ಯಾಯಾಮ ಅಸಾಧ್ಯ

ಸಂಧಿವಾತವೆಂದರೆ ನಾವು ಬೆಚ್ಚಿ ಬೀಳುವುದು ಇದೆ. ಆದರೆ ಇದು ವಯಸ್ಸಾಗುವುದರ ಲಕ್ಷಣವಾಗಿದೆ. ಆದರೆ ಕೆಲವರಲ್ಲಿ ಮೊಣಕಾಲಿನಲ್ಲಿ ಯಾವುದೇ ನೋವಿಲ್ಲದೆಯೂ ಮೂಳೆಯಿಂದ ಮೂಳೆಯ ಸಂಧಿವಾತದ ಲಕ್ಷಣಗಳು ಕಾಣಿಸಿಕೊಂಡಿದೆ ಎಂದು ಅಧ್ಯಯನಗಳು ಕೇಳಿವೆ. ಎಕ್ಸ್ ರೇಯಲ್ಲಿ ಸಂಧಿವಾತದ ಲಕ್ಷಣಗಳು ಕಂಡುಬಂದರೂ ಕೆಲವರಿಗೆ ಮೊಣಕಾಲಿನಲ್ಲಿ ಯಾವುದೇ ನೋವು ಕಾಣಿಸುವುದಿಲ್ಲ. ಸಂಧಿವಾತವಿದ್ದರೂ ನೀವು ವ್ಯಾಯಾಮ ಮಾಡಬಹುದು. ಇದು ಸಂಧಿವಾತವನ್ನು ಹೆಚ್ಚಿಸದು. ವೃತ್ತಿಪರ ವ್ಯಾಯಾಮ ತರಬೇತುದಾರರು ಇದ್ದರೆ ಆಗ ಯಾವುದೇ ರೀತಿಯ ಸಮಸ್ಯೆಯೂ ಆಗದು.

10. ಸಾಮರ್ಥ್ಯದ ತರಬೇತಿಯು ನನ್ನನ್ನು ಸ್ಥೂಲ ಮತ್ತು ಅಸ್ಥಿರಗೊಳಿಸುವುದು

10. ಸಾಮರ್ಥ್ಯದ ತರಬೇತಿಯು ನನ್ನನ್ನು ಸ್ಥೂಲ ಮತ್ತು ಅಸ್ಥಿರಗೊಳಿಸುವುದು

ಸಾಮರ್ಥ್ಯದ ತರಬೇತಿಯು ಆರೋಗ್ಯ ಮತ್ತು ತೂಕ ಕಳೆದುಕೊಳ್ಳಲು ತುಂಬಾ ಸಹಕಾರಿ. ಇದು ದೇಹದ ತೂಕ ಹೆಚ್ಚಿಸುವುದು ಮತ್ತು ಅಸ್ಥಿರಗೊಳಿಸುವುದು ಎಂದು ಭಾವಿಸಬೇಕಾಗಿಲ್ಲ. ಸಾಮರ್ಥ್ಯದ ತರಬೇತಿಯು ದೇಹದಾರ್ಥ್ಯ ಎಂದು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ದೇಹದಾರ್ಥ್ಯ ಎನ್ನುವುದು ಒಂದು ರೀತಿಯ ಕ್ರೀಡೆ ಕೇಂದ್ರಿತವಾದ ಸ್ಪರ್ಧೆಗಾಗಿ ಸ್ನಾಯುಖಂಡಗಳನ್ನು ಬಲಪಡಿಸುವಂತಹ ವ್ಯಾಯಾಮ. ಸಾಮರ್ಥ್ಯದ ತರಬೇತಿಯು ಶಕ್ತಿ, ಫಿಟ್ನೆಸ್ ಮತ್ತು ಆರೋಗ್ಯವನ್ನು ಕೇಂದ್ರೀಕರಿಸಿರುವುದು. ಕೆಲವು ಮಹಿಳೆಯರು ತುಂಬಾ ಭಾರ ಎತ್ತಿದರೂ ಅವರ ದೇಹವು ಕಟ್ಟುಮಸ್ತಾಗದು.

ಮಹಿಳೆಯರು ಹೆಚ್ಚಾಗಿ ಭಾರ ಎತ್ತಿದರೆ ಆಗ ಸ್ನಾಯುಗಳು, ಮೂಳೆ ಬಲವನ್ನು ಪುರುಷರಿಗಿಂತಲೂ ವೇಗವಾಗಿ ಕಳೆದುಕೊಳ್ಳುವ ಕಾರಣದಿಂದಾಗಿ ಭಾರ ಎತ್ತಲೇಬೇಕು. ಮಹಿಳೆಯರ ಫಿಟ್ನೆಸ್ ಕಾರ್ಯಕ್ರಮದಲ್ಲಿ ಭಾರ ಎತ್ತುವ ತರಬೇತಿಯು ಅತೀ ಅವಶ್ಯಕವಾಗಿರುವುದು. ಪುರುಷರಿಗೆ ಲಾಭ ನೀಡುವಂತಹ ಕೆಲವೊಂದು ಬಲ ನೀಡುವ ತರಬೇತಿ, ವ್ಯಾಯಾಮವನ್ನು ಮಹಿಳೆಯರು ಕೂಡ ಮಾಡಬಹುದಾಗಿದೆ.

11. ನಾನಿನ್ನು ಬಲಿಷ್ಠನಾಗಲ್ಲ

11. ನಾನಿನ್ನು ಬಲಿಷ್ಠನಾಗಲ್ಲ

50 ದಾಟಿದ ಬಳಿಕವೂ ದೇಹವನ್ನು ಬಲಿಷ್ಠವಾಗಿ ಇಟ್ಟುಕೊಳ್ಳಬಹುದು ಮತ್ತು ಹದಿಹರೆಯದವರಿಗಿಂತಲೂ ಒಳ್ಳೆಯ ಫಿಟ್ನೆಸ್ ಕಾಪಾಡಬಹುದು. ಕೆಲವು ಜನರು ವಯಸ್ಸಾಗುತ್ತಾ ಹೋದಂತೆ ತಾವಿನ್ನು ಸುಧಾರಣೆ ಮಾಡಲು ಸಾಧ್ಯವಿಲ್ಲವೆಂದು ವ್ಯಾಯಾಮದ ಕ್ರಮವನ್ನು ಬದಲಾಯಿಸಿ ಬಿಡುವರು. ಆದರೆ ಹೀಗೆ ಮಾಡಿದರೆ ಅದರಿಂದ ಇನ್ನೂ ಹೆಚ್ಚಿನ ಸಮಯ ಬೇಕಾಗಬಹುದು. ಯಾಕೆಂದರೆ ಸ್ನಾಯುಗಳು ಬಲಪಡೆಯಬೇಕಿದ್ದರೆ ಸಾಮರ್ಥ್ಯದ ವ್ಯಾಯಾಮವು ಅಗತ್ಯ.

12. ವಯಸ್ಸಾಗುತ್ತಿದ್ದಂತೆ ವ್ಯಾಯಾಮದ ವೇಳೆ ನೋವು ಕಾಣಿಸುವುದು

12. ವಯಸ್ಸಾಗುತ್ತಿದ್ದಂತೆ ವ್ಯಾಯಾಮದ ವೇಳೆ ನೋವು ಕಾಣಿಸುವುದು

ಕೆಲವೊಂದು ರೀತಿಯ ವ್ಯಾಯಾಮಗಳು ನೋವು ಉಂಟು ಮಾಡಬಹುದು. ಇದರಲ್ಲಿ ಮುಖ್ಯವಾಗಿ ಎದೆ ನೋವು ಕಂಡುಬರಬಹುದು. ಶಕ್ತಿ ಮತ್ತು ಸಹಿಷ್ಣುತೆ ಪಡೆಯಲು ಸ್ನಾಯುಗಳ ಮೇಲೆ ಅತಿಯಾಗಿ ಒತ್ತಡ ಹಾಕಬೇಕಾಗುತ್ತದೆ. ವಯಸ್ಸಾದ ಬಳಿಕ ಅತಿಯಾದ ಒತ್ತಡ ಬಿದ್ದರೆ ಅದರಿಂದ ಊತ ಮತ್ತು ಕೆಲವೊಂದು ಸಂಧರ್ಭದಲ್ಲಿ ಗಂಟುಗಳಲ್ಲಿ ಸಣ್ಣ ಪ್ರಮಾಣದ ನೋವು ಕಾಣಿಸಬಹುದು. ಆದರೆ ಇದು ಆರೋಗ್ಯಕರ ನೋವು ಚಿಂತೆ ಮಾಡಬೇಕಾಗಿಲ್ಲ.

13. ಮನಸ್ಸನ್ನು ಫಿಟ್ ಆಗಿಡಲು ವ್ಯಾಯಾಮ ಮಾಡಲ್ಲ

13. ಮನಸ್ಸನ್ನು ಫಿಟ್ ಆಗಿಡಲು ವ್ಯಾಯಾಮ ಮಾಡಲ್ಲ

ದೈಹಿಕ ವ್ಯಾಯಾಮ ಎನ್ನುವುದು ಕೇವಲ ಸ್ನಾಯುಗಳು, ಶ್ವಾಸಕೋಶ ಮತ್ತು ಹೃದಯಕ್ಕೆ ಸಂಬಂಧಿಸಿಲ್ಲ. ಆರೋಗ್ಯಕರ ದೇಹ ಮತ್ತು ಆರೋಗ್ಯಕರ ಮನಸ್ಸು ಎನ್ನುವ ಮಾತಿದೆ. ದೈಹಿಕ ವ್ಯಾಯಾಮ ಮಾಡಿದರೆ ಅದರಿಂದ ನಮ್ಮ ಮೆದುಳಿನ ಮೇಲೆ ಕೂಡ ಧನಾತ್ಮಕವಾದ ಪರಿಣಾಮ ಬೀರುವುದು. ದೈಹಿಕವಾಗಿ ಚಟುವಟಿಕೆಯಿಂದ ಇದ್ದರೆ ಅದು ಮೆದುಳಿನ ಆರೋಗ್ಯಕ್ಕೆ ಲಾಭಕಾರಿ ಮತ್ತು ವಯಸ್ಸಾಗುವ ವೇಳೆ ಕಾಡುವಂತಹ ಮೆದುಳಿನ ಸಮಸ್ಯೆಗಳನ್ನು ದೂರ ಮಾಡುವುದು.

14. ವ್ಯಾಯಾಮ ತುಂಬಾ ಅಪಾಯಕಾರಿ, ನಾನು ಬೀಳುತ್ತೇನೆ

14. ವ್ಯಾಯಾಮ ತುಂಬಾ ಅಪಾಯಕಾರಿ, ನಾನು ಬೀಳುತ್ತೇನೆ

ಕೆಲವರಲ್ಲಿ ವ್ಯಾಯಾಮದ ವೇಳೆ ಬಿದ್ದುಬಿಟ್ಟರೆ ಏನು ಮಾಡುವುದು ಎನ್ನುವ ಆತಂಕವು ಯಾವಾಗಲೂ ಕಾಡುತ್ತಲೇ ಇರುವುದು. ನಿಮ್ಮ ವೈಯಕ್ತಿಕ ಗುರಿ ಮತ್ತು ಸಾಂರ್ಥ್ಯಕ್ಕೆ ಅನುಗುಣವಾಗಿ ದೈಹಿಕ ತರಬೇತುದಾರರು ಕೆಲವು ಸಮತೋಲಿತ ವ್ಯಾಯಾಮಗಳನ್ನು ಸೂಚಿಸಬಹುದು. ಇಂತಹ ವ್ಯಾಯಾಮಗಳು ನೀವು ಬೀಳುವಂತಹ ಸಾಧ್ಯತೆಯನ್ನು ತುಂಬಾ ಕಡಿಮೆ ಮಾಡುವುದು.

15. ದೀರ್ಘಕಾಲಿಕ ಅನಾರೋಗ್ಯದಿಂದ ವ್ಯಾಯಾಮ ಕಡೆಗಣನೆ

15. ದೀರ್ಘಕಾಲಿಕ ಅನಾರೋಗ್ಯದಿಂದ ವ್ಯಾಯಾಮ ಕಡೆಗಣನೆ

ದೈಹಿಕವಾಗಿ ಚಟುವಟಿಕೆಯಿಂದ ಇದ್ದರೆ ಆಗ ಹಲವಾರು ರೀತಿಯ ದೀರ್ಘಕಾಲಿಕ ಅನಾರೋಗ್ಯಗಳನ್ನು ದೂರ ಮಾಡಬಹುದು. ವ್ಯಾಯಾಮವು ಸಂಧಿವಾತ, ಹೃದಯದ ಕಾಯಿಲೆ ಮತ್ತು ಮಧುಮೇಹದಂತಹ ಹಲವಾರು ರೀತಿಯ ದೀರ್ಘಕಾಲಿಕ ಆರೋಗ್ಯ ಸಮಸ್ಯೆಯನ್ನು ಸುಧಾರಣೆ ಮಾಡುವುದು. ವ್ಯಾಯಾಮದಿಂದಾಗಿ ಕೆಲವೊಂದು ಔಷಧಿ ಸೇವನೆಯನ್ನು ಕೂಡ ಕಡಿಮೆ ಮಾಡಬಹುದು. ದೀರ್ಘಕಾಲಿಕ ಆರೋಗ್ಯದ ಸಮಸ್ಯೆಯಿದ್ದರೆ ಆಗ ನೀವು ವೈದ್ಯರು ಅಥವಾ ದೈಹಿಕ ತಜ್ಞರ ಜತೆಗೆ ಮಾತನಾಡಿ ಸಲಹೆ ಪಡೆಯಿರಿ. ನಿಮ್ಮನ್ನು ಪರೀಕ್ಷೆ ಮಾಡಿಸಿದ ಬಳಿಕ ದೈಹಿಕ ತಜ್ಞರು ಕೆಲವು ಚಿಕಿತ್ಸಾ ವಿಧಾನಗಳನ್ನು ರೂಪಿಸುವರು. ಇದರಿಂದ ಚಲನಶೀಲತೆ, ನೋವು ಮತ್ತು ಇತರ ದೀರ್ಘಕಾಲಿಕ ಸಮಸ್ಯೆ, ಗಾಯದ ಸಮಸ್ಯೆ ಮತ್ತು ಭವಿಷ್ಯದಲ್ಲಿ ಗಾಯ ಅಥವಾ ದೀರ್ಘಕಾಲಿಕ ಕಾಯಿಲೆಗಳು ಬರದಂತೆ ತಡೆಯಬಹುದು.

16. ವ್ಯಾಯಾಮ ಮಾಡುವ ಮೊದಲು ವೈದ್ಯರನ್ನು ಭೇಟಿ ಮಾಡಿ

16. ವ್ಯಾಯಾಮ ಮಾಡುವ ಮೊದಲು ವೈದ್ಯರನ್ನು ಭೇಟಿ ಮಾಡಿ

ಆರೋಗ್ಯವಾಗಿರುವಂತಹ ಜನರು ವ್ಯಾಯಾಮ ಮಾಡುವ ಮೊದಲು ವೈದ್ಯರನ್ನು ಭೇಟಿ ಮಾಡಬೇಕಿಲ್ಲ. ಆದರೆ ಕೆಲವು ದೈಹಿಕ ಸಮಸ್ಯೆಗಳು ಇರುವಂತಹವರು ವೈದ್ಯರನ್ನು ಭೇಟಿ ಮಾಡಿಕೊಂಡು ಸಲಹೆ ಪಡೆದರೆ ತುಂಬಾ ಒಳ್ಳೆಯದು. ಅಪಧಮನಿ, ಚಯಾಪಚಯ ಅಥವಾ ಮೂತ್ರಪಿಂಡದ ಸಮಸ್ಯೆಯಿದ್ದರೆ ನೀವು ಇದಕ್ಕೆ ವೈದ್ಯರನ್ನು ಭೇಟಿ ಮಾಡಿ. ನಿಮ್ಮ ಈಗಿನ ಮಟ್ಟವನ್ನು ಪರಿಗಣಿಸಿಕೊಂಡು ಅದನ್ನೇ ಮುಂದುವರಿಸಿದರೂ ಆಗಬಹುದು.

English summary

Don't Believe These Myths About Fitness After 50

Here we are discussing about don't believe these myths about fitness safter 50. Being over 50 isn’t too late to get in shape. Here’s a look at myths you should never believe about fitness at mid-life.Read more.
X
Desktop Bottom Promotion